Home
ಸುದ್ದಿಜಾಲ

ಐಫೋನ್ ಬಳಕೆದಾರರಿಗೆ ಸಿಹಿಸುದ್ದಿ: ಲಿಕ್ವಿಡ್ ಗ್ಲಾಸ್ ಡಿಸೈನ್‌ಗೆ ಕಸ್ಟಮೈಸ್ ಆಯ್ಕೆ!

ಆಪಲ್ ಇತ್ತೀಚಿಗಷ್ಟೇ ತನ್ನ ಹೊಸ iOS 26 ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಈ ಅಪ್ಡೇಟ್‌ನಲ್ಲಿ ಹೊಸ Liquid Glass (ಲಿಕ್ವಿಡ್ ಗ್ಲಾಸ್) ಎಂಬ ವಿನ್ಯಾಸವನ್ನು ಪರಿಚಯಿಸಲಾಗಿತ್ತು, ಇದು ಎಲ್ಲಾ ಬೆಂಬಲಿತ iPhone ಮಾದರಿಗಳಲ್ಲಿ ಆಕರ್ಷಕ ಮತ್ತು ಪಾರದರ್ಶಕ ಇಂಟರ್ಫೇಸ್ ಒದಗಿಸುತ್ತದೆ. ಆದರೆ, ಕೆಲವು ಬಳಕೆದಾರರು ಈ ವಿನ್ಯಾಸದ ಹೆಚ್ಚು ಪಾರದರ್ಶಕತೆ ಕಣ್ಣುಗಳಿಗೆ ತೊಂದರೆಯಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಈಗ, ಆಪಲ್ ಬಿಡುಗಡೆ ಮಾಡಿರುವ iOS 26.1 Beta 4 ಮೂಲಕ ಆ ಸಮಸ್ಯೆಗೆ ಪರಿಹಾರ ನೀಡಲಾಗಿದೆ.!

ಹೌದು, ಹೊಸ ಬೇಟಾ ಆವೃತ್ತಿಯಲ್ಲಿ ಬಳಕೆದಾರರು ಲಿಕ್ವಿಡ್ ಗ್ಲಾಸ್‌ನ ಪಾರದರ್ಶಕತೆಯನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಬದಲಾಯಿಸಬಹುದಾದ ಹೊಸ "Liquid Glass" ನಿಯಂತ್ರಣ ಆಯ್ಕೆಯನ್ನು ಒದಗಿಸಲಾಗಿದೆ. ಬಳಕೆದಾರರು ಈಗ Display & Brightness > Liquid Glass ಸೆಟ್ಟಿಂಗ್‌ನೊಳಗೆ ಹೊಸದಾಗಿ Clear ಮತ್ತು Tinted ಎಂಬ ಎರಡು ಆಯ್ಕೆಗಳನ್ನು ಪಡೆದಿದ್ದಾರೆ. ಇದರಲ್ಲಿ Clear ಆಯ್ಕೆಯು ಹೆಚ್ಚು ಪಾರದರ್ಶಕ ವಿನ್ಯಾಸ ನೀಲಿದೆ ಮತ್ತು Tinted ಆಯ್ಕೆಯು ವಿನ್ಯಾಸವನ್ನು ಸ್ವಲ್ಪ ಗಾಢಗೊಳಿಸಿ ಕಾಂಟ್ರಾಸ್ಟ್ ಹೆಚ್ಚಿಸುತ್ತದೆ, ಇದರಿಂದ ಕಣ್ಣುಗಳಿಗೆ ತೊಂದರೆ ಕಡಿಮೆಯಾಗುತ್ತದೆ.

ಈ ಹೊಸ ಆಯ್ಕೆಯು ಪ್ರಸ್ತುತ iPadOS 26.1 ಮತ್ತು macOS 26.1 ಬೇಟಾ ಆವೃತ್ತಿಗಳಲ್ಲಿಯೂ ಲಭ್ಯವಿದೆ. ಮುಂದಿನ ಅಪ್ಡೇಟ್‌ನಲ್ಲಿ, ಈ ವೈಶಿಷ್ಟ್ಯವನ್ನು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ನಾವು ಗಮನಿಸುವುದಾದರೆ, iOS 26 ಬೇಟಾ ಅವಧಿಯಲ್ಲಿ ಹಲವರು "ಲಿಕ್ವಿಡ್ ಗ್ಲಾಸ್" ಪರಿಣಾಮ ತುಂಬಾ ತೀವ್ರವಾಗಿದೆ ಎಂದು ತಿಳಿಸಿದ್ದರು. ಈ ಪಾರದರ್ಶಕ ಇಂಟರ್ಫೇಸ್ ಆಕರ್ಷಕವಾಗಿದ್ದರೂ ಸಹ ಕಣ್ಣುಗಳಿಗೆ ತೊಂದರೆ ಎಂದು ಹೇಳಲಾಗುತ್ತಿತ್ತು. ಬಳಕೆದಾರರ ಈ ಪ್ರತಿಕ್ರಿಯೆ ಆಧರಿಸಿ ಈ ಬದಲಾವಣೆಯನ್ನು ತರಲಾಗಿದೆ.

