ಭಾರತದಲ್ಲಿ ಲಿಪರ್‌ಟೆಕ್‌ ಲೆವಿ ಇಯರ್‌ಫೋನ್‌ ಲಾಂಚ್‌!..ಉತ್ತಮ ಬ್ಯಾಟರಿ ಬಾಳಿಕೆ!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ವಲಯದ ಜೊತೆಗೆ ಇಯರ್‌ಫೋನ್‌ ಮಾರುಕಟ್ಟೆ ಕೂಡ ಸಾಕಷ್ಟು ವಿಶಾಲವಾಗಿ ಬೆಳೆದಿದೆ. ಸ್ಮಾರ್ಟ್‌ಫೋನ್‌ ಜೊತೆಗೆ ಉತ್ತಮವಾದ ಇಯರ್‌ಫೋನ್‌ ಪಡೆದುಕೊಳ್ಳುವುದಕ್ಕೆ ಎಲ್ಲರೂ ಬಯಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ವೈವಿಧ್ಯಮಯ ಇಯರ್‌ಫೋನ್‌ಗಳು ಲಭ್ಯವಿವೆ. ಆದರೂ ಬಳಕೆದಾರರು ಮಾತ್ರ ಬ್ಯ್ರಾಂಡ್‌ ಕಂಪೆನಿಗಳ ಇಯರ್‌ಫೋನ್‌ಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಇವುಗಳಲ್ಲಿ ಲಿಪರ್‌ಟೆಕ್‌ ಕೂಡ ಒಂದಾಗಿದೆ. ಸದ್ಯ ಇದೀಗ ಲಿಪರ್‌ಟೆಕ್‌ ತನ್ನ ಹೊಸ ಇಯರ್‌ಫೋನ್‌ ಒಂದನ್ನ ಬಿಡುಗಡೆ ಮಾಡಿದೆ.

ಇಯರ್‌ಫೋನ್

ಹೌದು, ಬೊಟಿಕ್ ಇಯರ್‌ಫೋನ್ ಸ್ಪೆಷಲಿಸ್ಟ್ ಬ್ರಾಂಡ್‌ನ ಇತ್ತೀಚಿನ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಲಿಪರ್‌ಟೆಕ್‌ ಲೆವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸದ್ಯ ಈ ಇಯರ್‌ಫೋನ್‌ ಭಾರತದಲ್ಲಿ 5,999 ರೂ ಬೆಲೆಯನ್ನು ಪಡೆದುಕೊಂಡಿದೆ. ಆದರೆ ಪ್ರಾರಂಭಿಕ ಹಂತದಲ್ಲಿ ಇದರ ಬೆಲೆ ಕೇವಲ 4,999, ರೂ ಆಗಿದೆ. ಇದು ಉತ್ತಮ ಬ್ಯಾಟರಿ ಬಾಳಿಕೆ ಮತ್ತು ನೀರಿನ ಪ್ರತಿರೋಧವನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಇಯರ್‌ಫೊನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಿಪರ್‌ಟೆಕ್‌

ಲಿಪರ್‌ಟೆಕ್‌ ಲೆವಿ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ 6mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಕನೆಕ್ಟಿವಿಟಿಗಾಗಿ ಬ್ಲೂಟೂತ್ 5 ಅನ್ನು ಹೊಂದಿದೆ. ಇನ್ನು ಲಿಪರ್‌ಟೆಕ್‌ ಲೆವಿ ಇಯರ್‌ಫೋನ್‌ಗಳು ಎಸ್‌ಬಿಸಿ ಮತ್ತು ಎಎಸಿ ಬ್ಲೂಟೂತ್ ಕೋಡೆಕ್‌ಗಳನ್ನು ಮಾತ್ರ ಬೆಂಬಲಿಸುತ್ತವೆ. ಈ ಇಯರ್‌ಪೀಸ್‌ಗಳು ನೀರಿನ ಪ್ರತಿರೋಧಕ್ಕಾಗಿ ಐಪಿಎಕ್ಸ್ 5 ಎಂದು ರೇಟ್ ಮಾಡಲ್ಪಟ್ಟಿವೆ. ಅಲ್ಲದೆ ಇದರ ಚಾರ್ಜಿಂಗ್ ಕೇಸ್‌ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ, ವೇಗದ ಚಾರ್ಜಿಂಗ್ ಮತ್ತು ಕಿ ವಾಯರ್‌ಲೆಸ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಇಯರ್‌ಫೋನ್‌

ಲಿಪರ್‌ಟೆಕ್ ಲೆವಿ ಇಯರ್‌ಫೋನ್‌ನ ಮತ್ತೊಂದು ವಿಶೇಷತೆಯೆಂದರೆ ಇದರ ಬ್ಯಾಟರಿ ಬಾಳಿಕೆ, ಈ ಇಯರ್‌ಪೀಸ್‌ಗಳಲ್ಲಿ ಎಂಟು ಗಂಟೆಗಳವರೆಗೆ ಇರುತ್ತದೆ ಮತ್ತು ಪ್ರತಿ ಚಾರ್ಜ್ ಸೈಕಲ್‌ಗೆ ಒಟ್ಟು 48 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಜೊತೆಗೆ ಈ ಇಯರ್‌ಫೋನ್‌ಗಳು ಸುತ್ತುವರಿದ ವಾಯ್ಸ್‌ ಮೋಡ್ ಅನ್ನು ಸಹ ಹೊಂದಿದ್ದು, ಬಳಕೆದಾರರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಇಯರ್‌ಪೀಸ್‌ಗಳಲ್ಲಿನ ಮೈಕ್ರೊಫೋನ್ ಮೂಲಕ ಕೇಳಲು ಅನುವು ಮಾಡಿಕೊಡುತ್ತದೆ. ಇಯರ್‌ಪೀಸ್‌ಗಳಲ್ಲಿನ ಮಲ್ಟಿ ಫಂಕ್ಷನ್‌ ಬಟನ್‌ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ.

ಇಯರ್‌ಫೋನ್

ಇನ್ನು ಲಿಪರ್‌ಟೆಕ್‌ ಲೆವಿ ಇಯರ್‌ಫೋನ್‌ ಬೆಲೆ ಭಾರತದಲ್ಲಿ 5,999, ರೂ ಆಗಿದೆ. ಅಲ್ಲದೆ ಆರಂಭದಲ್ಲಿ ಇದು 4,999, ರೂ ಗಳಿಗೆ ಲಭ್ಯವಾಗಲಿದೆ. ಜೊತೆಗೆ ಸೇಲ್‌ ಪ್ಯಾಕೇಜ್‌ನಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಕೇಬಲ್, ಮೂರು ಸೆಟ್‌ಗಳ ಸಿಲಿಕೋನ್ ಇಯರ್ ಟಿಪ್ಸ್ ಮತ್ತು ಒಂದು ಸೆಟ್ ಫೋಮ್ ಇಯರ್ ಟಿಪ್ಸ್ ಅನ್ನು ಸಹ ಸೇರಿಸಲಾಗಿದೆ.

Most Read Articles
Best Mobiles in India

English summary
The earphones promise eight hours of playback per charge, and an additional 40 hours from the case.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X