ಲೆನೊವೊ ಸಂಸ್ಥೆಯಿಂದ ಹೊಸ ತಲೆಮಾರಿನ ಲ್ಯಾಪ್‌ಟಾಪ್‌ ಬಿಡುಗಡೆ!

|

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಲೆನೊವೊ ಸಂಸ್ಥೆ ಒಎಲ್ಇಡಿ ಡಿಸ್‌ಪ್ಲೇ ಹೊಂದಿರುವ ಹೊಸ ಲೆನೊವೊ ಯೋಗ ಸ್ಲಿಮ್ 7I ಪ್ರೊ ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಮಾದರಿಯನ್ನು ಅದರ ಎಲ್‌ಸಿಡಿ ರೂಪಾಂತರಕ್ಕಿಂತ ಹೈಯರ್ ಕಾಂಟ್ರಾಸ್ಟ್ ರೇಶಿಯೋ ಮತ್ತು ಬೆಟರ್‌ ಕಲರ್ಸ್‌ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ಲೆನೊವೊ ಯೋಗ ಸ್ಲಿಮ್ 7I ಪ್ರೊ (ಒಎಲ್ಇಡಿ) ಇಂಟೆಲ್ ಐರಿಸ್ ಎಕ್ಸ್ ಗ್ರಾಫಿಕ್ಸ್ ಜೊತೆಗೆ 11 ನೇ ತಲೆಮಾರಿನ ಇಂಟೆಲ್ ಕೋರ್ ಮೊಬೈಲ್ ಪ್ರೊಸೆಸರ್‌ ಅನ್ನು ಒಳಗೊಂಡಿದೆ.

ಲೆನೊವೊ

ಹೌದು, ಲೆನೊವೊ ಸಂಸ್ಥೆ ಲೆನೊವೊ ಯೋಗ ಸ್ಲಿಮ್‌ 7I ಪ್ರೊ ಲ್ಯಾಪ್‌ಟಾಪ್ ಅನ್ನು ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಮತ್ತು ಡಾಲ್ಬಿ ವಿಷನ್ ಎಚ್‌ಡಿಆರ್ ಬೆಂಬಲವನ್ನು ಹೊಂದಿದೆ. ಲೆನೊವೊ ತನ್ನ ಒಎಲ್ಇಡಿ ಆವೃತ್ತಿಯೊಂದಿಗೆ ಯೋಗ ಸ್ಲಿಮ್ 7I ಪ್ರೊ ನ ಎಲ್‌ಸಿಡಿ ರೂಪಾಂತರವನ್ನು ನೀಡಲಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೆನೊವೊ

ಲೆನೊವೊ ಯೋಗ ಸ್ಲಿಮ್ 7I ಪ್ರೊ (ಒಎಲ್ಇಡಿ) 2,880x1,800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 14 ಇಂಚಿನ 2.8K Oled ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಮತ್ತು 16:10 ರಚನೆಯ ಅನುಪಾತವನ್ನು ಹೊಂದಿದೆ. ಇದು ಸ್ಯಾಮ್‌ಸಂಗ್ ಡಿಸ್‌ಪ್ಲೇ ಪ್ರೊಡಕ್ಷನ್‌ ಮತ್ತು ಕ್ರೋಮಿನಾನ್ಸ್ ಗುಣಲಕ್ಷಣಗಳನ್ನು ಹೊಂದಿದ್ದು, ಎಲ್‌ಸಿಡಿ ಪ್ಯಾನೆಲ್‌ನಲ್ಲಿ ಲಭ್ಯವಿರುವ ಮೊತ್ತಕ್ಕಿಂತ 1.25 ಪಟ್ಟು ಹೆಚ್ಚಿಸುತ್ತದೆ. ಇದು ಹೆಚ್ಚಿನ ಕಲರ್‌ ಫ್ರಿಕ್ವೆನ್ಸಿ ಮತ್ತು ಕಪ್ಪು ಬಣ್ಣಗಳ ಸ್ಯಾಚುರೇಶನ್ ಮಟ್ಟವನ್ನು ತಲುಪಿಸಲು ಸಹಾಯ ಮಾಡುತ್ತದೆ. ಇದು ಎಲ್ಸಿಡಿಗಿಂತ 667 ಪಟ್ಟು ಹೆಚ್ಚು ವರ್ಧಿತ ಕಾಂಟ್ರಾಸ್ಟ್ ಅನುಪಾತವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಯೋಗ ಸ್ಲಿಮ್ 7I ಪ್ರೊ

ಇನ್ನು ಹೊಸ ಯೋಗ ಸ್ಲಿಮ್ 7I ಪ್ರೊ ಡಿಸ್‌ಪ್ಲೇ 100% DCI-P3 ಮತ್ತು 125% SRGB ಬಣ್ಣದ ಹರವು ಒದಗಿಸುವ ಸಾಮರ್ಥ್ಯ ಹೊಂದಿದೆ. ಒಎಲ್‌ಇಡಿ ಪ್ರದರ್ಶನವು ಎಲ್‌ಸಿಡಿ ಪ್ಯಾನೆಲ್‌ಗಿಂತ ನೀಲಿ ಬೆಳಕಿನ ಹೊರಸೂಸುವಿಕೆಯನ್ನು ಶೇಕಡಾ 70 ರಷ್ಟು ಕಡಿಮೆ ಮಾಡುತ್ತದೆ ಮತ್ತು ನೇರ ಸೂರ್ಯನ ಬೆಳಕಿನಲ್ಲಿ ಸಹ ಓದುವಿಕೆಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಲೆನೊವೊ ಹೇಳಿಕೊಂಡಿದೆ. ಈ ಲ್ಯಾಪ್‌ಟಾಪ್‌ 11 ನೇ ತಲೆಮಾರಿನ ಇಂಟೆಲ್ ಕೋರ್ I7 ಪ್ರೊಸೆಸರ್ ಅನ್ನು ಹೊಂದಿದೆ, ಇಂಟೆಲ್ ಐರಿಸ್ ಎಕ್ಸ್ ಇ ಸಂಯೋಜಿತ ಗ್ರಾಫಿಕ್ಸ್ ಅಥವಾ ಎನ್ವಿಡಿಯಾ ಜಿಫೋರ್ಸ್ ಎಮ್ಎಕ್ಸ್ 450 ಹೊಂದಿದೆ. ಇದು 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.

ಲ್ಯಾಪ್‌ಟಾಪ್

ಸದ್ಯ 14 ಇಂಚಿನ ಯೋಗ ಸ್ಲಿಮ್ 7I ಪ್ರೊ (ಒಎಲ್ಇಡಿ) ಲಭ್ಯತೆ ಮತ್ತು ಬೆಲೆ ದಿನಾಂಕವನ್ನು ಲೆನೊವೊ ಇನ್ನೂ ಘೋಷಿಸಿಲ್ಲ. ಆದಾಗ್ಯೂ, ಲ್ಯಾಪ್‌ಟಾಪ್ ಈ ವರ್ಷದ ಕೊನೆಯಲ್ಲಿ ಏಷ್ಯಾ-ಪೆಸಿಫಿಕ್, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಮತ್ತು ಉತ್ತರ ಅಮೆರಿಕಾದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಅದರೆ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎನ್ನುವುದು ಇನ್ನು ದೃಡಪಟ್ಟಿಲ್ಲ.

Most Read Articles
Best Mobiles in India

English summary
Lenovo Yoga Slim 7i Pro has been launched with an OLED display at CES 2021.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X