ಜಪಾನ್‌ನಲ್ಲಿ ಸಿದ್ದವಾಗ್ತಿದೆ 60 ಅಡಿ ಎತ್ತರದ ಗುಂಡಮ್‌ ರೋಬೋಟ್‌!..ಹೇಗಿದೆ ಗೊತ್ತಾ?

|

ಮುಂದುವರೆದ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ರಾಷ್ಟ್ರ ಜಪಾನ್‌. ಜಪಾನ್‌ ತನ್ನ ಅಸಾಧಾರಣ ತಂತ್ರಜ್ಞಾನ ಕೌಶಲ್ಯದ ಮೂಲಕದ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಇನ್ನು ಜಪಾನ್‌ ಅಂದರೆ ಮೊದಲು ನೆನಪಾಗೋದೆ ಅಲ್ಲಿನ ರೊಬೊಟಿಕ್ಸ್‌ ಟೆಕ್ನಾಲಜಿ. ಫ್ಯೂಚರಿಸ್ಟಿಕ್ ಅವತಾರ್ ಎಕ್ಸ್ ಲ್ಯಾಬ್‌ನಿಂದ ಹಿಡಿದು ರೆಸ್ಟೋರೆಂಟ್‌ಗಳಲ್ಲಿನ ಡ್ರೋನ್ ಸರ್ವರ್‌ಗಳವರೆಗೆ, ಜಪಾನ್‌ನ ಅನೇಕ ಪ್ರದೇಶಗಳು ರೊಬೊಟಿಕ್ಸ್ ಕ್ಷೇತ್ರವನ್ನು ಸಂಪೂರ್ಣವಾಗಿ ಆವರಿಸಿದೆ. ಇದೀಗ ವಿಶ್ವದಲ್ಲಿಯೇ ಅತಿ ಎತ್ತರದ ರೋಬೋಟ್‌ ಅನ್ನು ಪರಿಚಯಿಸುವತ್ತ ಹೆಜ್ಜೆ ಹಾಕಿದೆ.

ಜಪಾನ್‌

ಹೌದು, ಜಪಾನ್‌ ರಾಷ್ಟ ರೊಬೊಟಿಕ್ಸ್‌ ಟೆಕ್ನಾಲಜಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಈಗಾಗಲೇ ಹಲವು ವಿಧದ ರೋಬೋಟ್‌ಗಳನ್ನ ಪರಿಚಯಿಸಿರುವ ಜಪಾನ್‌ ತನ್ನ ಬೃಹತ್‌ ರೋಬೋಟ್‌ ಪರಿಚಯಿಸಲು ಸಿದ್ದತೆ ನಡೆಸಿದೆ. ಕಳೆದ ಜನವರಿ 2020 ರಿಂದ, ಗುಂಡಮ್ ಎನ್ನುವ ವಿಶ್ವದ ಅತಿ ಎತ್ತರದ ರೋಬೋಟ್ ಅನ್ನು ಯೊಕೊಹಾಮಾ ಕಂಪೆನಿ ನಿರ್ಮಿಸುತ್ತಿದೆ. ಇದು 60 ಅಡಿ ಎತ್ತರವಿದ್ದು, ನಿಂತಿರುವ ಈ ಬೃಹತ್ ರೋಬೋಟ್‌ ಟೋಕಿಯೊದ ದಕ್ಷಿಣಕ್ಕೆ ಯೊಕೊಹಾಮಾ ಬಂದರಿನಲ್ಲಿ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಇನ್ನುಳಿದಂತೆ ಈ ರೋಬೋಟ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೋಬೋಟ್‌

ರೊಬೊಟಿಕ್ಸ್‌ ಟೆಕ್ನಾಲಜಿಯಲ್ಲಿ ಸಾಕಷ್ಟು ಮುಂದುವರೆದಿರುವ ಜಪಾನ್‌ನಲ್ಲಿ ವಿಶ್ವದ ಅತಿದೊಡ್ಡ ರೋಬೋಟ್‌ ಅನ್ನು ನಿರ್ಮಿಸುತ್ತಿದೆ. ಈ ರೋಬೋಟ್‌ ಅನ್ನು ಗುಂಡಮ್‌ ಎಂದು ಹೆಸರಿಸಲಾಗಿದೆ. ಇನ್ನು ಗುಂಡಮ್ ಹೆಸರಿನ ಈ ರೋಬೋಟ್ 60 ಅಡಿ ಎತ್ತರವನ್ನು ಹೊಂದಿದೆ. ಇನ್ನು ಈ ರೋಬೋಟ್‌ ಟ್ರಾನ್ಸ್‌ಫಾರ್ಮರ್ಸ್ ಚಲನಚಿತ್ರದ ಆಟೊಬೊಟ್‌ಗಳಂತೆ ಕಾಣುತ್ತದೆ. ಯೊಕೊಹಾಮಾ ಕಂಪನಿಯು 2020 ರ ಆರಂಭದಿಂದಲೂ ಈ ರೋಬೋಟ್ ಅನ್ನು ನಿರ್ಮಿಸುತ್ತಿದೆ. ಆದರೆ COVID-19 ಕಾರಣದಿಮದಾಗಿ ವಿಳಂಬವಾಗಿದ್ದ ನಿರ್ಮಾಣ ಕಾರ್ಯ ಇದೀಗ ವೇಗವನ್ನು ಪಡೆದುಕೊಂಡಿದೆ.

ಗುಂಡಮ್

ಇನ್ನು ಈ ಗುಂಡಮ್ ರೋಬೋಟ್ 1979 ರಲ್ಲಿ ಯೋಶಿಯುಕಿ ಟೊಮಿನೊ ಮತ್ತು ಸನ್‌ರೈಸ್ ಸಹ-ರಚಿಸಿದ ಮೊಬೈಲ್ ಸೂಟ್ ಗುಂಡಮ್ ಎಂಬ ಕಾಲ್ಪನಿಕ ಸರಣಿಯ ಗುಂಡಮ್ ಎಂಬ ಕಾಲ್ಪನಿಕ ಪಾತ್ರದಿಂದ ಪ್ರೇರಿತವಾಗಿದೆ. 1979 ರಲ್ಲಿ ಮೊಬೈಲ್ ಸೂಟ್ ಗುಂಡಮ್ ಎಂಬ ಟಿವಿ ಶೋನಲ್ಲಿ ದೈತ್ಯ ರೋಬೋಟ್‌ಗಳನ್ನು ತೋರಿಸಲಾಗಿತ್ತು. ಇದರಲ್ಲಿ ಗುಂಡಮ್‌ ಎಂಬ ರೋಬೋಟ್‌ ಪಾತ್ರ ಪ್ರಸಿದ್ದ ಪಡೆದುಕೊಂಡಿತ್ತು ಎನ್ನಲಾಗಿದೆ. ಅಲ್ಲದೆ ಈ ಟಿವಿ ಶೋ ನಲ್ಲಿ ರೋಬೋಟ್‌ಗಳನ್ನ ಯುದ್ಧ ನೆಲೆಯಲ್ಲಿ ಬಲಸುವಂತೆ ಪ್ರದರ್ಶನ ಮಾಡಲಾಗಿತ್ತು. ಅಂದಿನಿಂದ, ಗುಂಡಮ್ 50 ಕ್ಕೂ ಹೆಚ್ಚು ಟಿವಿ ಸರಣಿಗಳು, ಚಲನಚಿತ್ರಗಳು, ವಿಡಿಯೋ ಗೇಮ್‌ಗಳಲ್ಲಿ ಕಾಣಿಸಿಕೊಂಡಿದೆ. ಇದೇ ಪಾತ್ರದ ಕಲ್ಫನೆಯಲ್ಲಿ ಈ ರೋಬೋಟ್‌ ರೂಪುಗೊಳ್ಳುತ್ತಿದೆ ಎನ್ನಲಾಗಿದೆ.

ರೋಬೋಟ್

ಸದ್ಯ ಗುಂಡಮ್ ರೋಬೋಟ್ ನಿರ್ಮಾಣ ಕಾರ್ಯ ಮುಂದುವರೆದಿದ್ದು, ಮುಗಿಯುವತ್ತ ದೊಡ್ಡ ಹೆಜ್ಜೆಗಳನ್ನು ಹಾಕಿದೆ. ಈ ರೋಬೋಟ್‌ಗೆ ಸಂಬಂಧಿಸಿದ ಎಂಜಿನಿಯರ್‌ಗಳು ಇತ್ತೀಚೆಗೆ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ರೋಬೋಟ್‌ ಅಗಾಧವಾದ ಡ್ರಾಯಿಡ್ ಎತ್ತುವ ಮತ್ತು ಕಾಲುಗಳನ್ನು ಕೆಳಕ್ಕೆ ಇಳಿಸುವಿಕೆಯನ್ನು ತೋರಿಸುತ್ತದೆ. ಇದು ಇನ್ನೂ ಸಿದ್ಧವಾಗಿಲ್ಲವಾದರೂ, ಈಗ ಬಿಡುಗಡೆ ಆಗಿರುವ ವೀಡಿಯೋ ಗುಂಡಮ್ ರೋಬೋಟ್‌ನ ಯಾಂತ್ರಿಕ ಪರೀಕ್ಷೆಯ ಒಂದು ಭಾಗವಾಗಿದೆ. ರೋಬೋಟ್ ಪ್ರಸ್ತುತ ಟೋಕಿಯೊದ ಹೊರಗೆ ಯೊಕೊಹಾಮಾ ಬಂದರಿನಲ್ಲಿದೆ.

Best Mobiles in India

English summary
Massive 60-Foot-Tall Japanese Robot Just Got Active.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X