ಅಮೆಜಾನ್ ಪ್ರೈಮ್, ನೆಟ್‌ಫಿಕ್ಲ್ಸ್ ನೋಡುವ ಅಭ್ಯಾಸವೇ...? ಹಾಗಿದ್ರೆ ದಂಡ ಕಟ್ಟಲು ರೆಡಿಯಾಗಿ...!

|

ಇಂದಿನ ದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಂಟರ್ನೆಟ್ ಅತೀ ಕಡಿಮೆ ಬೆಲೆಗೆ ದೊರೆಯುತ್ತಿರುವ ಹಿನ್ನಲೆಯಲ್ಲಿ ಸ್ಮಾರ್ಟ್ ಫೋನಿನಲ್ಲಿ ವಿಡಿಯೋಗಳನ್ನು ನೋಡುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಅಲ್ಲದೇ ಅಮೆಜಾನ್ ಪ್ರೈಮ್ ಮತ್ತು ನೆಟ್‌ಫಿಕ್ಲ್ಸ್ ನಂತಹ ಆನ್‌ಲೈನ್ ಸ್ಟ್ರಿಮಿಂಗ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರನ್ನು ವೃದ್ಧಿಸಿಕೊಳ್ಳುತ್ತಿವೆ, ಆದರೆ ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗಳು ಎದುರಾಗುತ್ತಿದೆ ಎನ್ನಲಾಗಿದೆ.

ಅಮೆಜಾನ್ ಪ್ರೈಮ್, ನೆಟ್‌ಫಿಕ್ಲ್ಸ್ ನೋಡುವ ಅಭ್ಯಾಸವೇ...? ದಂಡ ಕಟ್ಟಲು ರೆಡಿಯಾಗಿ

ಡ್ರೈವಿಂಗ್ ಮಾಡುವ ಸಂದರ್ಭದಲ್ಲಿ ಆನ್‌ಲೈನಿನಲ್ಲಿ ವಿಡಿಯೋಗಳನ್ನು ನೋಡಿಕೊಂಡು ಅಪಘಾತ ಎಸಗುವವರ ಸಂಖ್ಯೆಯೂ ಅಧಿಕವಾಗುತ್ತಿದ್ದು, ಇದಕ್ಕೇ ತಡೆಯಾಗುವ ಸಲುವಾಗಿ ಪೊಲೀಸರು ಹೊಸದೊಂದು ಕ್ರಮಕ್ಕೆ ಮುಂದಾಗಿದ್ದು, ಆನ್‌ಲೈನಿನಲ್ಲಿ ವಿಡಿಯೋಗಳನ್ನು ನೋಡಿಕೊಂಡು ಡ್ರೈವ್ ಮಾಡುವವರಿಗೆ ಭಾರೀ ಪ್ರಮಾಣದಲ್ಲಿ ದಂಡವನ್ನು ವಿಧಿಸು ಕ್ರಮ ಜರುಗಿಸಲಿದ್ದಾರೆ.

ಕಾರಣವಾದ ಘಟನೆ:

ಕಾರಣವಾದ ಘಟನೆ:

ವ್ಯಕ್ತಿಯೊಬ್ಬರು ತಮ್ಮ SUVಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಸಿಗ್ನಲ್ ಅನ್ನು ನೋಡದೆ ಹೋಗಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ ಪೊಲೀಸರು SUV ಡ್ರೈವ್ ಮಾಡುತ್ತಿದ್ದವರು ಅಮೆಜಾನ್ ಪ್ರೈಮ್ ನಲ್ಲಿ ಕಾಮಿಕ್ ಸ್ತಾನ್ ಎನ್ನುವ ಕಾರ್ಯಕ್ರಮವನ್ನು ನೋಡುತ್ತಿದ್ದನ್ನು ಗಮನಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮುಂದೇ ಈ ರೀತಿಯ ಘಟನೆಗಳು ಆಗಬಾರದು ಎಂದು ಎಚ್ಚರಿಕೆ ವಹಿಸುತ್ತಿದ್ದಾರೆ.

