Home
ಸುದ್ದಿಜಾಲ

LG ಕಂಪೆನಿಯಿಂದ ಎರಡು ಹೊಸ ಪೋರ್ಟಬಲ್‌ ಸ್ಪೀಕರ್‌ ಲಾಂಚ್‌! 20 ಗಂಟೆಗಳ ಬ್ಯಾಟರಿ ಅವಧಿ!

ಇತ್ತೀಚಿನ ದಿನಗಳಲ್ಲಿ ಯುವಜನರ ಹಾಟ್‌ ಫೇವರೀಟ್‌ ಡಿವೈಸ್‌ಗಳಲ್ಲಿ ಸ್ಪೀಕರ್‌ಗಳು ಕೂಡ ಒಂದಾಗಿವೆ. ಸ್ಪೀಕರ್‌ಗಳ ಮೇಲಿನ ಕ್ರೇಜ್‌ ಇಂದಿನ ಜಮಾನದಲ್ಲಿ ತುಸು ಹೆಚ್ಚೆ ಇದೆ. ಇದರ ಮುಂದುವರೆದ ಭಾಗವೆಂಬಂತೆ ಎಲ್‌ಜಿ ಕಂಪೆನಿ ಇದೀಗ ಹೊಸ XBOOM ಸರಣಿಯ ಪೋರ್ಟಬಲ್‌ ಸ್ಪೀಕರ್‌ಗಳನ್ನು ಪರಿಚಯಿಸಿದೆ. ಇವುಗಳನ್ನು LG XBOOM XL7S ಮತ್ತು XL5S ಎಂದು ಹೆಸರಿಸಲಾಗಿದೆ.

ಹೌದು, ಎಲ್‌ಜಿ ಕಂಪೆನಿ ಹೊಸದಾಗಿ ಎರಡು ಹೊಸ ಪೋರ್ಟಬಲ್‌ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸ್ಪೀಕರ್‌ಗಳು ಕೂಡ ಲೈಎಟ್‌ ಎಫೆಕ್ಟ್‌ನೊಂದಿಗೆ ಸೌಂಡ್‌ ಕ್ವಾಲಿಟಿಯನ್ನು ನೀಡುವ ಪೋರ್ಟಬಲ್‌ ಆಡಿಯೋ ಸಲ್ಯೂಶನ್‌ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇವುಗಳು ಒರಟಾದ ನಿರ್ಮಾಣ ಮತ್ತು ಸುಲಭವಾದ ಪೋರ್ಟಬಿಲಿಟಿಗಾಗಿ ದಕ್ಷತಾಶಾಸ್ತ್ರದ ಹ್ಯಾಂಡಲ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಪೋರ್ಟಬಲ್‌ ಸ್ಪೀಕರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

LG ಕಂಪೆನಿಯಿಂದ ಎರಡು ಪೋರ್ಟಬಲ್‌ ಸ್ಪೀಕರ್‌ ಲಾಂಚ್‌! 20 ಗಂಟೆಗಳ ಬ್ಯಾಟರಿ ಅವಧಿ!

LG XBOOM XL7S ಪೋರ್ಟಬಲ್‌ ಸ್ಪೀಕರ್‌ ಫೀಚರ್ಸ್‌ ಹೇಗಿದೆ?
LG XBOOM ಸರಣಿಯಲ್ಲಿ LG XBOOM XL7S ಸ್ಪೀಕರ್‌ 20 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನು ಈ ಸ್ಪೀಕರ್‌ IPX4 ರೇಟಿಂಗ್‌ ಹೊಂದಿದ್ದು, ನೀರಿನಿಂದ ರಕ್ಷಣೆ ನೀಡಲಿದೆ. ಇನ್ನು LG XBOOM XL7S ಸ್ಪೀಕರ್‌ ಪವರ್‌ಫುಲ್‌ ಬಾಸ್‌ಗಾಗಿ 20.32 cm ದೈತ್ಯ ವೂಫರ್ ಮತ್ತು ಡೈನಾಮಿಕ್ ಬಾಸ್ ಆಪ್ಟಿಮೈಜರ್ ಅನ್ನು ಒಳಗೊಂಡಿದೆ. ಇದು ಯಾವುದೇ ವಾಲ್ಯೂಮ್ ಮಟ್ಟದಲ್ಲಿ ಸಮತೋಲಿತ ಧ್ವನಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅವಕಾಶ ನೀಡಲಿದೆ. ಇದಲ್ಲದೆ ಈ ಪೋರ್ಟಬಲ್‌ ಸ್ಪೀಕರ್‌ ಸ್ಪಷ್ಟವಾದ ಹೈ-ಫ್ರಿಕ್ವೆನ್ಸಿ ನೋಟ್‌ಗಳಿಗಾಗಿ ಎರಡು 6.35 cm ಗುಮ್ಮಟ ಟ್ವೀಟರ್‌ಗಳನ್ನು ಸಹ ಒಳಗೊಂಡಿದೆ.

LG ಕಂಪೆನಿಯಿಂದ ಎರಡು ಪೋರ್ಟಬಲ್‌ ಸ್ಪೀಕರ್‌ ಲಾಂಚ್‌! 20 ಗಂಟೆಗಳ ಬ್ಯಾಟರಿ ಅವಧಿ!

