ಭಾರತದಲ್ಲಿ ಆರಂಭಿಕ ಹಂತದ ಆಪಲ್ MacBook Air (2025) ಲ್ಯಾಪ್‌ಟಾಪ್ ಬಿಡುಗಡೆ!
ಟೆಕ್ ದೈತ್ಯ ಬ್ರ್ಯಾಂಡ್ ಆಪಲ್ ಬುಧವಾರ ತನ್ನ ಆರಂಭಿಕ ಹಂತದ ಹೊಸ ಮ್ಯಾಕ್‌ಬುಕ್ ಏರ್ (2025) ಲ್ಯಾಪ್‌ಟಾಪ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈ ಲ್ಯಾಪ್‌ಟಾಪ್, ಐಪ್ಯಾಡ್ ಪ್ರೊ (2024) ನಲ್ಲಿ ಪರಿಚಯಿಸಲಾದ 10-ಕೋರ್ M4 ಚಿಪ್ ಅನ್ನು ಒಳಗೊಂಡಿದ್ದು, 13-ಇಂಚು ಮತ್ತು 15-ಇಂಚು ಲಿಕ್ವಿಡ್ ರೆಟಿನಾ ಡಿಸ್ಪ್ಲೇ ಆಯ್ಕೆಗಳಲ್ಲಿ ಲಭ್ಯವಿದೆ. 16GB RAM ಮತ್ತು 2TB ವರೆಗೆ SSD ಮೆಮೊರಿಯೊಂದಿಗೆ ಕಾನ್ಫಿಗರ್ ಮಾಡಬಹುದಾದ ಈ ಲ್ಯಾಪ್‌ಟಾಪ್, ಆಪಲ್ ಇಂಟೆಲಿಜೆನ್ಸ್ ಅನ್ನು ಬೆಂಬಲಿಸುತ್ತದೆ ಮತ್ತು ಮ್ಯಾಕೋಸ್ ಸಿಕ್ವೊಯಾದಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾದರೆ, ಹೊಸ ಮ್ಯಾಕ್‌ಬುಕ್ ಏರ್ (2025) ಲ್ಯಾಪ್‌ಟಾಪ್‌ನ ವೈಶಿಷ್ಟ್ಯಗಳು ಮತ್ತು ಬೆಲೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
ಮ್ಯಾಕ್‌ಬುಕ್ ಏರ್ (2025) ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ಮ್ಯಾಕ್‌ಬುಕ್ ಏರ್ (2025) 13-ಇಂಚಿನ (2,560×1,664 ಪಿಕ್ಸೆಲ್‌ಗಳು) ಮತ್ತು 15-ಇಂಚಿನ (2,880×1,864 ಪಿಕ್ಸೆಲ್‌ಗಳು) ಸೂಪರ್ ರೆಟಿನಾ ಡಿಸ್ಪ್ಲೇಗಳನ್ನು ಹೊಂದಿದ್ದು, 224ppi ಪಿಕ್ಸೆಲ್ ಸಾಂದ್ರತೆ ಮತ್ತು 500nits ವರೆಗೆ ಗರಿಷ್ಠ ಹೊಳಪನ್ನು ಒದಗಿಸುತ್ತದೆ. ಕಂಪನಿಯ ಪ್ರಕಾರ, ಈ ಲ್ಯಾಪ್‌ಟಾಪ್ 6K ರೆಸಲ್ಯೂಶನ್‌ನಲ್ಲಿ ಎರಡು ಬಾಹ್ಯ ಡಿಸ್ಪ್ಲೇಗಳನ್ನು ಬೆಂಬಲಿಸುತ್ತದೆ. M4 ಚಿಪ್‌ನೊಂದಿಗೆ, ಇದು ನಾಲ್ಕು ಕಾರ್ಯಕ್ಷಮತೆಯ ಕೋರ್‌ಗಳು ಮತ್ತು ನಾಲ್ಕು ದಕ್ಷತೆಯ ಕೋರ್‌ಗಳನ್ನು ಒಳಗೊಂಡ 10-ಕೋರ್ CPU ಅನ್ನು ಹೊಂದಿದೆ. ಲ್ಯಾಪ್‌ಟಾಪ್ 16-ಕೋರ್ ನ್ಯೂರಲ್ ಎಂಜಿನ್ ಮತ್ತು 8-ಕೋರ್ GPU ಅನ್ನು ಹೊಂದಿದ್ದು, ಹಾರ್ಡ್‌ವೇರ್ ಆಕ್ಸಿಲರೇಟೆಡ್ ರೇ ಟ್ರೇಸಿಂಗ್‌ಗೆ ಬೆಂಬಲ ನೀಡುತ್ತದೆ.
