Home
ಸುದ್ದಿಜಾಲ

ಎಮ್-ಟೆಕ್ ಲಾಂಚ್ ಮಾಡಿದೆ ನೂತನ ಅಗ್ಗದ ಸ್ಮಾರ್ಟ್ಫೋನ್ ಇರೋಸ್, ಬೆಲೆ ರೂ 4299!

By Tejaswini P G

ಸ್ಥಳೀಯ ಮೊಬೈಲ್ ಉತ್ಪಾದಕರಾದ ಎಮ್-ಟೆಕ್ ಮತ್ತೊಂದು ಅಗ್ಗದ 4G VoLTE ಸ್ಮಾರ್ಟ್ಫೋನ್ ಒಂದನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದಾರೆ. "ಇರೋಸ್ ಪ್ಲಸ್" ಹೆಸರಿನ ಈ ಮೊಬೈಲ್ ನ ಬೆಲೆ ಕೇವಲ ರೂ 4299!

ಎಮ್-ಟೆಕ್ ಲಾಂಚ್ ಮಾಡಿದೆ ನೂತನ ಅಗ್ಗದ ಸ್ಮಾರ್ಟ್ಫೋನ್ ಇರೋಸ್, ಬೆಲೆ ರೂ 4299!

ಎಮ್-ಟೆಕ್ ಇನ್ಫೊರ್ಮ್ಯಾಟಿಕ್ಸ್ ಸಂಸ್ಥಾಪಕರಾದ ಗೌತಮ್ ಕುಮಾರ್ ಜೈನ್ ಅವರು ನೂತನ ಇರೋಸ್ ಪ್ಲಸ್ ಕುರಿತು ಮಾತನಾಡುತ್ತಾ ಹೀಗೆ ಹೇಳಿದ್ದಾರೆ " ಈ ಸ್ಮಾರ್ಟ್ಫೋನ್ ಆಕರ್ಷಕ ವಿನ್ಯಾಸ ಮತ್ತು ಉತ್ತಮ ಕಾರ್ಯಕ್ಷಮತೆ ಎರಡನ್ನೂ ಮೈಗೂಡಿಸಿಕೊಂಡಿದೆ . ಇವೆರಡು ಗುಣಗಳೂ ಒಟ್ಟಾಗಿ ಮೇಳೈಸಿರುವ ಕಾರಣ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳ ಪೈಕಿ ಈ ಫೋನ್ ವಿಶಿಷ್ಟವೆನಿಸುತ್ತದೆ".

ಇನ್ನು ಇದರ ಫೀಚರ್ ಮತ್ತು ಸ್ಪೆಸಿಫಿಕೇಶನ್ಗಳ ಕುರಿತು ಹೇಳುವುದಾದರೆ ಇದರಲ್ಲಿದೆ 5-ಇಂಚ್ "FVWGA LCD" ಡಿಸ್ಪ್ಲೇ 480X854 ಪಿಕ್ಸೆಲ್ಸ್ ರೆಸೊಲ್ಯೂಶನ್ ನೊಂದಿಗೆ. ಕ್ವಾಡ್ಕೋರ್ 1.3Ghz ಪ್ರಾಸೆಸರ್ ಮತ್ತು 1 GB RAM ಹೊಂದಿರುವ ಇರೋಸ್ ಪ್ಲಸ್ ನಲ್ಲಿದೆ 8 GB ಇಂಟರ್ನಲ್ ಸ್ಟೋರೇಜ್. ಮೈಕ್ರೋSD ಕಾರ್ಡ್ ಬಳಸಿ ಇದರ ಸ್ಟೋರೇಜ್ ಸಾಮರ್ಥ್ಯವನ್ನು 64GB ಯ ವರೆಗೆ ವಿಸ್ತರಿಸಬಹುದಾಗಿದೆ.

ಇರೋಸ್ ಪ್ಲಸ್ 5MP ರೇರ್ ಕ್ಯಾಮೆರಾ ಹೊಂದಿದ್ದು ಮುಂಬದಿಯಲ್ಲಿ ವೀಡಿಯೋ ಗ್ರಾಫಿಕ್ಸ್ ಎರೆ(ವಿಜಿಎ) ಕ್ಯಾಮೆರಾ ಹೊಂದಿದೆ.ಇರೋಸ್ ಪ್ಲಸ್ 2000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಆಂಡ್ರಾಯ್ಡ್ 7.0 ನುಗಾಟ್ ಓಎಸ್ ಹೊಂದಿದೆ.

ಇರೋಸ್ ಪ್ಲಸ್ ಡ್ಯುಯಲ್ ಸಿಮ್ ಸ್ಮಾರ್ಟ್ಫೋನ್ ಆಗಿದ್ದು ಕನೆಕ್ಟಿವಿಟಿ ಆಯ್ಕೆಗಳಾದ ವೈಫೈ 802.11, ಬಿ/ಜಿ/ಎನ್, ಬ್ಲೂಟೂತ್, ಮೈಕ್ರೋUSB 2.0, 3.5mm ಆಡಿಯೋ ಪೋರ್ಟ್, GPS, 2Gಮತ್ತು 3G ಸಪೋರ್ಟ್ ಹೊಂದಿದೆ.

ಇರೋಸ್ ಪ್ಲಸ್ ಸ್ಮಾರ್ಟ್ಫೋನ್ ಎಲ್ಲಾ ರಿಟೈಲ್ ಮಳಿಗೆಗಳಲ್ಲಿ ಮತ್ತು ಇ-ಕಾಮರ್ಸ್ ಪ್ಲ್ಯಾಟ್ಫಾರ್ಮ್ಗಳಲ್ಲಿ ಲಭ್ಯವಿದೆ ಎಂದು ಎಮ್-ಟೆಕ್ ಕಂಪೆನಿ ತಿಳಿಸಿದೆ.

Best Mobiles in India

English summary
Domestic mobile manufacturer M-tech has yet again launched a new affordable 4G VoLTE smartphone in the market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+