LG XBOOM XL5S ಪೋರ್ಟಬಲ್‌ ಸ್ಪೀಕರ್‌ ಫೀಚರ್ಸ್‌ ಹೇಗಿದೆ?
LG XBOOM XL5S ಪೋರ್ಟಬಲ್‌ ಸ್ಪೀಕರ್‌ 12 ಗಂಟೆಗಳ ಪ್ಲೇಟೈಮ್ ಅನ್ನು ಒದಗಿಸಲಿದೆ. ಇದು 16.51 cm ದೈತ್ಯ ವೂಫರ್ ಮತ್ತು ಡೈನಾಮಿಕ್ ಬಾಸ್ ಆಪ್ಟಿಮೈಜರ್ ಹೊಂದಿದೆ. ಜೊತೆಗೆ ಎರಡು 6.35 cm ಡೋಮ್ ಟ್ವೀಟರ್‌ಗಳೊಂದಿಗೆ ಸ್ಪಷ್ಟ ಧ್ವನಿಗಾಗಿ ಬರುತ್ತದೆ. ಇದರಲ್ಲಿ ಮ್ಯೂಸಿಕ್‌ನೊಂದಿಗೆ ಸಿಂಕ್ರೊನೈಸ್ ಮಾಡುವ ಡಬಲ್ ಸ್ಟ್ರೋಬ್ ಲೈಟಿಂಗ್‌ನೊಂದಿಗೆ ಡೈನಾಮಿಕ್ ಪಾರ್ಟಿ ಲೈಟಿಂಗ್ ಅನ್ನು ಸಹ ನೀಡಲಾಗಿದೆ.

ಇನ್ನು XBOOM ಅಪ್ಲಿಕೇಶನ್‌ನ ಮೈ ಪಿಕ್ ಫೀಚರ್ಸ್‌ ಪರ್ಸನಲೈಜ್‌ ಮಾಡಿದ ಲೈಟ್‌ ಶೋಗಳಿಗೆ ಅನುಮತಿಸಲಿದೆ. ಇನ್ನು ಮೈಕ್ರೊಫೋನ್ ಅಥವಾ ಗಿಟಾರ್ ಅನ್ನು ಪ್ಲಗ್ ಇನ್ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ. ಆದರಿಂದ ಈ ಸ್ಪೀಕರ್‌ಗಳನ್ನು ಕರೋಕೆಗಾಗಿಯೂ ಸಹ ಬಳಸಬಹುದಾಗಿದೆ.

ಈ ಸರಣಿಯಲ್ಲಿ ಎಲ್‌ಜಿ XL7S ಪೋರ್ಟಬಲ್‌ ಸ್ಪೀಕರ್‌ ಅನ್ನು ಸುಲಭವಾಗಿ ಸಾಗಿಸುವುದಕ್ಕಾಗಿ ಟೆಲಿಸ್ಕೋಪಿಕ್ ಹ್ಯಾಂಡಲ್ ಮತ್ತು ಚಕ್ರಗಳನ್ನು ಹೊಂದಿದೆ. ಆದರೆ ಎಲ್‌ಜಿ XL5S ಸ್ಪೀಕರ್‌ ಹ್ಯಾಂಡಲ್ ಅನ್ನು ಹೊಂದಿದ್ದು ಅದು ಸುಲಭವಾಗಿ ಸಾಗಿಸುವುದಕ್ಕೆ ಅವಕಾಶ ಹೊಂದಿದೆ.

LG ಕಂಪೆನಿಯಿಂದ ಎರಡು ಪೋರ್ಟಬಲ್‌ ಸ್ಪೀಕರ್‌ ಲಾಂಚ್‌! 20 ಗಂಟೆಗಳ ಬ್ಯಾಟರಿ ಅವಧಿ!

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
LG XBOOM XL7S ಸ್ಪೀಕರ್‌ ಭಾರತದಲ್ಲಿ 54,990ರೂ. ಬೆಲೆಯಿಂದ ಪ್ರಾರಂಭವಾಗಲಿದೆ. ಆದರೆ ಎಲ್‌ಜಿ XL5S ಸ್ಪೀಕರ್‌ ಬೆಲೆ ಭಾರತದಲ್ಲಿ 44,990ರೂ.ಗಳಿಂದ ಪ್ರಾರಂಭವಾಗಲಿದೆ. ಆದರೆ ಈ ಸ್ಪೀಕರ್‌ಗಳು ಖರೀದಿಗೆ ಯಾವಾಗ ಲಭ್ಯವಾಗಲಿದೆ ಅನ್ನೊದರ ಬಗ್ಗೆ ಇನ್ನು ಯಾವುದೇ ಮಾಹಿತಿ ಖಚಿತವಾಗಿಲ್ಲ.

ಇನ್ನು ಇತ್ತೀಚಿಗೆ ಎಲ್‌ಜಿ ಕಂಪೆನಿ ಹೊಸ ಸ್ಟ್ಯಾಂಡ್‌ಬೈಮಿ ಗೋ (StanbyME Go) ಹೆಸರಿನ ಹೊಸ ಪೋರ್ಟಬಲ್ ಟಚ್‌ಸ್ಕ್ರೀನ್ ಟಿವಿ ಲಾಂಚ್ ಮಾಡಿದೆ. ಇದು ಒಂದು ಟ್ರಾವೆಲಿಂಗ್ ಸೂಟ್‌ಕೆಸ್‌ನೊಂದಿಗೆ ಕಾಣಿಸಿಕೊಂಡಿದೆ. ಈ ಸೂಟ್‌ಕೇಸ್‌ ಓಪನ್ ಮಾಡಿದರೆ 27 ಇಂಚಿನ 1080p ಆಯ್ಕೆ ಇರುವ ಎಲ್‌ಸಿಡಿ ಡಿಸ್‌ಪ್ಲೇ ಓಪನ್‌ ಆಗುತ್ತದೆ. ನಂತರ ಸ್ಪೀಕರ್‌ಗಳು, ಪವರ್ ಸಪ್ಲೈ ಎಲ್ಲಾ ಸಕ್ರಿಯವಾಗುತ್ತವೆ.

Best Mobiles in India

English summary
LG XBOOM XL7S And LG XBOOM XL5S portable party speakers launched in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+