ಶೀಘ್ರದಲ್ಲೇ ಬರಲಿದೆ ನೂತನ ಎಲ್‌ಜಿ ಆಪ್ಟಿಮಸ್ ಸ್ಮಾರ್ಟ್‌ಫೋನ್

ಕೊರಿಯನ್ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆಯಾದ ಎಲ್‌ಜಿ ಮುಂದಿನ ವಾರದಲ್ಲಿ ತನ್ನಯ ನೂತನ ಆಪ್ಟಿಮಸ್ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ತರಲು ಯೋಜನೆ ರೂಪಿಸಿದೆ ಎಂದು ಸಂಸ್ಥೆಯ ಆಂತರಿಕ ಮೂಲಗಳಿಂದ ಬಹಿರಂಗ ಗೊಂಡಿದೆ. ಅಂದಹಾಗೆ ಎಲ್‌ಜಿ ಕೊನೆಯಬಾರಿಗೆ 2012ರ ಜುಲೈನಲ್ಲಿ ಆಪ್ಟಿಮಸ್ 4ಎಕ್ಸ್ ಹೆಚ್‌ಡಿ, ಎಲ್ 3, ಎಲ್5 ಹಾಗೂ ಎಲ್7 ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು ಆದರೆ ಆಪ್ಟಿಮಸ್ ವಿಯು ಮಾದರಿಯ ಫೋನ್ ಮಾತ್ರ ಭಾರತೀಯ ಮಾರಿಕಟ್ಟೆಗೆ ಬಿಡುಗಡೆ ಮಾಡಿರಲಿಲ್ಲ ಕೇವಲ ಕೊರಿಯಾ ಹಾಗೂ ಜಪಾನ್‌ನಲ್ಲಿ ಮಾತ್ರವಷ್ಟೇ ಬಿಡುಗಡೆ ಮಾಡಲಾಗಿತ್ತು.
ಅಂದಹಾಗೆ ಎಲ್‌ಜಿ ಸಂಸ್ಥೆಯು ಆಪ್ಟಿಮಸ್ ವಿಯು ಸ್ಮಾರ್ಟ್‌ಫೋನನ್ನೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಎಲ್ಲಾ ಸಾಧ್ಯತೆಗಳಿದ್ದು ಗ್ಯಾಲಾಕ್ಸಿ ನೋಟ್‌ಗೆ ಪ್ರಬಲ ಪೈ ಪೋಟಿ ನೀಡಬಲ್ಲದ್ದಾಗಿದೆ. ಈ ಮಧ್ಯೆ ಎಲ್‌ಜಿ ಸಂಸ್ಥೆಯು ಆಗಸ್ಟ್ ತಿಂಗಳಿನಲ್ಲಿ ಆಪ್ಟಿಮಸ್ ವಿಯು ಸ್ಮಾರ್ಟ್‌ಫೋನ್ ಸೆಪ್ಟೆಂಬರ್ ತಿಂಗಳಿನ ವೇಳೆಗೆ ವಿಶ್ವದೆಲ್ಲೆಡೆ ಲಭ್ಯವಾಗಲಿದೆ ಎಂದು ಅಧಿಕೃತವಾಗಿ ತಿಳಿಸಿತ್ತು.
ಎಲ್‌ಜಿ ಸಂಸ್ಥೆಯು ತನ್ನಯ ಕ್ವಾಡ್‌ಕೋರ್ ಪ್ರೊಸೆಸರ್ ಹೊಂದಿರುವ 5 ಇಂಚಿನ ಆಪ್ಟಿಮಸ್ ವಿಯು ಸ್ಮಾರ್ಟ್‌ಫೋನ್ ಅನ್ನು ಈಗಾಗಲೇ ಸ್ಥಳೀಯ ತಾಯಾರಕರುಗಳು ಬಿಡುಗಡೆ ಮಾಡಿರು 5 ಇಂಚಿನ ಸ್ಮಾರ್ಟ್‌ಫೋನ್‌ಗಳಿಂದ ತುಂಬಿ ಹೋಗಿರುವ ಭಾರತೀಯ ಮಾರುಕಟ್ಟೆ ಬಿಡುಗಡೆ ಮಾಡಲು ನಿರ್ಧರಿಸಿದೆ.
ಅಂದಹಾಗೆ ಎಲ್‌ಜಿ ಆಪ್ಟಿಮಸ್‌ನ ವಿಶೇಷತೆ ಕುರಿತಾಗಿ ಹೇಳುವುದಾದರೆ ಆಂಡ್ರಾಯಡ್ 4.0 ICS ಆಪರೇಟಿಂಗ್ ಸಿಸ್ಟಂ ಹೊಂದಿದ್ದು, 5 ಇಂಚಿನ XGA-IPS ಸಾಮರ್ತ್ಯದ ಟಚ್‌ಸ್ಜ್ರೀನ್ ಸೇರಿದಂತೆ 768 x 1024 ಪಿಕ್ಸೆಲ್ಸ್ ಹೊಂದಿದೆ.
ಇದಲ್ಲದೆ ಆಪ್ಟಿಮಸ್ ವಿಯು ನಲ್ಲಿ 1.5GHz ಕ್ವಾಡ್ ಕೋರ್ NVIDIA ಟೆಗ್ರಾ 3 ಪ್ರೊಸೆಸರ್, ಹಿಂಬದಿಯ 8MP ಕ್ಯಾಮೆರಾ ಹಾಗೂ 1.3MPನ ಮುಂಬದಿಯ ಕ್ಯಾಮೆರಾ ಹಾಗೂ 1GB RAM ಸೇರಿದಂತೆ ಮೈಕ್ರೋ SD ಕಾರ್ಡ್ ಸ್ಲಾಟ್ ಇದ್ದು 32GB ವರೆಗೂ ಮೆಮೊರಿ ವಿಸ್ತರಿಸ ಬಹುದಾಗಿದೆ. ಅಲ್ಲದೆ 2,080 mAh Li-ion ಬ್ಯಾಟರಿ ಇದ್ದು ಉತ್ತಮ ಬ್ಯಾಕಪ್ ನೀಡುತ್ತದೆ.
ಇದಲ್ಲದೆ HDMI ಪೋರ್ಟ್, DLNA, Wi-Fi ಹಾಗೂ ಬ್ಲೂಟೂತ್ ನಂತಹ ಕನೆಕ್ಟಿವಿಟಿ ಫೀಚರ್ಸ್‌ಗಳನ್ನು ಹೊಂದಿದೆ.


Click it and Unblock the Notifications



