ಭಾರತೀಯರು ಎಷ್ಟು ಸಮಯವನ್ನು ಆಪ್‌ಗಳಲ್ಲಿ ಕಳೆಯುತ್ತಿದ್ದಾರೆ?..ಟಾಪ್ 1 ರಾಷ್ಟ್ರ ಯಾವುದು?

ಆಂಡ್ರಾಯ್ಡ್ ಆಪ್‌ಗಳನ್ನು ಬಳಕೆ ಮಾಡುವ 10 ರಾಷ್ಟ್ರಗಳಲ್ಲಿ ಭಾರತವು ಐದನೇ ಸ್ಥಾನ ಪಡೆದುಕೊಂಡಿದೆ.

|

ನಿಮಿಷವೂ ಬಿಡುವಿಲ್ಲದೇ ಸ್ಮಾರ್ಟ್‌ಫೋನ್ ಬಳಕೆದಾರರು ಇರುವುದು ನಮಗೆಲ್ಲಾ ಗೊತ್ತು. ಆದರೆ, ಭಾರತದಲ್ಲಿ ಸರಾಸರಿ ಎಷ್ಟು ಜನರು ಎಷ್ಟು ಸಮಯ ಆಂಡ್ರಾಯ್ಡ್ ಆಪ್‌ಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ?. ತಿಳಿಯದಿದ್ದರೆ ಇಂದಿನ ಲೇಖನದಲ್ಲಿ ಭಾರತೀಯರ ಸರಾಸರಿ ಸ್ಮಾರ್ಟ್‌ಪೋನ್ ಆಪ್ ಬಳಕೆ ಬಗೆಗೆ ತಿಳಿದುಕೊಳ್ಳಿ.!!

ಭಾರತೀಯರು ಎಷ್ಟು ಸಮಯವನ್ನು ಆಪ್‌ಗಳಲ್ಲಿ ಕಳೆಯುತ್ತಿದ್ದಾರೆ?..ಟಾಪ್ 1 ರಾಷ್ಟ್ರ?

ಆಂಡ್ರಾಯ್ಡ್ ಮೊಬೈಲ್‌ಗಳೆ ಹೆಚ್ಚಾಗಿರುವ ಭಾರತದಲ್ಲಿ ಆಪ್‌ ಅನ್ನಿ ಎಂಬ ಸರ್ವೇ ಸಂಸ್ಥೆ ಈ ಬಗ್ಗೆ ಅಧ್ಯಯನ ನಡೆಸಿದ್ದು, ಭಾರತದ ಪ್ರತಿಯೋರ್ವ ಆಂಡ್ರಾಯ್ಡ್ ಬಳಕೆದಾರನು ದಿನಕ್ಕೆ 4 ಗಂಟೆಯನ್ನು ಕೇವಲ ಆಪ್‌ಬಳಕೆಗೆಂದೇ ಮೀಸಲಿಡುತ್ತಾನೆ ಎಂದು ಹೇಳಿದೆ.!! ಹಾಗಾದರೆ, ಆಪ್‌ ಅನ್ನಿ ಬೇರೆ ಏನೆಲ್ಲಾ ಕುತೋಹಲ ವಿಷಯಗಳನ್ನು ಹೇಳಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

10 ರಾಷ್ಟ್ರಗಳಲ್ಲಿ ಭಾರತಕ್ಕೆ 5ನೇ ಸ್ಥಾನ!!

10 ರಾಷ್ಟ್ರಗಳಲ್ಲಿ ಭಾರತಕ್ಕೆ 5ನೇ ಸ್ಥಾನ!!

ಆಂಡ್ರಾಯ್ಡ್ ಬಳಕೆದಾರೆರು ಹೆಚ್ಚಿರುವ 10 ರಾಷ್ಟಗಳನ್ನು ಆಪ್‌ ಅನ್ನಿ ಸಂಸ್ಥೆ ಆಯ್ಕೆ ಮಾಡಿಕೊಂಡಿದ್ದು, ಆಂಡ್ರಾಯ್ಡ್ ಆಪ್‌ಗಳನ್ನು ಬಳಕೆ ಮಾಡುವ 10 ರಾಷ್ಟ್ರಗಳಲ್ಲಿ ಭಾರತವು ಐದನೇ ಸ್ಥಾನ ಪಡೆದುಕೊಂಡಿದೆ. ಸರಾಸರಿ 4 ಗಂಟೆಗಳಿಗಿಂತಲೂ ಹೆಚ್ಚು ಹೊತ್ತು ಆಪ್‌ ಬಳಕೆ ಮಾಡುವ ರಾಷ್ಟ್ರಗಳು ಸಹ ಹೆಚ್ಚಿವೆ.!!

ಮೊದಲ ನಾಲ್ಕು ಸ್ಥಾನದಲ್ಲಿ ಯಾವುವು?

ಮೊದಲ ನಾಲ್ಕು ಸ್ಥಾನದಲ್ಲಿ ಯಾವುವು?

10 ರಾಷ್ಟ್ರಗಳಲ್ಲಿ ಭಾರತವು ಐದನೇ ಸ್ಥಾನ ಪಡೆದುಕೊಂಡಿದ್ದರೆ ದಕ್ಷಿಣ ಕೊರಿಯಾ, ಮೆಕ್ಸಿಕೋ, ಬ್ರೆಜಿಲ್‌ ಮತ್ತು ಜಪಾನ್‌ ರಾಷ್ಟ್ರಗಳು ಮೊದಲ 4 ಸ್ಥಾನಗಳನ್ನು ಪಡೆದುಕೊಂಡಿವೆ. ಈ ದೇಶದ ಜನರು ಸರಾಸರಿ 5 ಗಂಟೆಗಳ ಕಾಲ ಸ್ಮಾರ್ಟ್‌ಫೊನ್ ಅಪ್ಲಿಕೇಶನ್‌ ಬಳಕೆಗೆ ಸಮಯ ನೀಡುತ್ತಾರೆ ಎಂದು ಸರ್ವೆಯಲ್ಲಿ ತಿಳಿಸಿದೆ.

ಅಮೆರಿಕಾ, ಇಂಗ್ಲೆಂಡ್‌ನಲ್ಲಿ?

ಅಮೆರಿಕಾ, ಇಂಗ್ಲೆಂಡ್‌ನಲ್ಲಿ?

ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್‌ನಂತಹ ರಾಷ್ಟ್ರಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚಿದ್ದರೂ ಸಹ ಅವರು ಆಪ್‌ ಬಳಕೆ ಮಾಡುವ ಸರಾಸರಿ ಸಮಯ ಕೇವಲ 25 ನಿಮಿಷಕ್ಕಿಂತಲೂ ಕಡಿಮೆ ಇದೆ ಎಂದು ಆಪ್‌ ಅನ್ನಿ ಸಂಸ್ಥೆ ಸರ್ವೇಯಲ್ಲಿ ತಿಳಿಸಿದೆ.!

ಕನಿಷ್ಟ ಎಂದರೂ 1.5ಗಂಟೆ ಬಳಕೆ!!

ಕನಿಷ್ಟ ಎಂದರೂ 1.5ಗಂಟೆ ಬಳಕೆ!!

ಭಾರತದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹೊಂದಿರುವ ವ್ಯಕ್ತಿ ಕನಿಷ್ಠ ಎಂದರೂ ದಿನಕ್ಕೆ 1.5ಗಂಟೆ ಸ್ಮಾರ್ಟ್‌ಫೋನ್‌ ಆಪ್‌ ಬಳಕೆ ಮಾಡುತ್ತಾನೆ .ಇನ್ನು 2.5 ಗಂಟೆ ಆಪ್‌ನಲ್ಲಿ ಕಳೆಯುವ ಸಂಖ್ಯೆ ಎರಡನೇ ಸ್ಥಾನದಲ್ಲಿದ್ದು, ಹೆಚ್ಚಿನ ಜನರು ದಿನಕ್ಕೆ 4 ಗಂಟೆ ಆಪ್‌ಬಳಕೆ ಮಾಡುತ್ತಾರೆ.

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ಯಾವ ಯಾವ ಆಪ್ ಬಳಕೆ ಹೆಚ್ಚು.!!

ಯಾವ ಯಾವ ಆಪ್ ಬಳಕೆ ಹೆಚ್ಚು.!!

ಫೇಸ್‌ಬುಕ್, ವಾಟ್ಸ್ಆಪ್ ಹಾಗೂ ಲೈಫ್‌ಸ್ಟೈಲ್ ಆಪ್‌ಗಳಲ್ಲಿ ಭಾರತೀಯರು ಹೆಚ್ಚು ಸಮಯ ಕಳೆಯುತ್ತಾರೆ. ತಿಂಗಳಲ್ಲಿ 90 ನಿಮಿಷ ಶಾಪಿಂಗ್‌ ಆಪ್‌ಗಳಲ್ಲಿ ಕಾಲ ಕಳೆಯುವ ಭಾರತೀಯರು ಈ ವರ್ಗದಲ್ಲಿ ಎರಡನೇ ಸ್ಥಾನದಲ್ಲಿದ್ದರೆ ದಕ್ಷಿಣ ಕೋರಿಯಾ ಜನರು ಮೊದಲ ಸ್ಥಾನದಲ್ಲಿದ್ದಾರೆ.!!

<strong>ಭಾರಿ ಅಪ್‌ಡೇಟ್ ಆಗುತ್ತದೆ 'ಟ್ರೂ ಕಾಲರ್'!..ಒಂದೇ ಆಪ್‌ನಲ್ಲಿ ಏನೆಲ್ಲಾ ಗೊತ್ತಾ?</strong>ಭಾರಿ ಅಪ್‌ಡೇಟ್ ಆಗುತ್ತದೆ 'ಟ್ರೂ ಕಾಲರ್'!..ಒಂದೇ ಆಪ್‌ನಲ್ಲಿ ಏನೆಲ್ಲಾ ಗೊತ್ತಾ?

Best Mobiles in India

English summary
The most active smartphone users in India spend more than 4 hours every day.to know more visit tokannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X