Home
ಸುದ್ದಿಜಾಲ

ಎಲ್ಲ ಫೋನ್‌ಗಳಲ್ಲಿ Sanchar Saathi ಆ್ಯಪ್ ಕಡ್ಡಾಯ ಏಕೆ?..ಸಂಪೂರ್ಣ ಮಾಹಿತಿ!

ಭಾರತದಲ್ಲಿ ಇನ್ನು ಮುಂದೆ ಮಾರಾಟವಾಗುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ Sanchar Saathi ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ಪ್ರೀ-ಇನ್‌ಸ್ಟಾಲ್ ಮಾಡಲು ಮೊಬೈಲ್ ಕಂಪೆನಿಗಳಿಗೆ ಕೇಂದ್ರ ಸರ್ಕಾರವು ಸೂಚಿಸಿದೆ. 2025ರಲ್ಲಿ ಪರಿಚಯಗೊಂಡ ಸರ್ಕಾರದ ಅಧಿಕೃತ ಟೆಲಿಕಾಂ ಸುರಕ್ಷತಾ ಆಪ್ ಇದಾಗಿದ್ದು, ಇದನ್ನು ದೇಶದ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಕಡ್ಡಾಯವಾಗಿ ಮೊದಲೇ ಇನ್‌ಸ್ಟಾಲ್ ಮಾಡಲು ಆದೇಶ ಹೊರಡಿಸಲಾಗದೆ. ಹಾಗಾದರೆ, ಏನಿದು Sanchar Saathi ಆ್ಯಪ್?, ಇದನ್ನು ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲೂ ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದ ಏಕೆ ಎಂಬುದನ್ನು ನೋಡೋಣ ಬನ್ನಿ.

ಏನಿದು Sanchar Saathi ಅಪ್ಲಿಕೇಶನ್
Sanchar Saathi 2025ರಲ್ಲಿ ಪರಿಚಯಗೊಂಡ ಸರ್ಕಾರದ ಅಧಿಕೃತ ಟೆಲಿಕಾಂ ಸುರಕ್ಷತಾ ಆಪ್. ಇದು CEIR (Central Equipment Identity Register) ವ್ಯವಸ್ಥೆಯೊಂದಿಗೆ ನೇರವಾಗಿ ಸಂಪರ್ಕಿಸಿದೆ. ಇದರ ಸಹಾಯದಿಂದ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಯಲು ಸಾಧ್ಯವಾಗುವ ಹಲವು ಆಧುನಿಕ ವೈಶಿಷ್ಟ್ಯಗಳಿದ್ದು, ಇವುಗಳಲ್ಲಿ ಕಳುವಾದ ಫೋನ್‌ಗಳನ್ನು ಬ್ಲಾಕ್ ಮತ್ತು ಟ್ರಾಕ್ ಮಾಡುವುದು, ನಕಲಿ ಅಥವಾ ಕ್ಲೋನ್ IMEI ಪತ್ತೆ ಸೇರಿದಂತೆ ಹಲವಾರು ಮೊಬೈಲ್ ಆಧಾರಿತ ತಂತ್ರಜ್ಞಾನ ಉಪಯೋಗಗಳಿವೆ. ಒಂದು ರೀತಿಯಲ್ಲಿ ಈ ಆ್ಯಪ್ ಅನ್ನು ಸ್ಮಾರ್ಟ್‌ಫೋನ್‌ಗಳ ಆಧಾರ್ ಎನ್ನಬಹುದು.!

Sanchar Saathi ಅಪ್ಲಿಕೇಶನ್ ವೈಶಿಷ್ಟ್ಯಗಳೇನು?
Sanchar Saathi ಅಪ್ಲಿಕೇಶನ್ ಸಹಾಯದಿಂದ ಈ ಕೆಳಗಿನ ಎಲ್ಲಾ ಸೇವೆಗಳನ್ನು ಪಡೆಯಬಹುದು. ಇವುಗಳಲ್ಲಿ,

  1. ಕಳುವಾದ ಫೋನ್‌ಗಳನ್ನು ಟ್ರಾಕ್ ಮಾಡಬಹುದು: IMEI ಸಂಖ್ಯೆಯಿಂದ ಬಳಕೆದಾರರು ತಮ್ಮ ಫೋನ್‌ ಅನ್ನು ಟ್ರಾಕ್ ಮಾಡಬಹುದು.
  2. ಕಳುವಾದ ಫೋನ್‌ಗಳನ್ನು ಬ್ಲಾಕ್ ಮಾಡಬಹುದು: ಸ್ಮಾರ್ಟ್‌ಫೋನ್ ಮಾಲಿಕತ್ವ ಪರಿಶೀಲನೆಯಾದ ನಂತರ, ಆ ಫೋನ್ ದೇಶದ ಯಾವುದೇ ನೆಟ್ವರ್ಕ್‌ನಲ್ಲಿ ಕಾರ್ಯನಿರ್ವಹಿಸದಂತೆ ಈ ಆ್ಯಪ್ ತಡೆಹಿಡಿಯುತ್ತದೆ.
  3. ನಕಲಿ ಅಥವಾ ಕ್ಲೋನ್ IMEI ಪತ್ತೆ: ಸ್ಮಾರ್ಟ್‌ ಫೋನ್ ಮೂಲವೋ ನಕಲಿಯೋ ಎಂಬುದನ್ನು ಬಳಕೆದಾರರು ಆಪ್ ಮೂಲಕ ಪರಿಶೀಲಿಸಬಹುದು, ಇದು ಕಳವು-ಮಾರುಕಟ್ಟೆಯನ್ನು ಕಡಿಮೆ ಮಾಡಲು ಸಹಕಾರಿ.
  4. ಮೋಸದ ಕರೆ, SMS, WhatsApp ವಂಚನೆ ವರದಿ: ಈ ಅಪ್ಲಿಕೇಶನ್ ಮೂಲಕ ಫಿಷಿಂಗ್ ಕರೆಗಳು, OTP ವಂಚನೆ, ಮತ್ತು ಅನುಮಾನಾಸ್ಪದ ಸಂದೇಶಗಳನ್ನು ನೇರವಾಗಿ ವರದಿ ಮಾಡುವ ಅವಕಾಶ ಇದೆ.
  5. ನಿಮ್ಮ ಹೆಸರಿನಲ್ಲಿ ನೋಂದಾಯವಾಗಿರುವ SIM‌ಗಳ ಪಟ್ಟಿ: ಯಾರಾದರೂ ನಿಮ್ಮ ಹೆಸರಿನಲ್ಲಿ SIM ತೆಗೆದುಕೊಂಡಿರುವ ಶಂಕೆಯಿದ್ದರೆ, ಅದನ್ನು ಗುರುತಿಸಿ ಅಳಿಸಲು ಸಹಾಯವಾಗುತ್ತದೆ.

ಸರ್ಕಾರ ಈ ಕ್ರಮವನ್ನು ಏಕೆ ತೆಗೆದುಕೊಂಡಿದೆ?
ಕಳೆದ ಕೆಲವು ತಿಂಗಳಲ್ಲಿ, ಕಳುವಾದ ಫೋನ್‌ಗಳ ಮಾರಾಟ, ನಕಲಿ IMEI ಬಳಕೆ, ವಂಚನೆ ಕರೆಗಳು ಮತ್ತು ಅನಧಿಕೃತ SIM ನೋಂದಣಿ ಪ್ರಕರಣಗಳು ಹೆಚ್ಚುತ್ತಿವೆ.ಈ Sanchar Saathi ಮೂಲಕ, ಸರ್ಕಾರವು

  1. ಫೋನ್ ಕಳ್ಳತನ ಕಡಿಮೆ ಮಾಡುವುದು
  2. ಟೆಲಿಕಾಂ ವಂಚನೆ ತಡೆಯುವುದು
  3. ನಕಲಿ ಸಾಧನಗಳ ವ್ಯಾಪಾರ ಕಡಿತ
  4. ಬಳಕೆದಾರರ ಮೇಲೆ ನಡೆಯುವ ಡಿಜಿಟಲ್ ಮೋಸವನ್ನು ನಿಯಂತ್ರಿಸುವುದು

ಇವನ್ನು ಪ್ರಮುಖ ಗುರಿಗಳಾಗಿ ನೋಡುತ್ತಿದೆ.

ಎಲ್ಲ ಫೋನ್‌ಗಳಲ್ಲಿ Sanchar Saathi ಆ್ಯಪ್ ಕಡ್ಡಾಯ ಏಕೆ?..ಸಂಪೂರ್ಣ ಮಾಹಿತಿ!

ಬಳಕೆದಾರರಿಗೆ ಇದರಿಂದ ಏನು ಬದಲಾವಣೆ?
ಎಲ್ಲ ಹೊಸ ಫೋನ್‌ಗಳಲ್ಲಿ Sanchar Saathi ತಕ್ಷಣ ಲಭ್ಯವಾಗುತ್ತದೆ, ಇದರಿಂದ

  1. ಕಳುವಾದ ಫೋನ್‌ಗಳನ್ನು ಹುಡುಕುವ ಸರಳ ವಿಧಾನ
  2. ವಂಚನೆ ಕರೆಗಳು ತಕ್ಷಣ ವರದಿ ಮಾಡುವ ವ್ಯವಸ್ಥೆ ಬರುತ್ತದೆ
  3. ನಕಲಿ ಫೋನ್‌ ಖರೀದಿ ಮಾಡಲು ಸಾಧ್ಯತೆ ಕಡಿಮೆಯಾಗುತ್ತದೆ

