ಮೊಬೈಲ್ ಕಳೆದುಕೊಂಡಿದ್ದ ವಿದ್ಯಾರ್ಥಿಗೆ ನೆರವಾಯ್ತು ಆಪ್!..ತಿಂಗಳ ನಂತರ ಸಿಕ್ಕಿತು ಮೊಬೈಲ್!!
ಮೊಬೈಲ್ ಫೋನ್ ಕಳೆದುಹೋದ ನಂತರ ಅದು ಮತ್ತೆ ಸಿಗುವುದಿಲ್ಲ ಎಂದುಕೊಂಡು ಸುಮ್ಮನಾಗಿದ್ದ ಕಾಲೇಜು ವಿಧ್ಯಾರ್ಥಿಯೋರ್ವನಿಗೆ 'ಮೊಬೈಲ್ ಆಪ್' ಒಂದು ಸಹಾಯಕ್ಕೆ ಬಂದಿದೆ. 'ಗೂಗಲ್ ಫೋಟೋಸ್' ಆಪ್ ಸಹಾಯದಿಂದ ಮಂಡ್ಯದ ಬಿ.ಸಿ.ಸಂತೋಷ್ ಕುಮಾರ್ ಎಂಬುವವವರು ಮೊಬೈಲ್ ಕಳೆದುಹೋದ ತಿಂಗಳ ನಂತರ ಅದನ್ನು ವಾಪಸ್ ಪಡೆದುಕೊಂಡಿದ್ದಾರೆ.
ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ 3ನೇ ಸೆಮಿಸ್ಟರ್ ಕನ್ನಡ ಎಂ.ಎ ಓದುತ್ತಿರುವ ಬಿ.ಸಿ .ಸಂತೋಷ್ ಕುಮಾರ್ ಅವರು, ಮೊಬೈಲ್‌ನಲ್ಲಿದ್ದ 'ಗೂಗಲ್ ಫೋಟೋಸ್' ಆಪ್ ಮೂಲಕ ಕಳೆದುಹೋಗಿದ್ದ ಮೊಬೈಲ್ ಅನ್ನು ಹುಡುಕಿಕೊಂಡಿದ್ದಾರೆ. ಕಾರ್ಖಾನೆಯೊಂದರಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಯಾರೂ ಕದ್ದಿದ್ದ ಮೊಬೈಲ್ ಈಗ ಅವರಿಗೆ ಮತ್ತೆ ಸಿಕ್ಕಿದೆ.

ಅವರೇ ಹೇಳುವಂತೆ, ಸೆ.19 ರಂದು ತನ್ನ ಸ್ಯಾಮ್‌ಸಂಗ್ ಜೆ2 ಫೋನ್ ಕಳುವಾಗಿತ್ತು. ಕಳೆದುಹೋದ ಕ್ಷಣದಲ್ಲೇ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಆದರೆ, ಈಗ ಮೊಬೈಲ್ ವಾಪಸ್ ಸಿಕ್ಕಿದೆ ಎಂದು ಹೇಳುತ್ತಾರೆ. ಹಾಗಾದರೆ, ಅವರಿಗೆ ಆ ಮೊಬೈಲ್ ವಾಪಸ್ ಸಿಕ್ಕಿದ್ದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಮೊಬೈಲ್ ವಾಪಸ್ ಸಿಕ್ಕಿದ್ದು ಹೇಗೆ?
ಮೊಬೈಲ್ ಕಳೆದುಹೋಗಿ ತಿಂಗಳಾದ ಮೇಲೆ ಬಿ.ಸಿ. ಸಂತೋಷ್ ಕುಮಾರ್ ಅವರ ಇಮೇಲ್ ಐಡಿಗೆ ಕೆಲವು ಚಿತ್ರಗಳು ಬರುತ್ತಿದ್ದವು. ಆ ಚಿತ್ರಗಳು ಸಂತೋಷ್ ಕುಮಾರ್ ಅವರು ಕಳೆದುಕೊಂಡಿದ್ದ ಮೊಬೈಲ್‌ಫೋನಿನಿಂದಲೇ ತೆಗೆದಿದ್ದ ಚಿತ್ರಗಳಾಗಿದ್ದವು. 'ಗೂಗಲ್ ಫೋಟೋಸ್' ಆಪ್‌ಗೆ ಇಮೇಲ್ ಲಿಂಕ್ ಮಾಡಿದ್ದರಿಂದ ಆ ಚಿತ್ರಗಳು ಇವರ ಮೇಲ್‌ಗೆ ಬರುತ್ತಿದ್ದವು.

ಬ್ಯಾಂಕ್ ಪಾಸ್‌ಪುಸ್ತಕದ ಚಿತ್ರ ಬಂತು!
ಚಿತ್ರ ಬಂದರೂ ಆರೋಪಿ ಯಾರು ಎಂಬುದನ್ನು ಹುಡುಕಲು ಸಾಧ್ಯವಿರಲಿಲ್ಲ. ಏಕೆಂದರೆ, ಆ ಚಿತ್ರ ಯಾರದ್ದು ಎಂದು ತಿಳಿಯುವುದಾದರೂ ಹೇಗೆ ಹೇಳಿ.? ಹೀಗೆ ಸುಮ್ಮನಾಗಿದ್ದ ಸಂತೋಷ್‌ಗೆ ಆರೋಪಿಯ ಬ್ಯಾಂಕ್ ಪಾಸ್‌ಪುಸ್ತಕದ ಮತ್ತೊಂದು ಚಿತ್ರ ಬಂದಿತು.ಆ ಪಾಸ್‌ಪುಸ್ತಕದಲ್ಲಿ ಮೊಬೈಲ್ ಬಳಸುತ್ತಿದ್ದವರ ವಿಳಾಸ ಇದ್ದಿದ್ದರಿಂದ, ಅವರ ಮೊಬೈಲ್ ಅವರಿಗೆ ವಾಪಸ್ ಸಿಕ್ಕಿತು.

ಮೊಬೈಲ್ ಕದ್ದವರು ಯಾರು?
ಆ ಪಾಸ್‌ಪುಸ್ತಕದಲ್ಲಿದ್ದ ವಿಳಾಸವನ್ನು ಹುಡುಕುತ್ತಿದ್ದ ಸಂತೋಷ್‌ಗೆ ಮೊಬೈಲ್ ಕದ್ದವನು ಯಾರು ಎಂಬುದನ್ನು ಸಹ ತಿಳಿಯಬೇಕಾಗಿತ್ತು. ಆದರೆ, ಈಗ ಆ ಮೊಬೈಲ್ ಬಳಸುತ್ತಿದ್ದ ವ್ಯಕ್ತಿ ಅದನ್ನು ಕೇವಲ 500 ರೂ.ಗೆ ಮಾರಾಟ ಮಾಡಿದ್ದನಂತೆ. ಲಾರಿ ಚಾಲಕನೋರ್ವ ಮದ್ಯಪಾನ ಮಾಡುವ ಸಲುವಾಗಿ ಕದಿದ್ದ ಮೊಬೈಲ್ ಅನ್ನು ಅವರಿಗೆ ಮಾರಿದ್ದ ಎಂಬ ವಿಚಾರ ತಿಳಿದುಬಂತು.

ಹರ್ಷ ವ್ಯಕ್ತಪಡಿಸಿದ ಸಂತೋಷ್!
ಗೂಗಲ್ ಫೋಟೋಸ್ ಆಪ್‌ಗೆ ಥ್ಯಾಂಕ್ಸ್ ಹೇಳಲೇಬೇಕು. ಈ ಆಪ್ ಡೀ ಆಕ್ಟಿವೇಟ್ ಮಾಡಿದ್ದರೆ, ಮೊಬೈಲ್ ವಾಪಸ್ ಸಿಗುತ್ತಿರಲಿಲ್ಲ. ಕದ್ದವನು, ಕೊಂಡವನು ಅಷ್ಟು ಯೋಚನೆ ಮಾಡಿರಲಿಲ್ಲ ಎಂದು ಸಂತೋಷ್ ಈಗ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ನಾವು ನಮ್ಮ ಮೊಬೈಲ್ ಅನ್ನು ಕಳೆದುಕೊಂಡರೇ ವಾಪಸ್ ಪಡೆಯಲು ಏನೆಲ್ಲಾ ದಾರಿಗಳಿವೆ ಎಂಬುದನ್ನು ಮುಂದೆ ತಿಳಿಯಿರಿ.

