Subscribe to Gizbot

ಟ್ವಿಟರ್ ನಲ್ಲಿ ಡಾ|| ಮನಮೋಹನ್ ಸಿಂಗ್ ಪಾದಾರ್ಪಣೆ

Posted By: Varun
ಟ್ವಿಟರ್ ನಲ್ಲಿ ಡಾ|| ಮನಮೋಹನ್ ಸಿಂಗ್ ಪಾದಾರ್ಪಣೆ

 

ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ಕಪಿಲ್ ಸಿಬಲ್ ಸಾಮಾಜಿಕ ತಾಣಗಳ ಮೇಲೆ ಹರಿಹಾಯ್ದ ಬೆನ್ನಲ್ಲೇ, ಪ್ರಸಿದ್ಧ ಮೈಕ್ರೋ ಬ್ಲಾಗ್ ವೆಬ್ಸೈಟ್ ಟ್ವಿಟರ್ ನಲ್ಲಿ ಇದೀಗ ಪ್ರಧಾನ ಮಂತ್ರಿಗಳ ಕಚೇರಿ ( ಪಿ. ಎಂ. ಓ ) ಮೂಲಕ ಡಾ|| ಮನಮೋಹನ್ ಸಿಂಗ್ ಟ್ವಿಟರ್ ನಲ್ಲಿ 23 ಜನವರಿ 2012 ರಂದು ಪದಾರ್ಪಣೆಮಾಡಿಅನೇಕರ ಹುಬ್ಬೇರಿಸಿದ್ದಾರೆ.

ಖಾತೆ ಶುರುವಾದ 24 ಗಂಟೆಗಳಲ್ಲಿ 8 ಸಾವಿರಕ್ಕೂ ಹೆಚ್ಚು ಹಿಂಬಾಲಕರನ್ನು ಪಡೆದದ್ದು ಮತ್ತೊಂದು ವಿಶೇಷ .ತಮ್ಮ ನಿವಾಸದಲ್ಲಿ ನಡೆದ ಶೌರ್ಯ ಪ್ರಶಸ್ತಿ ಪ್ರಧಾನ ಸಮಾರಂಭದ ಬಗ್ಗೆ "You make all of us proud" ಎಂದುಟ್ವೀಟ್ ಮಾಡಿದ ಸಿಂಗ್, ಭಾಷಣದ ಲಿಂಕ್ ಅನ್ನು ಸಹ ಟ್ವೀಟ್ ಮಾಡಿ ಪಿ.ಎಂ.ಓ ಖಾತೆ ಯನ್ನು ಲೋಕಾರ್ಪಣೆ ಮಾಡಿದರು.

ಪ್ರಧಾನಿಗಳ ಮಾಧ್ಯಮ ಸಲಹೆಗಾರರಾಗಿ ಪಂಕಜ್ ಪಚೌರಿ ನೇಮಕವಾದ ನಂತರದ ಬೆಳವಣಿಗೆ ಇದಾಗಿದ್ದು, ಪಿ.ಎಂ.ಓ ಮೂಲಕ ಸರಕಾರ ಯಾವ ರೀತಿ ನಾಗರೀಕರ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂಬ ಮಾಹಿತಿ ಮತ್ತು ಮನಮೋಹನ್ ಸಿಂಗ್ ರ ಕಾರ್ಯಕ್ರಮಗಳ ಪಟ್ಟಿಯೂ ಇನ್ನುಮುಂದೆ ಟ್ವಿಟರ್ ನಲ್ಲಿ ತಿಳಿಯಲಿದೆ.

ಮನಮೋಹನ್ ಸಿಂಗ್ ರ ಟ್ವಿಟರ್ ಲಿಂಕ್- http://twitter.com/pmoindia

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot