ಮಂಗಳ ಗ್ರಹದ ಮೇಲೆ ಅಮೇರಿಕಾ ಬಾವುಟ!

Posted By: Varun
ಮಂಗಳ ಗ್ರಹದ ಮೇಲೆ ಅಮೇರಿಕಾ ಬಾವುಟ!

ಮಾನವನಿಗೆ ಕುತೂಹಲ ಜಾಸ್ತಿ. ಅಕ್ಕ ಪಕ್ಕದ ಮನೆಯವರು ಏನು ಮಾಡುತ್ತಾರೆ ಎನ್ನುವಷ್ಟೇ ಕುತೂಹಲ ಅವನಿಗೆ ಭೂಮಿಯ ಸುತ್ತಮುತ್ತ ಇರುವ ಗ್ರಹ, ಉಪಗ್ರಹಗಳ ಮೇಲೂ ಇದೆ.

ಅದಕ್ಕೆ ಅಂತಾನೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಚಂದ್ರನ ಮೇಲೆ ಹೋಗಿದ್ದಾನೆ, ಸೂರ್ಯನ ಹತ್ತಿರವೆ ಉಪಗ್ರಹ ಕಳಿಸಿದ್ದಾನೆ, ಅದಷ್ಟೇ ಅಲ್ಲದೆ ಸೌರಮಂಡಲದ ಆಚೆ ನಮ್ಮ ತರಹವೆ ಯಾವುದಾದರೂ ಜೀವಿಗಳು ಇವೆಯಾ ಎಂದು ಹುಡುಕಿ ಅವರನ್ನು ಸಂಪರ್ಕಿಸಲು ಸಾಧ್ಯವಾದರೆ ಹೇಗೆ ಎಂದು ವಾಯೇಜರ್ ನೌಕೆಗಳನ್ನೂ ಕಳುಹಿಸಿದ್ದಾನೆ.

ಇದೆಲ್ಲಾ ಮಾಡಿದರೂ ನಮ್ಮ ಪಕ್ಕದ ಮಂಗಳ ಗ್ರಹದ ಮೇಲಿನ ಪ್ರೀತಿ, ಕೌತುಕ ಮಾತ್ರ ಕಮ್ಮಿಯಾಗಿಲ್ಲ. ಸರಿ ಸುಮಾರು ನಮ್ಮ ಭೂಮಿಯಷ್ಟೇ ಸೈಜ್ ಇರುವ ಗ್ರಹವಾದ ಮಂಗಳದ ಅಂಗಳದಲ್ಲಿ ಜೀವ ಇದೆಯಾ ಎಂದು ತಿಳಿಯಲುಬಹಳ ಪ್ರಯತ್ನ ಪಟ್ಟಿದ್ದಾನೆ. ಇದರಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ, Curiosity ಎಂಬ ರೋಬೋಟ್ ಸಹಿತ ನೌಕೆಯನ್ನು ಉಡಾಯಿಸಿತ್ತು.ಅದು ಇವತ್ತು 11 ಗಂಟೆಗೆ (ಭಾರತೀಯ ಕಾಲಮಾನ)ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿ ರೋಬೋಟ್ಅನ್ನು ಸುರಕ್ಷಿತವಾಗಿ ಮಂಗಳನ ಮೇಲೆ ಇಳಿಸಿ ಮಹತ್ತರವಾದ ಸಾಧನೆ ಮಾಡಿದೆ!

ತೀವ್ರತರವಾದ ವೈಪರೀತ್ಯದಿಂದ ಕೂಡಿರುವ ಮಂಗಳದ ಹವಾಮಾನದಿಂದಾಗಿ ಅದೆಲ್ಲವನ್ನೂ ತಡೆದುಕೊಳ್ಳುವ ನೌಕೆಯನ್ನು ತುಂಬಾ ಎಚ್ಚರಿಕೆಯಿಂದ ಸಿದ್ದಪಡಿಸಿ, ಸುಮಾರು 2.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ರೋಬೋಟ್ (ಕ್ಯೂರಿಯಾಸಿಟಿ) ಮಂಗಳ ಗ್ರಹದ ಮೇಲೆ ನೀರು ಇದೆಯೋ ಎಂಬುದನ್ನು ಹುಡುಕುವುದರ ಜೊತೆ ಅಲ್ಲಿರುವ ಮೇಲ್ಮೈ ಅನ್ನು ಪರಿಶೀಲಿಸಿ ಜೀವಿಗಳು ಇವೆಯಾ ಎಂದು ಪರಿಶೀಲಿಸಿ ಸಂದೇಶ ರವಾನಿಸುತ್ತದೆ.

ಕ್ಯೂರಿಯಾಸಿಟಿ ರೋಬೋಟ್ ಕಳುಹಿಸುವ ಮಾಹಿತಿಯ ಆಧಾರದ ಮೇಲೆ ಮುಂದಿನ ದಶಕಗಳಲ್ಲಿ ಮಾನವ ಸಹಿತ ನೌಕೆ ಕಳುಹಿಸಲು ಅಮೇರಿಕಾ ಉತ್ಸುಕವಾಗಿದ್ದು, ಭೂಮಿಯಿಂದ ಸುಮಾರು 248 ಮಿಲಿಯನ್ ಕಿಲೋಮೀಟರ್ ದೂರವಿರುವ ಮಂಗಳ ಗ್ರಹದ ಮೇಲೆ ಇಳಿಯಲು ಮಾನವನ ಸಾಹಸೀ ಪಯಣದಲ್ಲಿ ಇದು ಮಹತ್ವದ ಹೆಜ್ಜೆಯಾಗಿದ್ದು, ಈ ಸಾಧನೆಯನ್ನು ನಾವು ಕೊಂಡಾಡಲೇ ಬೇಕು.

ರೋಬೋಟ್ ನ ಚಿತ್ರಗಳು ಇಲ್ಲಿವೆ

ಮಂಗಳದ ಲೈವ್ ವೀಡಿಯೋ

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot