ನಿಮ್ಮ ಕ್ಯಾಮರಾ ಕಳೆದುಹೋದರೆ ಆನ್ಲೈನ್ ನಲ್ಲಿ ಹುಡುಕುವುದು ಹೇಗೆ ?

Posted By: Varun
ನಿಮ್ಮ ಕ್ಯಾಮರಾ ಕಳೆದುಹೋದರೆ ಆನ್ಲೈನ್ ನಲ್ಲಿ ಹುಡುಕುವುದು ಹೇಗೆ ?

ಇಷ್ಟಪಟ್ಟು ಖರೀದಿಸಿರುವ ಯಾವುದೇ ವಸ್ತು ಕಳೆದು ಹೋದರೆ ಎಷ್ಟು ಬೇಜಾರಾಗುತ್ತೆ ಅಂತಾ ಕಳೆದು ಕೊಂಡಿರುವುವರಿಗೆ ಮಾತ್ರ ಗೊತ್ತು.

ಅದರಲ್ಲೂ ನಮ್ಮ ನೆನಪುಗಳನ್ನು ಸೆರೆ ಹಿಡಿದು ಜೀವನ ಪೂರ್ತಿ ಜ್ಞಾಪಿಸಿಕೊಳ್ಳುವ ಚಿತ್ರಗಳು ತೆಗೆಯುವ ಕ್ಯಾಮರಾ ಕಳೆದು ಹೋದರೆ ಮನಸಿಗೆ ಇನ್ನಷ್ಟು ದುಗುಡ. ಕ್ಯಾಮರಾ ಜೊತೆ ಫೋಟೋಗಳೂ ಕಳೆದು ಹೋದರೆ ಏನೋ ಕಳೆದುಕೊಂಡ ಅನುಭವ.

ಸಂತೋಷದ ವಿಷಯ ಏನೆಂದರೆಕಳೆದು ಹೋದ ಕ್ಯಾಮರಾ ಅಂತರ್ಜಾಲದಲ್ಲಿ ಹುಡುಕಿ ಮಾಹಿತಿಯನ್ನುತೆಗೆಯಬಹುದುಕೂಡ. ಅದೇನೆಂದರೆ, ಪ್ರತಿಯೊಂದು ಕ್ಯಾಮರಾಗೂ ಒಂದು ವಿಶಿಷ್ಟವಾದ ಅಂಕಿ ಇರುತ್ತದೆ. ಅದನ್ನು ಇಂಥ ವೆಬ್ಸೈಟ್ ನಲ್ಲಿ ಕೊಟ್ಟರೆ ಸಾಕು, ನೀವು ಕಳೆದುಕೊಂಡ ನಂತರ ಯಾರಾದರೂ ಆ ಕ್ಯಾಮೆರಾ ದಲ್ಲಿ ಫೋಟೋ ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದ್ದರೆ, ನಿಮ್ಮ ಕ್ಯಾಮರಾ ದ ವಿಶಿಷ್ಟ ಸಂಖ್ಯೆ ಅನುಸರಿಸಿ ಅದು ಅಂತರ್ಜಾಲದಲ್ಲಿ ಹೆಕ್ಕಿ ತೆಗೆಯುತ್ತದೆ. ನಿಮ್ಮ ಹತ್ತಿರ ವಿಶಿಷ್ಟ ಸಂಖ್ಯೆ ಇಲ್ಲದಿದ್ದರೂ ಕೂಡ , ಕಳೆದು ಹೋದ ಕ್ಯಾಮರಾದಿಂದ ತೆಗೆದ ಯಾವುದಾದರೂ ಒಂದು ಫೋಟೋ ಇದ್ದರೂ ಸಾಕು ನೀವು ಅದನ್ನು ಅಪ್ಲೋಡ್ ಮಾಡಿ. ಈ ವೆಬ್ ಸೈಟ್ ಅದರಿಂದಲೇ ಸಂಖ್ಯೆ ಹೆಕ್ಕಿ ತೆಗೆದು ಹುಡುಕಲಾರಂಭಿಸುತ್ತದೆ.

ಪ್ರಯತ್ನಿಸಿ ನೋಡಿ , ಮತ್ತೆ ನಿಮ್ಮ ಕ್ಯಾಮರಾ ಸಿಗಬಹುದು, ಯಾವನಿಗ್ ಗೊತ್ತು.

http://www.camerafound.com

http://www.stolencamerafinder.com

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot