ಫಾಸ್ಟ್ಯಾಗ್‌ ರೀಚಾರ್ಜ್‌ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!

|

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆನ್‌ಲೈನ್‌ ಸ್ಕ್ಯಾಮ್‌ಗಳ ಬಗ್ಗೆ ಎಚ್ಚರಿಕೆ ವಹಿಸಿದರೂ ಕೂಡ ವಂಚಕರು ಮಾತ್ರ ಹೊಸ ಹೊಸ ಮಾರ್ಗಗಳ ಮೂಲಕ ಜನರನ್ನು ವಂಚಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಜನರನ್ನು ವಂಚಿಸುವುದಕ್ಕೆ ಹೊಸ ಮಾರ್ಗಗಳನ್ನು ಶೋಧಿಸುವ ವಂಚಕರು ಇದೀಗ ಫಾಸ್ಟ್‌ಟ್ಯಾಗ್‌ ಅನ್ನು ಗುರಿಮಾಡಿದ್ದಾರೆ. ಪಾಸ್ಟ್‌ಟ್ಯಾಗ್‌ ಸಹಾಯವಾಣಿಯ ಹೆಸರಿನಲ್ಲಿ ಉಡುಪಿಯ ಬ್ರಹ್ಮಾವರದ ನಿವಾಸಿಯೊಬ್ಬರಿಗೆ ಒಂದು ಲಕ್ಷ ಹಣವನ್ನು ವಂಚಿಸಿರುವ ಘಟನೆ ನಡೆದಿದೆ.

ಫಾಸ್ಟ್ಯಾಗ್‌ ರೀಚಾರ್ಜ್‌ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!

ಹೌದು, ಉಡುಪಿಯ ಬ್ರಹ್ಮಾವರದ ನಿವಾಸಿಯೊಬ್ಬರು ಒಂದು ಲಕ್ಷ ಹಣವನ್ನು ಆನ್‌ಲೈನ್‌ ವಂಚನೆಯಿಂದ ಕಳೆದುಕೊಂಡಿದ್ದಾರೆ. ಫಾಸ್ಟ್‌ಟ್ಯಾಗ್‌ ರೀಚಾರ್ಜ್‌ ಮಾಡಲು ಹೋಗಿ ಹಣವನ್ನು ಕಳೆದುಕೊಂಡಿರುವುದು ನಿಜಕ್ಕೂ ಅಚ್ಚರಿಯೆನಿಸಲಿದೆ. ಆದರೆ ಇದು ಸ್ಕ್ಯಾಮರ್‌ಗಳು ಹೇಗೆ ಸ್ಮಾರ್ಟ್‌ ಆಗುತ್ತಿದ್ದಾರೆ ಅನ್ನೊದಕ್ಕೆ ತಾಜಾ ನಿರ್ದಶನವಾಗಿದೆ. ಅಷ್ಟಕ್ಕೂ ಫಾಸ್ಟ್‌ಟ್ಯಾಗ್‌ ಸಹಾಯವಾಣಿ ರೂಪದಲ್ಲಿ ಹಣವನ್ನು ವಂಚಿಸಿದ್ದು ಹೇಗೆ? ಹಣ ಕಳೆದುಕೊಂಡವರು ವಂಚಕರ ಜಾಲಕ್ಕೆ ಸಿಲುಕಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಾಸ್ಟ್‌ಟ್ಯಾಗ್‌ ರೀಚಾರ್ಜ್‌ ಮಾಡಲು ಹೋಗಿ ಕಳೆದುಕೊಂಡವರನ್ನು ಉಡುಪಿಯ ಬ್ರಹ್ಮಾವರದ ನಿವಾಸಿ ಪ್ರಾನ್ಸಿಸ್‌ ಪಾಯಸ್‌ ಎಂದು ಗುರುತಿಸಲಾಗಿದೆ. ಕಳೆದ ಜನವರಿ 29 ರಂದು ಪ್ರಾನ್ಸಿಸ್‌ ಪಾಯಸ್‌ ಅವರು ತಮ್ಮ ಕಾರಿನಲ್ಲಿ ಮಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ಹೆಜಮಾಡಿಯ ಟೋಲ್ ಪ್ಲಾಜಾನಲ್ಲಿ ಫಾಸ್ಟ್‌ಟ್ಯಾಗ್‌ನಲ್ಲಿ ಬ್ಯಾಲೆನ್ಸ್‌ ಕಡಿಮೆ ಇರುವುದು ಗಮನಿಸಿದ್ದಾರೆ. ಕೂಡಲೇ ಟೋಲ್ ಪಾವತಿಸಲು, ಅವರು ಫಾಸ್ಟ್‌ಟ್ಯಾಗ್‌ ಹೆಲ್ಪ್‌ಲೈನ್‌ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಸರ್ಚ್‌ ಮಾಡಿದ್ದಾರೆ.

