ಭಾರತದಲ್ಲಿ LG QNED 83 ಸರಣಿ ಸ್ಮಾರ್ಟ್‌ಟಿವಿ ಅನಾವರಣ: ಫೀಚರ್ಸ್ ಹೇಗಿದೆ
LG ಕಂಪೆನಿ ಭಾರತದಲ್ಲಿ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸದಾಗಿ LG QNED 83 ಸರಣಿಯ ಟಿವಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಟಿವಿಯು ಕ್ವಾಂಟಮ್ ನ್ಯಾನೊಸೆಲ್ ಡಿಸ್‌ಪ್ಲೇ ಪ್ಯಾನೆಲ್ ದೃಶ್ಯ ಗುಣಮಟ್ಟವನ್ನು ಒಳಗೊಂಡಿದೆ. ಈ ಸರಣಿಯು ಡಾಲ್ಬಿ ವಿಷನ್ ಮತ್ತು ಅಟ್ಮಾಸ್ ಸಿಸ್ಟಂ ಅನ್ನು ಪಡೆದುಕೊಂಡಿದೆ.
ಹೌದು, LG QNED 83 ಸರಣಿಯ ಸ್ಮಾರ್ಟ್‌ಟಿವಿಗಳು ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸರಣಿಯಲ್ಲಿ 55 ಇಂಚು ಹಾಗೂ 65 ಇಂಚಿನ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಟಿವಿಯು AI ಸೂಪರ್ ಅಪ್‌ಸ್ಕೇಲಿಂಗ್, ಲೋಕಲ್ ಡಿಮ್ಮಿಂಗ್ ಮತ್ತು ಗೇಮಿಂಗ್ ಸಾಮರ್ಥ್ಯಗಳಂತಹ ಫೀಚರ್ಸ್‌ಗಳನ್ನು ಹೊಂದಿದೆ. ಹಾಗಾದ್ರೆ LG QNED 83 ಸರಣಿಯ ಫೀಚರ್ಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

LG QNED 83 ಫೀಚರ್ಸ್ ಹೇಗಿದೆ?
LG QNED 83 ಸ್ಮಾರ್ಟ್‌ಟಿವಿ ಸರಣಿಯು 55 ಇಂಚು ಹಾಗೂ 65 ಇಂಚಿನ ಆಯ್ಕೆಗಳಲ್ಲಿ ಬರಲಿದೆ. ಈ ಸರಣಿಯು ಕ್ವಾಂಟಮ್ ಡಾಟ್ ಮತ್ತು ನ್ಯಾನೊಸೆಲ್ ತಂತ್ರಜ್ಞಾನಗಳ ಮಿಶ್ರಣವನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಹೆಚ್ಚು ನೈಜ ಮತ್ತು ಸ್ಪಷ್ಟವಾದ ಪ್ರದರ್ಶನವನ್ನು ನೀಡಲಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಟಿವಿಯು ಡಾಲ್ಬಿ ವಿಷನ್ ಮತ್ತು ಅಟ್ಮಾಸ್, AI ಸೂಪರ್ ಅಪ್‌ಸ್ಕೇಲಿಂಗ್, ಫೀಚರ್ಸ್‌ಗಳನ್ನು ಒಳಗೊಂಡಿದೆ.
ಇನ್ನು ಸ್ಮಾರ್ಟ್‌ಟಿವಿಯು α7 Gen6 AI 4K ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ವೀಕ್ಷಣೆಯ ಅನುಭವವನ್ನು ಕ್ರಿಯಾತ್ಮಕ ಮತ್ತು ವೈಯಕ್ತೀಕರಿಸಲು ವಿನ್ಯಾಸಗೊಳಿಸಲಾಗಿದೆ. ಈ ಪ್ರೊಸೆಸರ್ ಸ್ಪಂದಿಸುವ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸಲು ಹೆಸರುವಾಸಿಯಾಗಿದೆ. ಇದರಲ್ಲಿ ಡೀಪ್ ಲರ್ನಿಂಗ್ ಅಲ್ಗಾರಿದಮ್‌ಗಳಿಂದ ಬೆಂಬಲಿತವಾದ ಲೋಕಲ್ ಡಿಮ್ಮಿಂಗ್ ಟೆಕ್ನಾಲಜಿಯನ್ನು ನೀಡಲಾಗಿದೆ. ಇದು ಹಾಲೋ ಪರಿಣಾಮಗಳನ್ನು ಕಡಿಮೆ ಮಾಡುವ ಮೂಲಕ ಚಿತ್ರಗಳನ್ನು ತೀಕ್ಷ್ಣವಾಗಿ ಮತ್ತು ಹೆಚ್ಚು ನೈಸರ್ಗಿಕವಾಗಿ ಮಾಡುವ ಗುರಿಯನ್ನು ಹೊಂದಿದೆ.

LG QNED 83 ಸ್ಮಾರ್ಟ್‌ಟಿವಿಯು ಆಡಿಯೋಗಾಗಿ, AI ಪಿಕ್ಚರ್ ಪ್ರೊ ಮತ್ತು AI ಸೌಂಡ್ ಪ್ರೊ ಫೀಚರ್ಸ್ ಹೊಂದಿದೆ. ಅಲ್ಲದೆ ವರ್ಚುವಲ್ 5.1.2 ಚಾನಲ್‌ಗಳೊಂದಿಗೆ ಸರೌಂಡ್ ಸೌಂಡ್ ಅನುಭವವನ್ನು ಉತ್ತಮಗೊಳಿಸುತ್ತದೆ. ಇದು ಗೇಮ್ ಡ್ಯಾಶ್‌ಬೋರ್ಡ್ ಮತ್ತು ಆಪ್ಟಿಮೈಜರ್, AMD ಫ್ರೀಸಿಂಕ್, VRR, ಮತ್ತು 120Hz ರಿಫ್ರೆಶ್ ರೇಟ್‌ನಂತಹ ಫೀಚರ್ಸ್‌ಗಳೊಂದಿಗೆ ಬರಲಿದೆ. ಜೊತೆಗೆ ಸುಧಾರಿತ webOS ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಿಗೆ ಸುಲಭ ಪ್ರವೇಶವನ್ನು ನೀಡಲಿದೆ.

ಭಾರತದಲ್ಲಿ LG QNED 83 ಬೆಲೆ ಮತ್ತು ಲಭ್ಯತೆ
LG QNED 83 ಸರಣಿಯು ಭಾರತದಲ್ಲಿ 55 ಇಂಚಿನ ಆಯ್ಕೆಗೆ 1,59,990ರೂ ಬೆಲೆಯನ್ನು ಹೊಂದಿದೆ. ಇದಲ್ಲದೆ 65 ಇಂಚಿನ ರೂಪಾಂತರವು 2,19,990 ರೂ.ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳನ್ನು LG ಯ ಅಧಿಕೃತ ವೆಬ್‌ಸೈಟ್, LG ಶೋರೂಮ್‌ಗಳು ಮತ್ತು ಪಾಲುದಾರ ಚಿಲ್ಲರೆ ವ್ಯಾಪಾರಿಗಳಾದ ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ವಿವಿಧ ಇ-ಕಾಮರ್ಸ್ ಪೋರ್ಟಲ್‌ಗಳ ಮೂಲಕ ಖರೀದಿಸಬಹುದಾಗಿದೆ.
ಇನ್ನು ಕಳೆದ ವರ್ಷದ ಅಂತ್ಯದಲ್ಲಿ LG ಕಂಪೆನಿ ಭಾರತದಲ್ಲಿ ಮೂರು ಹೊಸ ಸೌಂಡ್‌ಬಾರ್‌ಗಳನ್ನು ಅನಾವರಣಗೊಳಿಸಿದೆ. ಇವುಗಳನ್ನು LG S95TR, LG SG10TY ಮತ್ತು LG S70TY ಸೌಂಡ್‌ಬಾರ್ ಎಂದು ಗುರುತಿಸಲಾಗಿದೆ. ಈ ಸೌಂಡ್‌ಬಾರ್‌ಗಳ ವಿನ್ಯಾಸ ಮತ್ತು ಕಾರ್ಯಕ್ಷಮತೆ ಅತ್ಯುತ್ತಮವಾಗಿದ್ದು, ನಯವಾದ ವಿನ್ಯಾಸವನ್ನು ಹೊಂದಿವೆ. ಇವುಗಳಲ್ಲಿ ಡಾಲ್ಬಿ ಅಟ್ಮೋಸ್ ಮತ್ತು DTS:X ತಂತ್ರಜ್ಞಾನದ ಬೆಂಬಲ ಪಡೆದಿವೆ. ಜೊತೆಗೆ ಇತ್ತೀಚಿನ ಸೌಂಡ್‌ಬಾರ್‌ಗಳಿಗಿಂತ ಉನ್ನತ ದರ್ಜೆಯ ಧ್ವನಿ ಗುಣಮಟ್ಟವನ್ನು ನೀಡಲಿದೆ.


Click it and Unblock the Notifications








