ನೀವು ಕೂಡ ಮೊಬೈಲ್ ಪಕ್ಕದಲ್ಲಿಯೇ ಇಟ್ಟು ಮಲಗುತ್ತೀರಾ?..ಈ ಶಾಕಿಂಗ್ ನ್ಯೂಸ್ ಕೇಳಿ!

|

ರಾತ್ರಿ ವೇಳೆ ಪಕ್ಕದಲ್ಲೇ ಮೊಬೈಲ್ ಇಟ್ಟುಕೊಂಡು ಮಲಗುವವರು ಈ ಸುದ್ದಿಯನ್ನು ಕೇಳಿ ಹೌಹಾರಬಹುದು. ಏಕೆಂದರೆ, ರಾತ್ರಿ ಮಲಗುವಾಗ ಎದೆಯ ಮೇಲೆ ಮೊಬೈಲ್ ಇಟ್ಟುಕೊಂಡು ಮಲಗಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಆ ವ್ಯಕ್ತಿ ತನ್ನ ಎದೆಯ ಮೇಲೆ ಮೊಬೈಲ್ ಫೋನ್ ಇಟ್ಟುಕೊಂಡು ಮಲಗಿದ್ದಾಗ ಅದು ಬ್ಲಾಸ್ಟ್ ಆಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹೌದು, ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಇಂತಹ ಒಂದು ಆತಂಕಕಾರಿ ಘಟನೆ ನಡೆದಿದ್ದು, ಶನಿವಾರ ರಾತ್ರಿ ಆ ವ್ಯಕ್ತಿ ತನ್ನ ಎದೆಯ ಮೇಲೆ ಫೋನ್ ಇಟ್ಟುಕೊಂಡು ಮಲಗಿದ್ದಾಗ ಇದ್ದಕ್ಕಿದ್ದಂತೆ ಒಂದು ಸ್ಫೋಟ ಸಂಭವಿಸಿದೆ. ಮಲಗುವ ವೇಳೆ ಅಲಾರಂ ಇಟ್ಟು ಅವರು ತಮ್ಮ ಫೋನ್ ಅನ್ನು ಪಕ್ಕದಲ್ಲೇ ಇಟ್ಟುಕೊಳ್ಳುತ್ತಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ನೀವು ಕೂಡ ಮೊಬೈಲ್ ಪಕ್ಕದಲ್ಲಿಯೇ ಇಟ್ಟು ಮಲಗುತ್ತೀರಾ?..ಈ ಶಾಕಿಂಗ್ ನ್ಯೂಸ್ ಕೇಳಿ!

ಶನಿವಾರ ರಾತ್ರಿ ಎಂದಿನಂತೆ ಅವರು ಎದೆಯ ಮೇಲೆ ಫೋನ್ ಇಟ್ಟುಕೊಂಡು ಮಲಗಿದ್ದರು. ಬೆಳಿಗ್ಗೆ ಇದ್ದಕ್ಕಿದ್ದಂತೆ ಸ್ಫೋಟವೊಂದು ಕೇಳಿ ಬಂದಿತು. ಅದೇನು ಎಂದು ನಾವು ನೋಡಲು ಬಂದಾಗ ಅವರ ಎದೆಯ ಮೇಲೆ ಸ್ಫೋಟದ ದೃಶ್ಯ ಕಂಡು ಬಂದಿತ್ತು. ಸುತ್ತಮುತ್ತಲೂ ಮೊಬೈಲ್ ಚಿದ್ರವಾಗಿ ಬಿದ್ದಿತ್ತು. ಅವರು ಮರಣ ಹೊಂದಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಇನ್ನು ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ವಯೋವೃದ್ಧನೆಂದು ತಿಳಿದುಬಂದಿದ್ದು, ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿ ಪರೀಶಿಲನೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೂ ಕೂಡ ಉದಾಹರಣೆ ಸೇರಿದಂತೆ ಯಾವುದೇ ಕಾರಣಕ್ಕೂ ಮಲಗುವ ವೇಳೆ ಮೊಬೈಲ್ ಅನ್ನು ಪಕ್ಕದಲ್ಲಿ ಏಕೆ ಇಟ್ಟುಕೊಳ್ಳಬಾರದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹಾಸಿಗೆಯಲ್ಲಿ ಮೊಬೈಲ್ ಬೇಡ!

