Just In
Don't Miss
- Movies
Muddumanigalu:ಮಗಳ ಕಷ್ಟಕ್ಕೆ ಹೆಗಲಾಗಿ ಬಂದೇ ಬಿಟ್ಟಳು ಮುದ್ದುಲಕ್ಷ್ಮೀ.. ಮುಂದೇನು?
- Sports
IND vs NZ 3rd T20: ಶುಭ್ಮನ್ ಗಿಲ್ ಸ್ಫೋಟಕ ಶತಕ; ಕಿವೀಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಭಾರತ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
LG ಅಲ್ಟ್ರಾ PC ಪ್ರೀಮಿಯಂ ಲ್ಯಾಪ್‌ಟಾಪ್ ಸರಣಿ 2022 ಬಿಡುಗಡೆ! ಫೀಚರ್ಸ್ ಏನಿದೆ?
ಎಲೆಕ್ಟ್ರಾನಿಕ್ಸ್ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ತನ್ನ ಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ಗಳಿಗೆ ಜನಪ್ರಿಯತೆ ಪಡೆದಿದೆ. ಈಗಾಗಲೇ ಹಲವು ಆಯ್ಕೆಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ LG ಅಲ್ಟ್ರಾ PC ಪ್ರೀಮಿಯಂ ಲ್ಯಾಪ್‌ಟಾಪ್ ಸರಣಿ 2022 ಬಿಡುಗಡೆ ಮಾಡಿದೆ. ಇದು 16 ಮತ್ತು 17 ಇಂಚಿನ ಗಾತ್ರದ ಆಯ್ಕೆಗಳಲ್ಲಿ ಬರಲಿದೆ. ಇನ್ನು ಈ ಪಿಸಿ ಲ್ಯಾಪ್‌ಟಾಪ್‌ಗಳು ಪೋರ್ಟಬಿಲಿಟಿ, ಶೈಲಿಯನ್ನು ಬಯಸುವ ವ್ಯಾಪಕ ಶ್ರೇಣಿಯ ಗ್ರಾಹಕರಿಗೆ ಸೂಕ್ತವಾಗಿದೆ.

ಹೌದು, ಎಲ್‌ಜಿ ಕಂಪೆನಿ ಎಲ್‌ಜಿ ಅಲ್ಟ್ರಾ ಪಿಸಿ ಪ್ರೀಮಿಯಂ ಲ್ಯಾಪ್‌ಟಾಪ್ ಸರಣಿಯನ್ನು ಪರಿಚಯಿಸಿದೆ. ಇನ್ನು ಈ ಹೊಸ ಅಲ್ಟ್ರಾ ಪಿಸಿಗಳು 12ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಇದರಲ್ಲಿ 17 ಇಂಚಿನ ಮಾದರಿಯು ಇಂಟೆಲ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. 16 ಇಂಚಿನ ಗಾತ್ರದ ಲ್ಯಾಪ್‌ಟಾಪ್ AMDಯಲ್ಲಿ ರನ್ ಆಗಲಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ಗಳು ಸ್ಟೀರಿಯೋ ಸ್ಪೀಕರ್ ಸೆಟ್‌ಅಪ್ ಅನ್ನು ಹೊಂದಿವೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

LG ಅಲ್ಟ್ರಾ PC 17 ಇಂಚು
LG ಅಲ್ಟ್ರಾ PC 17 ಇಂಚಿನ ಲ್ಯಾಪ್‌ಟಾಪ್ IPS WQXGA ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 2,560 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 16:10 ರಚನೆಯ ಅನುಪಾತವನ್ನು ಪಡೆದಿದೆ. ಇನ್ನು ಲ್ಯಾಪ್‌ಟಾಪ್ ಸ್ಕ್ರೀನ್ DCI-P3 ಕಲರ್ ಗ್ಯಾಮಟ್ ಮತ್ತು 99% ಕವರೇಜ್ ಅನ್ನು ನೀಡಲಿದೆ. ಈ ಲ್ಯಾಪ್‌ಟಾಪ್ 300 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡಲಿದೆ.

ಇದು ಇಂಟೆಲ್ ಕೋರ್ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್ ಎನ್‌ವಿಡಿಯಾ RTX 3050 ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ 16GB RAM ಮತ್ತು 512GB NVMe SSD ಅನ್ನು ಒಳಗೊಂಡಿದೆ. ಇದು 80Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 1.98ಕೆಜಿ ತೂಕವನ್ನು ಹೊಂದಿದೆ. ಇದು 1.5W ಸ್ಪೀಕರ್‌ಗ ಜೊತೆಗೆ ಸ್ಟೀರಿಯೋ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.