ಮೊಬೈಲ್ ಕಳುವಾದಾಗ ಏನು ಮಾಡಬಹುದು?
ಇಂದಿನ ಮೊಬೈಲ್ ಕಳೆದುಕೊಂಡರೆ ಐಎಂಇಐ ಮೂಲಕ ಪೊಲೀಸರು ಆ ಮೊಬೈಲ್ ಅನ್ನು ಟ್ರೇಸ್ ಮಾಡಬಹುದು. ಆದರೆ, ಜನ ಸಾಮಾನ್ಯರಿಗೆ ಇದು ಸಾಧ್ಯವಿಲ್ಲ. ಒಂದು ವೇಳೆ ಕಳ್ಳನು ಮೊಬೈಲ್ ಬಳಕೆ ಬಗ್ಗೆ ಹೆಚ್ಚು ತಿಳಿಯದೇ ಇದ್ದರೆ, ನೀವು ಮೊಬೈಲ್ ಕಳೆದುಕೊಂಡರೆ ಏನು ಮಾಡಬಹುದು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮೈ ಆಕ್ಟಿವಿಟಿ ಆಯ್ಕೆ
ನಿಮ್ಮ ಸ್ಮಾರ್ಟ್ಫೋನಲ್ಲಿ ಲಾಗ್ಇನ್ ಆಗಿರುವ ಗೂಗಲ್ ಖಾತೆಗೆ ಕಂಪ್ಯೂಟರ್ ಅಥವಾ ಮತ್ತೊಂದು ಮೊಬೈಲ್‌ನಿಂದ ಲಾಗ್ ಇನ್ ಆಗಿ. ನಂತರ ಅಲ್ಲಿ ಅಕೌಂಟ್ ಕ್ಲಿಕ್ ಮಾಡಿ, ಟ್ರೇಸ್ ಮೈ ಮೊಬೈಲ್ ಹಾಗೂ ಮೈ ಆಕ್ಟಿವಿಟಿ ಆಯ್ಕೆ ಮೂಲಕ ಕಳುವಾದ ಮೊಬೈಲ್ನಲ್ಲಿ ಏನೇನು ಮಾಡಲಾಗುತ್ತಿದೆ ಎನ್ನುವ ಮಾಹಿತಿ ಪಡೆಯಬಹುದು.

ಲಾಕ್ ಯುವರ್ ಫೋನ್
ಟ್ರೇಸ್ ಮೈ ಮೊಬೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರಲಾಕ್ ಯುವರ್ ಫೋನ್ ಅವಕಾಶದ ಮೂಲಕ 4 ಅಂಕೆಯ ಪಾಸ್ವರ್ಡ್ ಹಾಗೂ ಪರಿಚಿತರ ದೂರವಾಣಿ ಸಂಖ್ಯೆ ಹಾಕಿ ಮೊಬೈಲ್ ಅನ್ನು ಲಾಕ್ ಮಾಡಬಹುದು.ಕಾಲಿಂಗ್ ಯುವರ್ ಫೋನ್ ಅವಕಾಶದ ಮೂಲಕ ಸೈಲೆಂಟ್ ಮೋಡ್ನಲ್ಲಿದ್ದರೂ ನಿಮ್ಮ ಮೊಬೈಲ್ ರಿಂಗ್ ಮಾಡಬಹುದು.

