ವಾವ್! ಇಂಟೆಲ್ ಮೆಡ್ ಫೀಲ್ಡ್ ಪ್ರೊಸೆಸರ್ ಎಲ್ ಜಿ ಮೊಬೈಲ್ ನಲ್ಲಿ

ಎಲ್ ಜಿ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಯಲ್ಲಿ ಹೆಸರುವಾಸಿಯಾಗಿರುವ ಕಂಪನಿ. 2011ರಲ್ಲಿ ಉತ್ತಮ ಬೇಡಿಕೆಯನ್ನು ಗಳಿಸಿತ್ತು. ಇದೀಗ 2012ರಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆಯಿರುವ ಸಾಧನಗಳನ್ನು ಪರಿಚಯಿಸಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಇದೀಗ ಎಲ್ ಜಿ ಇಂಟಲ್ ಮೆಡ್ ಫೀಲ್ಡ್ SoC ಇರುವ ಆಂಡ್ರಾಯ್ಡ್ ಫೋನ್ ತರಲಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಇದರ ಬಗ್ಗೆ ಎಲ್ ಜಿ ಅಧಿಕೃತವಾಗಿ ಇನ್ನೂ ಘೋಷಿಸಲಿಲ್ಲ.
ಇಂಟೆಲ್ ಮೆಡ್ ಫೀಲ್ಡ್ ಮೊಬೈಲ್ ಪ್ರೊಸೆಸರ್ ಅತಿ ಸಾಮರ್ಥ್ಯದ ಮತ್ತು ಅತಿ ವೇಗವಾಗಿ ಕಾರ್ಯ ವಿರ್ವಹಿಸುವಂತಹ ಪ್ರೊಸೆಸರ್ ಅಗಿದೆ. ಇಂಟೆಲ್ ಮೆಡ್ ಫೀಲ್ಡ್ ಪ್ಲಾಟ್ ಫಾರ್ಮ್ 32ಮಿಮಿನ ಇಂಟೆಲ್ ಆಟಮ್ ಪ್ರೊಸೆಸರ್ ತಯಾರಿಸಲಿದೆ ಎಂದು ಹೇಳಿದೆ. ಇದನ್ನು ಗೂಗಲ್ ಆಂಡ್ರಾಯ್ಡ್ ಇರುವ ಮೊಬಲ್ ಗಳಲ್ಲಿ ಅಳವಡಿಸುವುದು ಅಷ್ಟೇನು ಸುಲಭದ ವಿಷಯವಲ್ಲ. ಆದರೆ ಎಲ್ ಜಿ ಆ ಸಾಹಸಕ್ಕೆ ಕೈ ಹಾಕಿದೆ. ಈ ಮೊಬೈಲ್ ಐಫೋನ್ ಮೊಬೈಲ್ ಗಾತ್ರದಷ್ಟಿದೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ.
ಎಲ್ ಜಿ ಹೊಸ ಆವಿಷ್ಕಾರದ ಈ ಮೊಬೈಲ್ ತಯಾರಿಸಿ 2012 ಲಾಸ್ ವೇಗಸ್ ನಲ್ಲಿ ನಡೆಯುವ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ( ಗ್ರಾಹಕರ ಎಲೆಕ್ಟ್ರಾನಿಕ್ ವಸ್ತುಗಳ ಮೇಳ) ದಲ್ಲಿ ಪ್ರದರ್ಶಿಸಲಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿದ್ದರೂ ಎಲ್ ಜಿ ಇದರ ಬಗ್ಗೆ ಒಂದು ಮಾತನ್ನೂ ಕೂಡ ಹೇಳಲಿಲ್ಲ. ಆದರೆ ಎಲ್ ಜಿ ಈ ಹೊಸ ಮೊಬೈಲ್ ಹೀಗಾಲೆ ಹೆಚ್ಚಿನ ಹೈಪ್ ಉಂಟು ಮಾಡಿದ್ದು ಮೊಬೈಲ್ ಮಾರುಕಟ್ಟೆ ಮತ್ತು ಗ್ರಾಹಕರು ಹೆಚ್ಚಿನ ಕಾತರದಿಂದ ಎದುರು ನೋಡುವಂತೆ ಆಗಿದೆ.


Click it and Unblock the Notifications








