ಜಾಹೀರಾತು ನೋಡಿ ರೂ.87 ಲಕ್ಷದ ಶಿಯೋಮಿ ಫೋನ್ ಕದ್ದ ಖತರ್ನಾಕ್ ಕಳ್ಳ..!

|

ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಶಿಯೋಮಿ ಸ್ಮಾರ್ಟ್‌ಫೋನ್‌ಗೆ ಕಳ್ಳರ ಕಾಟ ಶುರುವಾಗಿದೆ. ಹೆಚ್ಚಿನ ಬೇಡಿಕೆಯಲ್ಲಿರುವ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಗುರುಗ್ರಾಮದ ವೇರ್ ಹೌಸ್‌ನಲ್ಲಿ ಇಟ್ಟಿದ ರೂ.87 ಲಕ್ಷ ಮೌಲ್ಯದ 4200 ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಕದ್ದ ಕಳ್ಳನೋರ್ವ ನಂತರ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಜಾಹೀರಾತು ನೋಡಿ ರೂ.87 ಲಕ್ಷದ ಶಿಯೋಮಿ ಫೋನ್ ಕದ್ದ ಖತರ್ನಾಕ್ ಕಳ್ಳ..!

ಮಾರುಕಟ್ಟೆಯಲ್ಲಿ ಸದ್ಯ ಶಿಯೋಮಿ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಗಮಸಿರುವ ಬಿಹಾರ ಮೂಲದ ರಮೇಶ್ ಎನ್ನುವ ವ್ಯಕ್ತಿ, ಗುರುಗ್ರಾಮದಲ್ಲಿರುವ ಶಿಯೋಮಿ ವೇರ್ ಹೌಸ್‌ ನಿಂದ 4200 ಶಿಯೋಮಿ ಫೋನ್‌ಗಳನ್ನು ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಅದನ್ನು ಸಾಗಿಸುವ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾನೆ.

ಶಿಯೋಮಿ ಆಡ್

ಶಿಯೋಮಿ ಆಡ್

ಶಿಯೋಮಿ ಹೊಸದಾಗಿ ಲಾಂಚ್ ಮಾಡಿದ ಪೊಕೊ ಫೋನ್ ಜಾಹೀರಾತಿನಲ್ಲಿ ಕಳ್ಳರುವ ಗೋಡೌನ್ ವೊಂದರಲ್ಲಿ ವಸ್ತುಗಳನ್ನು ಕದಿಯುತ್ತಿರುವ ಮಾದರಿಯಲ್ಲಿ ಪ್ರದರ್ಶಿಸಲಾಗಿತ್ತು. ಅದನ್ನು ನೋಡಿ ಶಿಯೋಮಿ ಗೋಡೌನ್‌ನಲ್ಲಿಯೇ ಸ್ಮಾರ್ಟ್ಪೋನ್ ಗಳನ್ನು ಕದಿದ್ದಾನೆ ಎನ್ನಲಾಗಿದೆ.

87 ಲಕ್ಷದ ಫೋನ್‌ಗಳು:

87 ಲಕ್ಷದ ಫೋನ್‌ಗಳು:

ಒಟ್ಟು 4200 ಸ್ಮಾರ್ಟ್‌ಫೋನ್‌ಗಳನ್ನು ಕಳ್ಳತನ ಮಾಡಲಾಗಿತ್ತು. ಇದರಲ್ಲಿ ರೂ.5999ದಿಂದ ಹಿಡಿದು ರೂ.32999 ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದಾಗಿದ್ದು, ಇವುಗಳ ಮೌಲ್ಯ ರೂ.87 ಲಕ್ಷ ಎಂದು ಅಂದಾಜಿಸಲಾಗಿದೆ. ಸದ್ಯ ಸೆರೆ ಸಿಕ್ಕಿರುವ ಕಳ್ಳನ ವಿಚಾರಣೆ ನಡೆಯುತ್ತಿದೆ.

ಹೊಸ ಗೋಡೌನ್:

ಹೊಸ ಗೋಡೌನ್:

ಮೇ ತಿಂಗಳಿನಲ್ಲಿ ಗುರುಗ್ರಾಮದಲ್ಲಿ ಶಿಯೋಮಿ ಹೊಸದಾಗಿ ಗೋಡೌನ್ ಅನ್ನು ನಿರ್ಮಿಸಿತ್ತು ಎನ್ನಲಾಗಿದೆ. ಈಗಾಗಲೇ ಭಾರತದಲ್ಲಿ ಸುಮಾರು ಆರು ಕಡೆಗಳಲ್ಲಿ ತನ್ನ ನಿರ್ಮಾಣ ಮತ್ತು ದಾಸ್ತಾನು ಜಾಲವನ್ನು ಶಿಯೋಮಿ ಹೊಂದಿದೆ ಎನ್ನಲಾಗಿದೆ. ಬೇಡಿಕೆಯೂ ಹೆಚ್ಚಾಗಿರುವ ಕಾರಣ ಸ್ಮಾರ್ಟ್‌ಫೋನ್‌ಗಳನ್ನು ಸ್ಟಾಕ್ ಮಾಡಲು ಗೋಡೌನ್ ನಿರ್ಮಿಸುತ್ತಿದೆ.

Best Mobiles in India

English summary
Man arrested for stealing 4,200 Xiaomi phones worth over Rs. 87 lakhs from Delhi

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X