ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಇಲ್ಲಿದೆ ಬಿಗ್ ಡಿಸ್ಕೌಂಟ್!
ಭಾರತದ ಟೆಕ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲೂ ಕುಡ ತನ್ನ ಸ್ಥಾನ ಭದ್ರ ಪಡಿಸಿಕೊಂಡಿದೆ. ತನ್ನ ಪ್ರಿಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಸದ್ಯ ಇದೀಗ ಒನ್‌ಪ್ಲಸ್ ಕಂಪೆನಿ ಭಾರತದಲ್ಲಿ ತನ್ನ ಎಂಟನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ತನ್ನ ಅನೇಕ ಪ್ರಾಡಕ್ಟ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ.

ಹೌದು, ಒನ್‌ಪ್ಲಸ್ 9 ಸರಣಿಗಳು, ಒನ್‌ಪ್ಲಸ್ ನಾರ್ಡ್ ಸರಣಿ, ಒನ್‌ಪ್ಲಸ್ ಸ್ಮಾರ್ಟ್ ಟಿವಿಗಳು ಮತ್ತು ಇತರ ಕೆಲವು ಪ್ರಾಡಕ್ಟ್‌ಗಳ ಮೇಲೆ ಬಿಗ್ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ಒನ್‌ಪ್ಲಸ್ 9 ಪ್ರೊ ಸ್ಮಾರ್ಟ್‌ಫೋನ್ ಮೇಲೆ 5,000ರೂ.ಗಳ ವರೆಗೆ ಡಿಸ್ಕೌಂಟ್ ದೊರೆಯಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಒನ್‌ಪ್ಲಸ್ ಕಮ್ಯೂನಿಟಿ ಸೇಲ್‌ನಲ್ಲಿ ನಿಮಗೆ ಏನೆಲ್ಲಾ ಆಫರ್ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್ 9 ಸರಣಿ
ಒನ್‌ಪ್ಲಸ್ ಕಂಪೆನಿ ತನ್ನ ಕಮ್ಯೂನಿಟಿ ಸೇಲ್‌ನಲ್ಲಿ ಒನ್‌ಪ್ಲಸ್ 9 ಸರಣಿ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್ ಡಿಸ್ಕೌಂಟ್ ನೀಡಿದೆ. ಇದರಲ್ಲಿ ಒನ್‌ಪ್ಲಸ್ 9 ಪ್ರೋ ಸ್ಮಾರ್ಟ್‌ಫೋನ್ ಮೇಲೆ 5,000ರೂ, ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಮೇಲೆ 8,000ರೂ. ರಿಯಾಯಿತಿ ನೀಡಲಿದೆ. ಜೊತೆಗೆ ಒನ್‌ಪ್ಲಸ್ 9R ಮೇಲೆ 3000 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್ ಒನ್‌ಪ್ಲಸ್.ಇನ್, ಒನ್‌ಪ್ಲಸ್ ಸ್ಟೋರ್ ಆಪ್, ಅಮೆಜಾನ್.ಇನ್ ಮತ್ತು ಒನ್‌ಪ್ಲಸ್ ಪಾಲುದಾರ ಸ್ಟೋರ್‌ಗಳಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 31ನೇ ಡಿಸೆಂಬರ್ 2021 ರವರೆಗೆ ಲಭ್ಯವಿದೆ.

ಇನ್ನು ಒನ್‌ಪ್ಲಸ್.ಇನ್, ಒನ್‌ಪ್ಲಸ್ ಸ್ಟೋರ್ ಆಪ್, ಅಮೆಜಾನ್.ಇನ್ ಪಾಲುದಾರರಲ್ಲಿ ಒನ್‌ಪ್ಲಸ್ 9 Pro ಫೋನ್ 6,000ರೂ ಡಿಸ್ಕೌಮಟ್ ಪಡೆದಿದೆ. ಹಾಗೆಯೇ ಒನ್‌ಪ್ಲಸ್ 9 ಫೋನ್ 5,000ರೂ ರಿಯಾಯಿತಿ ಪಡೆದಿದೆ. ಇನ್ನು ಒನ್‌ಪ್ಲಸ್ 9R ಸ್ಮಾರ್ಟ್‌ಫೋನ್ 4,000ರೂ, ರಿಯಾಯಿತಿಯನ್ನು ಪಡೆಯಬಹುದಾಗಿದೆ. ಅಲ್ಲದೆ ಒನ್‌ಪ್ಲಸ್ 9 ಅಥವಾ ಒನ್‌ಪ್ಲಸ್ 9 Pro ಖರೀದಿದಾರರು OnePlus.in ಮತ್ತು OnePlus ಸ್ಟೋರ್ ಅಪ್ಲಿಕೇಶನ್‌ನಲ್ಲಿ 600 ರೂಪಾಯಿಗಳ ರಿಯಾಯಿತಿಯಲ್ಲಿ OnePlus ಗೇಮಿಂಗ್ ಟ್ರಿಗ್ಗರ್‌ಗಳನ್ನು ಖರೀದಿಸಬಹುದಾಗಿದೆ.

ಒನ್‌ಪ್ಲಸ್ ನಾರ್ಡ್ ಸರಣಿ
ಇನ್ನು ಕೋಟಕ್ ಬ್ಯಾಂಕ್ ಮತ್ತು ICICI ಬ್ಯಾಂಕ್ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಕೆದಾರರು ಒನ್‌ಪ್ಲಸ್ ನಾರ್ಡ್ 2 5G ಫೋನ್ ಮೇಲೆ 2,000ರೂ ರಿಯಾಯಿತಿ ಪಡೆಯಬಹುದು. ಅಲ್ಲದೆ ಒನ್‌ಪ್ಲಸ್ ನಾರ್ಡ್ 2 x Pac-Man ಆವೃತ್ತಿಯಲ್ಲಿ 3,000ರೂ. ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಒನ್‌ಪ್ಲಸ್ ನಾರ್ಡ್CE ಸ್ಮಾರ್ಟ್‌ಫೋನ್ ಮೇಲೆ 1,500ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ಎಲ್ಲಾ ಆಫರ್‌ಗಳು ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್, ಅಮೆಜಾನ್.in ಮತ್ತು ಒನ್‌ಪ್ಲಸ್ ಪಾಲುದಾರ ಸ್ಟೋರ್‌ಗಳಲ್ಲಿ ದೊರೆಯಲಿದೆ.
ಇದಲ್ಲದೆ ಒನ್‌ಪ್ಲಸ್ ನಾರ್ಡ್ 2, ಒನ್‌ಪ್ಲಸ್ ನಾರ್ಡ್ 2 x Pac-Man Edition ಮತ್ತು ಒನ್‌ಪ್ಲಸ್ ನಾರ್ಡ್ CE ಖರೀದಿದಾರರು ಒನ್‌ಪ್ಲಸ್.ಇನ್, ಒನ್‌ಪ್ಲಸ್ ಸ್ಟೋರ್ ಆಪ್, ಅಮೆಜಾನ್.ಇನ್ ಮೂಲಕ ನಿಮ್ಮ ಹಳೆಯ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಆಫರ್ ಮೂಲಕ 3,000 ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಚಾನಲ್‌ಗಳಿಂದ ಖರೀದಿಸುವಾಗ ಒನ್‌ಪ್ಲಸ್ ನಾರ್ಡ್ 2 ಮತ್ತು ಒನ್‌ಪ್ಲಸ್ ನಾರ್ಡ್ 2 Pac-Man ಆವೃತ್ತಿಯಲ್ಲಿ 1,000ರೂ.ಗಳ ತನಕ ಹೆಚ್ಚುವರಿ ರಿಯಾಯಿತಿ ಕೂಡ ಲಭ್ಯವಿದೆ.

ಒನ್‌ಪ್ಲಸ್ ಟಿವಿಗಳು
ಇನ್ನು ಈ ಸೇಲ್‌ನಲ್ಲಿ ಒನ್‌ಪ್ಲಸ್ TV 55 U1S ನಿಮಗೆ ರಿಯಾಯಿತಿ ದರದಲ್ಲಿ ಕೇವಲ 45,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಒನ್‌ಪ್ಲಸ್ ಟಿವಿ 50 U1S 38,999ರೂ.ಗಳಿಗೆ ಲಭ್ಯವಿದೆ. ಜೊತೆಗೆ ಒನ್‌ಪ್ಲಸ್ ಟಿವಿ 55 Q1 Pro ಸಹ 5,000 ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಂಡಿದೆ. ಈ ಎಲ್ಲಾ ಆಫರ್‌ಗಳು ಒನ್‌ಪ್ಲಸ್.in, ಒನ್‌ಪ್ಲಸ್ ಸ್ಟೋರ್ ಅಪ್ಲಿಕೇಶನ್, ಒನ್‌ಪ್ಲಸ್ ಸ್ಟೋರ್‌ಗಳು, Amazon, Flipkart, Reliance ಡಿಜಿಟಲ್ ಸ್ಟೋರ್‌ಗಳ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಒನ್‌ಪ್ಲಸ್ ಗ್ರಾಹಕರು ಕನಿಷ್ಠ ರೂ 40,000 ಮೌಲ್ಯದೊಂದಿಗೆ ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್‌ಗಳ ಮೂಲಕ OnePlus.in ಮತ್ತು OnePlus ಸ್ಟೋರ್ ಅಪ್ಲಿಕೇಶನ್‌ನಲ್ಲಿ ಮಾಡಿದ ಎಲ್ಲಾ ವಹಿವಾಟುಗಳ ಮೇಲೆ 5,000ರೂ ವರೆಗೆ 10% ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶ ಇದೆ.


Click it and Unblock the Notifications








