ಕ್ರೆಡಿಟ್ ಕಾರ್ಡ್‌ ಬಳಕೆದಾರರಿಗೆ ಸಿಹಿ ಸುದ್ದಿ, ಬ್ಯಾಂಕಿನಿಂದಲೇ ಕಾಸು ವಾಪಸ್..!

|

ಇಂದಿನ ದಿನದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಡಿಜಿಟಲ್ ವ್ಯವಹಾರವು ದೇಶಿಯ ಮಾರುಕಟ್ಟೆಯಲ್ಲಿ ನಡೆಯತ್ತಿದೆ. ಮೊಬೈಲ್ ಪೇಮೆಂಟ್, ಕಾರ್ಡ್‌ಗಳ ಮೂಲಕ ವ್ಯವಹಾರವು ಹೆಚ್ಚಿನ ಪ್ರಮಾಣದಲ್ಲಿ ಜರುಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಹ್ಯಾಕರ್ಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಆಕ್ಟೀವ್ ಆಗಿದ್ದು, ಬಳಕೆದಾರರ ಹಣವನ್ನು ಅವರಿಗೆ ತಿಳಿಯದಂತೆ ಆನ್‌ಲೈನಿನಲ್ಲಿ ದೋಚುತ್ತಿದ್ದಾರೆ.

ಕ್ರೆಡಿಟ್ ಕಾರ್ಡ್‌ ಬಳಕೆದಾರರಿಗೆ ಸಿಹಿ ಸುದ್ದಿ, ಬ್ಯಾಂಕಿನಿಂದಲೇ ಕಾಸು ವಾಪಸ್..!

ಈ ಹಿನ್ನಲೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ಕದ್ದ ಸಂದರ್ಭದಲ್ಲಿ ಇಲ್ಲವೇ ಕಾರ್ಡ್‌ ಹ್ಯಾಕ್ ಮಾಡಿ ಹಣವನ್ನ ದೋಚಿದ ಸಂದರ್ಭದಲ್ಲಿ ನೀವು ಹೇಗೆ ಬ್ಯಾಂಕಿನಿಂದಲೇ ಹಣವನ್ನು ಪಡೆದುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನವಾಗಿದೆ. ಇದರಿಂದಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್‌ ಆದ್ರೆ ಚಿಂತೆ ಮಾಡಬೇಕಾಗಿಲ್ಲ.

RBI ನಿಂದ ಹೊಸ ಮಾರ್ಗದರ್ಶಿ:

RBI ನಿಂದ ಹೊಸ ಮಾರ್ಗದರ್ಶಿ:

ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹ್ಯಾಕ್ ಆದ ಸಂದರ್ಭದಲ್ಲಿ ಜವಬ್ದಾರಿಯನ್ನು ಹೊರುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರಿಸುವ ಸಲುವಾಗಿ ರಿಸರ್ವ್‌ ಬ್ಯಾಂಕ್‌ ಒಂದಿಷ್ಟು ಹೊಸ ಮಾದರಿಯ ಮಾರ್ಗಸೂಚಿಗಳನ್ನು ರೂಪಿಸಿದೆ. ಇ-ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರಿಗೆ ರಕ್ಷಣೆ ನೀಡುವ ಸಲುವಾಗಿ ಈ ಹೊಸ ಮಾದರಿಯ ಮಾರ್ಗಸೂಚಿಯನ್ನು ಜಾರಿಗೆ ತಂದಿದೆ ಇದರಿಂದಾಗಿ ಗ್ರಾಹಕರು ಸೇಪ್ ಎನ್ನಲಾಗಿದೆ.

ವಿಷಯ ತಿಳಿಸಿ:

ವಿಷಯ ತಿಳಿಸಿ:

ನಿಮ್ಮ ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್‌ ಅನ್ನು ಹ್ಯಾಕ್ ಮಾಡಿದ ಸಂದರ್ಭದಲ್ಲಿ ಈ ಕುರಿತು ಗ್ರಾಹಕರು ನಾಲ್ಕರಿಂದ ಏಳು ದಿನಗಳ ಒಳಗಾಗಿ ಬ್ಯಾಂಕ್‌ನ ಗಮನಕ್ಕೆ ತರಬೇಕು. ಇದೇ ಮಾದರಿಯಲ್ಲಿ ಗ್ರಾಹಕರು ಅಕ್ರಮ ವಹಿವಾಟಿನ ಬಗೆಗೆ ಮೂರು ದಿನದೊಳಗೆ ಬ್ಯಾಂಕಿನ ಗಮನಕ್ಕೆ ತರಬೇಕು ಎನ್ನಲಾಗಿದೆ.

