Subscribe to Gizbot

ತಪ್ಪು ತಿದ್ದುವ ಡಿಜಿಟಲ್ ಪೆನ್ ಮೋಡಿ

Written By:

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಕಂಪ್ಯೂಟರ್ ಪ್ರೊಗ್ರಾಮ್‌ಗಳಲ್ಲಿ ಸ್ವಯಂ ತಿದ್ದುವಿಕೆ ವ್ಯವಸ್ಥೆ ಇದ್ದು ನಾವು ತಪ್ಪಾಗಿ ಟೈಪ್ ಮಾಡಿದರೂ ಕೂಡಲೇ ಈ ವಿಧಾನ ನಾವು ಟೈಪ್ ಮಾಡಿದ ಅಕ್ಷರವನ್ನು ಸರಿಪಡಿಸುತ್ತದೆ. ಆದರೆ ನಾವು ಸಣ್ಣವರಿದ್ದಾಗ ಬರೆಯಲು ಪೆನ್ನು ಬಳಸುತ್ತಿದ್ದೆವು. ಪೆನ್ನಿನಲ್ಲಿ ನಾವು ಬರೆಯುವಾಗ ಹಲವಾರು ತಪ್ಪುಗಳನ್ನು ಮಾಡಿರುವೆವು. ಈಗಲೂ ಎಳೆಯರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದೇ ಹೇಳಬಹುದು.

ತಪ್ಪು ತಿದ್ದುವ ಡಿಜಿಟಲ್ ಪೆನ್ ಮೋಡಿ

ತಂತ್ರಜ್ಞಾನ ಮುಂದುವರಿದಿದೆ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲೇ ನಿಮ್ಮ ಬರವಣಿಗೆಯನ್ನು ಸುಧಾರಿಸುವ ಪೆನ್ ಒಂದನ್ನು ಹೊರತರಲಾಗಿದೆ. ಈ ಪೆನ್‌ನ ಒಳಭಾಗದಲ್ಲಿ ಸಾಫ್ಟ್‌ವೇರ್ ಅನ್ನು ಅಳವಡಿಸಲಾಗಿದ್ದು ಇದು ಪ್ರೊಸೆಸರ್, ಮೋಶನ್ ಸೆನ್ಸಾರ್, ವೈಫೈ, ವೈಬ್ರೇಶನ್ ಮಾಡ್ಯೂಲ್ ಮತ್ತು ಮೆಮೊರಿ ಕಾರ್ಡ್ ಅನ್ನು ಒಳಗೊಂಡಿದೆ. ಈ ಸಾಫ್ಟ್‌ವೇರ್ ಲೈನಕ್ಸ್ ಆಧಾರಿತವಾಗಿದೆ.

ತಪ್ಪು ತಿದ್ದುವ ಡಿಜಿಟಲ್ ಪೆನ್ ಮೋಡಿ

ಬಳಕೆದಾರ ವಾಕ್ಯವನ್ನು ತಪ್ಪಾಗಿ ಬರೆದಾಗ ಈ ಪೆನ್ ಬರಹಗಾರನನ್ನು ವೈಬ್ರೇಶನ್ ಮೂಲಕ ಎಚ್ಚರಿಸುತ್ತದೆ. ಹಾಗೂ ಇದರಿಂದ ತಾನು ಬರೆದಿರುವ ವಾಕ್ಯ ತಪ್ಪು ಎಂಬುದು ಬರಹಗಾರನಿಗೆ ತಿಳಿಯುತ್ತದೆ. ಈ ಪೆನ್ ಬೆಲೆ ರೂ 130 ರಿಂದ 150 ರೂಗಳಾಗಿವೆ.

English summary
This article tells about Lernstift – A Pen That Checks Your Spellings As You Write.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot