Just In
Don't Miss
- Movies
Muddumanigalu:ಮಗಳ ಕಷ್ಟಕ್ಕೆ ಹೆಗಲಾಗಿ ಬಂದೇ ಬಿಟ್ಟಳು ಮುದ್ದುಲಕ್ಷ್ಮೀ.. ಮುಂದೇನು?
- Sports
IND vs NZ 3rd T20: ಶುಭ್ಮನ್ ಗಿಲ್ ಸ್ಫೋಟಕ ಶತಕ; ಕಿವೀಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಭಾರತ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
85 ಸಾವಿರದ ಮೊಬೈಲ್ ಬಾಕ್ಸ್ ತೆರೆದಾಗ ಇತ್ತು 5 ರೂ. ಸರ್ಫ್ ಎಕ್ಸೆಲ್ ಸೋಪು!!
ಆನ್‌ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ ಗ್ರಾಹಕನೊಬ್ಬನಿಗೆ ಸರ್ಫ್ ಎಕ್ಸೆಲ್ ಸೋಪ್ ಕೊಟ್ಟು ವಂಚನೆ ನಡೆಸಿರುವ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ. ಉತ್ತರಹಳ್ಳಿಯ ನಿವಾಸಿಯಾಗಿರುವ ವೆಂಕಟೇಶ್ ಎಂಬುವವರು ಆನ್‌ಲೈನಿನಲ್ಲಿ ಸ್ಯಾಮ್‌ಸಂಗ್ ನೋಟ್ 9 ಸ್ಮಾರ್ಟ್‌ಫೋನ್ ಆರ್ಡರ್ ಮಾಡಿ ವಂಚನೆಗೆ ಒಳಗಾಗಿದ್ದಾರೆ. 85 ಸಾವಿರ ಹಣ ಪಾವತಿಸಿ ಮೊಬೈಲ್ ಬಾಕ್ಸ್ ತೆರೆದರೆ ಅದರಲ್ಲಿ ಮೊಬೈಲ್ ಬದಲು 5 ರೂ. ಸರ್ಫ್ ಎಕ್ಸೆಲ್ ಸೋಪನ್ನು ಇಡಲಾಗಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ತಾನು ಆನ್‌ಲೈನಿನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದು, ನಂತರ ಮೊಬೈಲ್ ಬಾಕ್ಸ್ ಮನೆಗೆ ಬಂದ ಡೆಲಿವರಿ ಬಾಯ್ಗೆ ಪೇಟಿಯಂ ನಲ್ಲಿ 85 ಸಾವಿರ ಹಣ ಪಾವತಿಸಿ ಮೊಬೈಲ್ ಪಡೆದರೆ. .ಆದರೆ ಬಾಕ್ಸ್ ಓಪನ್ ಮಾಡಿ ನೋಡಿದಾಗ ಅದರಲ್ಲಿ ಮೊಬೈಲ್ ಬದಲು 5 ರೂಪಾಯಿ ಬೆಲೆಯ ಸರ್ಫ್ ಎಕ್ಸೆಲ್ ಸೋಪು ಮಾತ್ರ ಇತ್ತು ಎಂದು ಹೇಳಿಕೊಂಡಿದ್ದಾರೆ. ಈ ರೀತಿ ಕಂಪೆನಿಯಿಂದಲೇ ವಂಚನೆಯಾಗಿದ್ದರೆ ಆ ಬಗ್ಗೆ ಪೂರ್ಣ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆನ್‌ಲೈನ್‌ನಿನಲ್ಲಿ ಬಾರೀ ಡಿಸ್ಕೌಂಟ್ಸ್ ಸಹ ದೊರೆಯುವುದರಿಂದ ಜನರು ಆನ್‌ಲೈನ್ ಶಾಪಿಂಗ್‌ಗೆ ಮೊರೆಹೋಗುವುದು ಸಹಜವೆ. ಆದರೆ, ನಂಬಿಕಸ್ಥವಲ್ಲದ ಆನ್‌ಲೈನ್ ತಾಣಗಳ ಮೊರೆಹೋಗುವುದು ಅಪಾಯಕಾರಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಶಾಪಿಂಗ್‌ನಿಂದ ನಿಜಕ್ಕೂ ಲಾಭವಿದೆಯೇ? ಆನ್‌ಲೈನ್ ಖರೀದಿ ಸುರಕ್ಷಿತವೇ? ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳು ಯಾವುವು? ಎಂಬ ಕೊರೆವ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ.

ಆನ್‌ಲೈನ್‌ನಲ್ಲಿ ಉತ್ತಮ ಬೆಲೆಗೆ ವಸ್ತುಗಳು ಸಿಗುತ್ತವೆಯೇ?
ನಿಜ ಹೇಳಬೇಕೆಂದರೆ, ಇಲ್ಲ. ಆನ್‌ಲೈನ್ ಬೆಲೆಗಳನ್ನು ನೋಡಿದರೆ, ತೀರ ಕಡಿಮೆ ಎಂದೆನಿಸುವುದು ಸಹಜ. ಸಾಧಾರಣವಾಗಿ ಉತ್ತಮ ಬೆಲೆಗೇ ವಸ್ತುಗಳು ಲಭ್ಯವಾದರೂ, ಕೆಲವೊಂದು ಉತ್ಪನ್ನಗಳು ಹೊರಗಿನ ಅಂಗಡಿಗಳಲ್ಲಿ ಸಿಗುವುದಕ್ಕಿಂತಲೂ ದುಬಾರಿಯಾಗಿರುತ್ತವೆ. ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಒಳ್ಳೆಯ ಆಫರ್‌ಗಳಿರುತ್ತವೆ. ಫೋನ್ ಖರೀದಿ ಮಾಡುತ್ತಿದ್ದರೆ, ಕೇಬಲ್, ಎಸ್‌ಡಿ ಕಾರ್ಡ್ ಉಚಿತವಾಗಿರುತ್ತದೆ. ಆದರೆ ಆನ್‌ಲೈನಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ ಖರೀದಿಗೆ ಮುನ್ನ ಮಾರುಕಟ್ಟೆ, ಆನ್‌ಲೈನ್ ದರದ ಬಗ್ಗೆ ತುಲನೆ ಮಾಡುವುದು ಒಳ್ಳೆಯದು.

ಆನ್‌ಲೈನ್‌ನಲ್ಲಿ ಸಿಗುವ ವಸ್ತುಗಳು ಅಸಲಿಯೇ?
ಆನ್‌ಲೈನ್‌ನಲ್ಲಿ ಯಾವಾಗಲೂ ವಾರೆಂಟಿ ಪತ್ರಕ್ಕೆ ಸೀಲ್, ಸಹಿ ಹಾಕಿ ಕೊಡುವುದಿಲ್ಲ. ಬದಲಿಗೆ ಉತ್ಪನ್ನದ ವಿವರದ ಬಳಿ ಅದಕ್ಕೆ ವಾರೆಂಟಿ ಅನ್ವಯವಾಗುತ್ತದೆಯೇ ಇಲ್ಲವೇ ಎಂಬುದನ್ನು ಬರೆದಿರುತ್ತಾರೆ. ಇದನ್ನು ಖರೀದಿದಾರರು ಸೂಕ್ಷ್ಮವಾಗಿ ಗಮನಿಸುವುದು ಅವಶ್ಯ. ಅಸಲಿಯನ್ನೇ ಆನ್‌ಲೈನ್‌ನಲ್ಲೂ ಮಾರಾಟ ಮಾಡುತ್ತಿದ್ದರೂ, ಅವರು ಉತ್ಪನ್ನದ ಅಧಿಕೃತ ಡೀಲರ್ ಅಲ್ಲದಿದ್ದರೆ, ವಾರೆಂಟಿ ಅನ್ವಯವಾಗುವುದಿಲ್ಲ.ಈ ಬಗ್ಗೆ ಕೆಲವು ಆನ್‌ಲೈನ್ ಶಾಪಿಂಗ್ ತಾಣಗಳು ಅಧಿಕೃತ ಡೀಲರ್ ಅಲ್ಲ ಎಂಬುದನ್ನು ಕಂಪನಿಗಳೇ ಘೋಷಿಸಿರುತ್ತವೆ.