ಫಾಸ್ಟ್ಯಾಗ್‌ ರೀಚಾರ್ಜ್‌ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!

ಈ ಸಂದರ್ಭದಲ್ಲಿ ಫಾಸ್ಟ್‌ಟ್ಯಾಗ್ ಸಹಾಯವಾಣಿ ಎಂದು ಲಿಸ್ಟ್‌ ಮಾಡಲಾದ ಹೆಲ್ಪ್‌ಲೈನ್‌ ನಂಬರ್‌ ಅನ್ನು ತೆಗೆದುಕೊಂಡಿದ್ದಾರೆ. ಸಹಾಯವಾಣಿಗೆ ಕರೆ ಮಾಡಿ ಫಾಸ್ಟ್‌ಟ್ಯಾಗ್‌ ರೀಚಾರ್ಜ್‌ ಬಗ್ಗೆ ಮಾಹಿತಿ ಪಡೆಯಲು ಹೋಗಿ ಸೈಬರ್‌ ವಂಚಕರ ಬಲೆಗೆ ಬಿದ್ದಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಪಾಯಸ್‌ ಅವರ ಕರೆಯನ್ನು ಸ್ವಿಕರಿಸಿದ ವ್ಯಕ್ತಿ ನಾನು ಪೇಟಿಎಂ ಫಾಸ್ಟ್ಯಾಗ್‌ನ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ಫಾಸ್ಟ್‌ಟ್ಯಾಗ್‌ ರೀಚಾರ್ಜ್‌ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದಾನೆ.

ಇದನ್ನು ನಂಬಿದ ಪಾಯಸ್‌ ಫಾಸ್ಟ್‌ಟ್ಯಾಗ್‌ ರೀಚಾರ್ಜ್ ಮಾಡುವುದಕ್ಕೆ ಆತ ಹೇಳಿದಂತೆ ಕೇಳಿದ್ದಾರೆ. ಅದರಂತೆ ಆ ವ್ಯಕ್ತಿ ಹೇಳಿದ ಪ್ರಕ್ರಿಯೆಯನ್ನು ಅನುಸರಿಸಿದ ಪಾಯಸ್‌ ತನ್ನ ಮೊಬೈಲ್‌ಗೆ ಬಂದಿದ್ದ ಒಟಿಪಿ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಕೂಡಲೇ ಕರೆ ಕಡಿತಗೊಳಿಸಿದ ವಂಚಕ ಪಾಯಸ್‌ ಅವರ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ್ದಾನೆ. ಪಾಯಸ್‌ ಅವರ ಬ್ಯಾಂಕ್‌ ಖಾತೆಯಿಂದ ಮೊದಲಿಗೆ 49,000ರೂ.ಡೆಬಿಟ್‌ ಆಗಿದೆ. ನಂತರ 19,999ರೂ, 19,998ರೂ, 9,999ರೂ, ಮತ್ತು 1,000ರೂ. ಹಣ ಹಂತಹಂತವಾಗಿ ಡೆಬಿಟ್‌ ಆಗಿದೆ. ಈ ಮೂಲಕ ಒಟ್ಟು 99,997 ರೂ.ಹಣವನ್ನು ವಂಚಿಸಲಾಗಿದೆ.

ಫಾಸ್ಟ್ಯಾಗ್‌ ರೀಚಾರ್ಜ್‌ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!

