ಫ್ಲಿಪ್ ಡಿಸ್‌ಪ್ಲೇ ಹೊಂದಿರುವ ಎಲ್‌ಜಿ ಫೋಲ್ಡರ್ 2 ಸ್ಮಾರ್ಟ್‌ಫೋನ್ ಬಿಡುಗಡೆ!
ಟೆಕ್ ವಲಯದಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆನೂ ಭರವಿಲ್ಲ. ಪ್ರತಿನಿತ್ಯವೂ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿಯೆ ಇದೆ. ಆದರೆ ಕೆಲ ದಿನಗಳಿಂದ ಕೊರೊನಾ ವೈರಸ್ ಭೀತಿಯಿಂದಾಗಿ ಟೆಕ್ ವಲಯವೂ ಕೂಡ ಸಂಕಷ್ಟದಲ್ಲಿದೆ. ಈಗಾಗಲೇ ಹಲವು ಕಾರ್ಯಕ್ರಮಗಳನ್ನ ರದ್ದು ಮಾಡಿಕೊಂಡಿದೆ. ಇದರ ನಡುವೆಯೂ ಕೆಲ ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮ ನೂತನ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿವೆ. ಇಂತಹ ಕಂಪೆನಿಗಳಲ್ಲಿ ಎಲ್‌ಜಿ ಕೂಡ ಒಂದಾಗಿದ್ದು , ಇದೀಗ ತನ್ನ ಹೊಸ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ.

ಹೌದು, ಎಲೆಕ್ಟ್ರಾನಿಕ್ಸ್ ವಲಯದ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಫೋನ್ ಎಲ್‌ಜಿ ಫೋಲ್ಡರ್2 ಫ್ಲಿಪ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಇದೇ ಏಪ್ರಿಲ್ 17ರಂದು ದಕ್ಷಿಣ ಕೊರಿಯಾದಲ್ಲಿ ಖರೀದಿಸಲು ಲಭ್ಯವಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಫ್ಲಿಪ್ ಸ್ಮಾರ್ಟ್‌ಫೋನ್ ಆಗಿದೆ ಅನ್ನೊದು ಕೂಡ ತುಂಬಾ ವಿಶೇಷವಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ
ಎಲ್‌ಜಿ ಫೋಲ್ಡರ್ 2 ಫ್ಲಿಪ್ ಸ್ಮಾರ್ಟ್‌ಫೋನ್ 320x240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವ ಡ್ಯುಯೆಲ್ ಫ್ಲಿಪ್ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್ ಅನ್ನು ತೆರೆದಾಗ 2.8-ಇಂಚಿನ ಕ್ಯೂವಿಜಿಎ ಸ್ಕ್ರೀನ್ ಹಾಗೂ ಹೊರಭಾಗದಲ್ಲಿ 0.9-ಇಂಚಿನ ಮೊನೊ ಸ್ಕ್ರೀನ್ ಅನ್ನು ಸಹ ಒಳಗೊಂಡಿದೆ. ಈ ಮೊನೊ ಡಿಸ್‌ಪ್ಲೇ ಅನ್ನು ಅಧಿಸೂಚನೆಗಳಿಗಾಗಿ ಬಳಸಬಹುದು. ಜೊತೆಗೆ ಇದು ಪಠ್ಯ ಸಂದೇಶಗಳು, ಕರೆಗಳು, ಸಮಯದ ಬ್ಯಾಟರಿ ಮತ್ತು ಸಿಗ್ನಲ್ ಸಾಮರ್ಥ್ಯದ ಅಧಿಸೂಚನೆಗಳನ್ನು ತೋರಿಸುತ್ತದೆ.

ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 210 SoC ಪ್ರೊಸೆಸರ್ ವೇಗವನ್ನ ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ 1GB RAM ಮತ್ತು 8GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನ ಒಳಗೊಂಡಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 32GB ವರೆಗೆ ವಿಸ್ತರಿಸಬಹುದಾದ ಸಾಮರ್ಥ್ಯವನ್ನ ಹೊಂದಿದೆ.

ಕ್ಯಾಮೆರಾ ಮತ್ತು ಬ್ಯಾಟರಿ
ಇನ್ನು ಈ ಸ್ಮಾರ್ಟ್‌ಫೋನ್ ಸಿಂಗಲ್ ರಿಯರ್ ಕ್ಯಾಮೆರಾವನ್ನ ಒಳಗೊಂಡಿದೆ. ಇದು 2ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನ ಒಳಗೊಂಡಿರಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 1470mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಬ್ಲೂಟೂತ್ 4.1, ವೈ-ಫೈ ಮತ್ತು ಜಿಪಿಎಸ್ ಬೆಂಬಲವನ್ನು ಹೊಂದಿದೆ. ಇದಲ್ಲದೆ ಎಲ್ಜಿ ಫೋಲ್ಡರ್ 2 ಎಸ್ಒಎಸ್ ಕೀ ಮತ್ತು ಎಐ ವಾಯ್ಸ್ ಸೇವೆಯನ್ನು ಹೊಂದಿದೆ. ಹಿಂಭಾಗದಲ್ಲಿರುವ ಎಸ್‌ಒಎಸ್ ಕೀ 1.5 ಸೆಕೆಂಡುಗಳಲ್ಲಿ ಮೂರು ಬಾರಿ ತ್ವರಿತವಾಗಿ ಒತ್ತುವ ಮೂಲಕ ಪೂರ್ವ-ನೋಂದಾಯಿತ ಸಂಖ್ಯೆಯನ್ನು ಕರೆಯಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಫೋನ್ ಪಠ್ಯ ಸಂದೇಶದ ಮೂಲಕ ಸ್ಥಳ ಮಾಹಿತಿಯನ್ನು ಕಳುಹಿಸುತ್ತದೆ.

ಬೆಲೆ ಮತ್ತು ಲಭ್ಯತೆ
ಇನ್ನು ಎಲ್ಜಿ ಫೋಲ್ಡರ್ 2 ಸ್ಮಾರ್ಟ್‌ಫೋನ್ ಬೆಲೆ KRW 198,000 (ಅಂದಾಜು ರೂ. 12,400) ಮತ್ತು ದಕ್ಷಿಣ ಕೊರಿಯಾದಲ್ಲಿ ಏಪ್ರಿಲ್ 17 ರಿಂದ ಲಭ್ಯವಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ನ್ಯೂ ಪ್ಲ್ಯಾಟಿನಮ್ ಗ್ರೇ ಮತ್ತು ವೈಟ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








