Home
ಸುದ್ದಿಜಾಲ

Marshall ಬ್ರ್ಯಾಂಡ್ಡ್‌ನ ಇಯರ್‌ಬಡ್ಸ್ ಬಿಡುಗಡೆ: ಭರ್ಜರಿ ಫೀಚರ್ಸ್! ಕೈಗೆಟುಕುವ ಬೆಲೆ

ನೀವು ಮೊಬೈಲ್‌ ಖರೀದಿಸುವಾಗ ಸಾಮಾನ್ಯವಾಗಿ ಇಯರ್‌ಫೋನ್‌ (Earphones) ಕೊಡುತ್ತಿದ್ದರು. ಆ ಕಾಲ ಮುಗಿದು ಹೋಗಿದೆ. ಈಗ ಏನಿದ್ದರೂ ನೀವು ಅಭಿರುಚಿಗೆ ತಕ್ಕಂತೆ ವಿವಿಧ ಬಗೆಯ ಇಯರ್‌ಫೋನ್‌ಗಳನ್ನ (Wireless Earbuds) ಕೊಳ್ಳಬೇಕು. ನಾನಾ ಕಂಪನಿಗಳು ವಿಭಿನ್ನ ಮಾದರಿಯ ಇಯರ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿವೆ. ಸಂಗೀತ ಪ್ರಿಯರ ಬೇಡಿಕೆಗೆ ತಕ್ಕಂತೆ ಇಯರ್‌ಫೋನ್‌ಗಳನ್ನ (Wireless Earphones) ಉತ್ಪಾದಿಸಲಾಗುತ್ತಿದೆ. ಪ್ರಮುಖ ಆಡಿಯೋ ಬ್ರ್ಯಾಂಡ್ ಮಾರ್ಷಲ್ (Marshall) ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇದೀಗ ಹೊಸ ವಿನ್ಯಾಸದ ಇಯರ್‌ಬಡ್ಸ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಮಾರ್ಷಲ್ ಕಂಪನಿಯು ತನ್ನ ಇತ್ತೀಚಿನ ಉತ್ಪನ್ನವಾದ Marshall Minor IV ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಇಯರ್‌ಬಡ್‌ಗಳು 30 ಗಂಟೆಗಳ ವೈರ್‌ಲೆಸ್ ಪ್ಲೇಟೈಮ್ ಅನ್ನು ನೀಡುತ್ತವೆ ಮತ್ತು ಮಾರ್ಷಲ್‌ನ ಸಿಗ್ನೇಚರ್ ಸೌಂಡ್ ಅನ್ನು ಒಳಗೊಂಡಿರುತ್ತವೆ. ಕಂಪನಿಯಿಂದ ಪ್ರವೇಶ ಮಟ್ಟದ ಟ್ರೂವೈರ್‌ಲೆಸ್ ಇಯರ್‌ಬಡ್ ವರ್ಗವನ್ನು ಅಪ್ಡೇಟ್‌ ಮಾಡುವುದಾಗಿ ಕಂಪನಿ ಹೇಳಿದೆ. 11,999 ರೂ. ಬೆಲೆಯ ಈ ಇಯರ್‌ಬಡ್ಸ್‌ ಜೂನ್ 15 ರಿಂದ Marshall.com ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

Marshall ಬ್ರ್ಯಾಂಡ್ಡ್‌ನ ಇಯರ್‌ಬಡ್ಸ್ ಬಿಡುಗಡೆ: ಭರಪೂರ ಫೀಚರ್ಸ್!

