Subscribe to Gizbot

ಕಂಪ್ಯೂಟರ್ ರಕ್ಷಣೆಗೆ ಭಯಾನಕ 'ಪೆಟ್ಯಾ'ದಿಂದ ದೂರವಿರಿ!!..ಏನಿದು ಹೊಸ ಪೆಟ್ಯಾ??

Written By:

ವನ್ನಾಕ್ರೈ ಸೈಬರ್ ದಾಳಿಯ ಬೆನ್ನಲ್ಲೇ ಅದಕ್ಕೂ ಹೆಚ್ಚಿನ ದೊಡ್ಡ ಸೈಬರ್ ದಾಳಿಯೊಂದು ಇದೀಗ ಮತ್ತೆ ನಡೆದಿದೆ.! 'ಪೆಟ್ಯಾ' ಎಂಬ ಹೆಸರಿನ ಮೂಲಕ ಈ ಸೈಬರ್ ದಾಳಿ ನಡೆದಿದ್ದು, ಜಗತ್ತಿನಾದ್ಯಂತ ಬರೊಬ್ಬರಿ 150ಕ್ಕೂ ಹೆಚ್ಚು ದೇಶಗಳಲ್ಲಿ ಕಂಪ್ಯೂಟರ್ಗಳ ಮೇಲೆ ವೈರಸ್ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.!!

ವರದಿಗಳ ಪ್ರಕಾರ ಉಕ್ರೇನ್ ದೇಶದಲ್ಲಿ ಮೊದಲ ದಾಳಿ ನಡೆಸಿರುವ 'ಪೆಟ್ಯಾ' ಸೈಬರ್, ಆಸ್ಟ್ರೇಲಿಯಾ ಮತ್ತು ಬಹುತೇಕ ಯೂರೋಪಿಯನ್ ದೇಶಗಳನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡಿದೆ.!! ಆಸ್ಟ್ರೇಲಿಯಾದ ಗ್ಲೋಬಲ್ ಲಾ ಸಂಸ್ಥೆ ಡಿಎಲ್ ಎ ಪೈಪರ್ ಲಿಮಿಟೆಡ್ ಕೂಡ ಸೈಬರ್ ದಾಳಿಗೊಳಗಾಗಿದೆ ಎಂದು ತಿಳಿದುಬಂದಿದೆ.!!

ಹಾಗಾದರೆ, ಏನಿದು 'ಪೆಟ್ಯಾ' ವೈರಸ್ ಅಟ್ಯಾಕ್? ರಾನ್ಸಮ್​ವೇರ್ ಮಾಲ್ವೇರ್​ಗಿಂತಲೂ ಹೆಚ್ಚು ಅಪಾಯಕಾರಿ ಏಕೆ? 'ಪೆಟ್ಯಾ' ಹ್ಯಾಕ್​ ಮಾಡುವ ಸಾಮರ್ಥ್ಯ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು 'ಪೆಟ್ಯಾ' ವೈರಸ್ ಅಟ್ಯಾಕ್?

ಏನಿದು 'ಪೆಟ್ಯಾ' ವೈರಸ್ ಅಟ್ಯಾಕ್?

ವಿಶ್ವದಾಧ್ಯಂತ 150 ಕ್ಕೂ ಹೆಚ್ಚು ದೇಶಗಳಲ್ಲಿ ದಾಳಿ ನಡೆಸುತ್ತಿರುವ ಕುತಂತ್ರ ವೈರಸ್ ಈ 'ಪೆಟ್ಯಾ' ವೈರಸ್ . ಕಂಪ್ಯೂಟರ್‌ಗಳ ಮೇಲೆ ದಾಳಿ ನಡೆಸುವ ಈ ವೈರಸ್ ಅವುಗಳ ಪೂರ್ಣ ಮಾಹಿತಿಗಳನ್ನು ಹ್ಯಾಕ್ ಮಾಡುವ ಶಕ್ತಿ ಹೊಂದಿದೆ.!

ವನ್ನಾಕ್ರೈ ಮಾಲ್ವೇರ್​ಗಿಂತಲೂ ಹೆಚ್ಚು ಅಪಾಯಕಾರಿ!!

ವನ್ನಾಕ್ರೈ ಮಾಲ್ವೇರ್​ಗಿಂತಲೂ ಹೆಚ್ಚು ಅಪಾಯಕಾರಿ!!

ಹೌದು, ಕೆಲವೇ ದಿವಸಗಳ ಹಿಂದೆ ವಿಶ್ವವನ್ನೆ ಬೆಚ್ಚಿ ಬೀಳಿಸಿದ್ದ ವನ್ನಾಕ್ರೈ ಮಾಲ್ವೇರ್​ಗಿಂತಲೂ 'ಪೆಟ್ಯಾ' ವೈರಸ್ ಅಟ್ಯಾಕ್ ಬಹಳ ಅಪಾಯಕಾರಿ. ಮೊದಲು ದಾಳಿ ನಡೆಸಿದ್ದ ರಾನ್ಸಮ್ ವೇರ್​ಗಿಂತಲೂ ವೇಗವಾಗಿ ಹ್ಯಾಕ್​ ಮಾಡುವ ಸಾಮರ್ಥ್ಯವನ್ನು 'ಪೆಟ್ಯಾ' ವೈರಸ್ ಹೊಂದಿದೆ.

ಕಿಲ್​ ಸ್ವಿಚ್ ತಂತ್ರಜ್ಞಾನ ನಡೆಯೊಲ್ಲಾ!!

ಕಿಲ್​ ಸ್ವಿಚ್ ತಂತ್ರಜ್ಞಾನ ನಡೆಯೊಲ್ಲಾ!!

ವನ್ನಾಕ್ರೈ ದಾಳಿಯನ್ನು ತಡೆಯಲು ಈ ಮೊದಲು ಕಿಲ್​ ಸ್ವಿಚ್ ತಂತ್ರಜ್ಞಾನವನ್ನು ಬಳಸಲಾಗಿತ್ತು. ಆದರೆ, ಸೈಬರ್ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿರುವಂತೆ ‘ಕಿಲ್​ ಸ್ವಿಚ್​' ನಿಂದಲೂ 'ಪೆಟ್ಯಾ' ವೈರಸ್ ರಾನ್ಸಮ್​ವೇರ್​ ಅನ್ನು ತಡೆಯಲು ಸಾಧ್ಯವಿಲ್ಲ ತಜ್ಞರು ಹೇಳುತ್ತಿದ್ದಾರೆ.!!

ಇ-ಮೇಲ್ ಕ್ಲಿಕ್ ಮಾಡಿದ್ರೆ ಸಾಕು!!

ಇ-ಮೇಲ್ ಕ್ಲಿಕ್ ಮಾಡಿದ್ರೆ ಸಾಕು!!

ಪೆಟ್ಯಾ' ವೈರಸ್ ರಾನ್ಸಮ್​ವೇರ್ ಹೆಚ್ಚಾಗಿ ಇ-ಮೇಲ್​ ಸಂದೇಶದ ಮೂಲಕ ಹರಡುತಿದೆ ಎನ್ನಲಾಗಿದೆ. ಕೆಲವೊಂದು ಇ-ಮೇಲ್ ಕ್ಲಿಕ್ ಮಾಡಿದ್ರೆ ಸಾಕು 'ಪೆಟ್ಯಾ' ಕೂಡಲೇ ನಿಮ್ಮ ಕಂಪ್ಯೂಟರ್​​​ ಹ್ಯಾಕ್​ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ, ನೀವು ಹುಷಾರು.!!

ಓದಿರಿ:ಬ್ಯಾಟರಿ ದೋಷಕ್ಕೆ ತುತ್ತಾಗಿದ್ದ 'ಗ್ಯಾಲಕ್ಸಿ ನೋಟ್ 7' ಅರ್ಧಬೆಲೆಗೆ!! ಏಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Systems are shutting themselves down and workers are being told to leave their desks. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot