ಜಿಮೇಲ್ ಬಳಕೆದಾರರಿಗೆ ಸಿಹಿಸುದ್ದಿ: ಇನ್ಮುಂದೆ ಈ ಸಮಸ್ಯೆ ಇರಲ್ಲ!
ತಂತ್ರಜ್ಞಾನ ದೈತ್ಯ ಕಂಪೆನಿ ಗೂಗಲ್ ತನ್ನ ಜನಪ್ರಿಯ ಅಪ್ಲಿಕೇಶನ್ ಜಿಮೇಲ್ ನಲ್ಲಿ SMS ಆಧಾರಿತ ಆರು-ಅಂಕಿಯ ದೃಢೀಕರಣ ಕೋಡ್ ವ್ಯವಸ್ಥೆಯನ್ನು ಹಂತ ಹಂತವಾಗಿ ತೆಗೆದುಹಾಕುತ್ತಿದೆ ಎಂದು ವರದಿಯಾಗಿದೆ. ಹೌದು, ಜಿಮೇಲ್ ಬಳಕೆದಾರರು SMS ಆಧಾರಿತ ದೃಢೀಕರಣವು ಫಿಷಿಂಗ್ ವಂಚನೆಗಳಿಗೆ ಗುರಿಯಾಗುವ ಸಾಧ್ಯತೆ ಇದೆ ಮತ್ತು ಸಂದೇಶಗಳ ಮೇಲೆ ಸೇವಾದಾತರ ಅವಲಂಬನೆಯು ಇತರೆ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ, SMS ಆಧಾರಿತ ಆರು-ಅಂಕಿಯ ದೃಢೀಕರಣ ಕೋಡ್‌ಗಳನ್ನು ತೆಗೆದುಹಾಕಲಾಗುತ್ತದೆ ಎಂದು ತಿಳಿದಬಂದಿದೆ. ಇದರ ಬದಲಿಗೆ, ಹೆಚ್ಚು ಸುರಕ್ಷಿತವಾಗಿರುವ ಮತ್ತೊಂದು 2 ಫ್ಯಾಕ್ಟರ್ ಆಥೆಂಟಿಕೇಶನ್ (2FA) ವಿಧಾನವನ್ನು ಬಳಸಲು ಅನುವು ಮಾಡಿಕೊಡಲಾಗುತ್ತಿದೆ.
ಜಿಮೇಲ್ ವಕ್ತಾರ ರಾಸ್ ರಿಚೆಂಡರ್ಫರ್ ಅವರು, ಮುಂದಿನ ಕೆಲವು ತಿಂಗಳಲ್ಲಿ ಜಿಮೇಲ್ ನಲ್ಲಿ ಫೋನ್ ಸಂಖ್ಯೆಗಳ ಪರಿಶೀಲನೆಯ ವಿಧಾನವನ್ನು ಪುನರ್‌ಕಲ್ಪನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಸ್ತುತದ SMS ಆಧಾರಿತ ದೃಢೀಕರಣವು ಫಿಷಿಂಗ್ ವಂಚನೆಗಳಿಗೆ ಗುರಿಯಾಗುವ ಸಾಧ್ಯತೆ ಇದೆ. ಹಾಗೂ, SMS ಸಂದೇಶಗಳ ಮೇಲೆ ಅವಲಂಬನೆಯು ಮೊಬೈಲ್ ಸೇವೆ ಒದಗಿಸುವವರ ಮಧ್ಯೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನು ಗಮನಿಸಿ, ನಿಮ್ಮ ಸಂಖ್ಯೆಯನ್ನು ನಮೂದಿಸುವ ಬದಲು ಅಥವಾ 6 ಅಂಕಿಯ ಕೋಡ್ ಸ್ವೀಕರಿಸುವುದರ ಬದಲು ನೀವು QR ಕೋಡ್ ಅನ್ನು ಪ್ರದರ್ಶಿಸುತ್ತೀರಿ ಎಂದು ಮಾಧ್ಯಮಗಳ ಮೂಲಕ ಹೇಳಿದ್ದಾರೆ.

ಅಂದರೆ, ನಿಮ್ಮ ಸಂಖ್ಯೆಯನ್ನು ನಮೂದಿಸುವ ಬದಲು ಅಥವಾ 6 ಅಂಕಿಯ ಕೋಡ್ ಸ್ವೀಕರಿಸುವುದರ ಬದಲು ನೀವು ಕೇವಲ QR ಕೋಡ್ ಅನ್ನು ಪ್ರದರ್ಶಿಸುತ್ತೀರಿ. ಇದನ್ನು ನಿಮ್ಮ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಅಪ್ಲಿಕೇಶನ್ ಮೂಲಕ ಸ್ಕ್ಯಾನ್ ಮಾಡಬೇಕಾಗುತ್ತದೆ. ನೀವು ಲಾಗಿನ್ ಆಗುವ ವೇಳೆಯಲ್ಲಿ ಕೇವಲ ನಿಮ್ಮ ಫೋನನ್ನು ಸ್ಕ್ಯಾನ್ ಮಾಡುವುದರ ಮೂಲಕ ನೀವು ಲಾಗಿನ್ ಆಗಬಹುದಾಗಿದೆ.! ಆದರೆ, ಈ ಸಂಪೂರ್ಣ ಕಾರ್ಯವಿಧಾನವು ಹೇಗಿರಲಿದೆ ಎಂಬ ಕುರಿತಂತೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಪ್ರಸ್ತುತ ಪ್ರಪಂಚದಾದ್ಯಂತ ಸುಮಾರು 1.8 ಬಿಲಿಯನ್ ಜಿಮೇಲ್ ಬಳಕೆದಾರರಿಗೆ ಎರಡು-ಹಂತದ ಪರಿಶೀಲನೆ ಕಡ್ಡಾಯವಾಗಿದೆ. ಜಿಮೇಲ್ ಬಳಕೆದಾರರು ತಾವು ಹೇಳಿಕೊಳ್ಳುವ ವ್ಯಕ್ತಿ ಎಂದು ದೃಢೀಕರಿಸಲು SMS ಪಠ್ಯ ಸಂದೇಶಗಳನ್ನು ಬಳಸಲಾಗುತ್ತದೆ. ಪಾಸ್‌ವರ್ಡ್‌ಗಿಂತ ಇದು ಹೆಚ್ಚು ಸುರಕ್ಷಿತವಾಗಿದ್ದರೂ, ಸೈಬರ್ ವಂಚಕರು ಇನ್ನೂ ಈ ಭದ್ರತಾ ವೈಶಿಷ್ಟ್ಯವನ್ನು ಬೈಪಾಸ್ ಮಾಡುವ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ. ಇದರ ಒಂದು ವಿಧಾನವೆಂದರೆ ಫಿಶಿಂಗ್ ದಾಳಿಯ ಮೂಲಕ, ಅಲ್ಲಿ ಸೈಬರ್ ಅಪರಾಧಿಗಳು ಗೂಗಲ್ ಅಥವಾ ಅವರ ಫೋನ್ ಮೂಲಕ ಯಾರೋ ಎಂದು ನಟಿಸುವ ಮೂಲಕ ಭದ್ರತಾ ಕೋಡ್‌ಗಳನ್ನು ಹಂಚಿಕೊಳ್ಳುವಂತೆ ಜನರನ್ನು ಮೋಸಗೊಳಿಸುತ್ತಾರೆ.
"ಸೈಬರ್ ದಾಳಿಕೋರರಿಗೆ ಅವಕಾಶವನ್ನು ಕುಗ್ಗಿಸಲು ಮತ್ತು ದುರುದ್ದೇಶಪೂರಿತ ಚಟುವಟಿಕೆಯಿಂದ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ನವೀನ ಹೊಸ ವಿಧಾನವನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ". ಜಾಗತಿಕ SMS ದುರುಪಯೋಗದ ಪರಿಣಾಮವನ್ನು ಕಡಿಮೆ ಮಾಡುವ ಗುರಿಯನ್ನು ಈ ಬದಲಾವಣೆಯು ಹೊಂದಿದೆ ಎಂದು ಗೂಗಲ್‌ನಲ್ಲಿ ಭದ್ರತೆ ಮತ್ತು ಗೌಪ್ಯತೆ ಸಮಸ್ಯೆಗಳ ಕುರಿತು ಕೆಲಸ ಮಾಡುವ ರಾಸ್ ರಿಚೆಂಡ್‌ಫರ್ ಅವರು ಫೋರ್ಬ್ಸ್‌ಗೆ ತಿಳಿಸಿದ್ದಾರೆ.


Click it and Unblock the Notifications








