ಡಿ.29ರಿಂದ 'ಡಿಟಿಎಚ್' ಮತ್ತು 'ಕೇಬಲ್‌' ಸೇವೆಗಳಿಗೆ ಹೊಸ ನಿಯಮ ಜಾರಿ!!

|

ಟೆಲಿಕಾಂ ಪ್ರಪಂಚದ ಅಕ್ರಮಗಳಿಗೆ ಬ್ರೇಕ್ ಹಾಕಿದ್ದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಈಗ ಡಿಟಿಎಚ್ ಮತ್ತು ಕೇಬಲ್‌ ಸೇವೆಗಳಿಗೆ ಹೊಸ ನಿಯಮವನ್ನು ತಂದಿದೆ. ಇದೇ ಡಿ. 29ರಿಂದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಹೊಸ ನಿಯಮವೊಂದು ಜಾರಿಗೊಳ್ಳಲಿದ್ದು, ಇನ್ಮುಂದೆ ಡಿಟಿಎಚ್ ಮತ್ತು ಕೇಬಲ್‌ ಸೇವೆಗಳೂ ಸಹ ಬೇಡಿಕೆಗೆ ಅನುಗುಣವಾಗಿ ಲಭ್ಯವಾಗಲಿದೆ.

ಹೌದು, 2016ರಲ್ಲೇ ಬೇಡಿಕೆಗೆ ಅನುಗುಣವಾಗಿ ಡಿಟಿಎಚ್ ಮತ್ತು ಕೇಬಲ್‌ ಸೇವೆಗಳು ಸಿಗುವಂತೆ ಮಾಡಲು ಮುಂದಾಗಿದ್ದ ಟ್ರಾಯ್ ಪರಿಶ್ರಮ ಈಗ ಕಾರ್ಯರೂಪಕ್ಕೆ ಬಂದಿದೆ. ಈ ವರೆಗೆ ಚಾನೆಲ್‌ಗ‌ಳ ದರವನ್ನು ನಿರ್ಧರಿಸುತ್ತಿದ್ದ ಡಿಟಿಎಚ್ ಆಪರೇಟರ್‌ಗಳು ಹಾಗೂ ಕೇಬಲ್‌ ವಿತರಕರು ಬದಲಾಗಿ, ಇನ್ಮುಂದೆ ಚಾನೆಲ್‌ಗ‌ಳ ದರವನ್ನು ಆಯಾ ಪ್ರಸಾರ ಸಂಸ್ಥೆಗಳು ನಿರ್ಧರಿಸಲಿವೆ.

ಡಿ.29ರಿಂದ 'ಡಿಟಿಎಚ್' ಮತ್ತು 'ಕೇಬಲ್‌' ಸೇವೆಗಳಿಗೆ ಹೊಸ ನಿಯಮ ಜಾರಿ!!

ಪ್ರಸಾರ ಸಂಸ್ಥೆಗಳು ಪ್ರತಿ ಚಾನೆಲ್‌ ಅನ್ನೂ ಬಿಡಿಯಾಗಿ ವಿತರಕರಿಗೆ ನೀಡುವಂತಹ ಆಯ್ಕೆಯನ್ನು ಈ ತರಲಾಗಿದೆ. ಇದರಿಂದ, ಟಿವಿ ಗ್ರಾಹಕ ತನಗೆ ಬೇಕಾದ ಒಂದು ಚಾನೆಲ್‌ ಪಡೆಯಲು ಇಡೀ ಗುಂಪನ್ನು ಅಥವಾ ಪ್ರೀಮಿಯಂ ಚಾನೆಲ್‌ಗ‌ಳ ಸಮೂಹವನ್ನು ಕೊಳ್ಳುವುದರಿಂದ ಪಾರಾಗಬಹುದಾಗಿದ್ದು, ತನ್ನ ಇಚ್ಚೆಯ ಟಿವಿ ಚಾನಲ್ ಅನ್ನು ಚಾನಲ್‌ಗೆ ಹಣನೀಡಿ ನೋಡಬಹುದಾಗಿದೆ.

ಈ ಚಾನೆಲ್‌ಗ‌ಳ ಗುಂಪು ರೂಪಿಸುವ ಹೊಣೆ ವಿತರಕರದ್ದಾಗಿದೆ. ಆದರೆ, ಪೇ ಚಾನೆಲ್‌ಗ‌ಳನ್ನು ಉಚಿತ ಚಾನೆಲ್‌ಗ‌ಳೊಂದಿಗೆ ಜೋಡಿಸಿ ಗುಂಪು ರಚಿಸುವಂತಿಲ್ಲ. ಅಲ್ಲದೆ ಎಸ್‌ಡಿ ಮತ್ತು ಹೈ ಹೆಚ್‌ಡಿ ಚಾನೆಲ್‌ಗ‌ಳನ್ನು ಪ್ರತ್ಯೇಕ ಗುಂಪುಗಳಲ್ಲಿ ನೀಡಬೇಕು. 19 ರೂ.ಗಳಿಗಿಂತ ಹೆಚ್ಚು ದರವಿರುವ ಚಾನೆಲ್‌ಗ‌ಳನ್ನು ಗ್ರಾಹಕರಿಗೆ ಪ್ರತ್ಯೇಕ ನೀಡಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ.

ಡಿ.29ರಿಂದ 'ಡಿಟಿಎಚ್' ಮತ್ತು 'ಕೇಬಲ್‌' ಸೇವೆಗಳಿಗೆ ಹೊಸ ನಿಯಮ ಜಾರಿ!!

ದೂರದರ್ಶನ, ಸ್ಟಾರ್‌ ಭಾರತ್‌, ಝೀ ಅನ್ಮೋಲ್ ರೀತಿಯ 100 'ಉಚಿತ' ಚಾನೆಲ್‌ಗ‌ಳು ಗ್ರಾಹಕರಿಗೆ ಲಭ್ಯವಿರಲಿದೆ. ಇದಕ್ಕೆ ಕೊಡಬೇಕಾದ ನಿರ್ವಹಣಾ ಮೊತ್ತ 130 ರೂ. ಎಂದು ನಿಗದಿಪಡಿಸಲಾಗಿದೆ. ಇವುಗಳನ್ನು ಬಿಟ್ಟು ಚಾನೆಲ್‌ಗ‌ಳ ದರವನ್ನು ಪ್ರಸಾರ ಸಂಸ್ಥೆಗಳು ನಿರ್ಧರಿಸುವುದರಿಂದ ಕೇಬಲ್ ಬಿಲ್ ಕೂಡ ಹೆಚ್ಚಾಗುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.

Best Mobiles in India

English summary
Following a new mandate by Telecom Regulatory Authority of India (Trai), the long duration plans being shipped by Direct to Home (DTH) services will be discontinued from December 29. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X