ಫ್ಲಿಪ್‌ಕಾರ್ಟ್ ಸೇಲ್: ಈ ಸ್ಮಾರ್ಟ್‌ಫೋನ್‌ಗಳಿಗೆ ಸಿಗಲಿದೆ ಬಿಗ್ ಆಫರ್!
ಆನ್‌ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಫ್ಲಿಪ್‌ಕಾರ್ಟ್ ಹೊಸ ಮತ್ತೊಮ್ಮೆ ವಿಶೇಷ ಸೇಲ್ ಹೊತ್ತು ತಂದಿದೆ. ವಿಶೇಷ ಸೇಲ್‌ಗಳು, ಡಿಸ್ಕೌಂಟ್ ಮೇಳಗಳ ಮೂಲಕ ಆನ್‌ಲೈನ್ ಶಾಪಿಂಗ್ ಪ್ರಿಯರ ಗಮನ ಸೆಳೆದಿದೆ. ಸದ್ಯ ಇದೀಗ ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಬಿಸಿದೆ. ಈ ಸೇಲ್ ಈಗಾಗಲೇ ಲೈವ್ ಆಗಿದ್ದು, ಡಿಸೆಂಬರ್ 21 ರವರೆಗೆ ಮುಂದುವರಿಯುತ್ತದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಇಯರ್‌ಬಡ್ಸ್ ಸೆರಿದಂತೆ ಗೃಹೋಪಯೋಗಿ ಪ್ರಾಡಕ್ಟ್‌ಗಳ ಮೇಳೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ.

ಹೌದು, ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಅಯೋಜಿಸಿದೆ. ಈ ಸೇಲ್ ಡಿಸೆಂಬರ್ 15ರಿಂದಲೇ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಲೈವ್ ಆಗಿದೆ. ಆದರೆ ಪ್ಲಸ್ ಅಲ್ಲದ ಸದಸ್ಯರಿಗೆ, ಇಂದಿನಿಂದ ಲೈವ್ ಆಗಿರುತ್ತದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್‌ನಲ್ಲಿ ಎಲ್ಲಾ ಉತ್ಪನ್ನಗಳ ಮೇಲೆ ಫ್ರೀ ಡೆಲಿವರಿಯ್ನು ನೀಡುತ್ತಿದೆ. ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು SBI ಕ್ರೆಡಿಟ್ ಮತ್ತು EMI ವಹಿವಾಟಿನ ಮೇಲೆ 10% ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ನೀವು ಯಾವೆಲ್ಲಾ ಸ್ಮಾರ್ಟ್‌ಫೋನ್ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಫೋನ್ 12
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಐಫೋನ್ 12 ಅನ್ನು ಕೇವಲ 53,999ರೂ.ಗಳಿಗೆ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 65,900ರೂ. ಆಗಿದೆ ಅನ್ನೊದನ್ನ ಗಮನಿಸಬೇಕು. ಇದಲ್ಲದೆ ಈ ರಿಯಾಯಿತಿಯ ಮೇಲೆ, ನೀವು SBI ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ 3,000ರೂ.ವರೆಗಿನ ರಿಯಾಯಿತಿ ಕೂಡ ಪಡೆದುಕೊಳ್ಳಬಹುದಾಗಿದೆ. ಇದೆಲ್ಲಾ ರಿಯಾಯಿತಿಯನ್ನು ಪರಿಗಣಿಸಿದರೆ ಐಫೋನ್ 12 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ನಿಮಗೆ 50,999ರೂ.ಗಳಿಗೆ ದೊರೆಯಲಿದೆ. ಇನ್ನು ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ.

ಮೋಟೋ G60
ಇನ್ನು ಈ ಸೇಲ್‌ನಲ್ಲಿ ಮೋಟೋ G60 ಸ್ಮಾರ್ಟ್‌ಫೋನ್ 15,999ರೂ.ಗಳಿಗೆ ಲಭ್ಯವಾಗಲಿದೆ. ಸೇಲ್‌ನಲ್ಲಿ 1500ರೂ.ಗಳ ತನಕ ಫ್ಲಾಟ್ ರಿಯಾಯಿತಿಯನ್ನು ಒಳಗೊಂಡಿದೆ. ಜೊತೆಗೆ ಖರೀದಿದಾರರು ಹೆಚ್ಚುವರಿಯಾಗಿ ಕೆಲವು ಬ್ಯಾಂಕ್ ಕೊಡುಗೆಗಳನ್ನು ಪಡೆಯಬಹುದು. ಆದರೆ ಫ್ಲಿಪ್‌ಕಾರ್ಟ್ ಅಧಿಕೃತವಾಗಿ ಅದರ ಬಗ್ಗೆ ಇನ್ನೂ ಏನನ್ನೂ ಬಹಿರಂಗಪಡಿಸಿಲ್ಲ. ಇನ್ನು ಈ ಸ್ಮಾರ್ಟ್‌ಫೋನ್ 6.80-ಇಂಚಿನ ಮ್ಯಾಕ್ಸ್ ವಿಷನ್ FHD+ ಡಿಸ್ಪ್ಲೇಯನ್ನು ಹೊಂದಿದೆ. ಇದು ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 732G ಪ್ರೊಸೆಸರ್ ಬಲವನ್ನು ಪಡೆದಿದೆ. ಹಾಗೆಯೇ 6GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿದೆ. ಮೋಟೋ G60 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ ಇದು ಎಲ್ಇಡಿ ಫ್ಲ್ಯಾಷ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಬಳಸಿ 1 TB ವರೆಗೆ ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ. ಇದು ಬೃಹತ್ 6000 mAh ಬ್ಯಾಟರಿಯನ್ನು ಹೊಂದಿದೆ, ಇದು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಇರುತ್ತದೆ.

ಇನ್ಫಿನಿಕ್ಸ್ 5A
ಇನ್ಫಿನಿಕ್ಸ್ 5A ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 6,499ರೂ.ಗೆ ಸೇಲ್ ಆಗುತ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.52 HD+ ಡ್ರಾಪ್ ನಾಚ್ ಡಿಸ್‌ಪ್ಲೇ ಹೊಂದಿದೆ. ಇದು ಟ್ರಿಪಲ್ ಎಲ್‌ಇಡಿ ಫ್ಲ್ಯಾಷ್ ಒಳಗೊಂಡ 8MP ಸೆನ್ಸಾರ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದಲ್ಲದೆ 8MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.


Click it and Unblock the Notifications








