ಚಂದ್ರನ ಮೇಲೆ ಮಾನವ: 50 ವರ್ಷಗಳ ನಂತರವೂ ಕಾಡುವ ರೋಚಕ ಕ್ಷಣಗಳು!!

|

ಅದು 1969ನೇ ವರ್ಷ.ಅಮೆರಿಕಾದ ಮೂವರು ಗಗನ ಯಾತ್ರಿಗಳು​​ ಅಪೊಲೋ 11 ಗಗನನೌಕೆಯಲ್ಲಿ ಚಂದ್ರಯಾನ ಕೈಗೊಂಡಿದ್ದರು. ಜುಲೈ 20ರಂದು ನೀಲ್​ ಆರ್ಮ್​​ಸ್ಟ್ರಾಂಗ್​ ಹಾಗೂ ಆಲ್ಡ್ರಿನ್​​​ ಚಂದ್ರನ ಅವರು ಮಾನವ ಇತಿಹಾಸದಲ್ಲೇ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟು ಇತಿಹಾಸ ಪುಟಗಳಲ್ಲಿ ಸೇರಿದರು. ಆದರೆ, ನಮ್ಮನ್ನು ಅವರು ಕೂಡಿಕೊಂಡದ್ದು ಹೇಗೆ.?

ಹೌದು, ಇಂತಹ ಪ್ರಶ್ನೆ 49 ವರ್ಷಗಳ ಹಿಂದೆಯೇ ಮೂಡಿತ್ತು. ಚಂದ್ರನ ಮೇಲೆ ಕಾಲಿಟ್ಟಿರುವ ಗಗನ ಯಾತ್ರಿಗಳು ಅವರು ಸುರಕ್ಷಿತವಾಗಿ ವಾಪಸ್ ಮರಳುವ ಬಗ್ಗೆ ಆಗಲೇ ವದಂತಿಗಳು ಹುಟ್ಟಿಕೊಂಡಿದ್ದವು. ಚಂದ್ರನ ಮೇಲೆ ಕಾಲಿಟ್ಟ ನಂತರ ಗಗನ ಯಾತ್ರಿಗಳು ಭೂಮಿಗೆ ಬರಲು ಸಾಧ್ಯವಿಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಅವರನ್ನು ಕಾದು ಕುಳಿತಿತ್ತು ಈ ಪ್ರಪಂಚ.!

ಚಂದ್ರನ ಮೇಲೆ ಮಾನವ: 50 ವರ್ಷಗಳ ನಂತರವೂ ಕಾಡುವ ರೋಚಕ ಕ್ಷಣಗಳು!!

ಅಂತಹ ಸಮಯದಲ್ಲಿ ಇತಿಹಾಸ ಸೃಷ್ಟಿಸಿದ ದಿನ ಜೂನ್ 24ನೇ ತಾರೀಖು. ಜೂನ್ 24ರಂದು ಚಂದ್ರನಲ್ಲಿ ಮಾನವ ಸಹಿತ ಯಾನ ಮುಗಿಸಿ ಗಗನ ಯಾತ್ರಿಗಳು ಭೂಮಿಯನ್ನು ಸುರಕ್ಷಿತವಾಗಿ ತಲುಪಿದರು.! ಭೂಮಿಯ ಮೇಲಿನ ಆತಂಕ ಕೊನೆಯಾಯಿತು. ಆದರೆ, ಚಂದ್ರನ ಮೇಲಿನ ಹೆಜ್ಜೆಯ ಎಲ್ಲಾ ಅಂಶಗಳು ಇಲ್ಲಿಯವರೆಗೂ ಹಸಿಬಿಸಿಯಾಗಿ ಹಾಗೆಯೇ ಉಳಿದುಕೊಂಡವು.

1969 ಜುಲೈ 16ರಂದು ಉಡಾವಣೆ!

1969 ಜುಲೈ 16ರಂದು ಉಡಾವಣೆ!

1969 ಜುಲೈ 16ರಂದು ಸಂಜೆ 7-02 ಗಂಟೆಗೆ (ಭಾರತೀಯ ಕಾಲಮಾನ) ಅಮೆರಿಕದ ಫ್ಲಾರಿಡದ ಕೇಪ್ ಕೆನ್ನೆಡಿ ಉಡಾವಣಾಪೀಠದಿಂದ ಅಪೊಲೊವನ್ನು ಹಾರಿಸಲಾಯಿತು. ಮುಂದಿನ ಯಾತ್ರೆಯ ಸುಮಾರು ಮೂರು ದಿವಸಗಳ ಅವಧಿಯಲ್ಲಿ ಯಾತ್ರಿಕರ ಚಟುವಟಿಕೆಗಳನ್ನು ಟೆಲಿವಿಷನ್ ಮೂಲಕ ಭೂಮಿಯ ಮೇಲಿನ ಲಕ್ಷಾಂತರ ಜನರು ನೋಡಿದರು.

ಅಂತರಿಕ್ಷ ಉಡುಪು ಒಂದು ಪುಟ್ಟ ಭೂಮಿ

ಅಂತರಿಕ್ಷ ಉಡುಪು ಒಂದು ಪುಟ್ಟ ಭೂಮಿ

ಉಸಿರಾಟ, ಉಲ್ಕೆಗಳ, ಅತಿ ನೇರಳೆ ರಶ್ಮಿಪುಂಜಗಳ ಹೊಡೆತದಿಂದ ಯಾತ್ರಿಕರನ್ನು ರಕ್ಷಿಸಲು ಒಬ್ಬೊಬ್ಬ ನೌಕಯಾನಿಯೂ ಹೊತ್ತ ಉಡುಪಿನ ಭಾರ ಭೂಮಿಯ ಮೇಲೆ ಸುಮಾರು 84 ಕಿ.ಗ್ರಾಂ. ಆಗಿತ್ತು. ಆದರೆ, ಇದೆ ಉಡುಪು ಚಂದ್ರನ ಮೇಲೆ ಕೇವಲ 14 ಕಿ. ಗ್ರಾಂ. ತೂಗುತ್ತಿತ್ತು. ಇದು ಯಾತ್ರಿಕರಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಿತು.

ಚಂದ್ರನ ಮೇಲೆ ನೌಕೆ!

ಚಂದ್ರನ ಮೇಲೆ ನೌಕೆ!

ನೌಕೆಯು ಚಂದ್ರನ ನೆಲ ಹತ್ತಿರವಾದಂತೆಯೇ ಕಲ್ಲು ಬಂಡೆಗಳಿಂದ ಕೂಡಿದ ಕೂಪದೆಡೆಗೆ ಈಗಲ್ ಇಳಿಯುತ್ತಿದ್ದುದು ಆರ್ಮ್‍ಸ್ಟ್ರಾಂಗ್‍ಗೆ ಕಂಡಿತು. ಚಲನೆಯ ಸ್ವಯಂಚಾಲಿತ ವ್ಯವಸ್ಥೆಯಿಂದ ಸ್ವತಃ ತಾನೇ ತೆಗೆದುಕೊಂಡು ಆರ್ಮ್‍ಸ್ಟ್ರಾಂಗ್ ಈಗಲ್ಲನ್ನು ಸುರಕ್ಷಿತ ಸ್ಥಳದೆಡೆಗೆ ಸಾಗಿಸಿದ. ಪೂರ್ವಾಹ್ನ 1-47 ಗಂಟೆಗೆ ಈಗಲ್ ಚಂದ್ರನ ಮೇಲೆ ಮೆತ್ತಗೆ ಇಳಿಯಿತು.

ಚಂದ್ರನ ಮೇಲೆ ಮೊದಲ ಹೆಜ್ಜೆ?

ಚಂದ್ರನ ಮೇಲೆ ಮೊದಲ ಹೆಜ್ಜೆ?

ಚಂದ್ರನ ಮೇಲೆ ಈಗಲ್ ಇಳಿದರೂ ಸಹ ಬೆಳಗಿನವರೆಗೂ ಯಾತ್ರಿಕರುಒಳಗೆ ಇದ್ದರು. ಪರಿಸರದ ಪೂರ್ಣ ಪರಿಚಯವಾಗಿ, ಅಪಾಯವಿಲ್ಲ ಎಂದು ದೃಢವಾದ ಮೇಲೆ ಆರ್ಮ್‍ಸ್ಟ್ರಾಂಗ್ ಈಗಲ್ ಬಾಗಿಲು ತೆರೆದು ಏಣಿಯ ಮೂಲಕ ಒಂದೊಂದೇ ಮೆಟ್ಟಲನ್ನು ಇಳಿದು, ಮೊದಲು ಎಡಗಾಲನ್ನು ಚಂದ್ರನ ಮೇಲೆ ಇಟ್ಟನು. 19 ನಿಮಿಷಗಳನಂತರ ಆಲ್ಡ್ ರಿನ್ ಅವನನ್ನು ಕೂಡಿಕೊಂಡನು.

ಚಂದ್ರನ ಮೇಲ್ಮೈ ಹೇಗಿತ್ತು?

ಚಂದ್ರನ ಮೇಲ್ಮೈ ಹೇಗಿತ್ತು?

ಆರ್ಮ್‍ಸ್ಟ್ರಾಂಗ್ ಚಂದ್ರನ ಮೇಲೆ ನಡೆಯುತ್ತಿದ್ದಾಗ ಅದರ ಮೇಲಿನ ಮಣ್ಣು ಕೈಗೆ ಅಂಟಿಕೊಳ್ಳುವಂತೆ ಪುಡಿ ಪುಡಿಯಾಗಿದೆ ಎಂದನಿಸಿತಂತೆ. ಚಂದ್ರಲೋಕದ ಆ ಪ್ರದೇಶ ಒಂದು ಮರುಭೂಮಿಯಂತೆ ಇತ್ತು. ಸುತ್ತಲೂ ಕೆಲವು ಕಡೆಗಳಲ್ಲಿ ದೊಡ್ಡ ದೊಡ್ಡ ಬಂಡೆಗಳೂ ಲೆಕ್ಕ ಮಾಡಲು ಸಾಧ್ಯವಿಲ್ಲದಷ್ಟು ಚಿಕ್ಕ ದೊಡ್ಡ ಕೂಪಗಳೂ ಇದ್ದುವು.

ಫಲಕ ಮತ್ತು ಅಮೆರಿಕದ ಧ್ವಜ!

ಫಲಕ ಮತ್ತು ಅಮೆರಿಕದ ಧ್ವಜ!

ಭೂಮಿಗ್ರಹದಿಂದ ಬಂದ ಮನುಷ್ಯರು ಚಂದ್ರನ ಮೇಲೆ ಇಲ್ಲಿ ಮೊದಲ ಕಾಲಿಟ್ಟರು. ಕ್ರಿ.ಶ. ಜುಲೈ 1969. ನಾವು ಮಾನವ ಜನಾಂಗದ ಕಲ್ಯಾಣಕ್ಕಾಗಿ ಬಂದೆವು ಎಂಬರ್ಥದ ಇಂಗ್ಲಿಷ್ ಒಕ್ಕಣೆ ಯಿದ್ದ ಅಮೆರಿಕ ಸಂಯುಕ್ತಸಂಸ್ಥಾನಗಳ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ಮೂವರು ಯಾತ್ರಿಕರ ಸಹಿಯಿದ್ದ ಒಂದು ಫಲಕವನ್ನು ಇಡಲಾಯಿತು.ನಂತರ ಅಮೆರಿಕದ ಧ್ವಜವನ್ನು ಅಲ್ಲಿ ನೆಟ್ಟರು.

ಅನ್‌ಲೋಡ್​​ ಕಡಿಮೆ ಮಾಡಿದರು.

ಅನ್‌ಲೋಡ್​​ ಕಡಿಮೆ ಮಾಡಿದರು.

ಗಗನಯಾತ್ರಿಕರು ಚಂದ್ರನಿಂದ ಭೂಮಿಗೆ ಹೊರಡುವಾಗ ಕೆಲವು ಟೂಲ್ಸ್​​ಗಳು, ಸ್ಪೇಸ್​​ ಗೆರ್​​, ಖಾಲಿ ಊಟದ ಡಬ್ಬಗಳು, ಮಾನವ ತ್ಯಾಜ್ಯದ ಬ್ಯಾಗ್​ಗಳು ಸೇರಿದಂತೆ 106 ವಸ್ತುಗಳನ್ನು ಚಂದ್ರನ ಮೇಲೆಯೇ ಬಿಟ್ಟು ಬಂದರು.ಸುಮಾರು 2,267 ಕೆಜಿ ತೂಕದ ವಸ್ತುಗಳನ್ನ ಚಂದ್ರನ ಮೇಲೆ ಬಿಟ್ಟು ಅವರು ವಾಪಸ್ ಆದರು.

