ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಹೆಜ್ಜೆ ಇಟ್ಟ LG ಕಂಪೆನಿ: ಉಪಯೋಗ ಕೇಳಿದ್ರೆ ಅಚ್ಚರಿ ಪಡ್ತೀರಾ!
ಎಲೆಕ್ಟ್ರಾನಿಕ್ಸ್ ದೈತ್ಯ LG ಕಂಪೆನಿ ಭಾರತದಲ್ಲಿ ಹೊಸ ಸ್ವಯಂ ಲಾಂಡ್ರಿ ವ್ಯವಹಾರವನ್ನು(self-laundry business) ಪ್ರಾರಂಭಿಸಿದೆ. ಇದಕ್ಕಾಗಿ ಎಲ್‌ಜಿ ಕಂಪನಿಯು ಗ್ರೇಟರ್ ನೋಯ್ಡಾದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದೊಂದಿಗೆ ಪಾಲುದಾರಿಕೆ ಹೊಂದಿದೆ. ವಿದ್ಯಾರ್ಥಿಗಳು ತಮ್ಮ ಲಾಂಡ್ರಿಯನ್ನು ಸರಾಗಗೊಳಿಸುವ ಸಲುವಾಗಿ LG ಕಂಪೆನಿ ವಿಶ್ವವಿದ್ಯಾನಿಲಯದೊಳಗೆ ಲಾಂಡ್ರಿ ಮೆಷಿನ್ ಅನ್ನು ಸೆಂಟರ್ ಅನ್ನು ಸ್ಥಾಪಿಸಿದೆ.
ಹೌದು, LG ಕಂಪೆನಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಸ್ವಯಂ ಲಾಂಡ್ರಿ ವ್ಯವಹಾರವನ್ನು ಪ್ರಾರಂಭಿಸಿದೆ. ಇದರ ವಿಶೇಷತೆ ಎಂದರೆ ವಿದ್ಯಾರ್ಥಿಗಳು ಲಾಂಡ್ರಿ ಕ್ರ್ಯೂ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ಲಾಂಡ್ರಿಗಾಗಿ ಟೈಮ್ ಸ್ಲಾಟ್ ಅನ್ನು ಬುಕ್ ಮಾಡಬಹುದಾಗಿದೆ. ಇದು ಸ್ವಯಂಚಾಲಿತ ಪಾವತಿಗಳನ್ನು ಸಹ ಬೆಂಬಲಿಸುತ್ತದೆ. ಹಾಗಾದ್ರೆ ಎಲ್‌ಜಿ ಕಂಪೆನಿಯ ಸೆಲ್ಪ್ ಲಾಂಡ್ರಿ ಬ್ಯುಸಿನೆಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

LG ಕಂಪೆನಿ ಹೊಸದಾಗಿ ಸ್ವಯಂ-ಲಾಂಡ್ರಿ ವ್ಯವಹಾರವನ್ನು ಪ್ರಾರಂಭಿಸಿದೆ. ಇದರ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ತಮ್ಮ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಖರ್ಚು ಮಾಡುವ ಸಮಯ ಮತ್ತು ಶ್ರಮವನ್ನು ಕಡಿಮೆ ಮಾಡುವುದಾಗಿದೆ. ಇದನ್ನು ಪ್ರಯೋಗಿಕ ಎಂಬಂತೆ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಿದೆ. ಪ್ರಸ್ತುತ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದಲ್ಲಿ ಈ ಹೊಸ ಬ್ಯುಸಿನೆಸ್ ಸೆಟಪ್ 1,500 ವಿದ್ಯಾರ್ಥಿಗಳಿಗೆ ಪೂರೈಸುತ್ತಿದೆ.
ಇನ್ನು ಎಲ್‌ಜಿ ಕಂಪನಿಯು ಈ ವ್ಯವಹಾರವನ್ನು ಭಾರತದ ಹಲವಾರು ನಗರಗಳಿಗೆ ವಿಸ್ತರಿಸುವುದಕ್ಕೆ ಕೂಡ ಮುಂದಾಗಿದೆ. ಅಲ್ಲದೆ ವಿದ್ಯಾರ್ಥಿಗಳು ತಮ್ಮ ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಬಳಸಿಕೊಳ್ಳಲು ಸಹಾಯ ಮಾಡುವ ಮೂಲಕ ಶಿಕ್ಷಣ ವಲಯದಲ್ಲಿ ತನ್ನ ಹೆಜ್ಜೆಗುರುತನ್ನು ಹೆಚ್ಚಿಸಲು LG ಬಯಸಿದೆ. 2024ರ ಅಂತ್ಯದ ವೇಳೆಗೆ 200 ಹೆಚ್ಚು ಸ್ವಯಂ-ಲಾಂಡ್ರಿ ಕೇಂದ್ರಗಳನ್ನು ತೆರೆಯಲು LG ಈ ವಿಭಾಗದಲ್ಲಿ $4 ಮಿಲಿಯನ್‌ಗಿಂತಲೂ ಹೆಚ್ಚು ಹೂಡಿಕೆ ಮಾಡಲಿದೆ ಎಂದು ಹೇಳಲಾಗಿದೆ.
ಎಲ್‌ಜಿ ಕಂಪೆನಿ ಪರಿಚಯಿಸುತ್ತಿರುವ ಸ್ವಯಂ ಲಾಂಡ್ರಿ ಸೆಂಟರ್‌ಗಳ ಪರಿಕಲ್ಪನೆಯು ಪಾಶ್ಚಿಮಾತ್ಯ ದೇಶಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಬಾಡಿಗೆ ಕಟ್ಟಡಗಳು ಮತ್ತು ಹಾಸ್ಟೆಲ್‌ಗಳಲ್ಲಿ ಜನಪ್ರಿಯವಾಗಿದೆ. ಜೊತೆಗೆ ಇದು ಪ್ರತ್ಯೇಕ ಅಪಾರ್ಟ್ಮೆಂಟ್‌ಗಳಲ್ಲಿ ಸ್ಥಳಾವಕಾಶ ಮತ್ತು ಸಂಪನ್ಮೂಲಗಳನ್ನು ಉಳಿಸುವುದಕ್ಕೆ ಸಹಾಯ ಮಾಡಲಿದೆ. ಅಲ್ಲದೆ ವಿದ್ಯುತ್ ಬಳಕೆ ಮತ್ತು ತೊಳೆಯುವ ಯಂತ್ರಗಳ ನಿರ್ವಹಣೆಯ ತೊಂದರೆಗಳನ್ನು ನಿವಾರಿಸಲಿದೆ.