ಮ್ಯಾಕ್‌ಬುಕ್ ಏರ್ (2025) ಅನ್ನು 24GB RAM ಮತ್ತು 2TB SSD ಸಂಗ್ರಹಣೆಯೊಂದಿಗೆ ಕಾನ್ಫಿಗರ್ ಮಾಡಬಹುದು. ಇದು ಸ್ಪಾಟಿಯಲ್ ಆಡಿಯೊ ಮತ್ತು ಮೂರು-ಮೈಕ್ ಅರೇಯೊಂದಿಗೆ ಕ್ವಾಡ್ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ Wi-Fi 6E ಮತ್ತು ಬ್ಲೂಟೂತ್ 5.3, ಎರಡು ಥಂಡರ್‌ಬೋಲ್ಟ್ 4/USB 4 ಪೋರ್ಟ್‌ಗಳು, ಮ್ಯಾಗ್‌ಸೇಫ್ 3 ಚಾರ್ಜಿಂಗ್ ಪೋರ್ಟ್ ಮತ್ತು 3.5mm ಆಡಿಯೊ ಜ್ಯಾಕ್ ವೈಶಿಷ್ಟ್ಯಗಳು ಸೇರಿವೆ.

ಈ ಹೊಸ ಮ್ಯಾಕ್‌ಬುಕ್ ಏರ್ (2025) ಟಚ್ ಐಡಿ ಬಟನ್ ಅನ್ನು ಹೊಂದಿದ್ದು, ಇದನ್ನು ಲ್ಯಾಪ್‌ಟಾಪ್ ಅನ್ನು ಅನ್ಲಾಕ್ ಮಾಡಲು ಅಥವಾ ಖರೀದಿಗಳನ್ನು ದೃಢೀಕರಿಸಲು ಬಳಸಬಹುದು. ಫೋರ್ಸ್ ಕ್ಲಿಕ್‌ಗಳು ಮತ್ತು ಮಲ್ಟಿ-ಟಚ್ ಗೆಸ್ಚರ್‌ಗಳಿಗೆ ಬೆಂಬಲ ನೀಡುವ ಫೋರ್ಸ್ ಟಚ್ ಟ್ರ್ಯಾಕ್‌ಪ್ಯಾಡ್ ಮತ್ತು 1080p ಫೇಸ್‌ಟೈಮ್ ಕ್ಯಾಮೆರಾ ಸೆಂಟರ್ ಸ್ಟೇಜ್ ಮತ್ತು ಡೆಸ್ಕ್ ವ್ಯೂಗೆ ಬೆಂಬಲವನ್ನು ಒದಗಿಸುತ್ತದೆ.
13-ಇಂಚಿನ ಮಾದರಿಯು 70W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡುವ 53.8Wh ಲಿಥಿಯಂ-ಪಾಲಿಮರ್ ಬ್ಯಾಟರಿಯನ್ನು ಹೊಂದಿದ್ದು, ಮೂಲ ಮಾದರಿಯು 30W USB ಟೈಪ್-ಸಿ ಪವರ್ ಅಡಾಪ್ಟರ್‌ನೊಂದಿಗೆ ಬರುತ್ತದೆ. 15-ಇಂಚಿನ ರೂಪಾಂತರವು 66.5Wh ಬ್ಯಾಟರಿಯನ್ನು ಹೊಂದಿದೆ. ಆಪಲ್ 15 ಗಂಟೆಗಳ ವೆಬ್ ಬ್ರೌಸಿಂಗ್ ಮತ್ತು 18 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ಒದಗಿಸುತ್ತೆ ಎಂದು ಹೇಳುತ್ತಿದೆ.
ಭಾರತದಲ್ಲಿ ಮ್ಯಾಕ್‌ಬುಕ್ ಏರ್ (2025) ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ 16GB RAM ಮತ್ತು 256GB ಸಂಗ್ರಹಣೆಯೊಂದಿಗೆ ಮೂಲ ಮ್ಯಾಕ್‌ಬುಕ್ ಏರ್ (2025) ಬೆಲೆ ರೂ. 99,900 ರಿಂದ ಪ್ರಾರಂಭವಾಗುತ್ತದೆ. ಇತ್ತ 15-ಇಂಚಿನ ರೂಪಾಂತರವು 16GB+256GB ಮಾದರಿಯೊಂದಿಗೆ ರೂ. 1,24,900 ಗೆ ಲಭ್ಯವಿದೆ ಎಂದು ಕಂಪೆನಿ ತಿಳಿಸಿದೆ. ಆಪಲ್‌ನ ಹೊಸ ಮ್ಯಾಕ್‌ಬುಕ್ ಏರ್ ಮಾದರಿಯು ಇದೀಗಲೆ ಪೂರ್ವ-ಆರ್ಡರ್‌ಗೆ ಲಭ್ಯವಿದ್ದು, ಇದೇ ಮಾರ್ಚ್ 12 ರಿಂದ ಭಾರತದಲ್ಲಿ ಮಾರಾಟಕ್ಕೆ ಬರಲಿದೆ. ಹಾಗೂ, ಇದು ಮಿಡ್‌ನೈಟ್, ಸಿಲ್ವರ್, ಸ್ಕೈ ಬ್ಲೂ ಮತ್ತು ಸ್ಟಾರ್‌ಲೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.


Click it and Unblock the Notifications