ಹಾಸಿಗೆಯಲ್ಲಿ ಮೊಬೈಲ್ ಬೇಡ!

ಹೆಚ್ಚಿನವ್ರು ತಾವು ಮಲಗುವಾಗ ಮೊಬೈಲ್ ಅನ್ನು ತಮ್ಮ ತಲೆಯ ಬಳಿಯೇ ಇಲ್ಲವೇ ದಿಂಬಿನ ಪಕ್ಕದಲ್ಲಿ ಅಥವಾ ಅಲ್ಲೇ ಆಚೆ ಈಚೆ ಇಟ್ಟುಕೊಂಡು ಮಲಗ್ತಾರೆ. ಹೀಗೆ ಮಾಡುವ ಪರಿಪಾಠ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತೆ ಅನ್ನೋದು ಸಂಶೋಧನೆಯಿಂದ ಬಹಿರಂಗ ಗೊಂಡಿದೆ. ಹಾಗಾದ್ರೆ ಏನೆಲ್ಲ ಪರಿಣಾಮಗಳಾಗುತ್ತೆ ಅನ್ನೋದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಮೊಬೈಲ್ ಬ್ಲಾಸ್ಟ್ ಆಗುತ್ತೆ!

ಮೊಬೈಲ್ ಬ್ಲಾಸ್ಟ್ ಆಗುತ್ತೆ!

ಮೊಬೈಲ್ ಅನ್ನು ತಮ್ಮ ತಲೆಯ ಬಳಿಯೇ ಇಲ್ಲವೇ ದಿಂಬಿನ ಪಕ್ಕದಲ್ಲಿ ಅಥವಾ ಅಲ್ಲೇ ಆಚೆ ಈಚೆ ಇಟ್ಟುಕೊಂಡು ಮಲಗುವ ಅಭ್ಯಾಸವಿದ್ದರೆ ಬಿಟ್ಟುಬಿಡಿ. ಏಕೆಂದರೆ, ದಿಂಬಿನ ಅಡಿಯಲ್ಲಿ ಅಥವಾ ಹಾಸಿಗೆ ಮೇಲೆ ಇದ್ದಾಗ ನಿಮ್ಮ ಮೊಬೈಲ್ ಹೆಚ್ಚು ಬಿಸಿಯಾಗಿ ಬ್ಲಾಸ್ ಆಗಬಹುದು. ಹಾಸಿಗೆ ಮೇಲಿಟ್ಟು ಮೊಬೈಲ್ ಚಾರ್ಜ್ ಮಾಡುವುದು ಹೆಚ್ಚು ಅಪಾಯಕಾರಿ ಮತ್ತು ಹೆಚ್ಚು ಮೊಬೈಲ್ ಬಳಕೆ ಮಾಡಿದ ನಂತರ ಹಾಸಿಗೆ ಮೇಲೆ ಮೊಬೈಲ್ ಇಟ್ಟರೂ ಕೂಡ ಬ್ಲಾಸ್ ಆಗುವ ಸಂಭವ ಹೆಚ್ಚಿರುತ್ತೆ.

ನಿಮ್ಮ ನಿದ್ದೆ ಹಾಳಾಗುತ್ತೆ..

ನಿಮ್ಮ ನಿದ್ದೆ ಹಾಳಾಗುತ್ತೆ..