ವಿಶೇಷವಾಗಿ ಹಾಸ್ಟಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ತಮ್ಮ ಬಟ್ಟೆಗಳನ್ನು ತೊಳೆಯುವುದಕ್ಕಾಗಿ ಸಾಕಷ್ಟು ಸಮಯವನ್ನು ವ್ಯಯಿಸಬೇಕಾಗುತ್ತದೆ. ಹೀಗೆ ಸಮಯ ವ್ಯರ್ಥವಾಗುವುದನ್ನು ತಪ್ಪಿಸುವುದಕ್ಕಾಗಿ ಎಲ್‌ಜಿ ಕಂಪೆನಿ ಈ ಐಡಿಯಾ ಜಾರಿಗೆ ತಂದಿದೆ. ಇದರ ಬೆಲೆ ಕೂಡ ಕಡಿಮೆ ಆಗಿದ್ದು, ಬಳಕೆದಾರರು ಸಣ್ಣ ಶುಲ್ಕವನ್ನು ಪಾವತಿಸುವ ಮೂಲಕ ಯಂತ್ರವನ್ನು ಬಳಸಬಹುದಾಗಿದೆ. ಇದು ದೇಶದಾದ್ಯಂತ ಜಾರಿಗೆ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರಲ್ಲಿ ಯಾವುದೆ ಅನುಮಾನವಿಲ್ಲ.
ಇನ್ನು ಎಲ್‌ಜಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ LG QNED 83 ಸರಣಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಈ ಸರಣಿಯಲ್ಲಿ 55 ಇಂಚು ಹಾಗೂ 65 ಇಂಚಿನ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಟಿವಿಯು AI ಸೂಪರ್ ಅಪ್‌ಸ್ಕೇಲಿಂಗ್, ಲೋಕಲ್ ಡಿಮ್ಮಿಂಗ್ ಮತ್ತು ಗೇಮಿಂಗ್ ಸಾಮರ್ಥ್ಯಗಳಂತಹ ಫೀಚರ್ಸ್‌ಗಳನ್ನು ಹೊಂದಿದೆ.
LG QNED 83 ಸ್ಮಾರ್ಟ್‌ಟಿವಿ ಸರಣಿಯು 55 ಇಂಚು ಹಾಗೂ 65 ಇಂಚಿನ ಆಯ್ಕೆಗಳಲ್ಲಿ ಬರಲಿದೆ. ಈ ಸರಣಿಯು ಕ್ವಾಂಟಮ್ ಡಾಟ್ ಮತ್ತು ನ್ಯಾನೊಸೆಲ್ ತಂತ್ರಜ್ಞಾನಗಳ ಮಿಶ್ರಣವನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಹೆಚ್ಚು ನೈಜ ಮತ್ತು ಸ್ಪಷ್ಟವಾದ ಪ್ರದರ್ಶನವನ್ನು ನೀಡಲಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಟಿವಿಯು ಡಾಲ್ಬಿ ವಿಷನ್ ಮತ್ತು ಅಟ್ಮಾಸ್, AI ಸೂಪರ್ ಅಪ್‌ಸ್ಕೇಲಿಂಗ್, ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ಟಿವಿಯು α7 Gen6 AI 4K ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಇದು ವೀಕ್ಷಣೆಯ ಅನುಭವವನ್ನು ಕ್ರಿಯಾತ್ಮಕ ಮತ್ತು ವೈಯಕ್ತೀಕರಿಸಲು ವಿನ್ಯಾಸಗೊಳಿಸಲಾಗಿದೆ. ಈ ಪ್ರೊಸೆಸರ್ ಸ್ಪಂದಿಸುವ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸಲು ಹೆಸರುವಾಸಿಯಾಗಿದೆ. ಇದರಲ್ಲಿ ಡೀಪ್ ಲರ್ನಿಂಗ್ ಅಲ್ಗಾರಿದಮ್‌ಗಳಿಂದ ಬೆಂಬಲಿತವಾದ ಲೋಕಲ್ ಡಿಮ್ಮಿಂಗ್ ಟೆಕ್ನಾಲಜಿಯನ್ನು ನೀಡಲಾಗಿದೆ. ಹಾಲೋ ಎಫೆಕ್ಟ್‌ಗಳನ್ನು ಕಡಿಮೆ ಮಾಡುವ ಮೂಲಕ ಚಿತ್ರಗಳನ್ನು ತೀಕ್ಷ್ಣವಾಗಿ ಮತ್ತು ಹೆಚ್ಚು ನೈಸರ್ಗಿಕವಾಗಿ ಮಾಡುವ ಗುರಿಯನ್ನು ಹೊಂದಿದೆ.


Click it and Unblock the Notifications








