Home
ಸುದ್ದಿಜಾಲ

ಬೆಜೆಟ್ ಸ್ಮಾರ್ಟ್ ಫೋನ್ ಬಿಡುಗಡೆಗೆ LG ಸಿದ್ಧ: ಶಿಯೋಮಿ ಪತನ ಆರಂಭ...??

ಕೋರಿಯಾ ಮೂಲದ ಸ್ಮಾರ್ಟ್ ಫೋನ್ ತಯಾರಿಕ ಕಂಪನಿ LG ಮತ್ತೊಂದು ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡುವ ಸನಿಹದಲ್ಲಿದೆ. ಈಗಾಗಲೇ ಬೇರೆ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿರುವ ಬಜೆಟ್ ಸ್ಮಾರ್ಟ್ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿಯೂ ಪರಿಚಯ ಮಾಡುವ ಸನಿಹದಲ್ಲಿದ್ದು, ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಅಲೆಯನ್ನು ಹುಟ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಜೆಟ್ ಸ್ಮಾರ್ಟ್ ಫೋನ್ ಬಿಡುಗಡೆಗೆ LG ಸಿದ್ಧ: ಶಿಯೋಮಿ ಪತನ ಆರಂಭ...??

ಬೆಜೆಟ್ ಬೆಲೆಯಲ್ಲಿ ಲಭ್ಯವಿರುವ LG X2 ಸ್ಮಾರ್ಟ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡುವುದಾಗಿ LG ತಿಳಿಸಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಅನ್ನು ಬಳಕೆದಾರರ ಕೈಗೆ ನೀಡುವ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದೆ. ಇದಲ್ಲದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಫೋನ್ ಗಳಿಗೆ ಇದು ಸ್ಪರ್ಧೆಯನ್ನು ನೀಡಲಿದೆ.

ಆಟೋ ಶೂಟ್:

LG X2 ಸ್ಮಾರ್ಟ್ ಫೋನಿನಲ್ಲಿ 8 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಕಾಣಬಹುದಾಗಿದ್ದು, ಇದು ಆಟೋ ಶೂಟ್ ತಂತ್ರಜ್ಞಾನವನ್ನು ಹೊಂದಿದ್ದು, ಬಳಕೆದಾರರಿಗೆ ಸುಲಭವಾಗಿ ಫೋಟೋಗಳನ್ನು ಸೆರೆಹಿಡಿಯುವ ಅವಕಾಶವನ್ನು ಮಾಡಿಕೊಡಲಿದೆ. ಇದರೊಂದಿಗೆ LED ಫ್ಲಾಷ್ ಲೈಟ್ ಅನ್ನು ಸಹ ಅಳವಡಿಸಲಾಗಿದೆ. ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೋಡಬಹುದಾಗಿದೆ.

5 ಇಂಚಿನ ಡಿಸ್ ಪ್ಲೇ:

LG X2 ಸ್ಮಾರ್ಟ್ ಫೋನಿನಲ್ಲಿ 5 ಇಂಚಿನ HD IPS ಡಿಸ್ ಪ್ಲೇಯನ್ನ ಅಳವಡಿಸಲಾಗಿದ್ದು, ಬಳಕೆದಾರರಿಗೆ ಬೆಜೆಟ್ ಫೋನ್ ಎನ್ನುವ ಭಾವನ್ನು ನೀಡುವುದಿಲ್ಲ ಎನ್ನಲಾಗಿದೆ. ಗುಣಮಟ್ಟದ ವಿಡಿಯೋಗಳನ್ನು ನೋಡಲು ಇದು ಹೇಳಿ ಮಾಡಿಸಿದ ಡಿಸ್ ಪ್ಲೇ ಆಗಿದೆ.

2GB RAM:

LG X2 ಸ್ಮಾರ್ಟ್ ಫೋನ್ ಬಜೆಟ್ ಬೆಲೆಯಲ್ಲಿ ಲಭ್ಯವಿರುವ ಕಾರಣ 2GB RAM ಅನ್ನು ನೀಡಲಾಗಿದ್ದು, ಇರೊಂದಿಗೆ 16 GB ಇಂಟರ್ನಲ್ ಮೆಮೊರಿಯನ್ನು ಅಳವಡಿಸಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಬಳಕೆದಾರರಿಗೆ ನೀಡಲಾಗಿದೆ.

ಬ್ಯಾಟರಿ:

ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸುವ LG X2 ಸ್ಮಾರ್ಟ್ ಫೋನಿನಲ್ಲಿ 2500mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಬಳಕೆದಾರರಿಗೆ ಸಾಕಷ್ಟು ಬಾಳಿಕೆಯನ್ನು ಇದು ನೀಡಲಿದೆ. ಇದಲ್ಲದೇ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬೆಲೆ:

LG X2 ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟು ಬೆಲೆಗೆ ಮಾರಾಟವಾಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿಲ್ಲ. ಆದರೆ ಕೊರಿಯಾ ಮಾರುಕಟ್ಟೆಯಲ್ಲಿ ರೂ. 12000ಕ್ಕೆ ಮಾರಾಟವಾಗುತ್ತಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಇನ್ನಷ್ಟು ಕಡಿಮೆ ಬೆಲೆಗೆ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Best Mobiles in India

English summary
LG X2 with 5-inch HD display, fingerprint sensor announced
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+