ಶತಮಾನದ ದೀರ್ಘಾವಧಿ ಚಂದ್ರಗ್ರಹಣದ ವಿಜ್ಞಾನದ ವಿಸ್ಮಯಗಳು!

|

ಇಂದು ಯಾವ ಟಿವಿ ಚಾನಲ್ ಹಾಕಿದರೂ ಸಹ ಅಲ್ಲಿ ಒಂದೇ ವಿಷಯದ ಬಗ್ಗೆ ಚರ್ಜೆಯಾಗುತ್ತಿದೆ. ರೆಡ್ ಮೂನ್, ಬ್ಲಡ್ ಮೂನ್ ಎಂದು ಕರೆಸಿಕೊಳ್ಳುತ್ತಿರುವ ಚಂದ್ರ ಗ್ರಹಣದ ಬಗ್ಗೆ ಜ್ಯೋತಿಷಿಗಳು ಕುಳಿತು ಹಲವು ವಿಶ್ಲೇಷಣೆಗಳನ್ನು ನಡೆಸುತ್ತಿದ್ದಾರೆ. ಆದರೆ, ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣದ ವಿಜ್ಞಾನದ ವಿಸ್ಮಯಗಳನ್ನು ಹೇಳಲು ಯಾರು ಇಲ್ಲದಂತಾಗಿದೆ.!

ಹೌದು, 2018ರ ಎರಡನೇ ಚಂದ್ರಗ್ರಹಣವನ್ನು ನೋಡಲು ಜಗತ್ತಿನೆಲ್ಲೆಡೆ ಜನರು ಉತ್ಸುಕರಾಗಿದ್ದಾರೆ. ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಎಂಬ ಖ್ಯಾತಿಯನ್ನು ಹೊಂದಿರುವ ಈ ಚಂದ್ರಗ್ರಹಣಕ್ಕೆ ಖಗೋಳ ವಿಸ್ಮಯಕ್ಕೆ ಇದೆ. ಜ್ಯೋತಿಷಿಗ ಪದ್ಧತಿ, ಅವರ ಆಚರಣೆಗಳನ್ನು ಮೀರಿದ ನಂತರ ವಿಜ್ಞಾನ ಪ್ರಪಂಚಕ್ಕೆ ಒಂದಿಷ್ಟು ಸಂಶೋಧನೆಗೆ ಗ್ರಹಣ ಕಾರಣವಾಗಲಿದೆ.!

ಶತಮಾನದ ದೀರ್ಘಾವಧಿ ಚಂದ್ರಗ್ರಹಣದ ವಿಜ್ಞಾನದ ವಿಸ್ಮಯಗಳು!

ಈ ಕಳೆದ ಜನವರಿ 31 ರಂದು ಸೂಪರ್ ಬ್ಲ್ಯೂ ಬ್ಲಡ್ ಮೂನ್ ಅನ್ನು ಕಣ್ತುಂಬಿಸಿಕೊಂಡಿದ್ದ ನೀವು ಕಳೆದ ಈ ಅರ್ಧ ವರ್ಷದಲ್ಲಿ, ಅಂದರೆ ಜುಲೈ 27ರಂದು ಮತ್ತೆ ಗ್ರಹಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣದ ವಿಜ್ಞಾನದ ವಿಸ್ಮಯಗಳ ಬಗ್ಗೆ ನಾವು ತಿಳಿದುಕೊಳ್ಳೊಣ.

ಶತಮಾನದ ದೀರ್ಘಾವಧಿ ಚಂದ್ರಗ್ರಹಣ.

ಶತಮಾನದ ದೀರ್ಘಾವಧಿ ಚಂದ್ರಗ್ರಹಣ.

ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವು ಜು. 27 ರಾತ್ರಿ ಮತ್ತು 28ರಂದು ಮುಂಜಾನೆ ಸಂಭವಿಸಲಿದೆ. ಜು. 27ರ ರಾತ್ರಿ 11.54ಕ್ಕೆ ಚಂದ್ರಗ್ರಹಣವು ಆರಂಭವಾಗಲಿದ್ದು, ರಾತ್ರಿ 1 ಗಂಟೆಯಿಂದ 2.43ರ ವರೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಜು. 28 ಮುಂಜಾನೆ 3.49ಕ್ಕೆ ಗ್ರಹಣ ಮುಗಿಯಲಿದೆ.

2100ರ ಅವಧಿಯಲ್ಲಿ ಮತ್ತೆ ಸಂಭವಿಸುವುದಿಲ್ಲ.

2100ರ ಅವಧಿಯಲ್ಲಿ ಮತ್ತೆ ಸಂಭವಿಸುವುದಿಲ್ಲ.

1 ಗಂಟೆ 42 ನಿಮಿಷ 57 ಸೆಕೆಂಡ್ ನಷ್ಟು ಸುದೀರ್ಘ ಕಾಲ ಖಗ್ರಾಸ ಗ್ರಹಣ ಸಂಭವಿಸಲಿದೆ. ಅಂದರೆ ಗ್ರಹಣದ ಅವಧಿ ಬರೋಬ್ಬರಿ 3 ಗಂಟೆ 45 ನಿಮಿಷವಾಗಿದ್ದು. ಮಧ್ಯರಾತ್ರಿ 1.52ಕ್ಕೆ ಚಂದ್ರ ಸಂಪೂರ್ಣ ಮರೆಯಾಗಲಿದ್ದಾನೆ. ಇನ್ನು ಶತಮಾನದ ದೀರ್ಘಾವಧಿ ಚಂದ್ರಗ್ರಹಣ 2100ರ ಅವಧಿಯಲ್ಲಿ ಮತ್ತೆ ಸಂಭವಿಸುವುದಿಲ್ಲ.

