Home
ಸುದ್ದಿಜಾಲ

ಹೊಸ ಆವತರಣಿಕೆಯಲ್ಲಿ ಲಾಂಚ್‌ ಆಗಲಿದೆ LG ಕಂಪೆನಿಯ 5G ಸ್ಮಾರ್ಟ್‌ಫೋನ್‌!

ಸ್ಮಾರ್ಟ್‌ಫೋನ್‌ ವಲಯದಲ್ಲಿ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಪ್ರತಿನಿತ್ಯ ಹೊ ಮಾದರಿಯ ಸ್ಮಾರ್ಟ್‌ಫೋನ್‌ಗಲ ಭರಾಟೆ ಜೋರಾಗಿಯೆ ನಡೆಯುತ್ತಿದೆ. ಈಗಾಗಲೇ ಹಲವು ಕಂಪೆನಿಗಳು ಸ್ಮಾರ್ಟ್‌ಫೋನ್‌ ವಲಯದಲ್ಲಿ ತಮ್ಮದೇ ಆದ ಸಂಚಲನ ಮೂಡಿಸಿವೆ. ಇನ್ನು ಕೆಲ ಕಂಪೆನಿಗಳು ತಮ್ಮದೇ ಆದ ವಿಶೇಷ ಫೀಚರ್ಸ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಮನ ಗೆದ್ದಿವೆ. ಇವುಗಳಲ್ಲಿ LG ಕಂಪೆನಿ ಕೂಡ ಒಂದಾಗಿದೆ. ಸದ್ಯ LG ಕಂಪೆನಿ ತನ್ನ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಪರಿಚಯಿಸಲು ಮುಂದಾಗಿದೆ.

ಹೌದು

ಹೌದು, ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿರುವ ಎಲ್‌ಜಿ ಕಂಪೆನಿ ತನ್ನ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳ ಮಾಹಿತಿಯನ್ನ ಹಂಚಿಕೊಂಡಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ 5G ಕನೆಕ್ಟಿವಿಟಿ ಮತ್ತು ಸ್ನಾಪ್‌ಡ್ರಾಗನ್ 7-ಸೀರೀಸ್ ಚಿಪ್‌ಸೆಟ್‌ ಅನ್ನು ಒಳಗೊಂಡಿದೆ ಎನ್ನಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಇದೇ ಮೇ 15 ರಂದು ಬಿಡುಗಡೆ ಆಗುವ ನಿರೀಕ್ಷೆಯಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಹೊಸ

ಇನ್ನು ಈ ಹೊಸ LG ಸ್ಮಾರ್ಟ್‌ಫೋನ್ 5G ನೆಟ್‌ವರ್ಕ್‌ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗ್ತಿದೆ. ಜೊತೆಗೆ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 700-ಸರಣಿ ಪ್ರೊಸೆಸರ್ ವೇಗವನ್ನು ಹೊಂದಿದ್ದು, ಅಂಡ್ರಾಯ್ಡ್‌ 10 ಅನ್ನು ಬೆಂಬಲಿಸಲಿದೆ. ಅಲ್ಲದೆ ಇದು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಆಗಿರುವ ಸಾಧ್ಯತೆ ಇದೆ. ಇನ್ನು ವಿಶೇಷವೆಂದರೆ, ಈ ಹೊಸ ಫೋನ್ ಅನ್ನು ಹೊಸ ಬ್ರ್ಯಾಂಡಿಂಗ್ ಅಡಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಎಲ್‌ಜಿ ಕೊರಿಯಾದ ಮಾರುಕಟ್ಟೆಯಲ್ಲಿ ಘೋಷಣೆ ಮಾಡಿದೆ.