ಮೊಬೈಲ್‌ನಲ್ಲಿ ಅದೂ ಇದೂ ಅಂತ ನೋಡ್ತಾನೇ ಇರೋದ್ರಿಂದ ಮೊದಲನೆಯದಾಗಿ ಅಗತ್ಯಕ್ಕಿಂತ ಕಡಿಮೆ ನಿದ್ದೆ ಮಾಡುವಂತಾಗುತ್ತೆ. ಫಿಲ್ಮ್ ನೋಡೋದು, ಚಾಟ್ ಮಾಡೋದು ಮಾಡ್ತಲೇ ಇರೋದ್ರಿಂದ ನಿದ್ದೆ ಹಾಳಾಗುತ್ತೆ. ನಿದ್ದೆ ಹಾಳಾದ್ರೆ ಎಲ್ಲವೂ ಹಾಳಾದಂತೆ..ನಿದ್ದೆ ಕಡಿಮೆಯಾದ್ರೆ ಹತ್ತು ಹಲವು ಆರೋಗ್ಯ ಸಮಸ್ಯೆಗಳು ತನ್ನಿಂದ ತಾನೆ ವಕ್ಕರಿಸಿಕೊಂಡು ಬಿಡುತ್ತೆ. ತಲೆನೋವು, ಡಾರ್ಕ್ ಸರ್ಕಲ್, ಟೆಕ್ಷನ್, ಇತ್ಯಾದಿಗಳು ಬಳುವಳಿಯಾಗಿ ಸಿಗುತ್ತೆ.

ಮೊಬೈಲ್ ವಿಕಿರಣಗಳ ಪ್ರಭಾವ

ಮೊಬೈಲ್ ವಿಕಿರಣಗಳ ಪ್ರಭಾವ

ನಿಮ್ಗೆ ಗೊತ್ತಿಲ್ಲದೆ ನಿಮ್ಮ ಮೇಲೆ ಹಾಸಿಗೆ ಹತ್ತಿರದಲ್ಲೇ ಇರುವ ಮೊಬೈಲ್ ಎಫೆಕ್ಟ್ ಮಾಡುತ್ತೆ. ಮೊಬೈಲ್‌ ಸಿಗ್ನಲ್‌ಗಾಗಿ ಇರುವ ವಿಕಿರಣ ನಿಮ್ಮ ದೇಹಕ್ಕೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತೆ. ಕಾಲಕ್ರಮೇಣ ಗೊತ್ತಾಗುವ ವಿಚಾರವೇ ಹೊರತು, ಇದ್ರ ಎಫೆಕ್ಟ್ ಒಮ್ಮೆಲೆ ತಿಳಿದುಬರುವುದಿಲ್ಲ.

ಸಂಬಂಧ ಹಾಳು ಮಾಡುತ್ತೆ

ಸಂಬಂಧ ಹಾಳು ಮಾಡುತ್ತೆ

ಮೊಬೈಲ್ ಹಾಸಿಗೆ ಹತ್ತಿರದಲ್ಲೇ ಇರೋದ್ರಿಂದ ಹೆಚ್ಚಿನವ್ರು ಸಂಬಂಧಗಳ ಬಗ್ಗೆ ಪ್ರೀತಿ ಕಳೆದುಕೊಂಡಿದ್ದಾರೆ ಅನ್ನೋದು ಸಮೀಕ್ಷೆಗಳಿಂದ ತಿಳಿದುಬಂದಿದೆ. ನಿಮೊಬೈಲ್ ನಲ್ಲಿ ಆಗಾಗ ಬರುವ ಮೇಸೇಜ್ ಗಳು,ಫೋನ್ ಕಾಲ್ ಗಳು ಆ ನಿಶ್ಯಬ್ಧತೆಯನ್ನು ಹಾಳು ಮಾಡಿ ನಿಮ್ಮ ಸಂಬಂಧಗಳ ಆಸಕ್ತಿಯನ್ನು ಕುಂದಿಸುತ್ತೆ. ಕೆಲವರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದುಕೊಂಡಿರ್ತಾರೆ.

ಕಣ್ಣಿಗೆ ಕೆಟ್ಟ ಪರಿಣಾಮ ಉಂಟುಮಾಡುತ್ತೆ

ಕಣ್ಣಿಗೆ ಕೆಟ್ಟ ಪರಿಣಾಮ ಉಂಟುಮಾಡುತ್ತೆ

ಮಲಗುವಾಗ ಲೈಟ್ ಆಫ್ ಮಾಡಿ ಮೊಬೈಲ್ ನೋಡೋದು ಅಭ್ಯಾಸ. ಅಂದ್ರೆ ಕತ್ತಲೆ ಕೋಣೆಯಲ್ಲಿ ಮೊಬೈಲ್ ಬೆಳಕು ಮಾತ್ರ ನಿಮ್ಮ ಕಣ್ಣಿಗೆ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತೆ. ಕತ್ತಲೆಯಲ್ಲಿ ಮಲಗೋದ್ರಿಂದ ನಮ್ಮ ದೇಹದಲ್ಲಿ ಹಲವು ಹಾರ್ಮೋನುಗಳು ಬಿಡುಗಡೆಗೊಳ್ಳುತ್ತೆ ಮತ್ತು ಆರೋಗ್ಯವಾಗಿರಲು ಈ ಹಾರ್ಮೋನುಗಳು ಸಹಾಯಕವಾಗಲಿದೆ. ಅದ್ರಲ್ಲೂ ಬ್ರೈಟ್‌ನೆಸ್ ಅಧಿಕವಾಗಿಟ್ಟುಕೊಂಡು ಮೊಬೈಲ್ ನೋಡುವವರಿಗೆ ಹಲವು ದೃಷ್ಟಿ ದೋಷ ಉಂಟಾಗೋದು ಗ್ಯಾರೆಂಟಿ..

ಕುತ್ತಿಗೆ ನೋವು, ಕೈನೋವು

ಕುತ್ತಿಗೆ ನೋವು, ಕೈನೋವು

ಹಾಸಿಗೆಯಲ್ಲಿ ಮೊಬೈಲ್ ಹಿಡಿದು ಮಲಗುವುದರಿಂದ, ಯಾವ್ಯಾವುದೋ ಭಂಗಿಯಲ್ಲಿ ನೀವು ಮೊಬೈಲ್‌ನಲ್ಲಿ ಕೆಲಸ ಮಾಡುತ್ತೀರಿ. ಹಾಗಾಗಿ ಕ್ರಮೇಣ ಅದು ಕುತ್ತಿಗೆನೋವು ಮತ್ತು ಕೈನೋವಿಗೆ ಕಾರಣವಾಗುತ್ತೆ. ಹಾಗಾಗಿ ಮೊಬೈಲ್ ದೂರ ಇಟ್ಟು ಮಲಗೋದೆ ಸೂಕ್ತ...

ಸೋ ಬಿ ಕೇರ್‌ಫುಲ್

ಸೋ ಬಿ ಕೇರ್‌ಫುಲ್

ಇದಿಷ್ಟೇ ಅನ್ಕೋಬೇಡಿ, ಇನ್ನು ಹಲವು ಸಮಸ್ಯೆಗಳಿಗೆ ನೀವು ಹಾಸಿಗೆ ಬಳಿ ಮೊಬೈಲ್ ಇಡೋದ್ರಿಂದ ಆಗಲಿದೆ. ಒಂದು ವೇಳೆ ಮೊಬೈಲ್ ಸಿಡಿದರಂತೂ ಕೇಳೋದೆ ಬೇಡ, ಜೀವಕ್ಕೇ ಅಪಾಯ. ಸೋ ಬಿ ಕೇರ್‌ಫುಲ್. ಒಂದು ವೇಳೆ ಇಷ್ಟು ದಿನ ನೀವು ಮಲಗುವಾಗ ಮೊಬೈಲ್ ಹತ್ತಿರದಲ್ಲೇ ಇಟ್ಟು ಮಲಗುತ್ತಾ ಇದ್ದಲ್ಲಿ ಇನ್ಮುಂದೆ ಆ ತಪ್ಪನ್ನು ಮುಂದುವರಿಸ್ಬೇಡಿ..

Best Mobiles in India

English summary
A man died due to mobile blast in Uttar pradesh This is not the first time that we have heard of the phones exploding and ... Can a mobile phone explosion cause someone's death?. Interestingly, a China-based website called GizmoChina recently picked up the news and. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X