ನಮ್ಮ ವೈಯಕ್ತಿಕ ದಾಖಲೆ/ ಬ್ಯಾಂಕಿಂಗ್ ಸುರಕ್ಷಿತವೇ?
ಆನ್‌ಲೈನ್ ಶಾಪಿಂಗ್ ವೇಳೆ ಬ್ಯಾಂಕ್ ಅಕೌಂಟ್ ನಮೂದಿಸಿ ಹಣ ಪಾವತಿ ಮಾಡುತ್ತೀರಿ. ಇವೆಲ್ಲಾ ವಿವರಗಳು ಸುರಕ್ಷಿತವೇ ಎಂಬುದು ದೊಡ್ಡ ಪ್ರಶ್ನೆ. ಇದಕ್ಕಾಗಿ ದೊಡ್ಡ ಜಾಲತಾಣಗಳು ಅತ್ಯಂತ ಸುರಕ್ಷಿತವಾದ ಸರ್ವರ್‌ಗಳನ್ನು ನಿರ್ವಹಿಸುತ್ತವೆ. ಅದರಿಂದ ಗ್ರಾಹಕರ ಯಾವುದೇ ಮಾಹಿತಿಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸುತ್ತವೆ. ಬ್ಯಾಂಕಿಂಗ್ ವಿವರಗಳೂ ಸೋರಿಕೆಯಾಗದಂತೆ ಅವುಗಳು ಅತ್ಯಂತ ಎಚ್ಚರಿಕೆ ವಹಿಸುತ್ತವೆ. ಅದಕ್ಕಾಗಿ, ನೀವು ಜನಪ್ರಿಯ ಮತ್ತು ನಂಬಿಕಸ್ಥ ಜಾಲತಾಣಗಳನ್ನು ನೆಚ್ಚಿಕೊಳ್ಳುವುದು ಒಳ್ಳೆಯದು.

ಖರೀದಿಸಿದ ಉತ್ಪನ್ನ ಮನೆಗೆ ಬಾರದಿದ್ದರೆ?
ಆನ್‌ಲೈನ್‌ನಲ್ಲಿ ಹೊಸದಾಗಿ ಶಾಪಿಂಗ್ ಮಾಡುವವರ ದೊಡ್ಡ ಸಮಸ್ಯೆ ಎಂದರೆ, ಕೆಲವೊಮ್ಮೆ ಕೊರಿಯರ್‌ನಲ್ಲಿ ಉತ್ಪನ್ನದ ಬದಲಾಗಿ ಕಲ್ಲು, ಮರಳು ಬಂದಿದ್ದೂ ಇದೆ. ಈ ವಿಚಾರದಲ್ಲಿ ಗ್ರಾಹಕರ ವಿಶ್ವಾಸಾರ್ಹತೆಯನ್ನು ಕಾಪಿಡಲು ಅಮೆಜಾನ್, ಫ್ಲಿಪ್‌ಕಾರ್ಟ್ ಇತ್ಯಾದಿ ಶಾಪಿಂಗ್ ತಾಣಗಳು ಖರೀದಿಸಿದ ವಸ್ತುಗಳು ಹಾಳಾಗಿದ್ದರೆ, ಅಥವಾ ತಪ್ಪಾಗಿ ಬಂದಿದ್ದರೆ, ವಾಪಾಸ್ ಕಳಿಸುವ, ಮನೆಗೇ ಬಂದು ತೆಗೆದುಕೊಂಡು ಹೋಗುವ, ಹಣ ವಾಪಾಸ್ ಪಾವತಿಸುವ ಪರಿಪಾಠ ಹೊಂದಿದೆ. ಹಾಗಾಗಿ, ಯೋಚಿಸಿ ಶಾಪಿಂಗ್ ಮಾಡಿ.

ಆನ್‌ಲೈನ್ ಖರೀದಿಯಿಂದ ಏನು ಲಾಭ?
ಆನ್‌ಲೈನ್ ಶಾಪಿಂಗ್ ತಾಣಗಳ ಬೆಲೆಗಳ ಬಗ್ಗೆ ಕೂತಲ್ಲೇ ಸಂಪೂರ್ಣವಾಗಿ ತುಲನೆ ಮಾಡಬಹುದು ಮತ್ತು ಕೊನೆಯಲ್ಲಿ ಕಡಿಮೆ ದರ ಇರುವ ತಾಣದಲ್ಲಿ ಖರೀದಿಸಬಹುದು ಒಂದು ಲಾಭವಾದರೆ, ಒಂದು ಉತ್ಪನ್ನದ ಬಗ್ಗೆ ಎಲ್ಲಾ ದೃಷ್ಟಿಯಿಂದಲೂ ಮಾಹಿತಿ ಪಡೆದೇ ಖರೀದಿ ಮಾಡುವುದು. ಖರೀದಿಸಿದವರು ಬಳಕೆದಾರರ ಅಭಿಪ್ರಾಯಗಳನ್ನು ಓದುವುದು, ಹಾಗೂ ಬ್ಯಾಂಕ್‌ಗಳಿಂದ ದೊರೆಯುವ ಕ್ಯಾಶ್‌ಬ್ಯಾಕ್ ದೊರೆಯುವುದು ಆನ್‌ಲೈನ್ ಖರೀದಿ ಮತ್ತಷ್ಟು ಲಾಭಗಳಾಗಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470