Marshall Minor IV ಇಯರ್‌ಬಡ್‌ಗಳನ್ನು ಶಕ್ತಿಯುತ ಧ್ವನಿಯೊಂದಿಗೆ ಕಾಂಪ್ಯಾಕ್ಟ್ ಗಾತ್ರದ ವಿನ್ಯಾಸವನ್ನು ಹೊಂದಲು ತಯಾರಿಸಲಾಗಿದೆ. ಮಾರ್ಷಲ್ ಕಂಪನಿಯ ಸಿಗ್ನೇಚರ್ ಆಡಿಯೋ ಗುಣಮಟ್ಟವನ್ನು ಬಯಸುವ ಸಂಗೀತ ಪ್ರಿಯರಿಗೆ ಈ ಇಯರ್‌ಬಡ್ಸ್‌ ಪರ್ಫೆಕ್ಟ್‌ ಆಯ್ಕೆಯಾಗಿದೆ. ಇದು ಇಡೀ ದಿನ ಧರಿಸಲು ಆರಾಮದಾಯಕವಾಗಿದೆ ಮತ್ತು ಅಕೌಸ್ಟಿಕ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಈ ಇಯರ್‌ಬಡ್‌ಗಳನ್ನು ಮಾರ್ಷಲ್ ಅಪ್ಲಿಕೇಶನ್ ಮೂಲಕ ಸಂಪರ್ಕಿಸಬಹುದು ಮತ್ತು ನಿಯಂತ್ರಿಸಬಹುದು.

Marshall Minor IV ಇಯರ್‌ಬಡ್ಸ್‌ನ ಫೀಚರ್‌ಗೇನು?

* ಮಾರ್ಷಲ್ ಸಿಗ್ನೇಚರ್ ಸೌಂಡ್(Marshall Signature Sound): ಸಂಗೀತ ಪ್ರಿಯರನ್ನು (ಗ್ರಾಹಕರು) ಆಕರ್ಷಿಸುವ ಸಮತೋಲಿತ ಸೌಂಡ್‌ (ಧ್ವನಿ) ಅನ್ನು ತಲುಪಿಸುತ್ತದೆ.

* 30+ Hours of Wireless Playtime: ಇದು 30 ಗಂಟೆಗಳಿಗಿಂತ ಹೆಚ್ಚು ವೈರ್‌ಲೆಸ್ ಪ್ಲೇಟೈಮ್ ಅನ್ನು ಒದಗಿಸುತ್ತದೆ. ಈ ಇಯರ್‌ಬಡ್‌ಗಳೊಂದಿಗೆ ಒಂದೇ ಚಾರ್ಜ್‌ನಲ್ಲಿ 7 ಗಂಟೆಗಳವರೆಗೆ ಮತ್ತು ಚಾರ್ಜಿಂಗ್ ಕೇಸ್ ಬಳಸುವಾಗ ಒಟ್ಟು 30 ಗಂಟೆಗಳವರೆಗೆ ಹಾಡುಗಳ್ನು ಕೇಳಬಹುದು.

* Superior Comfort: ಈ ಇಯರ್‌ಬಡ್‌ಗಳನ್ನು ergonomically ಆಗಿ ವಿನ್ಯಾಸಗೊಳಿಸಲಾಗಿದೆ. ಇದು ಹೆಚ್ಚು ಕಾಲದ (ದೀರ್ಘಾವಧಿ) ಆರಾಮದಾಯಕವಾಗಿದೆ. ಈ ಇಯರ್‌ಬಡ್ಸ್ ಸಾಧನವು ನೀರು ಮತ್ತು ಧೂಳು ನಿರೋಧಕ ಗುಣದೊಂದಿಗೆ ಬಿಡುಗಡೆಯಾಗಿದೆ. ವಿವಿಧ ಪರಿಸ್ಥಿತಿಗಳಲ್ಲಿ ಬಾಳಿಕೆಯನ್ನು ಖಾತ್ರಿಪಡಿಸುತ್ತದೆ.

* Bluetooth Multipoint Connectivity: ಇದರ ಬ್ಲೂಟೂತ್ ಮಲ್ಟಿಪಾಯಿಂಟ್ ಸಂಪರ್ಕವು ಬಹು ಸಾಧನಗಳಿಗೆ ಏಕಕಾಲಿಕ ಸಂಪರ್ಕವನ್ನು ಅನುಮತಿಸುತ್ತದೆ. ಮತ್ತು ಬಳಕೆದಾರರ ಅನುಕೂಲವನ್ನು ಹೆಚ್ಚಿಸುತ್ತದೆ.

* Control and Customisation: ಮಾರ್ಷಲ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ಪ್ಲೇಬ್ಯಾಕ್, ಕರೆಗಳು ಮತ್ತು ಸಂಗೀತ ಆದ್ಯತೆಗಳನ್ನು ನಿಯಂತ್ರಿಸಬಹುದು.

* Battery Preservation: ಬಳಕೆದಾರರು ಆಪ್‌ನ ಮೂಲಕ ಬ್ಯಾಟರಿ ಸಂರಕ್ಷಣೆ ಫೀಚರ್‌ಗಳು ಮತ್ತು OTA (ಓವರ್-ದಿ-ಏರ್) ಅಪ್ಡೇಟ್‌ಗಳೊಂದಿಗೆ ಇಯರ್‌ಬಡ್‌ಗಳ lifetime ಅನ್ನು ವಿಸ್ತರಿಸಬಹುದು.

* ಹೆಚ್ಚುವರಿಯಾಗಿ, Marshall Minor IV ಭವಿಷ್ಯದ-ನಿರೋಧಕ ಬ್ಲೂಟೂತ್ LE ಆಡಿಯೋ ತಂತ್ರಜ್ಞಾನವನ್ನು ಹೊಂದಿದೆ. ಇದು ಉತ್ತಮ ವಿಡಿಯೋ ಸಿಂಕ್ರೊನೈಸೇಶನ್‌ಗಾಗಿ ಹೆಚ್ಚಿನ ಆಡಿಯೋ ಗುಣಮಟ್ಟ ಮತ್ತು ಉತ್ತಮ ಸಂಪರ್ಕವನ್ನು ಒದಗಿಸುತ್ತದೆ.

ಇಯರ್‌ಬಡ್‌ನ ತೂಕ ಎಷ್ಟು?

Marshall Minor IV ಮತ್ತಿತರ ಫೀಚರ್‌ಗಳನ್ನು ನೋಡುವುದಾದರೆ, ಇದು 12 mm ಡೈನಾಮಿಕ್ ಡ್ರೈವರ್‌ಗಳು, 32 ಓಮ್ಸ್ ಡ್ರೈವರ್ ಪ್ರತಿರೋಧ ಮತ್ತು 20Hz - 20kHz ಆವರ್ತನ ಪ್ರತಿಕ್ರಿಯೆ ಶ್ರೇಣಿಯನ್ನು ಹೊಂದಿದೆ. ಇಯರ್‌ಬಡ್‌ಗಳು ತಲಾ 7.39 ಗ್ರಾಂ ತೂಕ ಹೊಂದಿವೆ. ಆದರೆ, ಚಾರ್ಜಿಂಗ್ ಕೇಸ್ 39.41 ಗ್ರಾಂ ತೂಕವಿದೆ. ಇದು USB-C ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಇಯರ್‌ಬಡ್‌ಗಳನ್ನು ಸಂಪೂರ್ಣವಾಗಿ ರೀಚಾರ್ಜ್ ಮಾಡಲು 1 ಗಂಟೆ ತೆಗೆದುಕೊಳ್ಳುತ್ತದೆ ಮತ್ತು ಕೇಸ್‌ಗೆ 2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಇದು ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್!

Marshall Minor IV ಇಯರ್‌ಬಡ್ಸ್,‌ ಟ್ರೂ ವೈರ್‌ಲೆಸ್ ಇಯರ್‌ಬಡ್‌ಗಳು ಕಾಂಪ್ಯಾಕ್ಟ್ ವಿನ್ಯಾಸ ಮತ್ತು ಬಾಳಿಕೆ ಬರುವ ಉನ್ನತ ಕಾರ್ಯಕ್ಷಮತೆಯ ಆಡಿಯೋವನ್ನು ಹುಡುಕುತ್ತಿರುವ ಸಂಗೀತ ಪ್ರೀಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಸರಳತೆ ಮತ್ತು ಅಸಾಧಾರಣ ಧ್ವನಿ ಗುಣಮಟ್ಟದೊಂದಿಗೆ, Marshall Minor IV ಟ್ರೂವೈರ್‌ಲೆಸ್ ಇಯರ್‌ಬಡ್ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

Best Mobiles in India

English summary
Marshall has introduced its Minor IV True Wireless earbuds in India. priced at Rs 11,999. and promises to redefine the entry-level True Wireless earbud market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+