Home
ಸುದ್ದಿಜಾಲ

ನ್ಯೂ ಇಯರ್‌ ಕಿಕ್‌ ಏರಿಸಲು LG ಸಂಸ್ಥೆಯಿಂದ ಹೊಸ ಸೌಂಡ್‌ಬಾರ್‌ಗಳ ಅನಾವರಣ!

ಹೊಸ ವರ್ಷದ ಸಂಭ್ರಮದಲ್ಲಿ ಹಲವು ಬ್ರ್ಯಾಂಡ್‌ಗಳು ತಮ್ಮ ವಿವಿಧ ಪ್ರಾಡಕ್ಟ್‌ಗಳನ್ನು ಪರಿಚಯಿಸುವುದಕ್ಕೆ ತಯಾರಿ ನಡೆಸಿವೆ. ಇದೇ ಹಾದಿಯಲ್ಲಿ ಎಲೆಕ್ಟ್ರಾನಿಕ್ಸ್‌ ದೈತ್ಯ ಎಲ್‌ಜಿ ಕಂಪೆನಿ ಕೂಡ ಹೆಜ್ಜೆ ಇಟ್ಟಿದೆ. ಭಾರತದಲ್ಲಿ ಹೊಸ ವರ್ಷದ ಪ್ರಯುಕ್ತ ಹೊಸದಾಗಿ ಮೂರು ಸೌಂಡ್‌ಬಾರ್‌ಗಳನ್ನು ಪರಿಚಯಿಸುವುದಾಗಿ ಹೇಳಿದೆ. ಸದ್ಯ ಈ ಪ್ರಾಡಕ್ಟ್‌ಗಳನ್ನು ಅನಾವರಣಗೊಳಿಸುವ ಮೂಲಕ ಎಲ್ಲರ ಕ್ರೇಜ್‌ ಹೆಚ್ಚಾಗುವಂತೆ ಮಾಡಿದೆ.

ಹೌದು, LG ಕಂಪೆನಿ ಭಾರತದಲ್ಲಿ ಮೂರು ಹೊಸ ಸೌಂಡ್‌ಬಾರ್‌ಗಳನ್ನು ಅನಾವರಣಗೊಳಿಸಿದೆ. ಇವುಗಳನ್ನು LG S95TR, LG SG10TY ಮತ್ತು LG S70TY ಸೌಂಡ್‌ಬಾರ್ ಎಂದು ಹೆಸರಿಸಲಾಗಿದೆ. ಇನ್ನು ಈ ಸೌಂಡ್‌ಬಾರ್‌ಗಳ ವಿನ್ಯಾಸ ಮತ್ತು ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ ಎಂದು ಹೇಳಿದೆ. ಹಾಗಾದ್ರೆ LG ಕಂಪೆನಿಯ ಹೊಸ ಸೌಂಡ್‌ಬಾರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನ್ಯೂ ಇಯರ್‌ ಕಿಕ್‌ ಏರಿಸಲು LG ಸಂಸ್ಥೆಯಿಂದ ಹೊಸ ಸೌಂಡ್‌ಬಾರ್‌ಗಳ ಅನಾವರಣ!

LG ಕಂಪೆನಿ ಹೊಸ ಸೌಂಡ್‌ಬಾರ್ ಗಳ ವಿಶೇಷತೆ ಏನು?
LG ಕಂಪೆನಿಯ ಹೊಸ ಸೌಂಡ್‌ಬಾರ್‌ಗಳು ನಯವಾದ ವಿನ್ಯಾಸವನ್ನು ಹೊಂದಿವೆ. ಇವುಗಳಲ್ಲಿ ಡಾಲ್ಬಿ ಅಟ್ಮೋಸ್‌ ಮತ್ತು DTS:X ತಂತ್ರಜ್ಞಾನದ ಬೆಂಬಲದೊ೦ದಿಗೆ ಬರಲಿದೆ. ಇತ್ತೀಚಿನ ಸೌಂಡ್‌ಬಾರ್‌ಗಳಿಗಿಂತ ಉನ್ನತ ದರ್ಜೆಯ ಧ್ವನಿ ಗುಣಮಟ್ಟವನ್ನು ನೀಡಲಿದೆ. ಹೆಚ್ಚು ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. WOWCast ವಾಯರ್‌ಲೆಸ್‌ ಟೆಕ್ನಾಲಜಿಯನ್ನು ಸೇರ್ಪಡೆ ಮಾಡಿರುವುದರಿಂದ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸಲಿದೆ.

