Home
ಸುದ್ದಿಜಾಲ

ಅಪರಿಚಿತ ಮಹಿಳೆಯ ಮಾತು ಕೇಳಿ ಲಕ್ಷ ಲಕ್ಷ ಹಣ ಕಳೆದುಕೊಂಡ ಭೂಪ!

ಪಾರ್ಟ್‌ ಟೈಂ ಜಾಬ್‌ ಸರ್ಚ್‌ ಮಾಡುತ್ತಿರುವವರು ಈ ಸುದ್ದಿಯನ್ನೊಮ್ಮೆ ಗಮನಿಸಲೇಬೇಕು. ಹೆಚ್ಚುವರಿ ಹಣ ಗಳಿಸುವ ಉದ್ದೇಶಕ್ಕಾಗಿ ಹೆಚ್ಚಿನ ಜನ ಪಾರ್ಟ್‌ ಟೈಂ ಜಾಬ್‌ ಇದೆಯಾ ಅಂತಾ ಸರ್ಚ್‌ ಮಾಡುತ್ತಿರುತ್ತಾರೆ. ಇದೇ ಮಾದರಿಯಲ್ಲಿ ಮುಂಬೈನ ವ್ಯಕ್ತಿಯೊಬ್ಬರು ಪಾರ್ಟ್‌ ಟೈಂ ಜಾಬ್‌ ಸರ್ಚ್‌ ಮಾಡುವಾದ ಮಹಿಳೆಯೊಬ್ಬಳ ಮಾತಿನ ಮೋಡಿಗೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.

ಹೌದು, ಮುಂಬೈನಲ್ಲಿ ವ್ಯಕ್ತಿಯೊಬ್ಬ ಫಾರ್ಟ್‌ ಟೈಂ ಜಾಬ್‌ಗಾಗಿ ಸರ್ಚ್‌ ಮಾಡಿದ್ದಾರೆ. ಈ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ಅಮೆಜಾನ್‌ನಲ್ಲಿ ಉದ್ಯೋಗವಿದೆ ಎಂಬ ಜಾಹಿರಾತು ನೋಡಿ ಕ್ಲಿಕ್‌ ಮಾಡಿದ್ದಾರೆ. ಆದರೆ ಮುಂದೆ ನಡೆದಿತ್ತು ಮಾತ್ರ ಬರೀ ಮೋಸ. ಹಾಗಾದ್ರೆ ಅಮೆಜಾನ್‌ ಜಾಹಿರಾತು ನೋಡಿ ಲಿಂಕ್‌ ಕ್ಲಿಕ್‌ ಮಾಡಿದಾತನಿಗೆ ಸಿಕ್ಕಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪರಿಚಿತ ಮಹಿಳೆಯ ಮಾತು ಕೇಳಿ ಲಕ್ಷ ಲಕ್ಷ ಹಣ ಕಳೆದುಕೊಂಡ ಭೂಪ!

ಮುಂಬೈನಲ್ಲಿ ಅಂಧೇರಿ ಮೂಲದ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ 33 ವರ್ಷದ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಅಮೆಜಾನ್‌ನಲ್ಲಿ ಉದ್ಯೋಗವೆಂಬ ಜಾಹಿರಾತನ್ನು ಕ್ಲಿಕ್‌ ಮಾಡಿದ್ದಾನೆ. ಅಮೆಜಾನ್‌ ಜಾಹಿರಾತು ಕ್ಲಿಕ್‌ ಮಾಡಿದ ವ್ಯಕ್ತಿಗೆ ಅಲ್ಲಿ ಮ್ಯಾರಿ ಎಂಬ ಮಹಿಳೆಯ ವಾಟ್ಸಾಪ್‌ ನಂಬರ್‌ ದೊರೆತಿದೆ. ಆಕೆ ನಾನು ಅಮೆಜಾನ್‌ ಹೆಚ್‌ಆರ್‌ ವಿಭಾಗದವಳಾಗಿದ್ದು, ನೇಮಕಾತಿ ಮ್ಯಾನೇಜರ್‌ ಎಂದು ಪರಿಚಯಿಸಿಕೊಂಡಿದ್ದಾಳೆ.

ಇನ್ನು ಕರೆ ಸಮಯದಲ್ಲಿ ವ್ಯಕ್ತಿಗೆ ಮಹಿಳೆಯು ಕೆಲಸದ ವಿವರಗಳನ್ನು ನೀಡಿದ್ದಾಳೆ. ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಲೈನ್‌ ಶಾಪಿಂಗ್‌ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀವು ಕೆಲಸ ಮಾಡಬೇಕಿದೆ. ಇದಕ್ಕಾಗಿ ನಿಮಗೆ ಸೂಕ್ತ ಸಂಬಳವನ್ನು ನೀಡುತ್ತೇವೆ ಎಂದು ಹೇಳಿದ್ದಾಳೆ. ಮಹಿಳೆಯ ಮಾತು ಕೇಳಿದ ಸಂತ್ರಸ್ತ ಕೆಲಸ ಮಾಡುವುದಕ್ಕೆ ಒಪ್ಪಿಕೊಂಡಿದ್ದಾನೆ. ಅದರಂತೆ ಮಹಿಳೆ ಸಂತ್ರಸ್ತನಿಗೆ ನೇಮಕಾತಿಗೆ ಸಂಬಂಧಿಸಿದ ಲಿಂಕ್‌ ಅನ್ನು ಕಳುಹಿಸಿ ಇದರಲ್ಲಿ ನಿಮ್ಮ ಅಕೌಂಟ್‌ ಕ್ರಿಯೆಟ್‌ ಮಾಡಿ ಎಂದು ಹೇಳಿದ್ದಾಳೆ.

ಅಪರಿಚಿತ ಮಹಿಳೆಯ ಮಾತು ಕೇಳಿ ಲಕ್ಷ ಲಕ್ಷ ಹಣ ಕಳೆದುಕೊಂಡ ಭೂಪ!

ಮಹಿಳೆ ಕಳುಹಿಸಿದ ಲಿಂಕ್‌ ಬಳಸಿ ಅಕೌಂಟ್‌ ಕ್ರಿಯೆಟ್‌ ಮಾಡಿದ ವ್ಯಕ್ತಿಗೆ ಮೊದಲಿಗೆ 80ರೂ. ಬೋನಸ್‌ ಹಣ ಸಿಕ್ಕಿದೆ. ನಂತರ ನೀವು ನಿಮ್ಮ 200ರೂ. ರೂಪಾಯಿ ರೀಚಾರ್ಜ್ ಮಾಡಿಸಿ ಉತ್ಪನ್ನ ಖರೀದಿಸುವಂತೆ ಸೂಚಿಸಲಾಗಿತ್ತು. ಸೂಚನೆಗಳನ್ನು ಅನುಸರಿಸಿದ ವ್ಯಕ್ತಿ 200ರೂ. ರೀಚಾರ್ಜ್‌ ಮಾಡಿಸಿದ್ದಾನೆ. ಕೂಡಲೇ ಆತನ ಇವಾಲೆಟ್ ಖಾತೆಗೆ 450 ರೂ. ಹಣ ಬಂದಿದೆ. ಇದು ಸಂತ್ರಸ್ತನ ವಿಶ್ವಾಸಗಳಿಸಲು ಆ ಮಹಿಳೆ ಮಾಡಿದ್ದ ಪ್ಲಾನ್‌ ಆಗಿದೆ.

