Home
ಸುದ್ದಿಜಾಲ

ಮೊಬೈಲಿನಲ್ಲಿ ಮಾತನಾಡುತ್ತಲೇ ಬಾವಿಗೆ ಬಿದ್ದು ಸತ್ತ!!

By Bhaskar N J

ಮೊಬೈಲ್‌ನಲ್ಲಿ ಮೈಮರೆತು ಏನೆಲ್ಲಾ ದುರ್ಘಟನೆಗಳು ಜರುಗಬಹುದು ಎಂಬುದಕ್ಕೆ ತಮಿಳುನಾಡಿನ ನಡೆದಿರುವ ಒಂದು ಘಟನೆ ಸಾಕ್ಷಿಯಾಗಿದೆ. ತಮಿಳುನಾಡಿನ ತಿರುಮುಲ್ಲಾಯಿಯಾ ನಗರದ ಇಂದಿರಾ ನಗರ ನಿವಾಸಿಯೋರ್ವನು ತನ್ನ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಮೈಮರೆತು ಬಾವಿಗೆ ಬಿದ್ದು ಸತ್ತಿರುವ ಘಟನೆ ಕಳೆದ ಬುಧವಾರ ರಾತ್ರಿ ವರದಿಯಾಗಿದೆ.

ಮೊಬೈಲ್ ಹುಚ್ಚು ಇದ್ದರೆ ವಿನಾಶ ಖಚಿತ ಎಂಬುದಕ್ಕೆ ಪಕ್ಕಾ ಉದಾಹರಣೆ ಇದಾಗಿದ್ದು, ಮಣಿಕಂದನ್ ಎಂಬ 32 ವರ್ಷ ವಯಸ್ಸಿನ ವ್ಯಕ್ತಿ ಮೊಬೈಲಿನಲ್ಲಿ ಮಾತನಾಡುತ್ತಲೇ ರಾತ್ರಿ ಬಾವಿಗೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೊಬೈಲ್ ಗೀಳಿನಿಂದಲೇ ಮಣಿಕಂದನ್ ಮೈ ಮರೆತು ಬಾವಿಗೆ ಬಿದ್ದಿದ್ದಾನೆ ಎಂದು ತನಿಖಾಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮೊಬೈಲಿನಲ್ಲಿ ಮಾತನಾಡುತ್ತಲೇ ಬಾವಿಗೆ ಬಿದ್ದು ಸತ್ತ!!

ಕಳೆದ ಬುಧವಾರ ರಾತ್ರಿ ಈತ ಊಟ ಮುಗಿಸಿಕೊಂಡ ನಂತ್ರ ಮನೆಯ ಹಿಂಭಾಗದಲ್ಲಿದ್ದ ಬಾವಿ ಕಟ್ಟೆಯ ಮೇಲೆ ಮೊಬೈಲಿನಲ್ಲಿ ಮಾತನಾಡುತ್ತ ಕುಳಿತುಕೊಂಡಿದ್ದಾನೆ. ಹಾಗೆ ಮಾತನಾಡುತ್ತಲೇ ಆತ ಬಾವಿ ಒಳಗೆ ಬಿದ್ದಿದ್ದು, ಅವನ ಹೆಂಡತಿ ಮಣಿಕಂದನ್ ಅವನನ್ನು ಮರಳಿ ಮನಗೆ ಕರೆಯಲು ಹೊರಬಂದಾಗ, ಅವನು ಬಾವಿಗೆ ಬಿದ್ದಿದ್ದಾನೆ ಎಂಬುದು ತಿಳಿದುಬಂದಿದೆ ಎನ್ನಲಾಗಿದೆ.

How to recharge your mobile number using Facebook

ನಂತರ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡವು ಸ್ಥಳಕ್ಕೆ ತೆರಳಿ ಮಣಿಕಂದನ್ ದೇಹವನ್ನು ಹೊರತೆಗೆದಿದ್ದು, ದೇಹವನ್ನು ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಡಲಾಗಿದೆ. ಅಮಿಂಜಿಕಾರೈನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂದನ್ ತನ್ನದೇ ತಪ್ಪಿನಿಂದಾಗಿ ಸಾವನಪ್ಪಿದ್ದು, ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಮ್ಮ ಮೊಬೈಲ್‌ ಗೀಳು ಹೆಚ್ಚಾಗುತ್ತಿರುವಂತೆ ಅದರಿಂದ ಆಗುತ್ತಿರುವ ಅವಘಡಗಳು ಕೂಡ ಹೆಚ್ಚಾಗುತ್ತಿವೆ. ನಮ್ಮ ಮೈ ಮನಸ್ಸುಗಳನ್ನು ನಾವು ನೆಮ್ಮದಿಯಾಗಿ ಇಟ್ಟುಕೊಳ್ಳಲು ಸ್ವಲ್ಪ ಮಟ್ಟಿಗೆ ಮೊಬೈಲ್‌ನಿಂದ ನಮ್ಮನ್ನು ಡಿಅಡಿಕ್ಷನ್ ಮಾಡಿಕೊಳ್ಳಲೇಬೇಕಿದೆ. ಮೊಬೈಲ್‌ಗೆ ಇಷ್ಟೊಂದು ದಾಸನಾಗಿ ಮಣಿಕಂದನ್ ಮೈ ಮರೆತು ಬಾವಿಗೆ ಬಿದ್ದರೆ, ನಮ್ಮದು ಮತ್ತೊಂದು ದಾರಿ ಅಷ್ಟೆ.

Best Mobiles in India

English summary
A 32-year-old man fell into the well behind his house, while speaking on his mobile phone in Thirumullaivoyal on Wednesday night. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+