ಬೂಟ್​​ಗಳನ್ನ ಅಲ್ಲೇ ಬಿಟ್ಟರು

ಬೂಟ್​​ಗಳನ್ನ ಅಲ್ಲೇ ಬಿಟ್ಟರು

ಗಗನಯಾತ್ರಿಕರು ಇಬ್ಬರೂ ತಮ್ಮ ಬೂಟ್​​ಗಳನ್ನ ಅಲ್ಲೇ ಬಿಟ್ಟಿದ್ದಾರೆ. ಹಾಗೇ ಚಿನ್ನದ ಆಲಿವ್​ ಬ್ರಾಂಚ್​ (gold olive branch) ಕೂಡ ಅಲ್ಲೇ ಬಿಟ್ಟಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿ ಒಂದು ಕಂಪನಲೇಖಕ, ಲೇಸರ್ ಪ್ರತಿಫಲಕ ಮತ್ತು ಕಣಸಂಗ್ರಾಹಕಗಳನ್ನು ಇಟ್ಟರು. ಸಂಯುಕ್ತ ರಾಷ್ಟ್ರಗಳ ವರಿಷ್ಠಾಧಿಕಾರಿಗಳ ಸಂದೇಶಗಳನ್ನು ಅಹ ಅಲ್ಲಿಯೆ ಬಿಟ್ಟಿದ್ದಾರೆ.

ಭೂಮಿಗೆ ಬರಲು ಸಾಧ್ಯವಿಲ್ಲ!

ಭೂಮಿಗೆ ಬರಲು ಸಾಧ್ಯವಿಲ್ಲ!

ಚಂದ್ರನ ಮೇಲೆ ಕಾಲಿಟ್ಟಿರುವ ಗಗನ ಯಾತ್ರಿಗಳು ಅವರು ಸುರಕ್ಷಿತವಾಗಿ ವಾಪಸ್ ಮರಳುವ ಬಗ್ಗೆ ಆಗಲೇ ವದಂತಿಗಳು ಹುಟ್ಟಿಕೊಂಡಿದ್ದವು. ಚಂದ್ರನ ಮೇಲೆ ಕಾಲಿಟ್ಟ ನಂತರ ಗಗನ ಯಾತ್ರಿಗಳು ಭೂಮಿಗೆ ಬರಲು ಸಾಧ್ಯವಿಲ್ಲ ಎಮದು ಕೆಲ ವಿಜ್ಞಾನಿಗಳಿಗೆ ಅನಿಸಿತ್ತು. ನೌಕೆಯು ಎಲ್ಲಾ ಅಡಚಣೆಗಳನ್ನು ಮೀರಿ ವಾಪಸ್ ಆಗುವುದೇ ಎಂಬುದು ಎಲ್ಲರ ಪ್ರಶ್ನೆ ಕೂಡ ಆಗಿತ್ತು.

ಭೂಮಿಗೆ ಮರುಪ್ರಯಾಣ:

ಭೂಮಿಗೆ ಮರುಪ್ರಯಾಣ:

ಜುಲೈ 24ರ ರಾತ್ರಿ 9-50 ಗಂಟೆ. ಭೂಮಿಯಿಂದ 122 ಕಿ.ಮೀ.ಎತ್ತರದಲ್ಲಿ ವಾಯುಮಂಡಲದ ಪದರವನ್ನು ಪ್ರವೇಶಿಸಿ ಸೆಕೆಂಡಿಗೆ 11 ಕಿ.ಮೀ. ವೇಗದಲ್ಲಿ ಅಪೊಲೊ ಧಾವಿಸಿತು. ಅಪೊಲೊ ಸಮರ್ಪಕವಾಗಿ ಕೆಲಸಮಾಡಿ ಈ ಗುರಿ ಸಾಧಿಸಿತು. ಸುಮಾರು 7,300 ಮೀ.ಎತ್ತರಕ್ಕೆ ಬಂದಾಗ ಪ್ಯಾರಾಚೂಟ್‍ಗಳು ಬಿಡಿಸಿಕೊಂಡು ಸಮುದ್ರದಲ್ಲಿ ಇಳಿಯಿತು.

Most Read Articles
Best Mobiles in India

English summary
What! Have you never heard the story of the Man in the Moon? Then I must surely tell it, for it is very amusing, and there is not a word of truth in it.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more