ಇದಲ್ಲದೆ ಸೌಂಡ್‌ಬಾರ್‌ಗಳು ಡಾಲ್ಬಿ ಅಟ್ಮಾಸ್‌ನೊಂದಿಗೆ ಜೋಡಿಸಿದಾಗ ತಂತ್ರಜ್ಞಾನವು ಉತ್ತಮ ಧ್ವನಿಯನ್ನು ನೀಡಲಿದೆ. ಇದಲ್ಲದೆ LG ಯ S95TR ಸೌಂಡ್‌ಬಾರ್ ಟಾಪ್ ಎಂಡ್ ಮಾಡೆಲ್ ಆಗಿದ್ದು, ಪ್ರಭಾವಶಾಲಿ 810W ಔಟ್‌ಪುಟ್ ಅನ್ನು ಒಳಗೊಂಡಿದೆ. ಈ ಸೌಂಡ್‌ಬಾರ್‌ಗಳು 15 ಚಾನಲ್‌ಗಳ ಮೂಲಕ ಸರೌಂಡ್ ಸೌಂಡ್ ಅನ್ನು ಔಟ್‌ಪುಟ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಇದರಲ್ಲಿ ಎಲ್‌ಜಿ S95TR ಸೌಂಡ್‌ಬಾರ್‌ ಮಾದರಿಯು ಅಪ್-ಫೈರಿಂಗ್ ಸ್ಪೀಕರ್‌ಗಳು ಮತ್ತು ಟ್ವೀಟರ್‌ಗಳನ್ನು ಸಹ ಹೊಂದಿದೆ.

ನ್ಯೂ ಇಯರ್‌ ಕಿಕ್‌ ಏರಿಸಲು LG ಸಂಸ್ಥೆಯಿಂದ ಹೊಸ ಸೌಂಡ್‌ಬಾರ್‌ಗಳ ಅನಾವರಣ!

ಇನ್ನು ಸೌಂಡ್‌ಬಾರ್‌ಗಳು ಟ್ರಿಪಲ್ ಲೆವೆಲ್ ಪ್ರಾದೇಶಿಕ ಧ್ವನಿ ತಂತ್ರಜ್ಞಾನವನ್ನು ಹೊಂದಿದೆ. LG ಕಂಪೆನಿಯು ಈ ಸೌಂಡ್‌ಬಾರ್‌ಗಳನ್ನು CES 2024 ಈವೆಂಟ್‌ನಲ್ಲಿ ಪ್ರದರ್ಶಿಸಲು ತಯಾರಿ ನಡೆಸಿದೆ. ಈ ಈವೆಂಟ್‌ 2024 ರ ಜನವರಿ 9 ರಿಂದ 12 ರವರೆಗೆ ನಡೆಯಲಿದೆ.

ಇದಲ್ಲದೆ ಎಲ್‌ಜಿ ಕಂಪೆನಿ ಇತ್ತೀಚಿಗೆ ಹೊಸದಾಗಿ ಎರಡು ಹೊಸ ಪೋರ್ಟಬಲ್‌ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸ್ಪೀಕರ್‌ಗಳು ಕೂಡ ಲೈಎಟ್‌ ಎಫೆಕ್ಟ್‌ನೊಂದಿಗೆ ಸೌಂಡ್‌ ಕ್ವಾಲಿಟಿಯನ್ನು ನೀಡುವ ಪೋರ್ಟಬಲ್‌ ಆಡಿಯೋ ಸಲ್ಯೂಶನ್‌ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳು ಒರಟಾದ ನಿರ್ಮಾಣ ಮತ್ತು ಸುಲಭವಾದ ಪೋರ್ಟಬಿಲಿಟಿಗಾಗಿ ದಕ್ಷತಾಶಾಸ್ತ್ರದ ಹ್ಯಾಂಡಲ್‌ಗಳನ್ನು ಒಳಗೊಂಡಿದೆ.

