ಎಲ್‌ಜಿ G9 ಥಿನ್‌ಕ್ಯೂ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಬಹಿರಂಗ!
ಸದ್ಯ ಇಡೀ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪೆಬ್ರವರಿ ತಿಂಗಳಲ್ಲಿ ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ ಕಾಂಗ್ರೆಸ್ ಸಮ್ಮೇಳನದ ಕಡೆಗೆ ಗಮನ ಹರಿಸಿದೆ. ಈ ಸಮ್ಮೇಳನದಲ್ಲಿ ಯಾವೆಲ್ಲಾ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ ಅನ್ನೊ ಕೌತುಕ ಎಲ್ಲೆಡೆ ಇದೆ. ಈ ನಡುವೆ MWC ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗ್ತಿದ್ದ ಎಲ್‌ಜಿ ಕಂಪೆನಿಯ ಸ್ಮಾರ್ಟ್‌ಫೋನ್ ನ ಫೀಚರ್ಸ್ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.

ಹೌದು ಎಲ್‌ಜಿ ಕಂಪೆನಿಯ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್ ಆಗಿರುವ ಎಲ್‌ಜಿ G9 ಥಿನ್‌ಕ್ಯೂ ಸ್ಮಾರ್ಟ್‌ಫೋನ್ ಫೀಚರ್ಸ್ ಲೀಕ್ ಆಗಿದೆ. ಬೆಝೆಲ್ ಲೆಸ್ ಡಿಸ್‌ಪ್ಲೇ ಡಿಸೈನ್ ಹೊಂದಿದ್ದು ವಾಟರ್ ಡ್ರಾಪ್ ನಾಚ್ ಶೈಲಿಯನ್ನ ಹೊಂದಿರಲಿದೆ ಎನ್ನಲಾಗ್ತಿದೆ. ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎಲ್‌ಜಿ G9 ಥಿನ್‌ಕ್ಯೂ ಸ್ಮಾರ್ಟ್‌ಫೋನ್ ಬಾರಿ ನೀರಿಕ್ಷೆ ಹುಟ್ಟುಹಾಕಿದ್ದು, ಲೀಕ್ ಮಾಹಿತಿ ಪ್ರಕಾರ ಯಾವೆಲ್ಲಾ ಫೀಚರ್ಸ್ ಅನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ಮುಂದೆ ಓದಿ.

ಈ ಸ್ಮಾರ್ಟ್‌ಫೋನ್ ಬೆಝೆಲ್ ಲೆಸ್ ಡಿಸ್‌ಪ್ಲೇ ಡಿಸೈನ್ ಹೊಂದಿರಲಿದ್ದು, 6.7-ಇಂಚಿನ ಡಿಸ್‌ಪ್ಲೇ ಇದಾಗಿರಬಹುದು ಎಂದು ಹೇಳಲಾಗ್ತಿದೆ. ಈ ಡಿಸ್‌ಪ್ಲೇಯು ವಾಟರ್ ಡ್ರಾಪ್ ನಾಚ್ ಶೈಲಿಯನ್ನ ಹೊಂದಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕೂಡ ಹೊಂದಿರಲಿದೆ. ಅಲ್ಲದೆ ಡಿವೈಸ್‌ನ ಮೇಲ್ಬಾಗದಲ್ಲಿ ಸ್ಪೀಕರ್‌ನ ಪವರ್ ಬಟನ್ ಹಾಗೂ ನಾಯ್ಸ್ ಕ್ಯಾನ್ಸಲೇಶನ್ ಮೈಕ್ ಕೂಡ ಹೊಂದಿದೆ. ಜೊತೆಗೆ ಪ್ಯಾನೆಲ್ ಡಿಸೈನ್ ಕೂಡ ಲೀಕ್ ಆಗಿದೆ.

ಸದ್ಯ ಲೀಕ್ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ ಕ್ವಾಲ್‌ಕಮ್ ಸ್ಯಾಪ್‌ಡ್ರ್ಯಾಗನ್ 865ಚಿಪ್‌ಸೆಟ್ ಪ್ರೊಸೆಸರ್ ಹೊಂದಿರಲಿದೆ ಎನ್ನಲಾಗ್ತಿದೆ. ಇನ್ನು ಎಲ್‌ಜಿ G9 ಥಿನ್‌ಕ್ಯೂ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದ್ದು, ಈ ಸ್ಮಾರ್ಟ್‌ಫೋನ್ ಯುಎಸ್‌ಬಿ ಟೈಪ್-ಸಿ ಪೋರ್ಟ್, ಸ್ಪೀಕರ್ ಗ್ರಿಲ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಹೊಂದಿರಲಿದೆ. ಅಲ್ಲದೆ ಫೋನಿನ ಎಡ ಭಾಗದ ಅಂಚಿನಲ್ಲಿ ಪವರ್ ಬಟನ್, ವ್ಯಾಲ್ಯೂಮ್ ಕಿ, ಮತ್ತು ಗೂಗಲ್ ಅಸಿಸ್ಟಂಟ್ ಕೀ ನೀಡಲಾಗಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಎಲ್‌ಜಿ ಕಂಪೆನಿ ಕಳೆದ ಆವೃತ್ತಿಯಲ್ಲಿ ಎಲ್‌ಜಿ G8X ಎಕ್ಸ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್ 6.4-ಇಂಚಿನ ಫುಲ್‌ವಿಷನ್ ಒಎಲ್ಇಡಿ ಫುಲ್‌ಹೆಚ್ ಡಿಸ್‌ಪ್ಲೇಯನ್ನ ಹೊಂದಿದೆ. 2340 × 1080 ಪಿಕ್ಸೆಲ್ ರೆಸಲ್ಯೂಶನ್ ಮತ್ತು 19.5: 9 ಆಸ್ಪೆಕ್ಟ್ ಅನುಪಾತವನ್ನು ಹೊಂದಿದೆ. ಇದು ಡ್ಯುಯಲ್-ಕ್ಯಾಮೆರಾ ರಿಯರ್ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಮತ್ತು ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. 4,000 ಎಮ್ಎಹೆಚ್ ಬ್ಯಾಟರಿ ಪ್ಯಾಕ್‌ಆಪ್ ಕೂಡ ಹೊಂದಿದೆ.


Click it and Unblock the Notifications








