Just In
- 5 hrs ago
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- 8 hrs ago
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- 9 hrs ago
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- 10 hrs ago
Oppo Reno 8T 5G : ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
Don't Miss
- Sports
ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ: ಮೊದಲನೇ ಪಂದ್ಯದಲ್ಲಿ ಅಂಬಾನಿ-ಅದಾನಿ ತಂಡಗಳ ಮುಖಾಮುಖಿ
- Movies
Katheyondu Shuruvagide: ಕೋಪ ಮರೆತು ಬಹದ್ದೂರ್ ವಂಶದ ಮರ್ಯಾದೆ ಉಳಿಸುತ್ತಾಳಾ ಕೃತಿ..?
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಿಎಫ್ ವಿತ್‌ಡ್ರಾನಲ್ಲಿ ಭಾರೀ ಬದಲಾವಣೆ..! ಇನ್ಮುಂದೆ ಆಫ್‌ಲೈನ್‌ನಲ್ಲಿ ಭವಿಷ್ಯ ನಿಧಿ ಕ್ಲೈಮ್ ಆಗಲ್ಲ..!
ಪ್ರಾವಿಡೆಂಟ್ ಫಂಡ್‌ಗೆ ಸಂಬಂಧಪಟ್ಟಂತೆ ಅನೇಕ ಹೊಸ ಬೆಳವಣಿಗೆಗಳು ಆಗಿವೆ. ಹೆಚ್ಚಿನ ಉದ್ಯೋಗಿಗಳಿಗೆ ಭವಿಷ್ಯ ನಿಧಿಯಲ್ಲಾಗಿರುವ ಬೆಳವಣಿಗೆಗಳ ಬಗ್ಗೆ ತಿಳಿದಿಲ್ಲ. ಕೇವಲ ತಮ್ಮ ಸಂಬಳದಿಂದ ಕಡಿತಗೊಳ್ಳುವ ಪಿಎಫ್ ಬಗ್ಗೆ ಮಾತ್ರ ಉದ್ಯೋಗಿಗಳು ಕಾಳಜಿವಹಿಸುತ್ತಾರೆ. ಅವರಲ್ಲಿ ಬಹುಪಾಲು ಜನ ಪಿಎಫ್‌ಗೆ ಸಂಬಂಧಿಸಿದ ನಿಯಮಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಪಿಎಫ್ ಮೊತ್ತವನ್ನು ಹಿಂತೆಗೆದುಕೊಳ್ಳುವಾಗ ಅಥವಾ ವರ್ಗಾಯಿಸುವಾಗ ಮಾತ್ರ ಪಿಎಫ್ ಕಡೆ ಮುಖ ಮಾಡ್ತಾರೆ.

ಇಂತಹ ಪರಿಸ್ಥಿತಿಯಲ್ಲಿ ಪಿಎಫ್‌ಗೆ ಸಂಬಂಧಿಸಿದ ನಿಯಮಗಳನ್ನು ಉದ್ಯೋಗಿಗಳು ಎಚ್ಚರಿಕೆಯಿಂದ ಗಮನಿಸಬೇಕು. ಇತ್ತೀಚಿಗೆ ಇಪಿಎಫ್‌ಒ ತನ್ನ ನಿಯಮದಲ್ಲಿ ಬದಲಾವಣೆಗಳನ್ನು ಮಾಡಿದ್ದು, ಹೊಸ ನಿಬಂಧನೆಯ ನಂತರ ಆಫ್‌ಲೈನ್‌ನಲ್ಲಿ ಪಿಎಫ್ ಹಿಂಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಈ ನಿಯಮದಲ್ಲೂ ಒಂದು ಷರತ್ತನ್ನು ಇಪಿಎಫ್‌ಒ ಅಳವಡಿಸಿದೆ. ಏನೇಳುತ್ತೆ ನಿಯಮ..? ಷರತ್ತು ಏನು..? ಮುಂದೆ ನೋಡಿ..

ಏನು ಬದಲಾವಣೆ..?
ನಿಮ್ಮ ಆಧಾರ್ ಸಂಖ್ಯೆಯನ್ನು ಇಪಿಎಫ್‌ಒನ ಯುನಿವರ್ಸಲ್ ಅಕೌಂಟ್ ಸಂಖ್ಯೆ(UAN)ಗೆ ಲಿಂಕ್ ಮಾಡಿದ್ದರೆ, ನೀವು ಆಫ್‌ಲೈನ್‌ನಲ್ಲಿ ಪಿಎಫ್ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಆಫ್‌ಲೈನ್ ಅರ್ಜಿ ಸ್ವೀಕರಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿರಾಕರಿಸಿದೆ. ಹೀಗಾಗಿ, ನಿಮ್ಮ ಆಧಾರ್ ಯುಎಎನ್‌ಗೆ ಸಂಪರ್ಕ ಹೊಂದಿದ್ದರೆ, ನೀವು ಆನ್‌ಲೈನ್‌ನಲ್ಲಿಯೇ ಪಿಎಫ್ ಕ್ಲೈಮ್ ಮಾಡಬೇಕು. ಕ್ಷೇತ್ರ ಕಚೇರಿಯಲ್ಲಿ ಆಫ್‌ಲೈನ್ ಅರ್ಜಿಗಳು ಹೆಚ್ಚುತ್ತಿರುವ ಹಿನ್ನೆಲೆ ಇಪಿಎಫ್‌ಒ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಾದೇಶಿಕ ಆಯುಕ್ತ ಎನ್.ಕೆ.ಸಿಂಗ್ ಹೇಳುತ್ತಾರೆ.

ಏಕೆ ಈ ನಿರ್ಧಾರ..?
ಎನ್.ಕೆ.ಸಿಂಗ್ ಹೇಳುವಂತೆ, ಈ ವಿಷಯದಲ್ಲಿ ಇಪಿಎಫ್‌ಒ ಸುತ್ತೋಲೆ ಹೊರಡಿಸಿದೆ. ಅನೇಕ ಸಂಸ್ಥೆಗಳು ತಮ್ಮ ಸದಸ್ಯರ ಬಲ್ಕ್ ಕ್ಲೈಮ್ ಮಾಡುತ್ತಿವೆ. ಆ ಸದಸ್ಯರು ಆಧಾರ್‌ನಿಂದ ಯುಎಎನ್‌ಗೆ ಸಂಪರ್ಕ ಹೊಂದಿದ್ದರು ಸಹ ಆಫ್‌ಲೈನ್ ಕ್ಲೈಮ್ ಮಾಡಲಾಗುತ್ತಿದೆ. ಇಂತಹ ಪ್ರಕರಣಗಳು ಕ್ಲೈಮ್ ಇತ್ಯರ್ಥದಲ್ಲಿ ವಿಳಂಬ ಧೋರಣೆ ಜತೆಗೆ ಕ್ಷೇತ್ರ ಕಚೇರಿಗೆ ಹೊರೆಯಾಗುತ್ತಿರುವುದರಿಂದ ಆಫ್‌ಲೈನ್ ಕ್ಲೈಮ್ ಅರ್ಜಿಯನ್ನು ಸ್ವೀಕರಿಸದಂತೆ ಸುತ್ತೋಲೆ ನಿರ್ದೇಶಿಸಿದೆ. ಆನ್‌ಲೈನ್ ಕ್ಲೈಮ್ ಸೇವಾ ವೇದಿಕೆಯನ್ನು ಬಳಸಲು ಕಂಪನಿಗಳಿಗೆ ಸೂಚಿಸಲಾಗಿದೆ.

ಆನ್‌ಲೈನ್ ಅರ್ಜಿ ಮಾತ್ರ ಇತ್ಯರ್ಥ
ಇಪಿಎಫ್‌ಒ ಸುತ್ತೋಲೆ ಪ್ರಕಾರ, ಒಬ್ಬ ಸದಸ್ಯ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಿಎಫ್ ಕ್ಲೈಮ್‌ಗೆ ಅರ್ಜಿ ಸಲ್ಲಿಸಿದರೆ, ಕೇವಲ ಆನ್‌ಲೈನ್ ಕ್ಲೈಮ್‌ನ್ನು ಮಾತ್ರ ಸಂಸ್ಥೆ ಇತ್ಯರ್ಥಪಡಿಸುತ್ತದೆ.
ಆನ್‌ಲೈನ್‌ನಲ್ಲಿ ಕ್ಲೈಮ್ ಹೇಗೆ..?
ಆನ್‌ಲೈನ್‌ನಲ್ಲಿ ಪಿಎಫ್ ಮೊತ್ತ ಹಿಂಪಡೆಯುವುದು ಹೇಗೆ ಅಂತಿರಾ..? ಭವಿಷ್ಯ ನಿಧಿ ಇತ್ಯರ್ಥಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
1. ಆನ್‌ಲೈನ್‌ನಲ್ಲಿ ಪಿಎಫ್ ಮೊತ್ತ ಹಿಂಪಡೆಯಲು ನೀವು ಇಪಿಎಫ್‌ಒ ವೆಬ್‌ಸೈಟ್ www.epfindia.com/site_en/ ಗೆ ಭೇಟಿ ನೀಡಿ.
2. ಹೋಮ್‌ಪೇಜ್‌ನಲ್ಲಿ ಆನ್‌ಲೈನ್ ಕ್ಲೈಮ್ ಆಯ್ಕೆಯನ್ನು ನೀವು ಕಾಣಬಹುದು.
3. ಆನ್‌ಲೈನ್ ಕ್ಲೈಮ್ ಆಯ್ಕೆಯನ್ನು ಕ್ಲಿಕ್ ಮಾಡಿ https: //unifiedportal-mem.epfindia.gov.in/memberinterface/ ಈ ಲಿಂಕ್ ತೆರೆದುಕೊಳ್ಳುತ್ತದೆ.
4. ಯುಎಎನ್ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಬೇಕು.
5. ನಂತರ, ಕ್ಲೈಮ್ ಸೆಟಲ್ಮೆಂಟ್ ಆಯ್ಕೆಯನ್ನು ನೀವು ಕಾಣಬಹುದು
6. ನೀವು ಪಿಎಫ್ ಹಿಂಪಡೆಯುವ ಅರ್ಜಿಯನ್ನು ಕಂಪನಿಗೆ ಸಲ್ಲಿಸುವ ಅಗತ್ಯವಿಲ್ಲ.
7. ಕ್ಷೇತ್ರ ಅಧಿಕಾರಿ ನಿಮ್ಮ ಆನ್‌ಲೈನ್ ಕ್ಲೈಮ್‌ನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತಾರೆ. ಇದಕ್ಕೆ ಏಕೀಕೃತ ಪೋರ್ಟಾಲ್‌ನಲ್ಲಿ ನಿಮ್ಮ ಕೆವೈಸಿ ಅಪ್‌ಡೇಟ್ ಆಗಿರಬೇಕು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470