ಲಾಜಿಟೆಕ್‌ G333 ಇಯರ್‌ಫೋನ್‌ ಬಿಡುಗಡೆ! ಡ್ಯುಯೆಲ್‌ ಡೈನಾಮಿಕ್‌ ಡ್ರೈವರ್‌ ವಿಶೇಷ!

|

ಸ್ಮಾರ್ಟ್‌ಫೋನ್‌ ಜೊತೆಗೆ ಇಯರ್‌ಫೋನ್‌ ಹೊಂದುವುದಕ್ಕೆ ಮ್ಯೂಸಿಕ್‌ ಪ್ರಿಯರು ಬಯಸುತ್ತಾರೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ವೈವಿಧ್ಯಮಯ ಇಯರ್‌ಫೋನ್‌ಗಳನ್ನು ಪರಿಚಯಿಸವೆ. ಇವುಗಳಲ್ಲಿ ಲಾಜಿಟೆಕ್‌ ಸಂಸ್ಥೆ ಕೂಡ ಒಂದಾಗಿದೆ. ಸದ್ಯ ಇದೀಗ ತನ್ನ ಹೊಸ ಲಾಜಿಟೆಕ್ G 333 ವೈರ್ಡ್ ಗೇಮಿಂಗ್ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಇಯರ್‌ಫೋನ್‌ನಲ್ಲಿ ರಿಚ್‌ ಸೌಂಡ್‌ಸ್ಕೇಪ್‌ನೊಂದಿಗೆ ಪವರ್‌ಫುಲ್‌ ಆಡಿಯೊ ಅನುಭವವನ್ನು ನೀಡಲು ಪ್ರತಿ ಇಯರ್‌ ಹೌಸಿಂಗ್‌ಗಳಲ್ಲಿ ಎರಡು ಪ್ರತ್ಯೇಕ ಡ್ರೈವರ್‌ಗಳನ್ನು ನೀಡಲಾಗಿದೆ.

ಲಾಜಿಟೆಕ್‌

ಹೌದು, ಲಾಜಿಟೆಕ್‌ ಕಂಪೆನಿ ಹೊಸ ಲಾಜಿಟೆಕ್‌ G333 ವೈರ್ಡ್‌ ಗೇಮಿಂಗ್‌ ಇಯರ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಇದು ಇಂಟಿಗ್ರೇಟೆಡ್ ಆಡಿಯೊ ಕಂಟ್ರೋಲ್‌ ಜೊತೆಗೆ ಇನ್-ಲೈನ್ ಮೈಕ್ ಹೊಂದಿದ್ದು, ಪಿಸಿ, ಮೊಬೈಲ್, ಎಕ್ಸ್ ಬಾಕ್ಸ್, ಪ್ಲೇಸ್ಟೇಷನ್, ನಿಂಟೆಂಡೊ, ಇತರ ಪ್ಲಾಟ್‌ಫಾರ್ಮ್‌ಗಳೊಂದಿಗೆ ಹೊಂದಿಕೊಳ್ಳುತ್ತವೆ ಎಂದು ಹೇಳಲಾಗಿದೆ. ಇದಲ್ಲದೆ ಹೆಡ್‌ಫೋನ್ ಪೋರ್ಟ್‌ನೊಂದಿಗೆ ಬರದ ಸ್ಮಾರ್ಟ್‌ಫೋನ್‌ಗಳೊಂದಿಗೆ ಇಯರ್‌ಫೋನ್‌ಗಳನ್ನು ಬಳಸಲು ಕಂಪನಿಯು 3.5 ಎಂಎಂ ಡಾಂಗಲ್‌ಗೆ ಪೌಚ್‌ ಮತ್ತು ಯುಎಸ್‌ಬಿ ಟೈಪ್-ಸಿ ಅನ್ನು ನೀಡಲಿದೆ. ಇನ್ನುಳಿದಂತೆ ಈ ಇಯರ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇಯರ್‌ಫೋನ್‌

ಲಾಜಿಟೆಕ್ G 333 ಇಯರ್‌ಫೋನ್‌ಗಳು ಪ್ರತಿ ಇಯರ್ ಹೌಸಿಂಗ್‌ನಲ್ಲಿ 5.8mm ಮತ್ತು 9.2mm ಡ್ಯುಯಲ್ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿವೆ. ಇದರಲ್ಲಿ ಒಂದು ಡ್ರೈವರ್‌ ಬಾಸ್ ಅನ್ನು ಒದಗಿಸಿದರೆ, ಇನ್ನೊಂದು ಮಿಡ್‌ಗಳು ಮತ್ತು ಗರಿಷ್ಠ ಮಟ್ಟವನ್ನು ನೀಡಲಿದೆ. ಇದಲ್ಲದೆ ಸುಧಾರಿತ ಸೌಂಡ್‌ಸ್ಕೇಪ್‌ ಅನ್ನು ನೀಡಲು ಇದು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಆಟದ ವಾತಾವರಣದ ಪ್ರತಿಯೊಂದು ವಿವರಗಳನ್ನು ಬಹಿರಂಗಪಡಿಸುತ್ತದೆ ಮತ್ತು ವಾಯ್ಸ್‌ ಚಾಟ್ ಅನ್ನು ಸ್ಪಷ್ಟವಾಗಿ ಬೇರ್ಪಡಿಸುತ್ತದೆ.

