ಐಫೋನ್ ಬಳಕೆದಾರರಿಗೆ ವಾಟ್ಸಾಪ್‌ನಿಂದ ಹೊಸ ಫೀಚರ್ಸ್!
ವಿಶ್ವದಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನ ಹೊಂದಿರುವ ವಾಟ್ಸಪ್ ತನ್ನ ಬಳಕೆದಾರರಿಗೆ ಹಲವು ಅಗತ್ಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಹಲವು ಉತ್ತಮ ಫೀಚರ್ಸ್‌ಗಳನ್ನ ನೀಡಿರೋ ವಾಟ್ಸಪ್ ಇದೀಗ ಐಒಎಸ್ ಬಳಕೆದಾರರಿಗಾಗಿ 2.20.10.23 ಟೆಸ್ಟ್ ಫ್ಲೈಟ್ ಬೀಟಾದ ಹೊಸ ನವೀಕರಣವನ್ನು ಪರಿಚಯಿಸಿದೆ. ಈ ಹೊಸ ಬೀಟಾ ವರ್ಷನ್‌ನಲ್ಲಿ ಹೊಸ ಫೀಚರ್ಸ್‌ಗಳು ಸಾಕಷ್ಟಿದ್ದು ಆಪ್ ಸ್ಟೋರ್‌ನಲ್ಲಿ ಅಪ್‌ಡೇಟ್‌ಗೆ ಲಭ್ಯವಿರುತ್ತವೆ.

ಹೌದು, ವಿಶ್ವದ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನ ಹೊಂದಿರುವ ವಾಟ್ಸಪ್ ತನ್ನ ಹೊಸ ಆವೃತ್ತಿಯ ಬೀಟಾ ವರ್ಷನ್ 2.20.10.23ಅನ್ನ ಪರಿಚಯಿಸಿದ್ದು ಇದು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ. ಸದ್ಯ ಹೊಸ ಆವೃತ್ತಿಯ ಬೀಟಾ ವರ್ಷನ್ ನಿಂದ ಐಒಎಸ್ ಬಳಕೆದಾರರಿಗೆ ಲಭ್ಯವಾಗುವ ಹೊಸ ಫೀಚರ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಹ್ಯಾಪ್ಟಿಕ್ ಟಚ್
ಈ ಹೊಸ ಬೀಟಾ ಅಪ್‌ಡೇಟ್‌ನಿಂದ, ಹ್ಯಾಪ್ಟಿಕ್ ಟಚ್ ಚಾಟ್ ಫೀಚರ್ಸ್ ಲಭ್ಯವಾಗಲಿದೆ. ಸಧ್ಯ ವಾಟ್ಸಾಪ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಸ್ಕ್ರೀನ್‌ಶಾಟ್ ಪ್ರಕಾರ, ಈ ಫೀಚರ್ಸ್‌ನಲ್ಲಿ ನಾಲ್ಕು ಆಯ್ಕೆಗಳಿರಲಿವೆ. ಬಳಕೆದಾರರು ವಾಟ್ಸಾಪ್‌ನಲ್ಲಿ ಲೊಕೇಶನ್ ಶೇರ್ ಮಾಡಿದಾಗ ಅಥವಾ ಸ್ವೀಕರಿಸಿದಾಗ, ಫೋನ್ ಸೆಟ್ಟಿಂಗ್‌ಗಳಲ್ಲಿ ಬಳಕೆದಾರರು ಫೋನ್ ಅನ್ನು ಡಾರ್ಕ್ ಮೋಡ್‌ನಲ್ಲಿ ಇರಿಸಿದ್ದರೆ ನಕ್ಷೆಯು ಕೂಡ ಡಾರ್ಕ್ ಥೀಮ್‌ನಲ್ಲಿ ಕಾಣಿಸುತ್ತದೆ.

ಕಡಿಮೆ ಡೇಟಾ ಮೋಡ್
ಇನ್ನು ಈ ವರ್ಷನ್‌ನಿಂದ ಐಒಎಸ್ 13 ಬಳಕೆದಾರರಿಗೆ ಕಡಿಮೆ ಡೇಟಾ ಮೋಡ್ ಫೀಚರ್ಸ್ ಲಭ್ಯವಿರುತ್ತದೆ. ಹೊಂದಾಣಿಕೆಯ ಅಪ್ಲಿಕೇಶನ್‌ಗಳು ಬಳಸುತ್ತಿರುವ ಡೇಟಾದ ಪ್ರಮಾಣವನ್ನು ಕಡಿಮೆ ಮಾಡುವುದು ಈ ಫೀಚರ್ಸ್ನ ಮುಖ್ಯ ಉದ್ದೇಶವಾಗಿದ್ದು, ಬಳಕೆದಾರರು ತಮ್ಮ ಐಫೋನ್‌ನ ಸೆಟ್ಟಿಂಗ್‌ಗಳಲ್ಲಿ ಕಡಿಮೆ ಡೇಟಾ ಮೋಡ್ ಅನ್ನು ಸಕ್ರಿಯಗೊಳಿಸಿದ್ದರೆ, ಮೊಬೈಲ್ ಡೇಟಾದ ಮೂಲಕ ವೀಡಿಯೊಗಳು, ಫೋಟೋಗಳು ಮತ್ತು ಜಿಐಎಫ್‌ಗಳಂತಹ ಮಾಧ್ಯಮ ಫೈಲ್‌ಗಳನ್ನು ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವುದಿಲ್ಲ.

ಸಂಪರ್ಕ ಏಕೀಕರಣ
ಈ ಫೀಚರ್ಸ್‌ನಿಂದ ಬಳಕೆದಾರರು ಹೊಸ ಐಒಎಸ್ ಪೇಜ್ ಬಳಸಿಕೊಂಡು ಕೆಲವು ಆಯ್ದ ಸೂಚಿಸಿದ ವಾಟ್ಸಾಪ್ ಕಾಟ್ಯಾಂಕ್ಟ್‌ಗಳೊಂದಿಗೆ ನೇರವಾಗಿ ವಸ್ತುಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಒಂದೇ ಬಾರಿಗೆ ಬಳಕೆದಾರರು ತಮ್ಮ ಆಪಲ್ ಸ್ಮಾರ್ಟ್‌ಫೋನ್‌ನ ಮೂಲಕ ಫೈಲ್, ಡಾಕ್ಯುಮೆಂಟ್‌ಗಳನ್ನ ಹಂಚಿಕೊಳ್ಳಲು ಇದರಿಂದ ಸಹಾಯವಾಗುತ್ತದೆ.

ಚಾಟ್ ಫಿಕ್ಸ್
ಹೊಸ ಬೀಟಾ ವರ್ಷನ್‌ನಲ್ಲಿ ಈ ಫೀಚರ್ಸ್‌ಲಭ್ಯವಿರಲಿದ್ದು ಇದು ಬಳಕೆದಾರರ ಇನ್‌ಕರೆಕ್ಟ್ ಮೆಸೇಜ್ ಬಗ್ಗೆ ಮಾಹಿತಿ ನೀಡುತ್ತದೆ. ಅಲ್ಲದೆ ಮೆಸೆಜ್‌ಗಳ ಸಂಖ್ಯೆ 999 ಮೀರಿದರೆ ಅಪ್ಲಿಕೇಶನ್ "999+" ಬ್ಯಾಡ್ಜ್ ಅಂತಾ ತೋರಿಸುತ್ತದೆ.


Click it and Unblock the Notifications