How to pay tax online in simple steps - GIZBOT KANNADA
ಗ್ರಾಹಕರಿಗೆ ಯಾವುದೇ ಚಿಂತೆ ಇಲ್ಲ:

ಗ್ರಾಹಕರಿಗೆ ಯಾವುದೇ ಚಿಂತೆ ಇಲ್ಲ:

RBI ಹೇಳಿರುವಂತೆ ಕ್ರೆಡಿಡ್ ಕಾರ್ಡ್ ಹ್ಯಾಕ್ ಇಲ್ಲವೇ ಖಾತೆ ಹ್ಯಾಕ್ ಆದ ಸಂದರ್ಭದಲ್ಲಿ ಬ್ಯಾಂಕ್‌ ನಿಂದಲೇ ಲೋಪವಾಗಿದ್ದರೆ ಗ್ರಾಹಕರು ಯಾವುದೇ ನಷ್ಟವನ್ನು ತುಂಬ ಬೇಕಾಗಿಲ್ಲ. ಆದರೆ ಇದರಲ್ಲಿ ಗ್ರಾಹಕರು ಅನುಭವಿಸಿದ ನಷ್ಟವನ್ನು ಬ್ಯಾಂಕ್‌ ತುಂಬಿಸಿಕೊಡಬೇಕು ಎನ್ನಲಾಗಿದೆ.

ತಪ್ಪು ನಿಮ್ಮಿಂದ ಆಗಿದ್ರೆ:

ತಪ್ಪು ನಿಮ್ಮಿಂದ ಆಗಿದ್ರೆ:

ಆದರೆ ಗ್ರಾಹಕರು ಮಾಡಿದ ತಪ್ಪಿನಿಂದ ಖಾತೆಯು ಹ್ಯಾಕ್‌ ಆಗಿ ಇಲ್ಲವೇ ಕಾರ್ಡ್ ಹ್ಯಾಕ್ ಆಗಿ ನಷ್ಟವಾದರೆ ಇಂತಹ ಸಂದರ್ಭದಲ್ಲಿ ನಷ್ಟವನ್ನು ಬ್ಯಾಂಕ್‌ ಭರಿಸುವುದಿಲ್ಲ ಎನ್ನಲಾಗಿದೆ. ನಷ್ಟಕ್ಕೆ ಗ್ರಾಹಕನೇ ಹೊಣೆಯಾಗ ಬೇಕಾಗುತ್ತದೆ.

ಇಬ್ಬರಿಂದ ಆಗಿದ್ರೆ:

ಇಬ್ಬರಿಂದ ಆಗಿದ್ರೆ:

ಒಂದು ವೇಳೆ ಬ್ಯಾಂಕ್‌ ಮತ್ತು ಗ್ರಾಹಕರು ಇಬ್ಬರು ಮಾಡಿದ ತಪ್ಪಿನಿಂದ ಖಾತೆಯಲ್ಲಿ ಇದ್ದ ಹಣವು ಹ್ಯಾಕ್ ಆದರೆ ಗ್ರಾಹಕರೂ ನಷ್ಟದಲ್ಲಿ ಪಾಲು ಭರಿಸಬೇಕಾಗಿದೆ ಎನ್ನಲಾಗಿದೆ.

90 ದಿನಗಳಲ್ಲಿ:

90 ದಿನಗಳಲ್ಲಿ:

ಏಳು ದಿನಗಳ ನಿಮ್ಮ ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್‌ ಅನ್ನು ಹ್ಯಾಕ್ ಕುರಿತು ವರದಿಯಾದ ಸಂದರ್ಭದಲ್ಲಿ ದೂರು ನೀಡಿದ 90 ದಿನಗಳಲ್ಲಿ ಬ್ಯಾಂಕ್‌ ಇತ್ಯರ್ಥಗೊಳಿಸಬೇಕು ಎಂದು RBI ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

Best Mobiles in India

English summary
List of New Rules by RBI. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X