Home
ಸುದ್ದಿಜಾಲ

ರಸ್ತೆ ನಿರ್ಮಾಣಕ್ಕೆ ಪ್ರಿಂಟಿಂಗ್‌ ಮೆಷಿನ್‌..!

By Super

1

1

1
10

10

10
2

2

2
3

3

3
4

4

4
5

5

5
6

6

6
7

7

7
8

8

8
9

9

9

ನೀವೆಲ್ಲಾ ಪಾದಚಾರಿ ರಸ್ತೆಗಳನ್ನು ನೋಡಿರುತ್ತೀರಿ. ಸಣ್ಣ ಇಟ್ಟಿಗೆಗಳನ್ನು ಹಾಕಿ ಈ ರಸ್ತೆಗಳನ್ನು ನಿರ್ಮಿಸುತ್ತಾರೆ. ಆದರೆ ಈ ಸಣ್ಣ ಇಟ್ಟಿಗೆಗಳನ್ನು ಜೋಡಿಸುವುದು ಇದೆಯಲ್ಲ ಅದು ದೊಡ್ಡ ತ್ರಾಸದ ಕೆಲಸ. ಆದರೆ ಇನ್ನು ಮುಂದೆ ಕೆಲಸಗಾರರು ಈ ರೀತಿ ಕಷ್ಟ ಪಡಬೇಕಾಗಿಲ್ಲ. ಇಂತಹ ರಸ್ತೆಗಳನ್ನು ನಿರ್ಮಾಣ ಮಾಡಲೆಂದೇ ಹೊಸ ಯಂತ್ರ ಬಂದಿದೆ.

ಈ ಯಂತ್ರದ ಕೆಲಸವಂತು ನೋಡಲು ಚೆಂದ. ನಮ್ಮ ಮನೆಯ ಮಣ್ಣು ತೆಗೆಯಲು ಬಳಸುವ ಜೆಸಿಬಿ ಯಂತ್ರದಂತೆ ಈ ಯಂತ್ರವು ಇದೆ. ನಿಮಗೆ ಎಷ್ಟು ಅಗಲದಲ್ಲಿ ನಿಮ್ಮ ರೋಡ್ ಬೇಕು ಅಷ್ಟು ಅಗಲಕ್ಕೆ ಈ ಯಂತ್ರವನ್ನು ಸೆಟ್‌ ಮಾಡಬೇಕು. ಈ ಯಂತ್ರದಲ್ಲಿ ಎರಡು ಭಾಗಗಳಿದ್ದು ಒಂದರಲ್ಲಿ ಇಟ್ಟಿಗೆಗಳನ್ನು ಹಾಕಬೇಕು. ಇನ್ನೊಂದು ಭಾಗದಲ್ಲಿ ಇಟ್ಟಿಗೆ ಜೋಡಣೆ ಮಾಡಬೇಕು. ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಈ ಯಂತ್ರ ನಿಧಾನವಾಗಿ ಚಲಿಸುತ್ತಿರುತ್ತದೆ. ಈ ಸಂದರ್ಭದಲ್ಲಿ ಇಬ್ಬರು ಕೆಲಸಗಾರರು ಸಂಗ್ರಹವಾದ ಇಟ್ಟಿಗೆಗಳನ್ನು ಈ ಯಂತ್ರಕ್ಕೆ ಸರಿಯಾಗಿ ಜೋಡಣೆ ಮಾಡಿ ಕಳುಹಿಸಬೇಕು. ಮುಂದೆ ಹೇಗೆ ನ್ಯೂಸ್ ಪೇಪರ್‌ ಪ್ರಿಟಿಂಗ್‌ ಮೆಷಿನ್‌ನಿಂದ ಪ್ರಿಂಟ್‌ ಆಗುತ್ತದೋ ಅದೇ ರೀತಿಯಲ್ಲಿ ಈ ಇಟ್ಟಿಗೆಗಳು ಸರಿಯಾಗಿ ಜೋಡಣೆಯಾಗಿ ಈ ಯಂತ್ರದಿಂದ ಹೊರಬರುತ್ತದೆ. ನೆದರ್‌ಲ್ಯಾಂಡ್‌ ಕಂಪೆನಿ ಈ ಯಂತ್ರವನ್ನು ಕಂಡು ಹಿಡಿದಿದ್ದು ಇದಕ್ಕೆ ಟೈಗರ್ ಸ್ಟೋನ್‌ ಅಂತ ಹೆಸರಿಟ್ಟಿದೆ. ಒಂದು ದಿನದಲ್ಲಿ 300 sq ft ನಷ್ಟು ರಸ್ತೆ ನಿರ್ಮಾಣ ಮಾಡುವ ಸಾಮಾರ್ಥ್ಯ ಈ ಟೈಗರ್‌ ಸ್ಟೋನ್‌ ಯಂತ್ರಕ್ಕೆ ಇದೆಯಂತೆ.

ಆ ಯಂತ್ರ ಹೇಗೆ ಕೆಲಸ ಮಾಡುತ್ತದೆ ಎನ್ನುವ ಕುತೂಹಲ ನಿಮಗೆ ಇದೆ ತಾನೆ. ಅದಕ್ಕಾಗಿಯೆ ಗಿಜ್ಬಾಟ್ ಆ ಯಂತ್ರ ಕೆಲಸ ಮಾಡುವ ಚಿತ್ರಗಳನ್ನುಗಳನ್ನು ತಂದಿದೆ .ಒಂದೊಂದಾಗಿ ಪುಟ ತಿರುವಿ ನೋಡಿಕೊಂಡು ಹೋಗಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+