ಎಲ್‌ಜಿ v60 ಥಿಂಕ್ಯೂ 5G ವೇರಿಯಂಟ್ ಸ್ಮಾರ್ಟ್‌ಫೋನ್ ಲಾಂಚ್!
ಸ್ಮಾರ್ಟ್‌ಫೋನ್ ವಲಯದಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುತ್ತಾ ಬಂದಿರುವ ಎಲ್‌ಜಿ ಕಂಪೆನಿ. ಟೆಕ್ ಮಾರುಕಟ್ಟೆಯಲ್ಲಿ ತನ್ನದೆ ಆದ ಬ್ರ್ಯಾಂಡ್‌ಮೌಲ್ಯವನ್ನು ಹೊಂದಿದೆ. ಪ್ರತಿ ಬಾರಿಯು ಸ್ಮಾರ್ಟ್‌ಫೋನ್‌ಗಳಲ್ಲಿ ವಿಶೇಷತೆ ಮೆರೆಯುವ ಎಲ್‌ಜಿ ಕಂಪೆನಿ ಇದೀಗ ಹೊಸ v ಥಿನ್‌ಕ್ಯೂ ಸರಣಿಯಲ್ಲಿ ಹೊಸ ಡ್ಯುಯೆಲ್ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಸದ್ಯ ಈ ಸ್ಮಾರ್ಟ್‌ಫೋನ್ ನಾರ್ತ್ ಅಮೆರಿಕದಲ್ಲಿ ಬಿಡುಗಡೆ ಮಾಡಿದೆ.

ಹೌದು, ಎಲೆಕ್ಟ್ರಾನಿಕ್ಸ್ ವಲಯದ ದೈತ್ಯ ಎನಿಸಿಕೊಂಡಿರುವ ಎಲ್‌ಜಿ ಕಂಪೆನಿ ತನ್ನ ಹೊಸ ಎಲ್‌ಜಿ v60 ಥಿಂಕ್ಯೂ 5G ಎಲ್‌ಜಿ v60 ಥಿಂಕ್ಯೂ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಅಪ್‌ಗ್ರೇಡೆಡ್ ಡ್ಯುಯೆಲ್ ಸ್ಕ್ರೀನ್, ದೀರ್ಘ ಸಾಮರ್ಥ್ಯದ ಬ್ಯಾಟರಿ, ಸ್ಯಾಪ್‌ಡ್ರಾಗನ್ 865 ಪ್ರೊಸೆಸರ್ ಅನ್ನು ಒಳಗೊಂಡಿದೆ. ಮಲ್ಟಿ ಟಾಸ್ಕಿಂಗ್ ಡಿಸ್‌ಪ್ಲೇ ವಿನ್ಯಾಸ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ನಿರೀಕ್ಷೆಯನ್ನ ಹುಟ್ಟುಹಾಕಿದೆ. ಇನ್ನು ಎಲ್‌ಜಿ v60 ಥಿಂಕ್ಯೂ 5G ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡ್ಯುಯೆಲ್ ಸ್ಕ್ರೀನ್ ಡಿಸ್‌ಪ್ಲೇ
ಎಲ್‌ಜಿ v60 ಥಿಂಕ್ಯೂ 5G ಸ್ಮಾರ್ಟ್‌ಫೋನ್ ಡ್ಯುಯೆಲ್ ಸ್ಕ್ರೀನ್ ಡಿಸ್‌ಪ್ಲೇ ಅನ್ನು ಹೊಂದಿದೆ. 1080x2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುವ 6.80 ಇಂಚಿನ ಫುಲ್‌ಎಚ್‌ಡಿ ಪ್ಲಸ್ ಪ್ಲಾಸ್ಟಿಕ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 395PPI ಪಿಕ್ಸೆಲ್ ರೆಸಲ್ಯೂಶನ್ ಸಾಂದ್ರತೆಯನ್ನ ಒಳಗೊಂಡಿದೆ. ಅಲ್ಲದೆ ಇದು HDR10 ಪ್ಲಸ್ ಬೆಂಬಲಿಸಲಿದ್ದು, 20.5:9 ಅನುಪಾತವನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ
ಈ ಸ್ಮಾರ್ಟ್‌ಫೋನ್ ಸ್ಯಾಪ್‌ಡ್ರಾಗನ್ 865 Soc ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 2TB ವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿನ್ಯಾಸ
ಎಲ್‌ಜಿ V60 ಥಿಂಕ್ಯೂ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೂಪರ್ ವೈಡ್ ಕ್ಯಾಮೆರಾ, ಮೂರನೇ ಕ್ಯಾಮೆರಾ ToF ಸೆನ್ಸಾರ್ ಅನ್ನು ಒಳಗೊಂಡಿದೆ. ಜೊತೆಗೆ 10 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನ ರಿಯರ್ ಕ್ಯಾಮೆರಾದಲ್ಲಿ 8k ವಿಡಿಯೋ ರೆಕಾರ್ಡಿಂಗ್ ಮಾಡುವ ಫೀಚರ್ಸ್ ಅನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ಈ ಸ್ಮಾರ್ಟ್‌ಫೋನ್ ದೀರ್ಘ ಗಾತ್ರದ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ಅನ್ನು ಹೊಂದಿದ್ದು, ಕ್ವಾಲ್ಕಾಮ್ 4ಪ್ಲಸ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, LTE, ವೈಫೈ, ಬ್ಲೂಟೂತ್ 5.1, NFC, ಯುಎಸ್‌ಬಿ ಟೈಪ್ ಸಿ ಪೊರ್ಟ್, 3.5mm ಅಡಿಯೋ ಜ್ಯಾಕ್ ಅನ್ನು ಬೆಂಬಲಿಸಲಿದೆ. ಜೊತೆಗೆ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಗೂಗಲ್ ಲೆನ್ಸ್ ಸಪೋರ್ಟ್, ಹಾಗೂ ವಾಟರ್ ಪ್ರೂಪ್ ವ್ಯವಸ್ಥೆಯನ್ನ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಡ್ಯುಯೆಲ್ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಸದ್ಯ ನಾರ್ಥ್ ಅಮೆರಿಕದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಮುಂದಿನ ತಿಂಗಳು ಯುರೋಪ್ ಹಾಗೂ ಏಷ್ಯಾ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ನಾರ್ಥ್ ಅಮೆರಿಕದಲ್ಲಿ ಇದು ಯಾವ ಬೆಲೆಗೆ ಮಾರಾಟವಾಗಲಿದೆ ಎಂಬುದರ ಬಗ್ಗೆ ಕಂಪೆನಿ ಯಾವುದೇ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ. ಆದರೆ ಕ್ಲ್ಯಾಸಿ ಬ್ಲೂ, ಕ್ಲ್ಯಾಸಿ ವೈಟ್ ಕಲರ್ ಆಯ್ಕೆಯಲ್ಲಿ ಖರೀದಿಸಲು ಲಭ್ಯವಿದೆ.


Click it and Unblock the Notifications








