34,500 ರೂ.ಬೆಲೆಗೆ ಎಲ್‌ಜಿ ಆಪ್ಟಿಮಸ್‌ Vu ಬಿಡುಗಡೆ

By Vijeth Kumar Dn
|

34,500 ರೂ.ಬೆಲೆಗೆ ಎಲ್‌ಜಿ ಆಪ್ಟಿಮಸ್‌ Vu ಬಿಡುಗಡೆ

ಗಿಜ್ಬಾಟ್‌ನಲ್ಲಿ ಈ ಹಿಂದೆ ವರದಿ ಮಾಡಿದಂತೆಯೇ ಕೊರಿಯಾ ಮೂಲದ ತಾಂತ್ರಿಕ ಸರಕುಗಳ ತಯಾರಿಕೆಯ ದಿಗ್ಗಜ ಸಂಸ್ಥೆಯಾದ ಎಲ್‌ಜಿ ಭಾರತೀಯ ಮಾರುಕಟ್ಟೆಗೆ ತನ್ನಯ ನೂತನ ಆಪ್ಟಿಮಸ್‌ ವಿಯು ಫಾಬ್ಲೆಟ್‌ ಅನ್ನು ರೂ.34,500 ದರದಲ್ಲಿ ಬಿಡುಗಡೆ ಮಾಡಿದೆ. ಕೊರಿಯಾದಲ್ಲಿ 2012 ರ ಫೆಬ್ರವರಿಯಲ್ಲಿ ನಡೆದ ಮೊಬೈಲ್ ವರ್ಡ್‌ ಕಾಂಗ್ರೆಸ್‌ನಲ್ಲಿಯೇ ಆಪ್ಟಿಮಸ್‌ ವಿಯು ಫಾಬ್ಲೆಟ್‌ ಅನ್ನು ಎಲ್‌ಜಿ ಸಂಸ್ಥೆ ಅನಾವರಣ ಗೊಳಿಸಿತ್ತು ಅಲ್ಲದೆ ನಂತರ ಕೊರಿಯಾದಲ್ಲಿಯೇ ಮೊದಲಿಗೆ ಬಿಡುಗಡೆ ಮಾಡಲಾಗಿತ್ತು. ಆಪ್ಟಿಮಸ್‌ ವಿಯು ಕೊರಿಯಾ ದಲ್ಲಿಯೇ 5 ಲಕ್ಷ್‌ ಯೂನಿಟ್‌ ನಷ್ಟು ಮಾರಟ ಗಳಿಸಿತ್ತು ಈ ಯಷಸ್ಸಿನ ಬಳಿಕ ಎಲ್‌ಜಿ ತನ್ನಯ ಆಪ್ಟಿಮಸ್‌ ವಿಯು ಫಾಬ್ಲೆಟ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಂದಹಾಗೆ ಇದೀಗ ತಾನೆ ಭಾರತೀಯ ಮಾರುಕಟ್ಟೆಗೆ ಕಾಲಿರಿಸಿರುವ ನೂತನ ಎಲ್‌ಜಿ ಆಪ್ಟಿಮಸ್‌ ವಿಯು ಫಾಬ್ಲೆಟ್‌ನ ವಿಶೇಷತೆಗಳೇನೆಂಬುದನ್ನು ತಿಳಿದುಕೊಳ್ಳೋಣ.

ಸುತ್ತಳತೆ ಹಾಗೂ ತೂಕ: 139.6 x 90.ಫಾಬ್ಲೆಟ್‌ ಆದಂತಹ4 x 8.5mm ಸುತ್ತಳತೆಯೊಂದಿದಗೆ 168 ಗ್ರಾಂ ತೂಕವಿದೆ.

ದರ್ಶಕ: ಆಪ್ಟಿಮಸ್‌ ವಿಯು ನಲ್ಲಿ 5-ಇಂಚಿನ 4:3 ಆಸ್ಪೆಕ್ಟ್‌ ರೇಷ್ಯುನ XGA IPS ದರ್ಶಕ ವಿದ್ದು 1280 x 768 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ.

ಪ್ರೊಸೆಸರ್‌: 1.5GHz ಕ್ವಾಡ್‌ ಕೋರ್‌ Nvidia ಟೆಗ್ರಾ 3 ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಆಂಡ್ರಾಯ್ಡ್‌ 4.0 ICS ಆಪರೇಟಿಂಗ್‌ ಸಿಸ್ಟಂ ಹೊದಿದೆ.

ಕ್ಯಾಮೆರಾ: 8MP ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ 1.3MP ನ ಮುಂಬದಿಯ ಕ್ಯಾಮೆರಾ ಹೊಂದಿದೆ.

ಮೆಮೊರಿ: ಸ್ಟೋರೇಜ್‌ ವಿಭಾಗದಲ್ಲಿ ನೂತನ ಫಾಬ್ಲೆಟ್‌ನಲ್ಲಿ 32GB ಆಂತರಿಕ ಮೆಮೊರಿ ಹಾಗೂ 1GB RAM ಸೇರಿದಂತೆ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಸೌಲಭ್ಯವಿದ್ದು ಹೆಚ್ಚವರಿ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ..

ಕನೆಕ್ಟಿವಿಟಿ: ಬ್ಲೂಟೂತ್‌ 4.0, ವೈ-ಫೈ 802.11 b/g/n, A-GPS, ಮೈಕ್ರೋ USB 2.0 ಹಾಗೂ NFC ಹೊಂದಿದೆ.

ಬ್ಯಾಟರಿ: 2,080 mAh Li-ion ಬ್ಯಾಟರಿ ಹೊಂದಿದೆ.

ಬೆಲೆ: ಆಪ್ಟಿಮಸ್‌ ವಿಯು ರೂ.34,500 ದರದಲ್ಲಿ ಲಭ್ಯವಿದೆ.

Read In English...

<strong>2012ರ ಭಾರತದ ಫೇವರೆಟ್‌ ಟಾಪ್‌ 10 ಮೋಬೈಲ್ಸ್‌</strong>2012ರ ಭಾರತದ ಫೇವರೆಟ್‌ ಟಾಪ್‌ 10 ಮೋಬೈಲ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X