ಬಳಕೆದಾರರಿಗೆ ಹೊಸ ಫೀಚರ್ಸ್ ಪರಿಚಯಿಸಿದ ಲಿಂಕ್ಡ್ ಇನ್!
ಫ್ರೋಫೇಷನಲ್ ನೆಟ್‌ವರ್ಕಿಂಗ್ ದೈತ್ಯ ಲಿಂಕ್ಡ್‌ಇನ್ ಬಳಕೆದಾರರಿಗೆ ಸಾಕಷ್ಟು ಅನುಕೂಲಕರ ಫಿಚರ್ಸ್‌ಗಳನ್ನ ಪರಿಚಯಿಸಿದೆ. ಸಾಕಷ್ಟು ಮಂದಿಗೆ ಜಾಬ್ ಸರ್ಚಿಂಗ್ ಸೇರಿದಂತೆ ಅನೇಕ ವಿಚಾರಗಳಲ್ಲಿ ಸಹಾಯಕವಾಗಿದೆ. ಇದೀಗ ತನ್ನ ಬಳಕೆದಾರರಿಗೆ ಸ್ಟೋರಿಗಳು, ವೀಡಿಯೊ ಕರೆ ಏಕೀಕರಣ, ಸುಧಾರಿತ ಹುಡುಕಾಟ ಅನುಭವ ಮತ್ತು ಹೊಸ ಮರುವಿನ್ಯಾಸದ ಭಾಗವಾಗಿ ಸಂದೇಶಗಳನ್ನು ಎಡಿಟ್ ಮಾಡಬಲ್ಲ ಹೊಸ ಫೀಚರ್ಸ್‌ಗಳನ್ನು ಲಿಂಕ್ಡ್‌ಇನ್ ಪರಿಚಯಿಸಿದೆ. ಅಷ್ಟೇ ಅಲ್ಲ ಶೀಘ್ರದಲ್ಲೇ ಡಾರ್ಕ್ ಮೋಡ್‌ನಲ್ಲಿಯೂ ಸಹ ಲಿಂಕ್ಡ್‌ಇನ್ ಲಭ್ಯವಾಗಲಿದೆ.

ಹೌದು, ಲಿಂಕ್ಡ್‌ಇನ್ ಅಪ್ಲಿಕೇಶನ್ ತನ್ನ ಹೊಸ ಮಾದರಿಯ ಆಪ್ಡೇಟ್‌ನ ಭಾಗವಾಗಿ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದೆ. ಅದು ಸುಲಭವಾದ ನ್ಯಾವಿಗೇಷನ್ ಮತ್ತು ಉತ್ತಮ ಅನುಭವವನ್ನು ನೀಡಲಿದೆ. ಮೈಕ್ರೋಸಾಫ್ಟ್ ಒಡೆತನದ ಸೊಶೀಯಲ್ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಲಿಂಕ್ಡ್‌ಇನ್ ಈಗಾಗಲೇ ಕೆಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಲಿಂಕ್ಡ್ಇನ್ ಸಂದೇಶಗಳಿಂದ ನೇರವಾಗಿ ವೆರಿಜೂನ್ ಮೂಲಕ ಮೈಕ್ರೋಸಾಫ್ಟ್ ಟೀಂ, ಜೂಮ್ ಅಥವಾ ಬ್ಲೂಜೀನ್ಸ್ ಮೂಲಕ ವೀಡಿಯೊ ಕರೆಯನ್ನು ಮಾಡುವುದಕ್ಕೆ ಅವಕಾಶ ನೀಡಲಿದೆ. ಇನ್ನುಳಿದಂತೆ ಈ ಹೊಸ ಫಿಚರ್ಸ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಿಂಕ್ಡ್ಇನ್ ಅಪ್ಲಿಕೇಶನ್ ಸಂಭಾಷಣೆಯನ್ನು ಚಾಟ್‌ನಿಂದ ನೇರವಾಗಿ ವೀಡಿಯೊ ಕರೆಗಳಿಗೆ ಸುಲಭವಾಗಿ ಬದಲಾಯಿಸುವ ಗುರಿ ಹೊಂದಿದೆ. ಈ ಫೀಚರ್ಸ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಲಾಗ್ತಿದೆ. ಇದರಲ್ಲಿ ನೀವು ಸಂದೇಶವನ್ನು ಟೈಪ್ ಮಾಡುವ ಟೆಕ್ಸ್ಟ್ ಬಾಕ್ಸ್ ಪಕ್ಕದಲ್ಲಿರುವ ವೀಡಿಯೊ ಕರೆ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ವೀಡಿಯೊ ಕರೆಗಾಗಿ ಲಭ್ಯವಿರುವ ಅಪ್ಲಿಕೇಶನ್‌ಗಳಿಂದ ನೀವು ಆಯ್ಕೆ ಮಾಡಬಹುದಾಗಿದೆ. ಅಲ್ಲದೆ ಸೈನ್ ಇನ್ ಮಾಡಬಹುದು ಮತ್ತು ಲಿಂಕ್ ಅನ್ನು ಹಂಚಿಕೊಳ್ಳಬಹುದಾಗಿದೆ.

ಇನ್ನು ಈ ಹೊಸ ಲಿಂಕ್ಡ್ಇನ್ ಫೀಚರ್ಸ್ ನಮ್ಮ ವೈವಿಧ್ಯಮಯ, ಅಂತರ್ಗತ ಮತ್ತು ವಿಶ್ವಾಸಾರ್ಹ ಸಮುದಾಯವನ್ನು ಸಾಕಾರಗೊಳಿಸುತ್ತದೆ ಎಂದು ಲಿಂಕ್ಡ್ ಇನ್ ಹೇಳಿದೆ. ಅಲ್ಲದೆ ಇದು ಸರಳ, ಹೆಚ್ಚು ಆಧುನಿಕ ಮತ್ತು ಹೆಚ್ಚು ಅರ್ಥಗರ್ಭಿತವಾಗಿದೆ, ಇದು ಸುಲಭವಾದ ಸಂಚರಣೆ ಮತ್ತು ಅನ್ವೇಷಣೆಗೆ ಅನುವು ಮಾಡಿಕೊಡಲಿದೆ. ಇನ್ನು ನೀವು ಫೋಸ್ಟ್ ಮಾಡಿರುವ ಸ್ಟೋರಿಗಳು 24 ಗಂಟೆಗಳ ಕಾಲ ಉಳಿಯುವುದರಿಂದ, ಬಳಕೆದಾರರು ತಮ್ಮ ವೃತ್ತಿಪರ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಶೇರ್‌ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಲಿಂಕ್ಡ್‌ಇನ್ ಸ್ಟೋರೀಸ್ ಫೀಚರ್ಸ್ ಅನುಮತಿಸಲಿದೆ.

ಇದಲ್ಲದೆ ಲಿಂಕ್ಡ್ ಇನ್‌ನಲ್ಲಿ ಕ್ಯಾಮೆರಾವನ್ನು ತೆರೆಯಲು ಮೇಲಿನ ಎಡ ಮೂಲೆಯಲ್ಲಿರುವ ಪ್ಲಸ್ ಚಿಹ್ನೆಯನ್ನು ಕ್ಲಿಕ್ ಮಾಡಿ. ಅವರು ಫೋಟೋ ಕ್ಲಿಕ್ ಮಾಡಬಹುದು ಅಥವಾ ಅಪ್ಲಿಕೇಶನ್‌ನಿಂದ ನೇರವಾಗಿ ವೀಡಿಯೊವನ್ನು ರೆಕಾರ್ಡ್ ಮಾಡಬಹುದು. ಜೊತೆಗೆ ಗ್ಯಾಲರಿಯಿಂದ ಸಹ ನೇರವಾಗಿ 20 ಸೆಕೆಂಡ್‌ಗಳವರೆಗಿನ ವಿಡಿಯೋವನ್ನು ಅಪ್‌ಲೋಡ್ ಮಾಡಬಹುದಾಗಿದೆ. ಇನ್ನು ಸ್ಟೋರಿ ಜೊತೆಗೆ ಬಳಕೆದಾರರು ಪಠ್ಯ ಮತ್ತು ಸ್ಟಿಕ್ಕರ್‌ಗಳನ್ನು ಸೇರಿಸಲು ಸಹ ಆಯ್ಕೆ ಮಾಡಬಹುದಾಗಿದೆ. ಅಲ್ಲದೆ ಇನ್‌ಸ್ಟಾಗ್ರಾಮ್‌ನಂತೆಯೇ, ಇತರ ಬಳಕೆದಾರರನ್ನು ಸಹ ಟ್ಯಾಗ್ ಮಾಡಬಹುದಾಗಿದೆ.


Click it and Unblock the Notifications