ಔಟ್ ಆನ್ ಯುವರ್ ಫೋನ್
ಮೊಬೈಲ್ ಸಿಗದಿದ್ದರೂ ಪರವಾಗಿಲ್ಲ ಆದರೆ ನನ್ನೆಲ್ಲಾ ಗೂಗಲ್ ಮಾಹಿತಿಗಳು ಸುರಕ್ಷಿತವಾಗಿರಲು ನೀವು ನಿಮ್ಮ ಮೊಬೈಲ್ ಖಾತೆಗಳನ್ನು ಸೈನ್ ಔಟ್ ಮಾಡಬಹುದು. ಗೂಗಲ್ ಅಕೌಂಟ್ಸ್‌ನಲ್ಲಿ ಸೈನ್ ಔಟ್ ಆನ್ ಯುವರ್ ಫೋನ್ ಆಯ್ಕೆ ಮೂಲಕ ಮೊಬೈಲ್ನಲ್ಲಿನ ಎಲ್ಲ ಖಾತೆಗಳನ್ನು ಸೈನ್ ಔಟ್ ಮಾಡಬಹುದಾಗಿದೆ.

ಲಾಕ್‌ಔಟ್ ಅಪ್ಲಿಕೇಷನ್
ಲಾಕ್‌ಔಟ್ ಅಪ್ಲಿಕೇಷನ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಒಳ್ಳೆಯದು. ಇದು, ಫೋನ್ ಬುಕ್, ಫೋಟೋ ಮತ್ತು ಕಾಲ್ ಹಿಸ್ಟರಿಯ ಬ್ಯಾಕ್ ಅಪ್ ಪಡೆಯುವುದ್ಕಕೆ ಸಹಾಯ ಮಾಡುವುದರ ಜತೆಗೆ ನಿಮ್ಮ ಫೋನ್ ಎಲ್ಲಿದೆ ಎಂದು ಹುಡುಕಲು ಅಥವಾ ಇನ್ಯಾರೂ ಉಪಯೋಗ ಮಾಡಬಲ್ಲುದು. ಇದರಿಂದ ನಿಮ್ಮ ಮಾಹಿತಿ ಸೇಫ್ ಆಗಿರುತ್ತದೆ.

ಸಿಮ್ ಲಾಕ್ ಮಾಡಿಸಿ.
ನೀವು ಬಳಸುವ ನೆಟ್ವರ್ಕ್ ಕಂಪನಿಯನ್ನು ಸಂಪರ್ಕಿಸಿ ಮತ್ತು ಫೋನ್ ಕಾಣೆಯಾಗಿದೆ ಎಂದು ಎಚ್ಚರಿಸುವುದು ಎಲ್ಲಕ್ಕಿಂತ ಮೊದಲ ಹಂತ.ನಿಮ್ಮ ಫೋನ್ ಇನ್ನೊಬ್ಬರ ಕೈಯಲ್ಲಿದ್ದರೆ, ಸೇವೆಯನ್ನು ನಿಲ್ಲಿಸಲು ಕಸ್ಟಮರ ಕೇರ್ ಗೆ ಕರೆ ಮಾಡಿ. ಬ್ಯಾಂಕ್‌ಗಳನ್ನು ಸಂಪರ್ಕಿಸಿ ನಿಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಿಸಿ.

ಪೊಲೀಸ್ ಠಾಣೆಗೆ ದೂರು ನೀಡಿ.
ಮೊಬೈಲ್ ಕಳೆದ ತಕ್ಷಣವವೇ ಪೊಲೀಸರಿಗೆ ದೂರು ನೀಡಿತಕ್ಷಣ ಆಗಬಹುದಾದ ಅನಾಹುತಗಳಿದ ತಪ್ಪಿಸಿಕೊಳ್ಳಬಹುದು. ರೀಚ್ ಔಟ್ ಯುವರ್ ಕ್ಯಾರಿಯರ್ ಮೂಲಕ ಸಿಮ್ ಬ್ಲಾಕ್ ಮಾಡಬಹುದು ಇನ್ನು ಕಳ್ಳ ಚಾಲಾಕಿಯಾಗಿದ್ದರೆ ಫೋನ್ ಅನ್ನು ನಾವು ಹುಡುಕುವುದು ಕಷ್ಟವೇ ಸರಿ. ಆದರೆ, ಪೊಲೀಸರಿಗೆ ಇದು ಕಷ್ಟದ ಕೆಲಸವೇನಲ್ಲ.!


Click it and Unblock the Notifications