Sanchar Saathi ಅಳಿಸುವ ಅವಕಾಶವಿಲ್ಲ: ಸರ್ಕಾರದ ಸ್ಪಷ್ಟ ನಿರ್ದೇಶನ!
ಡಿಪಾರ್ಟ್‌ಮೆಂಟ್ ಆಫ್ ಟೆಲಿಕಮ್ಯೂನಿಕೇಷನ್‌ (DoT) ಸ್ಪಷ್ಟವಾಗಿ ಹೇಳಿರುವಂತೆ, Sanchar Saathi ಆ್ಯಪ್ ಅನ್ನು ಬಳಕೆದಾರರು ಅಳಿಸಲು ಅಥವಾ ನಿಷ್ಕ್ರಿಯಗೊಳಿಸಲು ಅನುಮತಿ ಇಲ್ಲ.ಹೊಸ ಫೋನ್‌ಗಳಲ್ಲಿ ಆಪ್ ನೇರವಾಗಿ ಸೇರಿಕೊಳ್ಳುವಂತೆಯೇ, ಈಗಾಗಲೇ ಉತ್ಪಾದನೆಗೊಂಡಿರುವ ಅಥವಾ ಗೋದಾಮಿನಲ್ಲಿ ಇರುವ ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮುಖಾಂತರ ಕಡ್ಡಾಯವಾಗಿ ಸೇರಿಸಬೇಕು ಎಂದು ತಿಳಿಸಲಾಗಿದೆ. ಆದರೆ, ಅಳಿಸಲಾಗದ ಆ್ಯಪ್ ಆಗಿರುವುದಿಂದ ಕೆಲವು ಕಡೆ ಅಸಮಾಧಾನ ಕೂಡ ಹೊರಬಿದ್ದದಿದೆ. ಇದಕ್ಕೆ ಕಾರಣ ಪ್ರೈವೆಸಿ.

ಗೌಪ್ಯತೆ ಕುರಿತ ಚರ್ಚೆ: ತಜ್ಞರ ಅಭಿಪ್ರಾಯ ವಿಭಿನ್ನ
Sanchar Saathi ಆ್ಯಪ್ ಕಡ್ಡಾಯ ಇನ್‌ಸ್ಟಾಲ್ ಕ್ರಮಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ಬರುತ್ತಿದೆ. ಸುರಕ್ಷತೆಗಾಗಿ ಅಗತ್ಯ ಕ್ರಮ ಎಂದು ಕೆಲವರು ಸ್ವಾಗತಿಸುತ್ತಿದ್ದರೆ, ಇನ್ನೊಂದು ಭಾಗವು ಅಳಿಸಲಾಗದ ಸರ್ಕಾರದ ಆಪ್ ಗೌಪ್ಯತೆಗೆ ಹಾನಿ ಮಾಡಬಹುದು ಎಂದು ಚಿಂತಿಸುತ್ತಿದೆ. ಬಳಕೆದಾರರ ಸ್ವಾತಂತ್ರ್ಯ ಮತ್ತು ರಾಷ್ಟ್ರದ ಸುರಕ್ಷತೆ ಇವೆರಡರ ಮಧ್ಯೆ ಸರ್ಕಾರವು ಸಮತೋಲನ ಹೇಗೆ ಸಾಧಿಸಲಾಗುವುದು ಎಂಬುದು ಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಿ ಮೊಬೈಲ್ ಕಂಪೆನಿಗಳು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಬಳಕೆದಾರರು ಈ ಬದಲಾವಣೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಗಮನಾರ್ಹ.

ಒಟ್ಟಾರೆಯಾಗಿ, Sanchar Saathi ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರ ದೇಶದ ಡಿಜಿಟಲ್ ಸುರಕ್ಷತೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಜನರ ಸುರಕ್ಷತೆ, ಫೋನ್ ಕಳ್ಳತನ ನಿಯಂತ್ರಣೆ ಮತ್ತು ಟೆಲಿಕಾಂ ವಂಚನೆ ತಡೆಯುವಲ್ಲಿ ಈ ಆಪ್ ಪ್ರಮುಖ ಪಾತ್ರ ವಹಿಸಲಿದೆ ಎಂಬುದು ನಮ್ಮ ಅಭಿಪ್ರಾಯ. ಈ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ನೀವು ಡಿಜಿಟಲ್ ಗೌಪ್ಯತೆ ಪರವಾಗಿದ್ದೀರಾ ಅಥವಾ ಬಳಕೆದಾರರ ಸ್ವಾತಂತ್ರ್ಯದ ಪರವಾಗಿದ್ದೀರಾ?

Best Mobiles in India

English summary
The Central Government has instructed smartphone manufacturers to mandatorily pre-install the Sanchar Saathi app on all new devices. Launched in 2025, this official telecom safety app aims to prevent fraud and enhance user security. But can the government legally enforce such mandatory installation? What is the Sanchar Saathi app? Let’s find out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+