ಕೂಡಲೇ ತಾನು ವಂಚನೆ ಹೋಗಿರುವುದನ್ನು ಖಚಿತಪಡಿಸಿಕೊಂಡ ಪಾಯಸ್‌ ಉಡುಪಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೇಳಿರುವಂತೆ ವಂಚಕನು ಹೇಳಿದಂತೆ ಪಾಯಸ್‌ ಅವರು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಮಾಡಿರುವುದರಿಂದ ವಂಚಕ ಹಣ ಎಗರಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಸದ್ಯ ವಂಚಕರ ವಿರುದ್ದ ಐಟಿ ಕಾಯ್ದೆಯ ಸೆಕ್ಷನ್- 66 (ಸಿ), ಮತ್ತು 66 (ಡಿ) ಅಡಿಯಲ್ಲಿ ಸೈಬರ್ ವಂಚನೆಯ ಪ್ರಕರಣವನ್ನು ದಾಖಲಿಸಲಾಗಿದೆ.

ಫಾಸ್ಟ್‌ಟ್ಯಾಗ್ ರೀಚಾರ್ಜ್ ಹೆಲ್ಪ್‌ಲೈನ್‌ ಹೆಸರಿನಲ್ಲಿ ಸ್ಕ್ಯಾಮ್‌ ನಡೆಯಲು ಸಾಧ್ಯವೇ?
ಫಾಸ್ಟ್‌ಟ್ಯಾಗ್‌ ಹೆಲ್ಫ್‌ಲೈನ್‌ ಹೆಸರಿನಲ್ಲಿ ವಂಚನೆ ನಡೆದಿರೋದು ಇದೀಗ ಬೆಚ್ಚಿಬೀಳುವಂತೆ ಮಾಡಿದೆ. ಪ್ರತಿನಿತ್ಯ ವಾಹನಗಳಲ್ಲಿ ಒಡಾಡುವ ಮಾಲೀಕರು ಇದರಿಂದ ಇನ್ನಷ್ಟು ಎಚ್ಚರಿಕೆ ವವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಫಾಸ್ಟ್‌ಟ್ಯಾಗ್‌ ಹೆಸರಿನಲ್ಲಿ ವಂಚನೆ ನಡೆಯಲು ಸಾಧ್ಯವೆ ಎನ್ನವ ಪ್ರಶ್ನೆ ಕೂಡ ಎದ್ದಿದೆ. ಆದರೆ ಫಾಸ್ಟ್‌ಟ್ಯಾಗ್‌ ಹೆಸರಿನಲ್ಲಿ ನಕಲಿ ಸಹಾಯವಾಣಿಗಳಿಂದ ಈ ರೀತಿಯ ವಂಚನೆ ನಡೆದಿದೆ ಎಂದು ಹೇಳಲಾಗಿದೆ. ಆದರಿಂದ ನಿಮ್ಮ ಫಾಸ್ಟ್‌ಟ್ಯಾಗ್‌ ಅನ್ನು ರೀಚಾರ್ಜ್‌ ಮಾಡುವುದಕ್ಕೆ ವೆಬ್‌ಸೈಟ್‌ಗಳನ್ನು ಬಳಸುವಾಗ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ.

ಫಾಸ್ಟ್ಯಾಗ್‌ ರೀಚಾರ್ಜ್‌ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!

ಇದಲ್ಲದೆ ನಿಮ್ಮ FASTag ಅನ್ನು ರೀಚಾರ್ಜ್ ಮಾಡುವುದಕ್ಕೆ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿಯೇ ಅವಕಾಶವನ್ನು ನೀಡಲಾಗಿದೆ. ಆದರಿಂದ ನೀವು ಸಹಾಯವಾಣಿಗಳ ಮೊರೆ ಹೋಗುವ ಬದಲು ಪೇಟಿಎಂ, ಗೂಗಲ್‌ಪೇ, ಫೋನ್‌ಪೇ ಸೇರಿದಂತೆ ಲಭ್ಯವಿರುವ ಯುಪಿಐ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುವುದು ಉತ್ತಮವಾಗಿದೆ.

Best Mobiles in India

English summary
The fresh case further proves how scammers are resorting to new ways to trick people and pouncing on loopholes in technology to steal money from others.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X