TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸ್ಮಾರ್ಟ್‌ಫೋನ್ ಬಳಸುವವರಲ್ಲಿ ಇಂದು ಹೆಚ್ಚು ತಲೆನೋವಾಗಿರುವ ಸಂಗತಿ ಎಂದರೆ ಅದರ ಬ್ಯಾಟರಿಗಳಾಗಿವೆ. ಹೆಚ್ಚು ಬಿಸಿಯಾಗುವುದು, ಕಡಿಮೆ ಚಾರ್ಜ್ ಹಿಡಿದಿಟ್ಟುಕೊಳ್ಳುವಿಕೆ ಹೀಗೆ ಹಲವಾರು ಬಗೆಯಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಬಳಕೆದಾರರಿಗೆ ತಲೆನೋವನ್ನು ಉಂಟುಮಾಡುತ್ತಿದೆ. ಹಾಗಿದ್ದರೆ ಈ ಸಮಸ್ಯೆಗಳಿಗೆ 100 ಶೇಕಡಾ ಪರಿಹಾರವನ್ನು ಕಂಡುಕೊಳ್ಳಲು ಆಗದೇ ಹೋದರೂ ಇನ್ನಷ್ಟು ತೀವ್ರಗತಿಯ ಸಮಸ್ಯೆಗಳನ್ನು ನೀವು ಅನುಭವಿಸದೇ ಇರಲು ಸಹಕಾರಿಯಾಗಿರುವ ಕೆಲವೊಂದು ಅಂಶಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಬ್ಯಾಟರಿ ಟಿಪ್ಸ್‌ಗಳಾಗಿರುವ ಈ ಮಾಹಿತಿಗಳು ನೀವು ಮಾಡುತ್ತಿರುವ ಎಷ್ಟೋ ತಪ್ಪುಗಳನ್ನು ತಿದ್ದಿಕೊಳ್ಳಲು ನಿಮಗೆ ಸಹಕಾರಿಯಾಗಲಿದೆ.
ಅಧಿಸೂಚನೆಗಳನ್ನು ಆಫ್ ಮಾಡಿ
ನಿಮ್ಮ ಫೋನ್‌ನ ಅಪ್ಲಿಕೇಶನ್‌ಗಳಿಂದ ಬರುವ ಅಧಿಸೂಚನೆಗಳು ಫೋನ್‌ನ ಬ್ಯಾಟರಿ ಶಕ್ತಿಯನ್ನು ಇಳಿಮುಖಗೊಳಿಸುತ್ತದೆ. ಅವುಗಳನ್ನು ಆಫ್ ಮಾಡುವುದು ಬ್ಯಾಟರಿ ಉಳಿಸಲು ನೆರವನ್ನು ನೀಡುತ್ತದೆ.
ವೈಬ್ರೇಟ್ ಆಫ್ ಮಾಡಿ
ನಿಮ್ಮ ಫೋನ್‌ನ ವೈಬ್ರೇಟ್ ಮೋಡ್ ಹೆಚ್ಚಿನ ಬ್ಯಾಟರಿ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದನ್ನು ಆಫ್ ಮಾಡಿ ನೋಡೊ ವ್ಯತ್ಯಾಸ ತಿಳಿದುಕೊಳ್ಳಬಹುದು.
ಬ್ಲ್ಯೂಟೂತ್ ಆಫ್ ಮಾಡುವುದು
ನಿಮಗೆ ಅಗತ್ಯವಿದೆ ಎಂದ ಸಂದರ್ಭದಲ್ಲಿ ಮಾತ್ರವೇ ಫೋನ್ ಬ್ಲ್ಯೂಟೂತ್ ಬಳಕೆಯನ್ನು ಮಾಡಿ.
ಸರಳ ಹಿನ್ನಲೆ
ವಾಲ್‌ಪೇಪರ್‌ಗಳು ಕೂಡ ಫೋನ್ ಬ್ಯಾಟರಿಯನ್ನು ಖರ್ಚು ಮಾಡುತ್ತವೆ ಎಂಬುದನ್ನು ಮರೆಯಬೇಡಿ. ಆದಷ್ಟು ಸರಳವಾಗಿರುವ ವಾಲ್‌ಪೇಪರ್‌ಗಳನ್ನು ಆಯ್ಕೆಮಾಡಿ
ಫೀಡ್‌ಬ್ಯಾಕ್ ಆಫ್ ಮಾಡುವುದು
ಹ್ಯಾಪ್ಟಿಕ್ ಫೀಡ್‌ಬ್ಯಾಕ್ ನಾಯ್ಸ್ ಮತ್ತು ವೈಬ್ರೇಶನ್ ನೀವು ಬಟನ್ ಪ್ರೆಸ್ ಮಾಡಿದಾಗ ಉಂಟಾಗುತ್ತವೆ ಆದಷ್ಟು ಇದನ್ನು ನಿವಾರಿಸಲು ಪ್ರಯತ್ನಿಸಿ.
ಬ್ರೈಟ್‌ನೆಸ್ ಕಡಿಮೆ ಮಾಡುವುದು
ಫೋನ್‌ನ ಬ್ರೈಟ್‌ನೆಸ್ ಕಡಿಮೆ ಮಾಡುವುದೂ ಕೂಡ ಬ್ಯಾಟರಿ ಉಳಿಸುವ ತಂತ್ರಗಾರಿಕೆಯಾಗಿದೆ.
ಹೀಟ್ ಅವಾಯ್ಡ್ ಮಾಡಿ
ಬಿಸಿಲಿಗೆ ಫೋನ್ ಅನ್ನು ಅತಿಯಾಗಿ ಒಡ್ಡುವುದು ಕೂಡ ಬ್ಯಾಟರಿ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.
ವೈರ್‌ಲೆಸ್ ಚಾರ್ಜರ್
ನೀವು ಪ್ರಯಾಣದಲ್ಲಿರುವ ಸಂದರ್ಭದಲ್ಲಿ ತ್ವರಿತ ಚಾರ್ಜರ್ ಬೇಕು ಎಂದಾದಲ್ಲಿ, ವೈರ್‌ಲೆಸ್ ಫೋನ್ ಚಾರ್ಜರ್ ನಿಮಗೆ ನೆರವನ್ನು ನೀಡುತ್ತದೆ.
ವೈಫೈ ನಿಷ್ಕ್ರಿಯಗೊಳಿಸಿ
ಡೇಟಾ ಬಳಕೆಯನ್ನು ಕಡಿಮೆ ಮಾಡುವಲ್ಲಿ ವೈಫೈ ನೆರವುಕಾರಿ. ಆದರೆ ಅದನ್ನು ಯಾವಾಗಲೂ ಆನ್‌ನಲ್ಲಿಟ್ಟುಕೊಳ್ಳುವುದು ಬ್ಯಾಟರಿಯನ್ನು ಕ್ಷಯಿಸುತ್ತದೆ. ಆದ್ದರಿಂದ ಬಳಕೆಯಲ್ಲಿಲ್ಲದ ಸಂದರ್ಭದಲ್ಲಿ ಅದನ್ನು ಆಫ್ ಮಾಡಿಟ್ಟುಕೊಳ್ಳಿ.
ಪವರ್ ಸೇವಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
ಬ್ಯಾಟರಿ ಉಳಿಸುವ ಅಪ್ಲಿಕೇಶನ್‌ಗಳು ಲಭ್ಯವಿದ್ದು ಅವುಗಳ ಬಳಕೆಯನ್ನು ಮಾಡುವುದೂ ಕೂಡ ಅತ್ಯುತ್ತಮವಾಗಿದೆ.
ಬ್ಯಾಟರಿ ಬೂಸ್ಟರ್ ಪರಿಗಣಿಸಿ
ನಿಮ್ಮ ಫೋನ್ ಬ್ಯಾಟರಿ ತ್ವರಿತವಾಗಿ ಖರ್ಚಾಗುತ್ತಿದೆ ಎಂದಾದಲ್ಲಿ, ಬ್ಯಾಟರಿ ಬೂಸ್ಟರ್ ಅನ್ನು ಖರೀದಿಸಿ. ಇದು ನಿಮ್ಮ ಫೋನ್‌ಗೆ ಹೆಚ್ಚುವರಿ ಚಾರ್ಜ್ ಅನ್ನು ನೀಡುತ್ತದೆ.
ಜಿಪಿಎಸ್ ಆಫ್ ಮಾಡಿ
ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಜಿಪಿಎಸ್ ಉತ್ತಮ ಅಪ್ಲಿಕೇಶನ್ ಆಗಿದೆ. ಇದನ್ನು ಆಫ್ ಮಾಡಿ ಇದೂ ಕೂಡ ಬ್ಯಾಟರಿಯನ್ನು ಖಾಲಿ ಮಾಡಿಬಿಡುತ್ತದೆ.
ಏರ್‌ಪ್ಲೇನ್ ಮೋಡ್ ಬಳಕೆ
ಸೆಲ್ ರೇಂಜ್ ಇರದ ಸಂದರ್ಭದಲ್ಲಿ, ನೀವು ಡ್ರೈವಿಂಗ್ ಮಾಡುತ್ತಿರುವಾಗ ಏರ್‌ಪ್ಲೇನ್ ಮೋಡ್ ಅನ್ನು ಸಕ್ರಿಯಗೊಳಿಸಿ.
ಫೋನ್ ಆಫ್ ಮಾಡಿ
ಫೋನ್ ಆಫ್ ಮಾಡಿ ಬೇರೆ ಚಟುವಟಿಕೆಗಳನ್ನು ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಉದಾಹರಣೆಗೆ ಪುಸ್ತಕ ಓದುವುದು ಇತ್ಯಾದಿ
ಗಿಜ್‌ಬಾಟ್ ಲೇಖನಗಳು
ಫೇಸ್ಬುಕ್ನಲ್ಲಿ ಚೆಸ್ ಗೇಮ್ ಆಡುವುದು ಹೇಗೆ?
ಸ್ಮಾರ್ಟ್ಫೋನ್ನಿಂದ ವೈರಸ್ ನಿವಾರಣೆ ಹೇಗೆ?
ಫೆಬ್ರವರಿ ತಿಂಗಳ ಫೋನ್ ಖರೀದಿ ನಿಮಗಾಗಿ ಮಾತ್ರ
ನೀವು ಸಾಯುವ ದಿನ ತಿಳಿಸುವ 'ಆನ್ಲೈನ್ ಕ್ಯಾಲ್ಕುಲೇಟರ್'