ಮಂಗಳ ಗ್ರಹ ಭೂಮಿಗೆ ಹತ್ತಿರ

ಮಂಗಳ ಗ್ರಹ ಭೂಮಿಗೆ ಹತ್ತಿರ

ಈ ಸುದೀರ್ಘ ಚಂದ್ರಗ್ರಹಣದ ಜೊತೆಗೆ ಖಗೋಳದಲ್ಲಿ ಮತ್ತೊಂದು ವಿಸ್ಮಯ ಸಂಭವಿಸಲಿದೆ. ಈ ದಿನ ಮಂಗಳ ಗ್ರಹ ಭೂಮಿಗೆ ಅತೀ ಹತ್ತಿರ ಬರಲಿದ್ದು, ಸೂರ್ಯ ಮತ್ತು ಮಂಗಳ ಗ್ರಹ ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳಲಿವೆ. ಮಂಗಳ ಗ್ರಹ ದಶಕದ ನಂತರ ಭೂಮಿಗೆ ಅತೀ ಹತ್ತಿರದಲ್ಲಿ ಬರುವುದರಿಂದ ಅತಿ ದೊಡ್ಡದಾಗಿ ಕಾಣಿಸಲಿದೆ.

ಮರೆಯಾಗಲಿದ್ದಾನೆ ಚಂದ್ರ

ಮರೆಯಾಗಲಿದ್ದಾನೆ ಚಂದ್ರ

2001 ರಿಂದ ಇಲ್ಲಿಯವರೆಗೆ ಇದು 17ನೇ ಸಂಪೂರ್ಣ(Total eclipse) ಚಂದ್ರಗ್ರಹಣ. ಈ ಶತಮಾನ ಇನ್ನೂ 85 ಸಂಪೂರ್ಣ ಚಂದ್ರಗ್ರಹಣವನ್ನು ಕಾಣಬೇಕಿದೆ. ಈ ಗ್ರಹಣದಲ್ಲಿ ಭೂಮಿಯ ನೆರಳು ಬಿದ್ದು ಚಂದ್ರ ಸಂಪೂರ್ಣವಾಗಿ ಮರೆಯಾಗುತ್ತಾನೆ. 103 ನಿಮಿಷಗಳ ಕಾಲ ಇದೇ ಸ್ಥಿತಿಯಲ್ಲಿ ಚಂದ್ರ ಇರುತ್ತಾನೆ. ಇದೇ ರೀತಿಯ ಚಂದ್ರಗ್ರಹಣ ಇನ್ನುಮುಂದೆ 2036 ರ ಆಗಸ್ಟ್ 6 ಅಥವಾ 7 ಸಂಭವಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಬರಿಗಣ್ಣಲ್ಲಿ ನೋಡಬಹುದೆ?

ಬರಿಗಣ್ಣಲ್ಲಿ ನೋಡಬಹುದೆ?

ಶತಮಾನದ ದೀರ್ಘಾವಧಿ ಈ ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಣೆ ಮಾಡಬಹುದು. ಈ ಸಂದರ್ಭದಲ್ಲಿ ಭೂಮಿಯ ವಾತಾವರಣದಲ್ಲಿ ಹಾದುಹೋಗುವ ಸೂರ್ಯನ ಕಿರಣಗಳ ಚದುರುವಿಕೆಯಿಂದಾಗಿ ಚಂದ್ರನು ಕಪ್ಪಾಗಿ ಕಾಣಿಸದೆ ರಕ್ತವರ್ಣದಲ್ಲಿ ಕಂಡುಬರುತ್ತಾನೆ ಅಷ್ಟೆ.

ತಾರಾಲಯದಲ್ಲಿ ವೀಕ್ಷಣೆಗೆ ಅವಕಾಶ

ತಾರಾಲಯದಲ್ಲಿ ವೀಕ್ಷಣೆಗೆ ಅವಕಾಶ

ಖಗೋಳ ವಿಸ್ಮಯವಾಗಿರುವ ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವನ್ನು ಮಳೆ ಮೋಡ ಅಂದು ಅಡ್ಡಿ ಮಾಡದಿದ್ದರೆ ಭಾರತದ ಬಹುತೇಕ ಭಾಗದಲ್ಲಿ ನೋಡಬಹುದು. ಒಂದು ವೇಳೆ ನೋಡಲೇಬೇಕು ಎಂದೆನಿಸಿದರೆ, ಬೆಂಗಳೂರಿನ ಜವಾಹರಲಾಲ ನೆಹರು ತಾರಾಲಯದಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವ ಮಾಹಿತಿ ಇದೆ.

Best Mobiles in India

English summary
You'll need to set your alarm clock if you want to see this century's longest lunar eclipse on Saturday morning.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X