ಪ್ಯಾನ್-ಆಧಾರ್ ಜೋಡಣೆಗೆ ಮೂರೇ ದಿನ ಬಾಕಿ : ನಿರ್ಲಕ್ಷಿಸಿದರೆ ದುಪ್ಪಟ್ಟು ತೆರಿಗೆ ಕಟ್!
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು (PAN Aadhaar link) ಕೇವಲ ಮೂರೇ ದಿನ ಬಾಕಿ. ಮೇ 31ರೊಳಗೆ ಲಿಂಕ್ ಮಾಡದಿದ್ದರೆ ನಿಮಗೆ ಸಂಕಷ್ಟ ಎದುರಾಗಲಿದೆ. ಆಧಾರ್ (Aadhaar) ಜೊತೆ ಜೋಡಣೆ ಆಗದ ಪ್ಯಾನ್ ನಂಬರ್ (PAN Number) ನಿಷ್ಕ್ರಿಯವಾಗಿರುತ್ತದೆ. ಪ್ಯಾನ್ ನಂಬರ್ ಇಲ್ಲದೇ ನೀವು ಆದಾಯ ಪಡೆಯುತ್ತಿದ್ದಲ್ಲಿ ಶೇ.20ರಷ್ಟು ಟಿಡಿಎಸ್ (TDS) ತೆರಿಗೆ ಕಡಿತವಾಗುತ್ತದೆ ಎಂದು ಆದಾಯ ಇಲಾಖೆ (Income tax department) ಎಚ್ಚರಿಕೆ ನೀಡಿದೆ.
ಹೌದು, ಆದಾಯ ತೆರಿಗೆ ಇಲಾಖೆಯ, ಪ್ಯಾನ್ ಕಾರ್ಡ್‌ಗೆ ಆಧಾರ್ ಜೋಡಣೆ ಮಾಡಬೇಕೆಂದು ಹೇಳುತ್ತಲೇ ಬಂದಿದೆ. ಇದೀಗ ಪ್ಯಾನ್ ಮತ್ತು ಆಧಾರ್ ಜೋಡಣೆಗೆ ಮೂರೇ ದಿನ ಬಾಕಿ ಇದೆ. ಅಷ್ಟರೊಳಗೆ ಲಿಂಕ್ ಮಾಡದಿದ್ರೆ, ಹೆಚ್ಚಿನ TDS ಕಟ್ಟಬೇಕಾಗುತ್ತದೆ. ಈ ಕುರಿತು ಐಟಿ ಇಲಾಖೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಮೇ 31ರೊಳಗೆ ಪ್ಯಾನ್ ಅನ್ನು ಆಧಾರ್ ಜೊತೆ ಜೋಡಿಸಿದರೆ ಐಟಿ ಸೆಕ್ಷನ್ 206ಎಎ ಮತ್ತು 206ಸಿಸಿ ಅಡಿಯಲ್ಲಿ ಹೆಚ್ಚಿನ ತೆರಿಗೆ ಕಟ್ಟುವುದರಿಂದ ಪಾರಾಗಬಹುದು.

ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, ಪ್ಯಾನ್ ಕಾರ್ಡ್‌ಗೆ ಬಯೊಮೆಟ್ರಿಕ್ ಆಧಾರ್ ಜೋಡಣೆ ಮಾಡದಿದ್ದರೆ, ಟಿಡಿಎಸ್ ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ತೆರಿಗೆ ಕಡಿತವಾಗಲಿದೆ. ನಿಗದಿತ ಅವಧಿಯೊಳಗೆ ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ, ತೆರಿಗೆ ಕಡಿತಗೊಳಿಸುವುದಿಲ್ಲ ಎಂದು ಕಳೆದ ತಿಂಗಳು ಹೊರಡಿಸಿದ್ದ ಸುತ್ತೋಲೆಯಲ್ಲಿ ಆದಾಯ ಇಲಾಖೆ ತಿಳಿಸಿತ್ತು. ಇದೀಗ ಮತ್ತೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇನ್ನಾದರೂ ಆಧಾರ್ ಲೀಂಕ್ ಮಾಡಿಸದವರುಎಚ್ಚೆತ್ತುಕೊಳ್ಳಬೇಕಿದೆ.
SMS, ಇ-ಮೇಲ್, ಪತ್ರಗಳ ಮೂಲಕ ಮಾಹಿತಿ
ಅಲ್ಲದೆ, ಮೇ 31ರೊಳಗೆ ಎಸ್‌ಎಫ್‌ಟಿ ಸಲ್ಲಿಸುವಂತೆ ಬ್ಯಾಂಕ್‌ಗಳು, ವಿದೇಶಿ ವಿನಿಮಯ ವಿತರಕರು, ಸರ್ಕಾರೇತರ ಹಣಕಾಸು ಸಂಸ್ಥೆಗಳು, ಬಾಂಡ್ ಮತ್ತು ಡಿಬೆಂಚರ್‌ಗಳ ವಿತರಕರು, ಮ್ಯೂಚುವಲ್ ಫಂಡ್ ಟ್ರಸ್ಟಿಗಳಿಗೆ ಸೂಚಿಸಿದೆ. ಈ ಹಣಕಾಸು ವ್ಯವಹಾರಗಳ ಹೇಳಿಕೆಯಲ್ಲಿ ಇರುವ ದತ್ತಾಂಶಗಳನ್ನು ವಿಶ್ಲೇಷಿಸುವ ಮೂಲಕ ತೆರಿಗೆ ರಿಟರ್ನ್ಸ್ ಸಲ್ಲಿಸದ ವ್ಯಕ್ತಿಗಳ ಬಗ್ಗೆ ಇಲಾಖೆಯು ಮಾಹಿತಿಯನ್ನು ಸಂಗ್ರಹಿಸುತ್ತದೆ. ಬಳಿಕ ತೆರಿಗೆದಾರರಿಗೆ SMS, ಇ-ಮೇಲ್, ಪತ್ರಗಳ ಮೂಲಕ ಮಾಹಿತಿ ರವಾನಿಸಲಿದೆ.
Aadhaar ಲಿಂಕ್ ಆಗದಿದ್ರೆ ಎಷ್ಟು TDS ಕಟ್ ಆಗುತ್ತೆ?
ಇನ್ನೂ, ಆಧಾರ್‌ಗೆ ಲಿಂಕ್ ಆಗದ ಪ್ಯಾನ್ ನಿಷ್ಕ್ರಿಯಗೊಂಡಿರುತ್ತದೆ. ಕಾರ್ಡ್ ಇದ್ದೂ ಇಲ್ಲದಂತಾಗುತ್ತದೆ. ಆದಾಯ ತೆರಿಗೆ ಸೆಕ್ಷನ್ 206 ಪ್ರಕಾರ ಪ್ಯಾನ್ ಕಾರ್ಡ್ ಇಲ್ಲದ ವಹಿವಾಟಿಗೆ ಶೇ.20ರಷ್ಟು ಟಿಡಿಎಸ್ ತೆರಿಗೆ ಕಟ್ ಆಗುತ್ತದೆ. ಉದಾಹರಣೆಗೆ, ನೀವು ಒಂದು ಲಕ್ಷ ರೂ. ಆದಾಯ ಪಡೆದರೆ, ಅದಕ್ಕೆ 20,000 ರೂ. ತೆರಿಗೆ ಪಾವಿತಸಬೇಕು. ಹೀಗಾಗಿ, ನಿಮ್ಮ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡದೇ ಇದ್ದರೆ, ಮೇ 31ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಿ.
ಎಲ್ಲರೂ ಆಧಾರ್‌ಗೆ ಲಿಂಕ್ ಮಾಡಬೇಕಾ?
ಎಲ್ಲಾ ಪ್ಯಾನ್ ಕಾರ್ಡ್‌ದಾರರೂ ಆಧಾರ್‌ಗೆ ಲಿಂಕ್ ಮಾಡಬೇಕಾ? ಎಂಬ ಗೊಂದಲವಿದೆ. 2017ರ ಜುಲೈ 1ರ ಬಳಿಕ ವಿತರಿಸಲಾದ ಎಲ್ಲಾ ಪ್ಯಾನ್ ನಂಬರ್‌ಗೆ ಆಟೊಮ್ಯಾಟಿಕ್ ಆಗಿ ಆಧಾರ್ ಲಿಂಕ್ ಆಗಿರುತ್ತದೆ. ಆಧಾರ್ ದಾಖಲೆ ಹೊಂದಿದ್ದರೆ ಮಾತ್ರವೇ ಪ್ಯಾನ್ ನಂಬರ್ ಅಲಾಟ್ ಮಾಡಲಾಗುತ್ತದೆ. ಆದರೆ, 2017ರ ಜುಲೈ 1ಕ್ಕಿಂತ ಮುಂಚೆ ಪ್ಯಾನ್ ಕಾರ್ಡ್ ಮಾಡಿಸುವಾಗ ಆಧಾರ್ ದಾಖಲೆ ಕಡ್ಡಾಯ ಇರಲಿಲ್ಲ. ಬೇರೆ ಬೇರೆ ದಾಖಲೆಗಳನ್ನು ನೀಡಿ ಪ್ಯಾನ್ ಕಾರ್ಡ್ ಮಾಡಿಸಿದ್ದಾರೆ. 2017ರ ಜುಲೈ 1ಕ್ಕಿಂತ ಮುಂಚೆ ಪ್ಯಾನ್ ಮಾಡಿಸಿದವರು ಆಧಾರ್‌ಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.


Click it and Unblock the Notifications