ಐಫೋನ್ ಬಳಕೆದಾರರಿಗೆ ಸಿಹಿಸುದ್ದಿ: ಲಿಕ್ವಿಡ್ ಗ್ಲಾಸ್ ಡಿಸೈನ್‌ಗೆ ಕಸ್ಟಮೈಸ್ ಆಯ್ಕೆ

ಆಪಲ್‌ iOS 26.1 Beta 4 ವೈಶಿಷ್ಟ್ಯವು ಈಗ ಡೆವಲಪರ್ ಬೇಟಾದಲ್ಲಿ ಮಾತ್ರ ಲಭ್ಯವಿದೆ. ಆದರೆ ಸಾರ್ವಜನಿಕ ಬೇಟಾ ಆವೃತ್ತಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಪೂರ್ಣ iOS 26.1 ಅಪ್ಡೇಟ್‌ನ್ನು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಆರಂಭದಲ್ಲಿ ಎಲ್ಲಾ ಬಳಕೆದಾರರಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.ಕಳೆದ ತಿಂಗಳು (ಸೆಪ್ಟೆಂಬರ್ 15) ಬಿಡುಗಡೆಯಾದ iOS 26 ನು iPhone SE (2nd Gen) ಮತ್ತು ಅದಕ್ಕಿಂತ ಹೊಸ ಮಾದರಿಗಳಿಗೆ ಲಭ್ಯವಾಗಿದೆ. ಹೊಸ iPhone 17 ಸರಣಿಯು ಇದೇ ಆವೃತ್ತಿಯೊಂದಿಗೆ ಬರುತ್ತದೆ.

iOS 26 ಆವೃತ್ತಿಯು ಇನ್ನೂ ಅನೇಕ ಹೊಸ ವೈಶಿಷ್ಟ್ಯಗಳನ್ನು ತಂದಿದೆ. iOS 26ನಲ್ಲಿ ಪರಿಚಯಿಸಿರುವ ಇತರ ಹೊಸ ವೈಶಿಷ್ಟ್ಯಗಳು ಹೀಗಿವೆ,

  • Games App -ಈಗ ಎಲ್ಲ ಗೇಮ್‌ಗಳನ್ನು ಒಂದೇ ಜಾಗದಲ್ಲಿ ನಿರ್ವಹಿಸಲು ಸಾಧ್ಯ.
  • Visual Intelligence - ಚಿತ್ರ ಮತ್ತು ವೀಡಿಯೋ ಗುರುತಿಸುವ ಸ್ಮಾರ್ಟ್ ಫೀಚರ್ ಇದಾಗಿದೆ.
  • 3D ಲಾಕ್ ಸ್ಕ್ರೀನ್ ವಾಲ್‌ಪೇಪರ್‌ಗಳು.
  • Live Translation - ನೇರ ಭಾಷಾಂತರ ವೈಶಿಷ್ಟ್ಯ.
  • Group Messages Polls - ಗ್ರೂಪ್ ಚಾಟ್‌ಗಳಲ್ಲಿ ನೇರವಾಗಿ ಪೋಲ್ ಅನ್ನು ರಚಿಸುವ ಆಯ್ಕೆ.

ಆಪಲ್‌ನ ಈ ಹೊಸ ಅಪ್ಡೇಟ್‌ಗಳು iPhone ಮತ್ತು iPad ಬಳಕೆದಾರರಿಗೆ ಹೆಚ್ಚು ವೈಯಕ್ತಿಕ ಅನುಭವವನ್ನು ನೀಡಲು ಉದ್ದೇಶಿತವಾಗಿವೆ. ಇದೀಗ ಹೊಸ Liquid Glass ನಿಯಂತ್ರಣವು ಅದರ ಸ್ಪಷ್ಟ ಉದಾಹರಣೆಯಾಗಿದೆ. ನೀವು ಕೂಡ Liquid Glass ವಿನ್ಯಾಸದ ಹೆಚ್ಚು ಪಾರದರ್ಶಕತೆಯಿಂದ ಸಮಸ್ಯೆ ಎದುರಿಸಿದ್ದೀರಾ?, ಈ ಬದಲಾವಣೆಯಿಂದ ನಿಮಗೆ ಸಂತೋಷವಾಗಿದೆಯೇ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The latest beta version comes with a cool new "Liquid Glass" control option! Now you can easily tweak the transparency of Liquid Glass just the way you like it. You’ll find two fresh options under the Display & Brightness > Liquid Glass setting: Clear and Tinted. Enjoy customizing!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+