ಸ್ಮಾರ್ಟ್‌ಫೋನ್‌

ಅಲ್ಲದೆ ಈ ಸ್ಮಾರ್ಟ್‌ಫೋನ್‌ ಪ್ರಮುಖ ಡಿವೈಸ್‌ಗಳಿಗೆ ಹೆಸರುವಾಸಿಯಾದ "G" ಸರಣಿಯ ಬ್ರ್ಯಾಂಡಿಂಗ್ ಅನ್ನು ಬಳಸುವುದಿಲ್ಲ ಎಂದು ಕಂಪೆನಿ ಹೇಳಿದೆ. ಅಲ್ಲದೆ ಈ ವರ್ಷದ ಆರಂಭದಲ್ಲಿ LG V60 thinQ 5G ಅನ್ನು ಬಿಡುಗಡೆ ಮಾಡಿರುವುದರಿಂದ ಇದು ಇನ್ನಷ್ಟು ವಿಭಿನ್ನವಾಗಿ ಬರಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ವಾಟರ್‌ ಡ್ರಾಪ್‌ ನಾಚ್‌ ಶೈಲಿಯ ಡಿಸ್‌ಪ್ಲೇಯನ್ನ ಹೊಂದಿರುವ ಸಾಧ್ಯತೆ ಕೂಡ ಇರಲಿದೆ. ಅಲ್ಲದೆ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಸಹ ಒಳಗೊಂಡಿರಲಿದೆ ಎಂದು ಹೇಳಲಾಗ್ತಿದೆ.

ಇನ್ನು

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮಾಡೆಲ್‌ ಅನ್ನು ಕೇಂದ್ರೀಯವಾಗಿ ಇರಿಸಬಹುದೆಂದು ವದಂತಿಗಳು ಸೂಚಿಸಿವೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಬಹುತೇಕ ಅಂಚಿನ-ಕಡಿಮೆ ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆ ಕೂಡ ಇದೆ. ಹಾಗೇಯೆ ವಿಡಿಯೋ ಕರೆಗಳು, ವಿಡಿಯೋ ವೀಕ್ಷಣೆಗೆ ಉತ್ತಮವಾದ ಮಾದರಿಯ ಡಿಸ್‌ಪ್ಲೇಯನ್ನ ಹೊಂದಿರಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಈಗ 7ನೇ ಸರಣಿಯ ಚಿಪ್‌ಸೆಟ್ ಎಲ್‌ಜಿಗೆ ತನ್ನ ಮುಂಬರುವ ಫೋನ್ ಶ್ರೇಣಿಯಲ್ಲಿ ಹೆಚ್ಚು ಆಕ್ರಮಣಕಾರಿ ಬೆಲೆಯನ್ನು ನಿಗಧಿ ಪಡಿಸಲು ಅನುವು ಮಾಡಿಕೊಡಲಿದೆ.

ಸ್ಮಾರ್ಟ್‌ಫೋನ್‌

ಅಲ್ಲದೆ ಈ ಸ್ಮಾರ್ಟ್‌ಫೋನ್‌ ಈ ವರ್ಷ ನಡೆಯಬೇಕಿದ್ದ MWC2020 ಅಲ್ಲಿ ಪ್ರದರ್ಶನವಾಗಬೇಕಿತ್ತು. ಇದಕ್ಕಾಗಿ ಎಲ್‌ಜಿ ಕಂಪೆನಿ ಕೂಡ ಸಾಕಷ್ಟು ತಯಾರಿಯನ್ನ ನಡೆಸಿಕೊಂಡಿತ್ತು. ಆದರೆ ಕೊರೊನಾ ವೈರಸ್‌ ಭಿತಿಯಿಂದಾಗಿ ಇಡೀ ಕಾರ್ಯಕ್ರಮವೇ ರದ್ದಾಗಿ ಹೋಗಿದೆ. ಈ ಹಿನ್ನೆಲೆಯನ್ನ ಈ ಸ್ಮಾರ್ಟ್‌ಫೋನ್‌ ಕುರಿತ ಹೆಚ್ಚಿನ ಮಾಹಿತಿಯನ್ನ ಕಂಪೆನಿ ಇನ್ನು ಬಿಟ್ಟುಕೊಟ್ಟಿಲ್ಲ. ಆದರೆ ಎಲ್‌ಜಿ ಕಂಪೆನಿಯಿಂದ ಮುಂದೆ ಬಿಡುಗಡೆ ಆಗಲಿರುವ ಸ್ಮಾರ್ಟ್‌ಫೋನ್‌ 5G ನೆಟ್‌ವರ್ಕ್‌ ಅನ್ನು ಬೆಂಬಲಿಸುವುದು ಪಕ್ಕಾ ಆಗಿದೆ.

Best Mobiles in India

English summary
LG reportedly shared information like the support for 5G connectivity and Snapdragon 7-series chipsets will be the key highlights of upcoming all-new series of phones on May 15.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+