ಇಯರ್‌ಫೋನ್‌

ಇನ್ನು ಈ ಇಯರ್‌ಫೋನ್‌ಗಳು ಗಟ್ಟಿಮುಟ್ಟಾದ ಅಲ್ಯೂಮಿನಿಯಂ ಹೌಸಿಂಗ್‌ ಮತ್ತು ಟ್ಯಾಂಗಲ್‌-ಫ್ರೀ ಫ್ಲಾಟ್ ಕೇಬಲ್ಸ್ ಫಾರ್ ಡುರಬಿಲಿಟಿ ವಿನ್ಯಾಸವನ್ನು ಹೊಂದಿದೆ. ಲಾಜಿಟೆಕ್ G 333 ವೈರ್ಡ್ ಗೇಮಿಂಗ್ ಇಯರ್‌ ಫೋನ್‌ಗಳು ಪಿಸಿಗಳು, ಎಕ್ಸ್‌ಬಾಕ್ಸ್, ಪ್ಲೇಸ್ಟೇಷನ್, ಜೊತೆಗೆ ನಿಂಟೆಂಡೊ ಸ್ವಿಚ್ ಕನ್ಸೋಲ್‌ಗಳು, ಮೊಬೈಲ್ ಡಿವೈಸ್‌ಗಳು ಮತ್ತು ಟ್ಯಾಬ್ಲೆಟ್‌ಗಳೊಂದಿಗೆ ಹೊಂದಿಕೊಳ್ಳಲಿದೆ. ಈ ಇಯರ್‌ಫೋನ್‌ಗಳು 3.5mm AUX ಕನೆಕ್ಟರ್ ಹೊಂದಿದ್ದು, ಹೆಡ್‌ಫೋನ್ ಜ್ಯಾಕ್ ಇಲ್ಲದ ಡಿವೈಸ್‌ಗಳಿಗೆ ಯುಎಸ್‌ಬಿ ಟೈಪ್-ಸಿ ಅಡಾಪ್ಟರ್‌ನೊಂದಿಗೆ ಬರುತ್ತವೆ.

ಇಯರ್‌ಫೋನ್‌

ಇದಲ್ಲದೆ ಈ ಇಯರ್‌ಫೋನ್‌ ಉನ್ನತ-ಗುಣಮಟ್ಟದ ಎಲೆಕ್ಟ್ರೆಟ್ ಕಂಡೆನ್ಸರ್ ಮೈಕ್ರೊಫೋನ್ ಮತ್ತು ಸಂಯೋಜಿತ ಆಡಿಯೊ ನಿಯಂತ್ರಣಗಳನ್ನು ಒಳಗೊಂಡಿರುವ ಇನ್-ಲೈನ್ ರಿಮೋಟ್ ಇದೆ. ಅಲ್ಲದೆ ಈ ಇಯರ್‌ಫೋನ್‌ಗಳಲ್ಲಿ ಮೂರು ಗಾತ್ರದ ಸಾಫ್ಟ್‌ ಸಿಲಿಕೋನ್ ಇಯರ್ ಟಿಪ್ಸ್, ಸಾಫ್ಟ್‌ ಕ್ಯಾರಿಂಗ್‌ ಪೌಚ್‌ ಅನ್ನು ಹೊಂದಿದೆ. ಸದ್ಯ ಲಾಜಿಟೆಕ್‌ G 333 ಇಯರ್‌ಫೋನ್‌ ಯುಎಸ್‌ನಲ್ಲಿ $ 49.99 (ಸುಮಾರು 3,600 ರೂ.) ಬೆಲೆಯನ್ನು ಹೊಂದಿದೆ. ಇನ್ನು ವೈರ್ಡ್ ಗೇಮಿಂಗ್ ಇಯರ್‌ಫೋನ್‌ಗಳು ಭಾರತದಲ್ಲಿ ರೂ. 4,995,ಬೆಲೆ ಹೊಂದಿದೆ. ಆದರೆ ಭಾರತದಲ್ಲಿ ಇನ್ನೂ ಕೂಡ ಖರೀದಿಗೆ ಲಭ್ಯವಿಲ್ಲ. ಈ ಇಯರ್‌ಫೋನ್‌ಗಳು ಕಪ್ಪು, ನೇರಳೆ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

Best Mobiles in India

English summary
Logitech G333 Wired Gaming Earphones With Dual Dynamic Drivers Launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X