ವಿಡಿಯೋ ನೋಡುವವರಿಗೆ:

ವಿಡಿಯೋ ನೋಡುವವರಿಗೆ:

ಇಷ್ಟು ದಿನ ಮೊಬೈಲ್ ನಲ್ಲಿ ಮಾತನಾಡಿಕೊಂಡು ಗಾಡಿಯನ್ನು ಓಡಿಸುತ್ತಿದ್ದವರಿಗೆ ಮಾತ್ರವೇ ದಂಡವನ್ನು ವಿಧಿಸುತ್ತಿದ್ದ ಪೊಲೀಸರು ಈಗ ಕಾರಿನಲ್ಲಿ ವಿಡಿಯೋ ನೋಡುವವರ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅವರ ಮೇಲೆಯೂ ಕಣ್ಣು ಇಡಲು ಮುಂದಾಗಿದೆ. ಇದರಿಂದಾಗಿ ಭಾರಿ ಪ್ರಮಾಣದ ಅಪಘಾತಗಳು ಎದುರಾಗುತ್ತಿದೆ ಎನ್ನಲಾಗಿದೆ.

ದಂಡ ಏನು ಅಂದ್ರಾ..?

ದಂಡ ಏನು ಅಂದ್ರಾ..?

ಆನ್‌ಲೈನಿನಲ್ಲಿ ವಿಡಿಯೋ ನೋಡುವವರಿಗೆ ಭಾರೀ ಪ್ರಮಾಣದಲ್ಲಿ ದಂಡವನ್ನು ವಿಧಿಸಲು ಮುಂದಾಗಿದ್ದಾರೆ. ದುಬಾರಿ ಬೆಲೆಯೊಂದಿಗೆ ಮೊಬೈಲ್ ಫೋನ್ ಸಿಜ್ ಮಾಡಿಕೊಳ್ಳಲಿದ್ದಾರೆ. ಇದಲ್ಲದೇ ಆರು ತಿಂಗಳ ಕಾಲ ಡಿಎಲ್ ಅನ್ನು ಅಮಾನತಿನಲ್ಲಿ ಇಡಲಿದ್ದಾರೆ ಎನ್ನಲಾಗಿದೆ. ಇದು ಮತ್ತೇ ಪುನಾರವರ್ತಿತವಾದರೆ ಇನ್ನು ದೊಡ್ಡ ಪ್ರಮಾಣದಲ್ಲಿ ದಂಡವನ್ನು ವಿಧಿಸುತ್ತಾರೆ.

ನೀವು ತಪ್ಪು ಮಾಡಬೇಡಿ:

ನೀವು ತಪ್ಪು ಮಾಡಬೇಡಿ:

ನೀವು ಸಹ ಅಮೆಜಾನ್ ಇಲ್ಲವೇ ನೆಟ್ ಫಿಕ್ಸ್ ಚಂದಾದರಿಕೆಯನ್ನು ಹೊಂದಿರಬಹುದು. ಆದರೆ ಡ್ರೈವಿಂಗ್ ಮಾಡುವ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ವಿಡಿಯೋ ನೋಡುವ ತಪ್ಪನ್ನು ಮಾಡಬೇಡಿರಿ. ನೀವು ಮಾಡುವ ಒಂದು ತಪ್ಪು ಬೇರೆಯವರ ಜೀವಕ್ಕೆ ಸಂಚಕಾರವಾಗಬಹುದು. ಚಾಲನೆಯ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯಿಂದೆ ಇರಿ. ಮೊಬೈಲ್ ಗಳನ್ನು ಬಳಕೆ ಮಾಡಬೇಡಿರಿ.

Best Mobiles in India

English summary
Love watching Netflix, Amazon Prime while driving?. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X