ಹೀಗೆ ಹಂತಹಂತವಾಗಿ ಸಂತ್ರಸ್ತನ ವಿಶ್ವಾಸಗಳಿಸಿದ ವಂಚಕಿ ಕೆಲವೇ ದಿನಗಳಲ್ಲಿ 2.4 ಲಕ್ಷ ಖರ್ಚು ಮಾಡಿ ಒಟ್ಟು 5.13 ಲಕ್ಷ ಗಳಿಸಿ ಎಂಬ ಸಂದೇಶ ಕಳುಹಿಸಿದ್ದಾಳೆ. ಇದನ್ನು ನಂಬಿದ ಸಂತ್ರಸ್ತ ತನ್ನ ಇ-ವಾಲೆಟ್‌ಗೆ 2.4ಲಕ್ಷ ರೂ ಜಮಾ ಮಾಡಿದ್ದಾನೆ. ಆಗ ಆತನ ಇವಾಲೆಟ್ ಖಾತೆಯಲ್ಲಿ 5.13ಲಕ್ಷ ರೂ ಜಮಾ ಆಗಿದೆ ಎಂಬ ಸಂದೇಶ ಬಂದಿದೆ. ಕೂಡಲೇ ಸಂತ್ರಸ್ತ ಅದನ್ನು ತನ್ನ ಬ್ಯಾಂಕ್‌ ಖಾತೆಗೆ ವರ್ಗಾಯಿಸಲು ಪ್ರಯತ್ನಿಸಿದ್ದಾನೆ. ಆದರೆ ಇ-ವಾಲೆಟ್‌ನಿಂದ ಹಣ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗಿಲ್ಲ.

ನಂತರ ಸಂತ್ರಸ್ತ ಈ ಸಮಸ್ಯೆಯ ಬಗ್ಗೆ ಎಚ್‌ಆರ್ ಮ್ಯಾನೇಜರ್‌ ಎಂದು ಹೇಳಿಕೊಂಡಿದ್ದ ಮ್ಯಾರಿಗೆ ಕರೆ ಮಾಡಿ ಕೇಳಿದ್ದಾನೆ. ಇದಕ್ಕೆ ಆಕೆ ನೀವು ಇ-ವಾಲೆಟ್‌ನಿಂದ ಹೆಚ್ಚಿನ ಹಣ ವರ್ಗಾಯಿಸಬೇಕಾದರೆ 20% ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ನಂಬಿ ದ ಸಂತ್ರಸ್ತ ಕೂಡಲೇ ಕುಟುಂಬದ ಚಿನ್ನಾಭರಣವನ್ನು ಅಡಮಾನವಿಟ್ಟು ಅದರಿಂದ ಬಂದ ಹಣದಲ್ಲಿ 1.02 ಲಕ್ಷ ರೂ. ಹಣ ತೆರಿಗೆ ಹಣವೆಂದು ಪಾವತಿ ಮಾಡಿದ್ದಾನೆ. ಆಗಳು ಕೂಡ ಇ ವ್ಯಾಲೆಟ್‌ನಿಂದ ಹಣ ತನ್ನ ಖಾತೆಗೆ ವರ್ಗಾವಣೆಯಾಗಿಲ್ಲ. ನಂತರ ಅವನ ಅಕೌಂಟ್‌ ಅನ್ನು ಡಿ ಆ್ಯಕ್ಟಿವ್‌ ಮಾಡಲಾಗಿದೆ ಎಂಬುದು ಖಾತ್ರಿಯಾಗಿದೆ. ಆಗ ತಾನು ಮೋಸ ಹೋಗಿದ್ದೇನೆ ಅನ್ನೊದು ಅರಿವಾಗಿದೆ.

ಅಪರಿಚಿತ ಮಹಿಳೆಯ ಮಾತು ಕೇಳಿ ಲಕ್ಷ ಲಕ್ಷ ಹಣ ಕಳೆದುಕೊಂಡ ಭೂಪ!

ಸದ್ಯ ಸಂತ್ರಸ್ತ ಮುಂಬೈಣ ದಿವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಆದರೆ ಈ ಪ್ರಕರಣ ಅಂಧೇರಿಯಲ್ಲಿ ನಡೆದ ಕಾರಣ ಹೆಚ್ಚಿನ ತನಿಖೆಗಾಗಿ ಎಫ್‌ಐಆರ್ ಅನ್ನು ಎಂಐಡಿಸಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ. ಇನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆ) ಮತ್ತು 420 (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿಯಿಂದ ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Best Mobiles in India

English summary
This was the case for a man fom Mumbai who was duped for around 4 lakh by a woman while he was looking for a part-time job to earn extra money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+