ಇದರಲ್ಲಿ LG XBOOM XL7S ಸ್ಪೀಕರ್‌ 20 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಈ ಸ್ಪೀಕರ್‌ IPX4 ರೇಟಿಂಗ್‌ ಹೊಂದಿದ್ದು, ನೀರಿನಿಂದ ರಕ್ಷಣೆ ನೀಡಲಿದೆ. ಇನ್ನು LG XBOOM XL7S ಸ್ಪೀಕರ್‌ ಪವರ್‌ಫುಲ್‌ ಬಾಸ್‌ಗಾಗಿ 20.32 cm ದೈತ್ಯ ವೂಫರ್ ಮತ್ತು ಡೈನಾಮಿಕ್ ಬಾಸ್ ಆಪ್ಟಿಮೈಜರ್ ಅನ್ನು ಒಳಗೊಂಡಿದೆ. ಇದು ಯಾವುದೇ ವಾಲ್ಯೂಮ್ ಮಟ್ಟದಲ್ಲಿ ಸಮತೋಲಿತ ಧ್ವನಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅವಕಾಶ ನೀಡಲಿದೆ. ಇದಲ್ಲದೆ ಈ ಪೋರ್ಟಬಲ್‌ ಸ್ಪೀಕರ್‌ ಸ್ಪಷ್ಟವಾದ ಹೈ-ಫ್ರಿಕ್ವೆನ್ಸಿ ನೋಟ್‌ಗಳಿಗಾಗಿ ಎರಡು 6.35 cm ಗುಮ್ಮಟ ಟ್ವೀಟರ್‌ಗಳನ್ನು ಸಹ ಒಳಗೊಂಡಿದೆ.

ನ್ಯೂ ಇಯರ್‌ ಕಿಕ್‌ ಏರಿಸಲು LG ಸಂಸ್ಥೆಯಿಂದ ಹೊಸ ಸೌಂಡ್‌ಬಾರ್‌ಗಳ ಅನಾವರಣ!

ಇನ್ನು LG XBOOM XL5S ಪೋರ್ಟಬಲ್‌ ಸ್ಪೀಕರ್‌ 12 ಗಂಟೆಗಳ ಪ್ಲೇಟೈಮ್ ಅನ್ನು ಒದಗಿಸಲಿದೆ. ಇದು 16.51 cm ದೈತ್ಯ ವೂಫರ್ ಮತ್ತು ಡೈನಾಮಿಕ್ ಬಾಸ್ ಆಪ್ಟಿಮೈಜರ್ ಹೊಂದಿದೆ. ಜೊತೆಗೆ ಎರಡು 6.35 cm ಡೋಮ್ ಟ್ವೀಟರ್‌ಗಳೊಂದಿಗೆ ಸ್ಪಷ್ಟ ಧ್ವನಿಗಾಗಿ ಬರುತ್ತದೆ. ಇದರಲ್ಲಿ ಮ್ಯೂಸಿಕ್‌ನೊಂದಿಗೆ ಸಿಂಕ್ರೊನೈಸ್ ಮಾಡುವ ಡಬಲ್ ಸ್ಟ್ರೋಬ್ ಲೈಟಿಂಗ್‌ನೊಂದಿಗೆ ಡೈನಾಮಿಕ್ ಪಾರ್ಟಿ ಲೈಟಿಂಗ್ ಅನ್ನು ಸಹ ನೀಡಲಾಗಿದೆ.

Best Mobiles in India

English summary
LG S95TR, SG10TY and S70TY soundbars Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+