LG ಅಲ್ಟ್ರಾ PC 16 ಇಂಚು
LG ಅಲ್ಟ್ರಾ PC 16 ಇಂಚಿನ ಲ್ಯಾಪ್‌ಟಾಪ್ 1,920 x 1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇಯನ್ನು ಹೊಂದಿದೆ. ಇದು AMD ರೈಜೆನ್ 7 5825U ಚಿಪ್‌ಸೆಟ್ ಪ್ರೊಸೆಸರ್ ಬಲವನ್ನು ಪಡೆದಿದೆ. ಹಾಗೆಯೇ 16GB RAM ಮತ್ತು 512GB/1TB NVME SSD ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಲ್ಯಾಪ್‌ಟಾಪ್ AMD ರೇಡಿಯನ್ ವೆಗಾ 8 ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಕೂಡ 1.5W ಸ್ಪೀಕರ್‌ಗಳೊಂದಿಗೆ ಸ್ಟೀರಿಯೋ ಸ್ಪೀಕರ್ ಸೆಟಪ್ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಎಲ್‌ಜಿ ಕಂಪೆನಿ ಈ ಲ್ಯಾಪ್‌ಟಾಪ್ ಯುಎಸ್‌ನಲ್ಲಿ ಮಾತ್ರ ಬಿಡುಗಡೆ ಮಾಡಿದೆ. ಇದರ LG ಅಲ್ಟ್ರಾ PC 17-ಇಂಚಿನ (17U70Q) ಲ್ಯಾಪ್‌ಟಾಪ್ ಬೆಲೆ $1599 (ಅಂದಾಜು 1,27,459ರೂ) ಆಗಿದೆ. ಆದರೆ LG ಅಲ್ಟ್ರಾ PC 16-ಇಂಚು (16U70Q) ಲ್ಯಾಪ್‌ಟಾಪ್ ಬೆಲೆ $1299 (ಅಂದಾಜು 1,03,545ರೂ)ಹೊಂದಿದೆ. ಇನ್ನು ಈ ಎರಡೂ ಲ್ಯಾಪ್‌ಟಾಪ್‌ಗಳು LG.com ನಿಂದ ಖರೀದಿಸಲು ಲಭ್ಯವಿವೆ. ಇದಲ್ಲದೆ ಈ ಎರಡು ಲ್ಯಾಪ್‌ಟಾಪ್‌ಗಳು ಯುಎಸ್‌ನಲ್ಲಿ ಬೆಸ್ಟ್ ಬೈ ನಂತಹ ಆಯ್ದ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ.

ಇದಲ್ಲದೆ ಎಲ್‌ಜಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ LG OLED Evo ಸ್ಮಾರ್ಟ್‌ಟಿವಿ ಬಿಡುಗಡೆ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್ ಹೊಸ α (ಆಲ್ಫಾ) 9 Gen 5 ಪ್ರೊಸೆಸರ್ ಮತ್ತು ಚಿತ್ರ ಅಲ್ಗಾರಿದಮ್‌ಗಳನ್ನು ಒಳಗೊಂಡಿದೆ. ಇದು LG ಯ Evo ತಂತ್ರಜ್ಞಾನವನ್ನು ಒಳಗೊಂಡಿದ್ದು 2022 G2 ಸರಣಿ ಮತ್ತು C2 ಸರಣಿಯಲ್ಲಿ ನಿರ್ಮಿಸಲಾಗಿದೆ. ಇನ್ನು LG OLED Evo ಟಿವಿಗಳು ಹೊಸ ಬ್ರೈಟ್‌ನೆಸ್ ಬೂಸ್ಟರ್ ಮ್ಯಾಕ್ಸ್ ತಂತ್ರಜ್ಞಾನವನ್ನು ಹೊಂದಿದೆ. ಇದು G2 ಸರಣಿಯನ್ನು 30% ಬ್ರೈಟ್‌ನೆಸ್ ಹೆಚ್ಚು ಮಾಡಲಿದೆ. ಹಾಗೆಯೇ C2 ಸರಣಿಯನ್ನು 20% ಬ್ರೈಟ್‌ನೆಸ್ ನೀಡಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470