ಜ.1 ರಿಂದ ಆನ್‌ಲೈನ್‌ನಲ್ಲಿ ಆಧಾರ್-ಮೊಬೈಲ್‌ ಸಂಖ್ಯೆ ಜೋಡಣೆ ಆಯ್ಕೆ!!

Written By:

ಆನ್‌ಲೈನ್‌ನಲ್ಲಿ ಮೊಬೈಲ್‌ ಸಂಖ್ಯೆಗಳಿಗೆ ಆಧಾರ್ ನಂಬರ್ ಜೋಡಿಸುವ ಸೇವೆ ಪಡೆಯಲು ಗ್ರಾಹಕರು ಮತ್ತೊಂದು ತಿಂಗಳು ಕಾಯಬೇಕಿದೆ.!! ಹೌದು, ಮೊಬೈಲ್ ಸಂಖ್ಯೆಗಳಿಗೆ ಆಧಾರ್ ನಂಬರ್ ಜೋಡಿಸುವ ಆನ್‌ಲೈನ್ ಸವಲತ್ತು ಜನವರಿ 1ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.!!

ಮೊಬೈಲ್ ಸಂಖ್ಯೆಗಳಿಗೆ ಆಧಾರ್ ನಂಬರ್ ಜೋಡಿಸುವ ಆನ್‌ಲೈನ್ ಸೇವೆ ಡಿಸೆಂಬರ್‌ 1ರಿಂದ ಜಾರಿಗೆ ಬರಲಿದೆ ಎಂದು ಈ ಮೊದಲು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ನೂತನ ವ್ಯವಸ್ಥೆಯನ್ನು ಜಾರಿಗೆ ತರಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಮೊಬೈಲ್‌ ಸೇವಾ ಕಂಪೆನಿಗಳು ಮನವಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ.!!

ಇನ್ನು ಒಂದು ಬಾರಿಯ ಪಾಸ್‌ವರ್ಡ್‌ (ಒಟಿಪಿ), ಆಪ್, ಅಥವಾ ಐವಿಆರ್‌ಎಸ್‌ (ಇಂಟರ್ ಆಕ್ಟಿವ್ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಮ್‌) ಸೌಲಭ್ಯದ ಮೂಲಕ ಮೊಬೈಲ್‌ ಸಂಖ್ಯೆಯನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಬಹುದು ಎಂದು ಹೇಳಲಾಗಿದ್ದು! ಹಾಗಾದರೆ, ಆನ್‌ಲೈನ್‌ನಲ್ಲಿ ಆಧಾರ್ ಮತ್ತು ಮೊಬೈಲ್ ನಂಬರ್ ಜೋಡಣೆ ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ!!

ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ!!

ಡಿಸೆಂಬರ್ ಒಂದರಿಂದ ಆನ್‌ಲೈನ್ ಮೂಲಕ ಆಧಾರ್ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದ್ದು, ನೀವು ಯಾವ ಟೆಲಿಕಾಂ ಕಂಪೆನಿ ಸಿಮ್ ಬಳಕೆ ಮಾಡುತ್ತಿದ್ದೀರಾ ಆ ಕಂಪೆನಿ ಅಧಿಕೃತ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.!!

ಲಿಂಕ್ ಮಾಡುವ ಫೀಚರ್ ಕಾಣಿಸುತ್ತದೆ.!!

ಲಿಂಕ್ ಮಾಡುವ ಫೀಚರ್ ಕಾಣಿಸುತ್ತದೆ.!!

ಆಪ್‌ ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಮೂಲಕ ಆಪ್‌ಗೆ ಸೈನ್‌ಅಪ್ ಆಗಿರಿ. ನಂತರ ಆಪ್‌ನಲ್ಲಿಯೇ ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡಲು ಆಯ್ಕೆಯೊಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

 ಆಧಾರ್ ನಂಬರ್ ನೀಡಿ!

ಆಧಾರ್ ನಂಬರ್ ನೀಡಿ!

ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡುವ ಆಯ್ಕೆ ಕಾಣಿಸಿದ ನಂತರ ನಿಮ್ಮ ಆಧಾರ್ ನಂಬರ್ ಅನ್ನು ಆ ಆಯ್ಕೆಯಲ್ಲಿ ಟೈಪಿಸಿ. ನಂತರ ನಿಮಗೆ ಒಟಿಪಿ ಸಂಖ್ಯೆ ಬರಲಿದೆ. ಆ ಒಟಿಪಿ ಸಂಖ್ಯೆಯನ್ನು ಆಪ್‌ನಲ್ಲಿ ನಮೂದಿಸಿ.!!

ಪರೀಶೀಲನೆ ನಡೆಯುತ್ತದೆ.!!

ಪರೀಶೀಲನೆ ನಡೆಯುತ್ತದೆ.!!

ಆಧಾರ್ ನಂಬರ್ ಮತ್ತು ಒಟಿಪಿ ಸಂಖ್ಯೆಯನ್ನು ನೀವು ನಮೂದಿಸಿದ ನಂತರ ನಿಮ್ಮ ಆಧಾರ್ ಮತ್ತು ನೀವು ಮೊದಲು ಖರೀದಿಸುವಾಘ ನೀಡಿದ್ದ ದಾಖಲಾತಿ ಪರಿಶೀಲನೆ ನಡೆಯುತ್ತದೆ. ಇನ್ನೊಬ್ಬರ ಮೊಬೈಲ್ ನಂಬರ್‌ಗೆ ಆಧಾರ್ ಲಿಂಕ್ ಮಾಡಲು ಪ್ರಯತ್ನಿಸಿದರೆ ಅದು ರದ್ದಾಗುತ್ತದೆ.

ಓದಿರಿ:ಪೇಟಿಎಂ, ತೇಜ್‌ನಂತಹ ವಾಲೆಟ್ ಆಪ್‌ಗಳಿಂದ ಭಾರಿ ಅಪಾಯ!..ಸೈಬರ್ ಪೊಲೀಸ್ ತಿಳಿಸಿದ ನಗ್ನಸತ್ಯ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
The Department of Telecommunication on Friday gave telecom operators a month's extension .to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot